Janmashtami 2022: ಈ 4 ರಾಶಿಗಳು ಶ್ರೀಕೃಷ್ಣನಿಗೆ ತುಂಬಾ ಇಷ್ಟವಾದ ರಾಶಿಗಳು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ

Krishna Janmashtami 2022: ಸಾಮಾನ್ಯವಾಗಿ ಪ್ರತಿವರ್ಷ ದೇಶಾದ್ಯಂತ ಅತ್ಯಂತ ಸಡಗರೋಲ್ಲಾಸದಿಂದ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಾಗುತ್ತದೆ. ಈ ದಿನ ವಿಧಿವತ್ತಾಗಿ ಶ್ರೀ ಕೃಷ್ಣನಿಗೆ ಪೂಜೆಯನ್ನು ಸಲ್ಲಿಸಲಾಗುತ್ತದೆ. ಆದರೆ, ಕೆಲ ರಾಶಿಗಳು ಶ್ರೀಕೃಷ್ಣನಿಗೆ ಅತ್ಯಂತ ಪ್ರಿಯ ರಾಶಿಗಳು ಎಂದು ಹೇಳಲಾಗುತ್ತದೆ ಮತ್ತು ಈ ರಾಶಿಗಳ ಜಾತಕದವರ ಮೇಲೆ ಶ್ರೀಕೃಷ್ಣನ ವಿಶೇಷ ಕೃಪೆ ಇರುತ್ತದೆ ಎನಲಾಗುತ್ತದೆ. ಆ ರಾಶಿಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : Aug 16, 2022, 02:29 PM IST
  • ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ಕುರಿತು ವರ್ಣಿಸಲಾಗಿದ್ದು,
  • ಪ್ರತಿಯೊಂದು ರಾಶಿಗೆ ತನ್ನದೇ ಆದ ಅಧಿಪತಿ ಗ್ರಹ ಅಥವಾ ರಾಷ್ಯಾಧಿಪ ಇರುತ್ತದೆ.
  • ವ್ಯಕ್ತಿಗಳ ರಾಶಿಗೆ ಅನುಗುಣವಾಗಿ ಅವರ ಸ್ವಭಾವ ಹಾಗೂ ಭವಿಷ್ಯದ ಕುರಿತು ಲೆಕ್ಕಾಚಾರಗಳನ್ನೂ ಹಾಕಲಾಗುತ್ತದೆ.
Janmashtami 2022: ಈ 4 ರಾಶಿಗಳು ಶ್ರೀಕೃಷ್ಣನಿಗೆ ತುಂಬಾ ಇಷ್ಟವಾದ ರಾಶಿಗಳು, ನಿಮ್ಮ ರಾಶಿ ಇದೆಯಾ ಈ ಪಟ್ಟಿಯಲ್ಲಿ title=
Krishna Janmashtami 2022

Shri Krishna Favorite Zodiac Signs: ಜೋತಿಷ್ಯ ಶಾಸ್ತ್ರದಲ್ಲಿ ಒಟ್ಟು 12 ರಾಶಿಗಳ ಕುರಿತು ವರ್ಣಿಸಲಾಗಿದ್ದು, ಪ್ರತಿಯೊಂದು ರಾಶಿಗೆ ತನ್ನದೇ ಆದ ಅಧಿಪತಿ ಗ್ರಹ ಅಥವಾ ರಾಷ್ಯಾಧಿಪ ಇರುತ್ತದೆ. ವ್ಯಕ್ತಿಗಳ ರಾಶಿಗೆ ಅನುಗುಣವಾಗಿ ಅವರ ಸ್ವಭಾವ ಹಾಗೂ ಭವಿಷ್ಯದ ಕುರಿತು ಲೆಕ್ಕಾಚಾರಗಳನ್ನೂ ಹಾಕಲಾಗುತ್ತದೆ. ಜೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳಲ್ಲಿ ಕೆಲ ರಾಶಿಗಳು ಶ್ರೀ ಕೃಷ್ಣನಿಗೆ ಪ್ರಿಯವಾದ ರಾಶಿಗಳು ಎಂದು ಹೇಳಲಾಗುತ್ತದೆ ಮತ್ತು ಈ ರಾಶಿಗಳ ಮೇಲೆ ಶ್ರೀಕೃಷ್ಣನ ವಿಶೇಷ ಕೃಪಾದೃಷ್ಟಿ ಇರುತ್ತದೆ ಎನ್ನಲಾಗುತ್ತದೆ. ಶ್ರಾವಣ ಮಾಸದ ಕೃಷ್ಣಾ ಪಕ್ಷದ ಅಷ್ಟಮಿ ತಿಥಿಯ ರೋಹಿಣಿ ನಕ್ಷತ್ರದಲ್ಲಿ ಶ್ರೀಕೃಷ್ಣ ವಾಸುದೇವ-ದೇವಕಿಯರಿಗೆ ವಿಷ್ಣುವಿನ 8 ನೇ ಅವತಾರದ ರೂಪದಲ್ಲಿ ಜನಿಸಿದ. ಈ ವರ್ಷ ಆಗಸ್ಟ್ 18 ಮತ್ತು 19 ರಂದು ಈ ಬಾರಿಯ ಕೃಷ್ಣ ಜನ್ಮಾಷ್ಟಮಿಯ ಮಹಾಪರ್ವವನ್ನು ಆಚರಿಸಲಾಗುತ್ತಿದೆ.

