Lok Sabha Election 2024: 4600 ಕೋಟಿಗೂ ಅಧಿಕ ದಾನ! ಇಲೆಕ್ಟೋರಲ್ ಬಾಂಡ್ ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಚುನಾವಣಾ ಆಯೋಗ

Top 10 Donars-Electoral Bond Data: ಸುಪ್ರೀಂ ಕೋರ್ಟ್‌ನ ಆದೇಶದ ಬಳಿಕ ಇದೀಗ  ಚುನಾವಣಾ ಆಯೋಗ ಚುನಾವಣಾ ಬಾಂಡ್‌ಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ಎಸ್‌ಬಿಐನಿಂದ ಪಡೆದ ದತ್ತಾಂಶಗಳ (Electoral Bond Data) ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. (Lok Sabha Election 2024 News In Kannada)

Top 10 Donars-Electoral Bond Data: ಸುಪ್ರೀಂ ಕೋರ್ಟ್‌ನ ಆದೇಶದ ಬಳಿಕ ಇದೀಗ  ಚುನಾವಣಾ ಆಯೋಗ ಚುನಾವಣಾ ಬಾಂಡ್‌ಗಳ ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. ಚುನಾವಣಾ ಆಯೋಗವು ಎಸ್‌ಬಿಐನಿಂದ ಪಡೆದ ದತ್ತಾಂಶಗಳ (Electoral Bond Data) ಪಟ್ಟಿಯನ್ನು ತನ್ನ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಿದೆ. ಚುನಾವಣಾ ಆಯೋಗದ (Election Commission ) ವೆಬ್‌ಸೈಟ್‌ನಲ್ಲಿ ಹಂಚಿಕೊಂಡ ಮಾಹಿತಿಯ ಪ್ರಕಾರ, ಒಟ್ಟು ಮೂರು ವರ್ಗದ ಎಲೆಕ್ಟೋರಲ್ ಬಾಂಡ್‌ಗಳನ್ನು ಖರೀದಿಸಲಾಗಿದೆ - 1 ಲಕ್ಷ, 10 ಲಕ್ಷ ಮತ್ತು 1 ಕೋಟಿ ರೂ. ಆದರೆ, ಇದರ ಆಧಾರದ ಮೇಲೆ ಯಾವ ಕಂಪನಿ ಯಾವ ಪಕ್ಷಕ್ಕೆ ಎಷ್ಟು ದೇಣಿಗೆ ನೀಡಿದೆ ಎಂಬುದು ಸ್ಪಷ್ಟವಾಗಿಲ್ಲ. ಅವುಗಳಲ್ಲಿ ಟಾಪ್ 10 ದಾನಿಗಳ (Donation To Political Parties) ಪಟ್ಟಿ ಈ ರೀತಿ ಇದೆ.   (Lok Sabha Election 2024 News In Kannada)

 

ಇದನ್ನೂ ಓದಿ-Lok Sabha Election 2024: ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಿದ EC, ಇದುವರೆಗಿನ ಅತ್ಯಂತ ದುಬಾರಿ ಚುನಾವಣೆ ಯಾವುದು ಗೊತ್ತಾ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 

1 /6

ದಾನಿಗಳ ಪಟ್ಟಿಯಲ್ಲಿ, ಫ್ಯೂಚರ್ ಗೇಮಿಂಗ್ ಮತ್ತು ಹೋಟೆಲ್ ಸೇವೆಗಳು ಗರಿಷ್ಠ 1,368 ಕೋಟಿ ರೂ. ದೇಣಿಗೆಯನ್ನು  ನೀಡಿವೆ.  ಡಿಸೆಂಬರ್ 30, 1991 ರಂದು ಸ್ಥಾಪನೆಯಾದ ಈ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿದ್ದು,  ಕಂಪನಿಯ ನೋಂದಾಯಿತ ವಿಳಾಸ ಕೊಯಮತ್ತೂರು, ತಮಿಳುನಾಡು ಆಗಿದೆ. ಹಂಚಿಕೊಳ್ಳಲಾಗಿರುವ ಮಾಹಿತಿಯ ಪ್ರಕಾರ, ಏಪ್ರಿಲ್ 2019 ರಿಂದ ಖರೀದಿಸಲಾದ ಒಟ್ಟು ಮೊತ್ತದ ಎಲೆಕ್ಟೋರಲ್ ಬಾಂಡ್‌ಗಳ ಅರ್ಧದಷ್ಟು 23 ಕಂಪನಿಗಳಿಗೆ ಸೇರಿದೆ.  

