Lok Sabha Election 2024: ಲೋಕಸಭೆ ಚುನಾವಣೆಯ ರಣಕಹಳೆ ಮೊಳಗಿಸಿದ EC, ಇದುವರೆಗಿನ ಅತ್ಯಂತ ದುಬಾರಿ ಚುನಾವಣೆ ಯಾವುದು ಗೊತ್ತಾ?

Lok Sabha Elections 2024 Dates: ಕೇಂದ್ರ ಚುನಾವಣಾ ಆಯೋಗ (Election Commission Of India) ಲೋಕಸಭೆ ಚುನಾವಣೆ 2024 ರ ರಣಕಹಳೆಯನ್ನು ಮೊಳಗಿಸಿದೆ.  ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19, 2024  ರಂದು ನಡೆಯಲಿದೆ (102 ಕ್ಷೇತ್ರಗಳಿಗೆ) ಮತ್ತು ಜೂನ್ 4, 2024 ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 7 ಹಂತಗಳಲ್ಲಿ ದೇಶಾದ್ಯಂತ ಮತದಾನ ಪ್ರಕ್ರಿಯೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ತಯಾರಿಯಲ್ಲಿ ತೊಡಗಿವೆ. (Lok Sabha Election 2024 News In Kannada) 

Lok Sabha Elections 2024 Dates: ಕೇಂದ್ರ ಚುನಾವಣಾ ಆಯೋಗ (Election Commission Of India) ಲೋಕಸಭೆ ಚುನಾವಣೆ 2024 ರ ರಣಕಹಳೆಯನ್ನು ಮೊಳಗಿಸಿದೆ.  ಲೋಕಸಭೆ ಚುನಾವಣೆಯ ಮೊದಲ ಹಂತದ ಮತದಾನ ಏಪ್ರಿಲ್ 19, 2024  ರಂದು ನಡೆಯಲಿದೆ (102 ಕ್ಷೇತ್ರಗಳಿಗೆ) ಮತ್ತು ಜೂನ್ 4, 2024 ಫಲಿತಾಂಶ ಪ್ರಕಟವಾಗಲಿದೆ. ಒಟ್ಟು 7 ಹಂತಗಳಲ್ಲಿ ದೇಶಾದ್ಯಂತ ಮತದಾನ ಪ್ರಕ್ರಿಯೆ ನಡೆಯಲಿದೆ. ರಾಜಕೀಯ ಪಕ್ಷಗಳು ಈಗಾಗಲೇ ಚುನಾವಣಾ ತಯಾರಿಯಲ್ಲಿ ತೊಡಗಿವೆ.  ಕಳೆದ ಲೋಕಸಭಾ ಚುನಾವಣೆಯಂತೆಯೇ ಈ ಬಾರಿಯ ಚುನಾವಣೆಯಲ್ಲೂ ಹೆಚ್ಚಿನ ವೆಚ್ಚ ಬರುವ ನಿರೀಕ್ಷೆಯನ್ನು ವ್ಯಕ್ತಪಡಿಸಲಾಗಿದೆ. 2024ರಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ, 2019ರ ಹಾಗೂ ಅದಕ್ಕಿಂತ ಹಿಂದಿನ ಚುನಾವಣೆಗಳಲ್ಲಿಯೂ ಕೂಡ ಹೆಚ್ಚು ಹಣ ವ್ಯಯಿಸಲಾಗಿತ್ತು. ಲೋಕಸಭಾ ಚುನಾವಣೆಯ ಹಿನ್ನೆಲೆ ಚುನಾವಣಾ ವೆಚ್ಚದ ಬಗ್ಗೆ ಇಲ್ಲಿದೆ ಒಂದು ಸಂಕ್ಷಿಪ್ತ ವಿವರ (Lok Sabha Election 2024 News In Kannada)

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

1 /5

Sabha Elections In India 2024 Schedule: ಚುನಾವಣಾ ವೆಚ್ಚದ ವಿಷಯದಲ್ಲಿ 2014ರ ಲೋಕಸಭೆ ಚುನಾವಣೆ ಮೊದಲ ಸ್ಥಾನದಲ್ಲಿದೆ ಈ ಚುನಾವಣೆಯಲ್ಲಿ ಸರ್ಕಾರ 3,870 ಕೋಟಿ ರೂ.ಗಳ ವೆಚ್ಚ ಮಾಡಿತ್ತು. ಈ ವೆಚ್ಚದಲ್ಲಿ ಮತದಾರರ ಜಾಗೃತಿ ಅಭಿಯಾನ, ಮತದಾರರ ಚೀಟಿ ವಿತರಣೆ ಮತ್ತು ಮತದಾರರ ದೃಢೀಕೃತ ಕಾಗದದ ವೆಚ್ಚಗಳು ಶಾಮಿಲಾಗಿವೆ . ಈ ವರ್ಷದಲ್ಲಿ 83 ಕೋಟಿಗೂ ಹೆಚ್ಚು ಮತದಾರರು ತಮ್ಮ ಮತ ಚಲಾಯಿಸಿದ್ದರು. ಹಣದುಬ್ಬರ ಹೆಚ್ಚಳಕ್ಕೆ ಚುನಾವಣಾ ವೆಚ್ಚ ಹೆಚ್ಚಳವೇ ಕಾರಣ ಎಂದು ಚುನಾವಣಾ ಆಯೋಗವು (Biggest Democratic Festival) ಮತದಾನದ ಪ್ರಮಾಣ ಹೆಚ್ಚಿಸಲು ಕೈಗೊಂಡ ಕ್ರಮಗಳಲ್ಲಿ ಉಲ್ಲೇಖಿಸಿತ್ತು.  

