Shukra Vargottama 2023: ಒಂದು ವರ್ಷದ ಬಳಿಕ ತನ್ನ ಸ್ವರಾಶಿಯಲ್ಲಿ ವರ್ಗೊತ್ತಮನಾದ ಶುಕ್ರ, ಈ ಜನರಿಗೆ ಆಕಸ್ಮಿಕ ಧನಲಾಭ ಯೋಗ!

Venus Vargottam In Taurus: ವೈದಿಕ ಜೋತಿಷ್ಯ ಶಾಸ್ತ್ರದ ಪ್ರಕಾರ, ಪ್ರಸ್ತುತ ತನ್ನ ಸ್ವರಾಶಿಯಾಗಿರುವ ವೃಷಭ ರಾಶಿಯನ್ನು ಪ್ರವೇಶಿಸಿರುವ ವೈಭವದಾತ ಶುಕ್ರ ಇದೀಗ ತನ್ನದೇ ರಾಶಿಯಲ್ಲಿ ವರ್ಗೊತ್ತಮನಾಗಿದ್ದಾನೆ. ಇದು ಹಲವು ರಾಶಿಗಳ ಮೇಲೆ ಪ್ರಭಾವ ಬೀರಲಿದೆ. ಅದರಲ್ಲಿಯೂ ವಿಶೇಷವಾಗಿ ಮೂರು ರಾಶಿಗಳ ಜಾತಕದವರ ವೃತ್ತಿ ಜೀವನ ಹಾಗೂ ವ್ಯಾಪಾರದಲ್ಲಿ ಅಪಾರ ಸಫಲತೆ ಹಾಗೂ ಆಕಸ್ಮಿಕ ಧನಲಾಭದ ಯೋಗ ನಿರ್ಮಾಣಗೊಳ್ಳುತ್ತಿದೆ.  
 

Shukra Vargottama 2023 In Vrushabha: ಜೋತಿಷ್ಯ ಶಾಸ್ತ್ರದ ಪ್ರಕಾರ ಎಲ್ಲಾ ನವಗ್ರಹಗಳು ಒಂದು ನಿಶ್ಚಿತ ಕಾಲಾಂತರದಲ್ಲಿ ಗೋಚರಿಸಿ ತನ್ನ ವರ್ಗೊತ್ತಮ ಸ್ಥಿತಿಯನ್ನು ತಲುಪುತ್ತವೆ. ಇದರ ಪ್ರಭಾವ ಭೂಮಿಯ ಮೇಲಿರುವ ಸಕಲ ಚರಾಚರಗಳ ಮೇಲೆ ಗೋಚರಿಸುತ್ತದೆ. ಯಾವುದೇ ಒಂದು ಗ್ರಹದ ವರ್ಗೊತ್ತಮ ಸ್ಥಿತಿ ಎಂದರೆ ಅದು ಯಾವುದೇ ಒಂದು ಗ್ರಹದ ಲಗ್ನ ಜಾತಕ ಹಾಗೂ ನಂವಾಂಶ ಜಾತಕದಲ್ಲಿ ಏಕಕಾಲಕ್ಕೆ ಪ್ರವೇಶ ಎಂದರ್ಥ. ಇದರಿಂದ ಆ ಗ್ರಹದ ಶಕ್ತಿ ದುಪ್ಪಟ್ಟಾಗುತ್ತದೆ ಎಂದರ್ಥ. ಇನ್ನೊಂದೆಡೆ ಆ ಗ್ರಹ ತನ್ನ ಸಂಪೂರ್ಣ ಫಲಗಳನ್ನು ನೀಡುತ್ತದೆ ಎಂದರ್ಥ ಕೂಡ ಹೌದು. ಏಪ್ರಿಲ್ 12 ಅಂದರೆ ಇಂದು ಶುಕ್ರ ಗ್ರಹ ತನ್ನ ನವಾಂಶ ಜಾತಕದ ಉಚ್ಛ ಭಾವಕ್ಕೆ ತಲುಪಿ ವರ್ಗೊತ್ತಮ ಸ್ಥಿತಿಯಲ್ಲಿದ್ದಾನೆ. ಇದರಿಂದ ಮೂರು ರಾಶಿಗಳ ಜನರ ವೃತ್ತಿ ಜೀವನದಲ್ಲಿ ಅಪಾರ ಯಶಸ್ಸು ಹಾಗೂ ಧನಲಾಭದ ಯೋಗ ನಿರ್ಮಾಣಗೊಂಡಿದೆ. ಬನ್ನಿ ಆ ಮೂರು ರಾಶಿಗಳು ಯಾವುವು ತಿಳಿದುಕೊಳ್ಳೋಣ,

 

ಇದನ್ನೂ ಓದಿ-Auspicious Drushti Sambandh: ಎರಡು ಶತಮಾನಗಳ ಬಳಿಕ ರೂಪುಗೊಂಡ ಗುರು, ಶುಕ್ರ ಹಾಗೂ ಶನಿಯ ಶುಭ ದೃಷ್ಠಿ ಸಂಬಂಧ, 4 ರಾಶಿಗಳ ಜನರಿಗೆ ಭಾರಿ ಧನಲಾಭ-ಭಾಗ್ಯೋದಯ ಯೋಗ!