2 /6

ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವಲ್ಲಿ ಮೇಘಾ ಇಂಜಿನಿಯರಿಂಗ್ ಮತ್ತು ಇನ್ಫ್ರಾಸ್ಟ್ರಕ್ಚರ್ ಲಿಮಿಟೆಡ್ ಎರಡನೇ ಸ್ಥಾನದಲ್ಲಿದೆ. ಈ ಕಂಪನಿಯು ಎಲೆಕ್ಟೋರಲ್ ಬಾಂಡ್‌ಗಳ ಮೂಲಕ 966 ಕೋಟಿ ರೂ. ದೇಣಿಗೆ ನೀಡಿದೆ. ಈ ಕಂಪನಿಯು ಷೇರು ಮಾರುಕಟ್ಟೆಯಲ್ಲಿ ಪಟ್ಟಿಯಾಗಿಲ್ಲ. ಈ ಕಂಪನಿಯನ್ನು ಕೃಷ್ಣಾ ರೆಡ್ಡಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಈ ಕಂಪನಿಯು Olectra Greentech ನ ಪ್ರವರ್ತಕ ಕಂಪನಿಯಾಗಿದೆ.  

3 /6

ಕ್ವಿಕ್ ಸಪ್ಲೈ ಚೈನ್ ಪ್ರೈವೇಟ್ ಲಿಮಿಟೆಡ್ ಎಲೆಕ್ಟೋರಲ್ ಬಾಂಡ್‌ಗಳ ದಾನಿಗಳ ಪಟ್ಟಿಯಲ್ಲಿ  ಮೂರನೇ ಸ್ಥಾನದಲ್ಲಿದೆ, ಇದು 410 ಕೋಟಿ ರೂ. ದೇಣಿಗೆಯನ್ನು ನೀಡಿದೆ. ಇದರ ನಂತರ, ನಾಲ್ಕನೇ ಸ್ಥಾನದಲ್ಲಿ  ವೇದಾಂತ ಲಿಮಿಟೆಡ್ ಇದೆ. ಈ ಕಂಪನಿಯ ಸಂಸ್ಥಾಪಕ ಅನಿಲ್ ಅಗರ್ವಾಲ್ ಮತ್ತು ಕಂಪನಿಯು 400 ಕೋಟಿ ರೂ. ದೇಣಿಗೆ ನೀಡಿದೆ. (ADR report on Electoral Bonds upsc)  

4 /6

ಐದನೇ ಸ್ಥಾನದಲ್ಲಿರುವ ಹಲ್ದಿಯಾ ಎನರ್ಜಿ ಲಿಮಿಟೆಡ್ ಇದ್ದು, 377 ಕೋಟಿ ರೂಪಾಯಿ ಮೌಲ್ಯದ ಚುನಾವಣಾ ಬಾಂಡ್‌ಗಳನ್ನು ನೀಡಿದೆ. ಆರನೇ ಸ್ಥಾನದಲ್ಲಿರುವ ಭಾರ್ತಿ ಗ್ರೂಪ್ ರಾಜಕೀಯ ಪಕ್ಷಗಳಿಗೆ ಚುನಾವಣಾ ಬಾಂಡ್‌ಗಳ ರೂಪದಲ್ಲಿ 247 ಕೋಟಿ ರೂ. ನೀಡಿದೆ.   

5 /6

ಅತಿ ಹೆಚ್ಚು ದಾನ ನೀಡಿದ ಕಂಪನಿಗಳ  ಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿರುವ ಎಸ್ಸೆಲ್ ಮೈನಿಂಗ್ ಅಂಡ್ ಇಂಡಸ್ಟ್ರೀಸ್ ಲಿಮಿಟೆಡ್ 224 ಕೋಟಿ ರೂ. ದೇಣಿಗೆ ನೀಡಿದೆ. ಅದೇ ರೀತಿ, ವೆಸ್ಟರ್ನ್ ಯುಪಿ ಪವರ್ ಟ್ರಾನ್ಸ್‌ಮಿಷನ್ 220 ಕೋಟಿ ರೂ.ಗಳ ದೇಣಿಗೆ ನೀಡಿದೆ ಮತ್ತು ಈ ಕಂಪನಿ ಎಂಟನೇ ಸ್ಥಾನದಲ್ಲಿದೆ.  

6 /6

ಕೆವೆಂಟರ್ ಫುಡ್‌ಪಾರ್ಕ್ ಇನ್‌ಫ್ರಾ ಲಿಮಿಟೆಡ್ 194 ಕೋಟಿ ರೂಪಾಯಿಗಳೊಂದಿಗೆ ಒಂಬತ್ತನೇ ಸ್ಥಾನದಲ್ಲಿದೆ ಮತ್ತು ಮದನ್‌ಲಾಲ್ ಲಿಮಿಟೆಡ್ 185 ಕೋಟಿ ರೂಪಾಯಿಗಳ ಚುನಾವಣಾ ದೇಣಿಗೆಯ ಮೂಲಕ ಹತ್ತನೇ ಸ್ಥಾನದಲ್ಲಿದೆ.