Money Dream: ಶೀಘ್ರದಲ್ಲಿಯೇ ನೀವು ಹಣವಂತರಾಗುವ ಸಂಕೇತ ನೀಡುತ್ತವೆ ಈ ಸಂಗತಿಗಳು, ಸಿರಿವಂತರಾಗುವ ಇಂತಹ ಕನಸುಗಳು ನಿಜ ಸಾಬೀತಾಗುತ್ತವೆ

Dreams Interpretation: ಪ್ರತಿಯೊಬ್ಬರಿಗೂ ಕೂಡ ರಾತ್ರಿ ಮಲಗಿರುವಾಗ ಕನಸುಗಳು ಬೀಳುತ್ತವೆ. ಆದರೆ, ಕೆಲವೊಮ್ಮೆ ಬೆಳಗ್ಗೆ ಎದ್ದಾಕ್ಷಣ ಆ ಕನಸುಗಳು ಮರೆತುಹೋಗುತ್ತವೆ. ಇನ್ನೊಂದೆಡೆ ಕೆಲ ಕನಸುಗಳು ಹಾಗೆಯೇ ಸ್ಮೃತಿಪಟಲದಲ್ಲಿ ಉಳಿದುಹೋಗುತ್ತವೆ.

Dreams Interpretation: ಪ್ರತಿಯೊಬ್ಬರಿಗೂ ಕೂಡ ರಾತ್ರಿ ಮಲಗಿರುವಾಗ ಕನಸುಗಳು ಬೀಳುತ್ತವೆ. ಆದರೆ, ಕೆಲವೊಮ್ಮೆ ಬೆಳಗ್ಗೆ ಎದ್ದಾಕ್ಷಣ ಆ ಕನಸುಗಳು ಮರೆತುಹೋಗುತ್ತವೆ. ಇನ್ನೊಂದೆಡೆ ಕೆಲ ಕನಸುಗಳು ಹಾಗೆಯೇ ಸ್ಮೃತಿಪಟಲದಲ್ಲಿ ಉಳಿದುಹೋಗುತ್ತವೆ. ಈ ಕನಸುಗಳು ಜೀವನದಲ್ಲಿ ಆಗುವ ಘಟನೆಗಳ ಒಳ್ಳೆಯ ಹಾಗೂ ಕೆಟ್ಟ ಸಂಕೇತಗಳು ಹೌದು ಎನ್ನುತ್ತದೆ ಸ್ವಪ್ನಶಾಸ್ತ್ರ. ಹಾಗಾದರೆ ಬನ್ನಿ ವ್ಯಕ್ತಿಯ ಜೀವನದಲ್ಲಿ ಹಣಕಾಸಿನ ಆಗಮನವನ್ನು ಸೂಚಿಸುವ ಆ ಸ್ವಪ್ನಗಳು ಯಾವುವು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ. ಏಕೆಂದರೆ, ಜೀವನದಲ್ಲಿ ಸಿರಿವಂತಿಕೆಯನ್ನು ಸೂಚಿಸುವ ಹಲವು ಕನಸುಗಳು ನನಸಾಗುತ್ತವೆ. 

 

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

 

ಇದನ್ನೂ ಓದಿ-Janmashtami 2022: ಈ 4 ರಾಶಿಗಳು ಶ್ರೀಕೃಷ್ಣನಿಗೆ ತುಂಬಾ ಇಷ್ಟವಾದ ರಾಶಿಗಳು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /6

1. ದೀಪ - ಸ್ವಪ್ನ ಶಾಸ್ತ್ರದಲ್ಲಿ ಪ್ರತಿಯೊಂದು ಕನಸಿನ ಅರ್ಥ ಹಾಗೂ ಅವುಗಳ ಅರ್ಥದ ಕುರಿತು ವಿವರಿಸಲಾಗಿದೆ. ಭವಿಷ್ಯದಲ್ಲಿ ನಡೆಯುವ ಘಟನಾವಳಿಗಳ ಕುರಿತು ಕನಸುಗಳು ನಮಗೆ ಮುಂಚಿತವಾಗಿಯೇ ಸಂಕೇತಗಳನ್ನು ನೀಡುತ್ತವೆ. ಕನಸಿನಲ್ಲಿ ಉರಿಯುತ್ತಿರುವ ದೀಪ ಕಾಣಿಸುವುದು ವ್ಯಕ್ತಿಗೆ ಶುಭ ಸಂಕೇತವಿದ್ದಂತೆ. ಮುಂಬರುವ ದಿನಗಳಲ್ಲಿ ವ್ಯಕ್ತಿಗೆ ಅಪಾರ ಧನಲಾಭವಾಗುತ್ತವೆ ಎಂಬುದರ ಸೂಚಕ.

2 /6

2. ಕಿವಿಯೋಲೆ - ಮಲಗಿರುವ ವ್ಯಕ್ತಿಗೆ ಕನಸಿನಲ್ಲಿ ಕಿವಿಯೋಲೆಗಳು ಕಂಡರೆ, ಮುಂಬರುವ ದಿನಗಳಲ್ಲಿ ಆ ವ್ಯಕ್ತಿಯ ಜೀವನದಲ್ಲಿ ತಾಯಿ ಲಕ್ಷ್ಮಿಯ ಆಗಮನವಾಗುತ್ತದೆ ಎಂಬುದರ ಸಂಕೇತ ಅದು. ಕೆಲ ಕನಸುಗಳು ತುಂಬಾ ಚಿಕ್ಕದಾಗಿದ್ದರೂ ಕೂಡ ಭವಿಷ್ಯದಲ್ಲಿ ಅವು ಮಂಗಳಕರ ಫಲಿತಾಂಶಗಳನ್ನು ನೀಡುವ ಸೂಚಕಗಳಾಗಿವೆ.   