ವೃಷಭ ರಾಶಿ - ಜೋತಿಷ್ಯ ನಂಬಿಕೆಗಳ ಪ್ರಕಾರ ಶ್ರೀಕೃಷ್ಣನಿಗೆ ವೃಷಭ ರಾಶಿ ಅತ್ಯಂತ ಪ್ರಿಯ ರಾಶಿ ಎಂದು ಹೇಳಲಾಗುತ್ತದೆ. ಶ್ರೀಕೃಷ್ಣನ ಕೃಪೆಯಿಂದ ಈ ರಾಶಿಯ ಜಾತಕದವರಿಗೆ ಸಕಲ ಕಾರ್ಯಗಳಲ್ಲಿ ಸಿದ್ಧಿ ಪ್ರಾಪ್ತಿಯಾಗುತ್ತದೆ. ಹೀಗಾಗಿ ಈ ರಾಶಿಯ ಜನರು ಯಾವಾಗಲು ಶ್ರೀ ಕೃಷ್ಣನನ್ನು ಸ್ಮರಿಸುತ್ತ ಇರಬೇಕು ಎನ್ನಲಾಗುತ್ತದೆ.

ಕರ್ಕ ರಾಶಿ - ಜೋತಿಷ್ಯ ಶಾಸ್ತ್ರದ ಪ್ರಕಾರ ಕರ್ಕ ರಾಶಿಗಳ ಮೇಲೂ ಕೂಡ ಶ್ರೀಕೃಷ್ಣ ತನ್ನ ಕೃಪೆಯನ್ನು ತೋರುತ್ತಾನೆ ಎನ್ನಲಾಗುತ್ತದೆ. ಈ ರಾಶಿಗಳ ಜನರಿಗೆ ಸಕಲ ಕಾರ್ಯಗಳಲ್ಲಿ ಸಫಲತೆ ಲಭಿಸುತ್ತದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಯಾರ ಮೇಲೆ ಶ್ರೀಕೃಷ್ಣನ ವಿಶೇಷ ಕೃಪೆ ಇರುತ್ತದೆಯೋ ಅವರಿಗೆ ಮೃತ್ಯುವಿನ ಬಳಿಕ ಮೋಕ್ಷ ಪ್ರಾಪ್ತಿಯಾಗುತ್ತದೆ ಎನ್ನಲಾಗುತ್ತದೆ. 

ಸಿಂಹ ರಾಶಿ - ಸಿಂಹ ರಾಶಿಯ ಜನರ ಮೇಲೂ ಕೂಡ ಶ್ರೀಕೃಷ್ಣನ ವಿಶೇಷ ಕೃಪೆ ಇರುತ್ತದೆ. ಈ ರಾಶಿಯ ಜನರು ಪರಿಶ್ರಮಿ ಜೀವಿಗಳಾಗಿರುತ್ತಾರೆ. ಅಷ್ಟೇ ಅಲ್ಲ ಈ ರಾಶಿಗಳ ಜನರಿಗೆ ಅವರು ಪಟ್ಟ ಶ್ರಮಕ್ಕೆ ತಕ್ಕ ಪ್ರತಿಫಲ ಸಿಕ್ಕೆ ಸಿಗುತ್ತದೆ ಎನ್ನಲಾಗುತ್ತದೆ. ಈ ರಾಶಿಯ ಜನರೂ ಕೂಡ ರಾಧ-ಕೃಷ್ಣರ ಧ್ಯಾನ ಕೈಗೊಳ್ಳಬೇಕು. 

ಇದನ್ನೂ ಓದಿ-Vastu Shastra: ಮರೆತೂ ಕೂಡ ಈ 4 ವಸ್ತುಗಳನ್ನು ಎರವಲು ಪಡೆಯಲೂ ಬೇಡಿ-ಕೊಡಲೂಬೇಡಿ, ಕೈಯಲ್ಲಿ ಹಣ ನಿಲ್ಲುವುದಿಲ್ಲ

ತುಲಾ ರಾಶಿ - ತುಲಾ ರಾಶಿಯ ಜಾತಕದವರ ಮೇಲೂ ಕೂಡ ಶ್ರೀಕೃಷ್ಣನ ವಿಶೇಷ ಕೃಪೆ ಇರುತ್ತದೆ. ಶ್ರೀಕೃಷ್ಣನ ಕೃಪೆಯಿಂದ ಈ ಜಾತಕದ ಜನರಿಗೆ ಜೀವನದಲ್ಲಿ ಎಲ್ಲಾ ರೀತಿಯ ಸುಖಗಳು ಪ್ರಾಪ್ತಿಯಾಗುತ್ತವೆ. ಘನತೆ ಗೌರವ ಪ್ರಾಪ್ತಿಯಾಗುತ್ತದೆ. ತುಲಾ ರಾಶಿಯ ಜಾತಕದವರು ಯಾವಾಗಲು ಶ್ರೀಕೃಷ್ಣನ ಗುಣಗಾನ ನಡೆಸುತ್ತಲೇ ಇರಬೇಕು. 

ಇದನ್ನೂ ಓದಿ-ಮನೆಯಲ್ಲಿ ಮನಿ ಪ್ಲಾಂಟ್ ನೆಡುವ ಮೊದಲು ಈ ವಾಸ್ತು ಸಲಹೆಗಳನ್ನು ತಿಳಿಯಿರಿ

(ಹಕ್ಕುತ್ಯಾಗ - ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News