Mars Transit 2023: ಮೇ 10 ರಂದು ಚಂದಿರನ ಅಂಗಳಕ್ಕೆ ಮಂಗಳನ ಪ್ರವೇಶ, 3 ರಾಶಿಗಳ ಜನರ ಜೀವನದಲ್ಲಿ ಕಾಂಚಾಣದ ಭಾರಿ ಝಣಝಣ!

Mars Transit In Cancer: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಮುಂಬರುವ ಮೇ ತಿಂಗಳಿನಲ್ಲಿ ಚಂದಿರನ ಅಧಿಪತ್ಯದ ಕರ್ಕ ರಾಶಿಯಲ್ಲಿ ನವಗ್ರಹಗಳ ಸೇನಾಪತಿ ಎಂದೇ ಹೇಳಲಾಗುವ ಮಂಗಳನ ಪ್ರವೇಶ ನೆರವೇರಲಿದೆ. ಚಂದಿರನ ಅಂಗಳದಲ್ಲಾಗುತ್ತಿರುವ ಈ ಮಂಗಳನ ಪ್ರವೇಶದಿಂದ ಮೂರು ರಾಶಿಗಳ ಜನರ ಜೀವನದಲ್ಲಿ ಭಾರಿ ಸಕಾರಾತ್ಮಕ ಬದಲಾವಣೆಗಳು ಉಂಟಾಗಲಿವೆ. ಇದರಿಂದ ಅವರ ಜೀವನದಲ್ಲಿ ಅಪಾರ ಹಣ ಹರಿದುಬರಲಿದೆ. ಆ ಅದೃಷ್ಟವಂತ  ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,
 

Mangal Gochar In Karka: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ ಗ್ರಹಗಳ ಸೇನಾಪತಿ ಎಂದೇ ಕರೆಯಲಾಗುವ ಮಂಗಳ ಶೌರ್ಯ, ಸಾಹಸ, ಧೈರ್ಯ, ಕ್ರೋಧ, ಯುದ್ಧ, ಶತ್ರು, ಅಸ್ತ್ರ-ಶಸ್ತ್ರಗಳು ಸೇರಿದಂತೆ ಹಲವು ಕಾಯಿಲೆಗಳ ಕಾರಕ ಗ್ರಹ ಎಂದು ಭಾವಿಸಲಾಗಿದೆ. ಹೀಗಿರುವಾಗ ಮಂಗಳನ ರಾಶಿ ಸಂಕ್ರಮಣ ಎಲ್ಲಾ ಜಾತಕದವರ ಮೇಲೆ ಪ್ರಭಾವ ಬೀರುತ್ತದೆ. ಪ್ರಸ್ತುತ ಮೇ 10 ರಂದು ಮಂಗಳನ ಕರ್ಕ ರಾಶಿ ಗೋಚರ ನೆರೆವೆರಲಿದೆ. ಚಂದ್ರನ ರಾಶಿಯಾಗಿರುವ ಕರ್ಕ ರಾಶಿಗೆ ಮಂಗಳನ ಪ್ರವೇಶದಿಂದ ಹಲವು ರಾಶಿಗಳ ಜನರಿಗೆ ಲಾಭವೋ ಲಾಭ ಸಿಗಲಿದೆ. ಹಾಗಾದರೆ ಬನ್ನಿ ಮಂಗಳನ ಈ ರಾಶಿ ಪರಿವರ್ತನೆಯಿಂದ ಯಾರಿಗೆ ಲಾಭ ಉಂಟಾಗಲಿದೆ ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Shukra Vargottama 2023: ಒಂದು ವರ್ಷದ ಬಳಿಕ ತನ್ನ ಸ್ವರಾಶಿಯಲ್ಲಿ ವರ್ಗೊತ್ತಮನಾದ ಶುಕ್ರ, ಈ ಜನರಿಗೆ ಆಕಸ್ಮಿಕ ಧನಲಾಭ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ಸಿಕುಂಭ ರಾಶಿ: ನಿಮ್ಮ ಗೋಚರ ಜಾತಕದ ಷಷ್ಟಮ ಭಾವದಲ್ಲಿ ಮಂಗಳನ ಈ ಸಂಕ್ರಮಣ ನಡೆಯಲಿದೆ. ಹೀಗಿರುವಾಗ ಈ ರಾಶಿಯ ಸ್ಥಳೀಯರಿಗೆ ಎಲ್ಲಾ ಕ್ಷೇತ್ರಗಳಲ್ಲಿ ಯಶಸ್ಸು ಸಿಗಲಿದೆ. ನಿಮ್ಮ ಎದುರಾಳಿಗಳು ಕೂಡ ಈ ಅವಧಿಯಲ್ಲಿ ವಿಫಲರಾಗಲಿದ್ದಾರೆ. ಕಾರ್ಯಕ್ಷೇತ್ರದಲ್ಲಿ ನಿಮ್ಮ ಕೆಲಸಕ್ಕೆ ಪ್ರಶಂಸೆ ವ್ಯಕ್ತವಾಗಲಿದೆ. ಈ ಹಿನ್ನೆಲೆ ನಿಮಗೆ ಇಂಕ್ರಿಮೆಂಟ್ ಹಾಗೂ ಬಡ್ತಿಯ ಭಾಗ್ಯ ಒದಗಿ ಬರಲಿದೆ. ಆದರೆ, ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಬಿಸ್ನೆಸ್ ಗೆ ಸಂಬಂಧಿಸಿದಂತೆ ನೀವು ಯಾವುದಾದರೊಂದು ಯಾತ್ರೆ ನಡೆಸಬಹುದಾದೀತು. ಕುಟುಂಬಸ್ಥರ ಜೊತೆಗೆ ಉತ್ತಮ ಸಮಯ ಕಳೆಯುವಲ್ಲಿ ಯಶಸ್ವಿಯಾಗುವಿರಿ. 

