Most Beautiful Women: ವಿಜ್ಞಾನದ ಪ್ರಕಾರ ವಿಶ್ವದ ಟಾಪ್ 10 ಸುಂದರಿಯರಿವರು, ಪಟ್ಟಿಯಲ್ಲಿ ಓರ್ವ ಕನ್ನಡತಿಯೂ ಇದ್ದಾಳೆ

Most Beautiful Woman: ಪ್ರತಿಯೊಬ್ಬ ವ್ಯಕ್ತಿ ಸುಂದರವಾಗಿ ಕಾಣಲು ಇಷ್ಟಪಡುತ್ತಾನೆ, ಆದರೆ ಹಾರ್ಲೆ ಸ್ಟ್ರೀಟ್‌ನ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕ ಡಾ ಜೂಲಿಯನ್ ಡಿ ಸಿಲ್ವಾ ಅವರು ಸೌಂದರ್ಯವನ್ನು ಅಳೆಯಲು ಒಂದು ಮಾಪಕವನ್ನು ರಚಿಸಿದ್ದಾರೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ.

Most Beautiful Woman: ಪ್ರತಿಯೊಬ್ಬ ವ್ಯಕ್ತಿ ಸುಂದರವಾಗಿ ಕಾಣಲು ಇಷ್ಟಪಡುತ್ತಾನೆ, ಆದರೆ ಹಾರ್ಲೆ ಸ್ಟ್ರೀಟ್‌ನ ಸೌಂದರ್ಯವರ್ಧಕ ಶಸ್ತ್ರಚಿಕಿತ್ಸಕ ಡಾ ಜೂಲಿಯನ್ ಡಿ ಸಿಲ್ವಾ ಅವರು ಸೌಂದರ್ಯವನ್ನು ಅಳೆಯಲು ಒಂದು ಮಾಪಕವನ್ನು ರಚಿಸಿದ್ದಾರೆ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಇದಕ್ಕಾಗಿ ಡಾ. ಸಿಲ್ವಾ ಒಂದು ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸಿದ್ದಾರೆ. ಅದರಂತೆ, ಸೌಂದರ್ಯವನ್ನು ಚಿನ್ನದ ಅನುಪಾತದಲ್ಲಿ  ಅಳೆಯಲಾಗುತ್ತದೆ. ಇದರಲ್ಲಿ, ಮುಖದ ಸೌಂದರ್ಯವನ್ನು ಅಳೆಯಲಾಗುತ್ತದೆ ಮತ್ತು 1.618 (ಫೈ ಅಂದರೆ Phi) ಗೆ ಹೋಲಿಸಲಾಗುತ್ತದೆ. ಯಾವುದೇ ಒಂದು ಮುಖವು ಈ ಮಾಪಕಕ್ಕೆ ಹತ್ತಿರದಲ್ಲಿದೆ, ಅದನ್ನು ಹೆಚ್ಚು ಸುಂದರವೆಂದು ಪರಿಗಣಿಸಲಾಗುತ್ತದೆ. ಈ ಗೋಲ್ಡನ್ ಅನುಪಾತದ ಪ್ರಕಾರ ಯಾವ ಮುಖವು ಹೆಚ್ಚು ಹೆಚ್ಚು ಉಂದರವಾಗಿದೆ ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ,

 

ಇದನ್ನೂ ಓದಿ-Lucky Sign on Body: ಮೈಮೇಲೆ ಈ ಚಿಹ್ನೆಗಳಿರುವ ಮಹಿಳೆಯರು ತಮ್ಮ ಪತಿ ಮತ್ತು ಕುಟುಂಬಕ್ಕೆ ಭಾರಿ ಅದೃಷ್ಟವನ್ನೇ ತರುತ್ತಾರೆ

 

ಇದನ್ನೂ ನೋಡಿ-

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /10

1. ಈ ಚಿನ್ನದ ಅನುಪಾತವನ್ನು ನಂಬುವುದಾದರೆ, ಹಾಲಿವುಡ್ ನಟಿ ಜೋಡಿ ಕಮರ್ ವಿಶ್ವದ ಅತ್ಯಂತ ಸುಂದರ ಮಹಿಳೆಯಾಗಿದ್ದಾರೆ. ಅವಳ ಮುಖವು ಗೋಲ್ಡನ್ ರೇಶಿಯೋ ಸ್ಕೇಲ್‌ನಲ್ಲಿ ಶೇ.94.52 ರಷ್ಟು ನಿಖರವಾಗಿದೆ. ಈ ಪಟ್ಟಿಯಲ್ಲಿ ಜೋಡಿ ಕಮರ್ ಮೊದಲ ಸ್ಥಾನ ಪಡೆದಿದೆ.  