3 /6

3. ಚಿನ್ನ - ಕನಸಿನಲ್ಲೇ ಆಗಲಿ ಆಥವಾ ನಿಜಜೀವನದಲ್ಲಿಯೇ ಆಗಲಿ ಚಿನ್ನ ಪಡೆಯುವುದು ಯಾರಿಗೆ ತಾನೇ ಇಷ್ಟ ಇರುವುದಿಲ್ಲ ಹೇಳಿ. ಆದರೆ, ಹಲವು ಬಾರಿ ಕನಸಿನಲ್ಲಿ ಇವುಗಳ ಅರ್ಥ ತುಂಬಾ ಬದಲಾಗುತ್ತದೆ. ಕನಸಿನಲ್ಲಿ ಒಂದು ವೇಳೆ ನಿಮಗೂ ಕೂಡ ಚಿನ್ನ ಗೋಚರಿಸಿದರೆ, ಅದು ಶುಭ ಸಂಕೇತವಾಗಿದೆ. ಇದರ ಅರ್ಥ ಭವಿಷ್ಯದಲ್ಲಿ ನಿಮ್ಮ ಮೇಲೆ ತಾಯಿ ಲಕ್ಷ್ಮಿಯ ಕೃಪಾಕಟಾಕ್ಷ ಹಾಗೆಯೇ ಇರಲಿದೆ ಹಾಗೂ ನೀವು ಶೀಘ್ರದಲ್ಲಿಯೇ ಸಿರಿವಂತರಗುವಿರಿ ಎಂದರ್ಥ

4 /6

4. ಉಂಗುರ - ಕನಸಿನಲ್ಲಿ ನಿಮಗೆ ನೀವೇ ಉಂಗರನ್ನು ತೊಡಿಸುತ್ತಿರುವುದನ್ನು ನೋಡುವುದು ಕೂಡ ಶುಭ ಸಂಕೇತವಾಗಿದೆ. ಕನಸಿನಲ್ಲಿ ಉಂಗುರ ಕಾಣುವುದು, ನಿಜ ನೀವನದಲ್ಲಿ ತಾಯಿ ಲಕ್ಷ್ಮಿಯ ಆಗಮನದ ಮುನ್ಸೂಚನೆಯಾಗಿದೆ. ಇಂತಹ ಕನಸುಗಳು ವ್ಯಕ್ತಿಯ ಜೀವನದಲ್ಲಿ ಒಳ್ಳೆಯ ದಿನಗಳು ಆರಂಭಗೊಳ್ಳುವ ಸಂಕೇತಗಳಾಗಿವೆ. 

5 /6

5. ಹಾವು - ಹಾವೂ ಒಂದು ಅಪಾಯಕಾರಿ ಜಂತು. ನಿಜ ಜೀವನದಲ್ಲಿ ಯಾವುದೇ ಓರ್ವ ವ್ಯಕ್ತಿಗೆ ಹಾವು ಕಂಡರೆ, ಆತನ ಎದೆ ಝಲ್ ಎನ್ನುತ್ತದೆ ಮತ್ತು ವ್ಯಕ್ತಿ ದೇವರ ನಾಮಸ್ಮರಣೆಯಲ್ಲಿ ತೊಡಗುತ್ತಾನೆ. ಆದರೆ, ಕನಸಿನಲ್ಲಿ ಒಂದು ವೇಳೆ ನಿಮಗೆ ಹಾವು ಕಂಡರೆ ಹೆದರಬೇಡಿ. ಏಕೆಂದರೆ ಸ್ವಪ್ತ್ನ ಶಾಸ್ತ್ರದ ಪ್ರಕಾರ ಇದನ್ನು ಅತ್ಯಂತ ಶುಭ ಎಂದು ಭಾವಿಸಲಾಗಿದೆ. ಕನಸಿನಲ್ಲಿ ಬಿಲದ ಬಳಿ ಹಾವು ಕಂಡರೆ, ಅದು ಭವಿಷ್ಯದಲ್ಲಿ ನಿಮ್ಮ ಜೀವನದಲ್ಲಿ ಧನಾಗಮನದ ಸಂಕೇತವಾಗಿದೆ. 

6 /6

6. ಗುಲಾಬಿ ಹೂವು - ಕನಸಿನಲ್ಲಿ ಗುಲಾಬಿ ಹೂವು ನೋಡುವುದು ಅಥವಾ ಕಮಲದ ಹೂವು ನೋಡುವುದು ಕೂಡ ಶುಭ ಫಲದಾಯಿ ಸಾಬೀತಾಗುತ್ತದೆ. ಭವಿಷ್ಯದಲ್ಲಿ ತಾಯಿ ಲಕ್ಷ್ಮಿಯ ಕೃಪೆ ಸದಾ ನಿಮ್ಮಮೇಲಿರಲಿದೆ ಅಥವಾ ನಿಮ್ಮ ಮೇಲೆ ತಾಯಿ ಲಕ್ಷ್ಮಿ ತನ್ನ ಕೃಪಾವೃಷ್ಟಿ ಸುರಿಸಲಿದ್ದಾಳೆ ಎಂಬುದು ಅದರ ಅರ್ಥ.