2 /3

ಮೀನ ರಾಶಿ: ನಿಮ್ಮ ಜಾತಕದ ಪಂಚಮ ಭಾವದಲ್ಲಿ ಮಂಗಳನ ಈ ಗೋಚರ ನೆರೆವೆರುತ್ತಿದೆ. ಹೀಗಾಗಿ ನಿಮಗೆ ಈ ಅವಧಿಯಲ್ಲಿ ಅಪಾರ ಧನ-ಧಾನ್ಯ ಪ್ರಾಪ್ತಿಯಾಗಲಿದೆ. ದೀರ್ಘಾವಧಿಯಿಂದ ನೆನೆಗುದಿಗೆ ಬಿದ್ದ ಕೆಲಸಗಳು ಪೂರ್ಣಗೊಳ್ಳಲಿವೆ. ಸ್ಪರ್ಧಾತ್ಮಕ ಪರೀಕ್ಷೆಗೆ ಸಿದ್ಧತೆ ನಡೆಸುವ ಜನರಿಗೆ ಯಶಸ್ಸು ಸಿಗಲಿದೆ.   

3 /3

ಕನ್ಯಾ ರಾಶಿ- ಮಂಗಳನ ಈ ಗೋಚರ ನಿಮ್ಮ ಜಾತಕದ ಏಕಾದಶ ಭಾವದಲ್ಲಿ ನಡೆಯುತ್ತಿದೆ. ಹೀಗಿರುವಾಗ ನಿಮ್ಮ ಎಲ್ಲಾ ಮನೋಕಾಮನೆಗಳು ಪೂರ್ಣಗೊಳ್ಳಲಿವೆ. ನಿಂತುಹೋದ ಕೆಲಸಗಳಿಗೂ ಕೂಡ ಮತ್ತೆ ಗತಿ ಸಿಗುವ ಸಾಧ್ಯತೆ ಇದೆ. ಆರ್ಥಿಕ ಸ್ಥಿತಿ ಉತ್ತಮಗೊಳ್ಳಲಿದೆ. ಬಿಸ್ನೆಸ್ ನಲ್ಲಿಯೂ ಕೂಡ ಉತ್ತಮ ಲಾಭ ನಿಮ್ಮದಾಗಲಿದೆ. ವೈವಾಹಿಕ ಜೀವನದಲ್ಲಿ ಅಡೆತಡೆಗಳು ಎದುರಾಗುವ ಸಾಧ್ಯತೆ ಇದ್ದರೂ ಕೂಡ ಸಮಯ ಇರುವಾಗಲೇ ನೀವು ಅವುಗಳನ್ನು ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)