2 /5

ಸುಮಾರು 15 ವರ್ಷಗಳ ಹಿಂದೆ 2009ರಲ್ಲಿ ನಡೆದ ಲೋಕಸಭೆ ಚುನಾವಣೆಯಲ್ಲಿ ಚುನಾವಣಾ ಪ್ರಕ್ರಿಯೆ ಪೂರ್ಣಗೊಳಿಸಲು ಸರಕಾರದ ಖಜಾನೆಯಿಂದ 1114 ಕೋಟಿ ರೂ. ಖರ್ಚು ಮಾಡಲಾಗಿತ್ತು.  ಈ ಚುನಾವಣೆಯಲ್ಲಿ ಸುಮಾರು 72 ಕೋಟಿ ಮತದಾರರು ತಮ್ಮ ಅತ್ಯಮೂಲ್ಯ ಮತ ಚಲಾಯಿಸಿದ್ದರು. 2004 ರಲ್ಲಿ 1016 ಕೋಟಿ ರೂಪಾಯಿ ಖರ್ಚು ಮಾಡಲಾಗಿತ್ತು. ಈ ವರ್ಷ 67 ಕೋಟಿ ಮತದಾರರು ತಮ್ಮ ಮತ ಚಲಾಯಿಸಿದ್ದರು.  

3 /5

1999ರಲ್ಲಿ ಈ ಖರ್ಚು 947 ಕೋಟಿ ರೂ.ಗಳಾಗಿತ್ತು, ಆಗ 62 ಕೋಟಿ ಮತದಾರರು ಮತ ಚಲಾಯಿಸಿದ್ದರು. ಇದಕ್ಕೂ ಒಂದು ವರ್ಷದ ಹಿಂದೆಯೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿದ್ದು, ಅದು ಸರ್ಕಾರದ ಬೊಕ್ಕಸಕ್ಕೆ 666 ಕೋಟಿ ರೂಪಾಯಿ ಹೊರೆಯಾಗಿತ್ತು. 1998ರ ಚುನಾವಣೆಯಲ್ಲಿ 61 ಕೋಟಿ ಮತದಾರರು ಮತ ಚಲಾಯಿಸಿದ್ದರು.  

4 /5

ಇದಕ್ಕೂ ಮುನ್ನ 1995ರ ಚುನಾವಣೆಯಲ್ಲಿ 597 ಕೋಟಿ ರೂ. ವೆಚ್ಚ ಮಾಡಲಾಗಿತ್ತು.  ಅದೇ ರೀತಿ 1991-92ರಲ್ಲಿ ಈ ವೆಚ್ಚ 359 ಕೋಟಿ ರೂ. ಗಳಾಗಿತ್ತು. ಆದರೆ 1989ರಲ್ಲಿ ಕೇವಲ 154 ಕೋಟಿ ರೂ.ವ್ಯಯಿಸಲಾಗಿತ್ತು ಮತ್ತು  1984ರಲ್ಲಿ ಈ ವೆಚ್ಚ ಕೇವಲ 81 ಕೋಟಿ ರೂ. ಆಗಿತ್ತು  

5 /5

1980 ರ ಚುನಾವಣಾ ವೆಚ್ಚ - ರೂ 55 ಕೋಟಿ ಗಳಾಗಿತ್ತು, 1977 ರ ಚುನಾವಣಾ ವೆಚ್ಚ - ರೂ 23 ಕೋಟಿಗಳಾಗಿತ್ತು, 1971 ವೆಚ್ಚ ರೂ 11.6 ಕೋಟಿ ಗಳಾಗಿತ್ತು. 1967 ವೆಚ್ಚ - ರೂ 11 ಕೋಟಿಗಳಾಗಿತ್ತು, 1962 ವೆಚ್ಚ ರೂ 7.3 ಕೋಟಿಗಳಾಗಿತ್ತು, 1957 ರಲ್ಲಿ  ರೂ 5.52 ಕೋಟಿ ಮತ್ತು ರೂ 11952 ಕೋಟಿ ವೆಚ್ಚ ಮಾಡಲಾಗಿತ್ತು