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /3

ವೃಶ್ಚಿಕ ರಾಶಿ: ಶುಕ್ರನ ಈ ಉಚ್ಛ ಭಾವ ಅಥವಾ ವರ್ಗೊತ್ತಮ ಸ್ಥಿತಿ ನಿಮ್ಮ ಪಾಲಿಗೆ ಲಾಭಪ್ರದ ಸಿದ್ಧ ಸಾಬೀತಾಗಲಿದೆ. ಆಮದು-ರಫ್ತು ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಉತ್ತಮ ಲಾಭ ಉಂಟಾಗಲಿದೆ. ಪಾರ್ಟ್ನರ್ಶಿಪ್ ವ್ಯವಹಾರದಲ್ಲಿ ನಿಮಗೆ ಭಾರಿ ಲಾಭ ಉಂಟಾಗಲಿದೆ. ಕಂಪ್ಯೂಟರ್, ಐಟಿ ಹಾಗೂ ಎಲೆಕ್ಟ್ರಾನಿಕ್ಸ್ ಕ್ಷೇತ್ರಗಳಿಗೆ ಸಂಬಂಧಿಸಿದ ಜನರಿಗೆ ಭಾರಿ ಧನಲಾಭವಾಗುವ ಸಾಧ್ಯತೆ ಇದೆ. ವಿದೇಶದಿಂದಲೂ ಕೂಡ ನಿಮಗೆ ಉತ್ತಮ ಲಾಭ ಲಭಿಸುವ ಯುಗವಿದೆ. ಪರಿಶ್ರಮದ ಆಧಾರದ ಮೇಲೆ ನಿಮಗೆ ಬಡ್ತಿ ಸಿಗಲಿದೆ ಹಾಗೂ ನೌಕರ ವರ್ಗಕ್ಕೆ ಸಂಬಂಧಿಸಿದೆ ಜನರಿಗೆ ಕಚೇರಿಯಲ್ಲಿ ಉನ್ನತ ಅಧಿಕಾರಿಗಳ ಜೊತೆಗಿನ ಅವರ ಸಂಬಂಧ ಉತ್ತಮಗೊಳ್ಳಲಿದೆ.  

2 /3

ತುಲಾ ರಾಶಿ: ಶುಕ್ರನ ಈ ವರ್ಗೊತ್ತಮ ಸ್ಥಿತಿ ನಿಮ್ಮ ಪಾಲಿಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಇದರಿಂದ ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಂಡು ಬರಲಿದೆ. ವೃತ್ತಿ ಜೇವಣದಲ್ಲಿ ಅತ್ಯುತ್ತಮ ಅವಕಾಶ ನಿಮ್ಮ ಬಳಿ ನಡೆದುಕೊಂಡು ಬರುವ ಸಾಧ್ಯತೆ ಇದೆ ಹಾಗೂ ನೌಕರಿಯಲ್ಲಿ ನಿರತರಾದವರಿಗೆ ಉತ್ತಮ ಇನ್ಸೇನ್ಟೀವ್ ಸಿಗುವ ಸಾಧ್ಯತೆ ಇದೆ. ವ್ಯಾಪಾರ ವರ್ಗದ ಜನರಿಗೆ ಈ ಅವಧಿಯಲ್ಲಿ ಅಪಾರ ಧನಲಾಭವಾಗಲಿದೆ. ಒಂದು ವೇಳೆ ನೀವು ಚಲನ ಚಿತ್ರೋದ್ಯಮ, ಮಾಧ್ಯಮ, ಮಾಡೆಲಿಂಗ್, ಕಲೆ, ಸಂಗೀತ ಕ್ಷೇತ್ರಕ್ಕೆ ಸಂಬಂಧಿಸಿದವರಾಗಿದ್ದರೆ ಈ ಸಮಯ ನಿಮಗೆ ಅತ್ಯಂತ ಅದ್ಭುತ ಸಾಬೀತಾಗಲಿದೆ.   

3 /3

ಮಕರ ರಾಶಿ: ವೈಭವದಾತ ಶುಕ್ರನ ಈ ವರ್ಗೊತ್ತಮ ಸ್ಥಿತಿ ಮಕರ ರಾಶಿಯ ಜಾತಕದವರ ಪಾಲಿಗೆ ಅತ್ಯಂತ ಶುಭ ಫಲಪ್ರದಾಯಿ ಸಾಬೀತಾಗಲಿದೆ. ಈ ಅವಧಿಯಲ್ಲಿ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ ಕಂಡುಬರಲಿದೆ. ಸಿಎ, ಎಂಬಿಎ, ವಕೀಲರಾಗಿರುವ ಜನರಿಗೆ ಈ ಸಮಯ ಅದ್ಭುತವಾಗಿದೆ. ಇನ್ನೊಂದೆಡೆ ಕಮೀಷನ್ ಕೆಲಸದಲ್ಲಿ ತೊಡಗಿಸಿಕೊಂಡವರಿಗೆ ಈ ಅವಧಿಯಲ್ಲಿ ಉತ್ತಮ ಧನಲಾಭದ ಯೋಗ ನಿರ್ಮಾಣಗೊಂಡಿದೆ. ಈ ಅವಧಿಯಲ್ಲಿ ನೀವು ಹೊಸಮನೆ, ವಾಹನ ಖರೀದಿಸುವ ಸಾಧ್ಯತೆ ಇದೆ. ಆರೋಗ್ಯ ಉತ್ತಮವಾಗಿರಲಿದೆ. ಇನ್ನೊಂದೆಡೆ ಆರ್ಥಿಕ ಸ್ಥಿತಿ ಕೂಡ ಮೊದಲಿಗಿಂತ ಉತ್ತಮವಾಗಿರಲಿದೆ. (ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)