2 /10

2. ಹಾಲಿವುಡ್ ನ ಖ್ಯಾತ ನಟಿ ಜಡೆಯಾ ಈ ಪಟ್ಟಿಯಲ್ಲಿ ಎರಡನೇ ಸ್ಥಾನ ಪಡೆದಿದ್ದಾಳೆ. ಜಡೆಯಾ ಅವರ ಮುಖವು ಗೋಲ್ಡನ್ ರೇಶಿಯೊ ಮಾಪಕದಲ್ಲಿ ಶೆ.94.37 ರಷ್ಟು ನಿಖರವಾಗಿದೆ. ಜಡೆಯಾ ಓರ್ವ ನಟಿಯಾಗುವುದರ ಜೊತೆಗೆ ವೃತ್ತಿಪರ ಗಾಯಕಿ ಕೂಡ ಹೌದು,  

3 /10

3. ಮಾಡೆಲಿಂಗ್‌ನಲ್ಲಿ ಆಸಕ್ತಿ ಇರುವವರಿಗೆ ಬೆಲ್ಲಾ ಹಡಿದ್ ಹೆಸರು ಒಂದು ಚಿರಪರಿಚಿತ ಮುಖ. ಬೆಲ್ಲಾ ಹಡಿದ್ ಓರ್ವ ಪ್ರಸಿದ್ಧ ಅಮೇರಿಕನ್ ಮಾಡೆಲ್ ಆಗಿದ್ದಾಳೆ. ಈ ಸೌಂದರ್ಯದ ಪಟ್ಟಿಯಲ್ಲಿ ಬೆಲ್ಲಾ ಹಡಿದ್ ಮೂರನೇ ಸ್ಥಾನ ಪಡೆದಿದ್ದಾಳೆ. ಬೆಲ್ಲಾಳ ಮುಖವು ಗೋಲ್ಡನ್ ರೇಶಿಯೋ ಮಾಪಕದಲ್ಲಿ ಶೇ.94.35 ನಿಖರವಾಗಿದೆ.  

4 /10

4. ಗೋಲ್ಡನ್ ರೇಶಿಯೊ ಪ್ರಕಾರ, ಅಮೆರಿಕದ ಖ್ಯಾತ ಗಾಯಕಿ ಬೆಯೋನ್ಸ್ ಈ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾಳೆ. ಬೆಯೋನ್ಸ್‌ನ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.92.44 ರಷ್ಟು ನಿಖರವಾಗಿದೆ. ಬೆಯೋನ್ಸ್ ಉತ್ತಮ ಗಾಯಕಿ ಮತ್ತು ಗೀತರಚನೆಕಾರ್ತಿಯಾಗಿದ್ದಾಳೆ ಮತ್ತು ಆಗಾಗ ನಟನೆ ಕೂಡ ಮಾಡುತ್ತಾಳೆ.  

5 /10

5. ನೀವು ಇಂಗ್ಲಿಷ್ ಹಾಡುಗಳನ್ನು ಕೇಳಲು ಇಷ್ಟಪಡುವವರಾಗಿದ್ದರೆ, ನಿಮಗೆ ಅರಿಯಾನಾ ಗ್ರಾಂಡೆ ಒಂದು ಚಿರಪರಿಚಿತ ಹೆಸರು. ಫ್ಲೋರಿಡಾದ ಪ್ರಸಿದ್ಧ ಗಾಯಕಿ ಅರಿಯಾನಾ ಗ್ರಾಂಡೆ ಈ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದ್ದಾಳೆ. ಅರಿಯಾನಾ ಗ್ರಾಂಡೆ ಅವರ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.91.81 ರಷ್ಟು ನಿಖರವಾಗಿದೆ.  

6 /10

6. ಅಮೆರಿಕದ ಖ್ಯಾತ ಗಾಯಕಿ ಟೇಲರ್ ಸ್ವಿಫ್ಟ್ ಅಮೆರಿಕಾದಲ್ಲಷ್ಟೇ ಅಲ್ಲ ಭಾರತದಲ್ಲಿಯೂ ಕೂಡ ಸಾಕಷ್ಟು ಸಾಕಷ್ಟು ಅಭಿಮಾನಿ ಬಳಗ ಹೊಂದಿದ್ದಾಳೆ. ಈ ಅಮೇರಿಕನ್ ಗಾಯಕಿ ಪಟ್ಟಿಯ ಆರನೇ ಸ್ಥಾನವನ್ನು ಅಲಂಗರಿಸಿದ್ದಾಳೆ. ಟೇಲರ್ ಸ್ವಿಫ್ಟ್ ಅವರ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.91.64 ರಷ್ಟು ನಿಖರವಾಗಿದೆ.  

7 /10

7. ಮಾಡೆಲಿಂಗ್ ಮೂಲಕ ವಿಶ್ವವಿಖ್ಯಾತಳಾಗಿರುವ ಜೋರ್ಡಾನ್ ಡನ್ ಈ ಪಟ್ಟಿಯಲ್ಲಿ ಏಳನೇ ಸ್ಥಾನ ಪಡೆದಿದ್ದಾಳೆ. ಗೋಲ್ಡನ್ ರೇಶಿಯೋ ಸ್ಕೇಲ್‌ನಲ್ಲಿ ಜೋರ್ಡಾನ್ ಡನ್‌ನ ಮುಖವು ಶೇ.91.34 ರಷ್ಟು ನಿಖರವಾಗಿದೆ.  

8 /10

8. ಖ್ಯಾತ ಗಾಯಕಿ-ನಟಿ ಕಿಮ್ ಕರ್ದಾಶಿಯಾ ಯಾರಿಗೆ ತಾನೇ ಗೊತ್ತಿಲ್ಲ. ಗೋಲ್ಡನ್ ರೇಶಿಯೋ ಸ್ಕೇಲ್ ನಲ್ಲಿ ಕಿಮ್ ಮುಖ ಶೇ.91.28ರಷ್ಟು ನಿಖರವಾಗಿದೆ. ಲಕ್ಷಾಂತರ ಹಿಂಬಾಲಕರನ್ನು ಹೊಂದಿರುವ ಕಿಮ್ ಈ ಪಟ್ಟಿಯಲ್ಲಿ ಎಂಟನೆ ಸ್ಥಾನ ಅಲಂಕರಿಸಿದ್ದಾಳೆ ಎಂದರೆ ನೀವೂ ಆಶ್ಚರ್ಯಪಡುವಿರಿ.  

9 /10

9. ಈ ಪಟ್ಟಿಯಲ್ಲಿ ಭಾರತದಿಂದ ಖ್ಯಾತ ಬಾಲಿವುಡ್ ನಟಿ ಹಾಗೂ ಕನ್ನಡತಿ ದೀಪಿಕಾ ಪಡುಕೋಣೆ ಹೆಸರು ಕೂಡ ಶಾಮೀಲಾಗಿದೆ ಹಲವು ಚಿತ್ರಗಳಲ್ಲಿ ತಮ್ಮ ನಟನಾ ಚಾತುರ್ಯ ಮೆರೆದಿರುವ ದೀಪಿಕಾ ಈ ಪಟ್ಟಿಯಲ್ಲಿ ಒಂಬತ್ತನೇ ಸ್ಥಾನ ಪಡೆದಿದ್ದಾಳೆ. ದೀಪಿಕಾ ಪಡುಕೋಣೆ ಅವರ ಮುಖವು ಗೋಲ್ಡನ್ ರೇಶಿಯೋ ಸ್ಕೇಲ್‌ನಲ್ಲಿ ಶೇ.91.22 ರಷ್ಟು ನಿಖರವಾಗಿದೆ.  

10 /10

10 ಕೊರಿಯಾದ ಖ್ಯಾತ ಮಾಡೆಲ್ ಹೊಯೊನ್ ಜಂಗ್ ಈ ಪಟ್ಟಿಯಲ್ಲಿ ಹತ್ತನೇ ಸ್ಥಾನದಲ್ಲಿದ್ದಾಳೆ. ಮಾಡೆಲ್ ಆಗುವುದರ ಜೊತೆಗೆ ಹೊಯಾನ್ ಜಂಗ್ ಓರ್ವ ನಟಿ ಕೂಡ ಹೌದು. ಹೊಯೊನ್ ಜಂಗ್‌ನ ಮುಖವು ಗೋಲ್ಡನ್ ರೇಶಿಯೊ ಸ್ಕೇಲ್‌ನಲ್ಲಿ ಶೇ.89.63 ರಷ್ಟು ನಿಖರವಾಗಿದೆ.