ಶನಿ ಜಯಂತಿಯಂದು ಅದ್ಭುತ ರಾಜಯೋಗಗಳ ನಿರ್ಮಾಣ: ಇಂದಿನಿಂದ ಇವರ ಬಾಳೇ ಬಂಗಾರ

Shani Jayanti: ಇಂದು ಶನಿ ಜಯಂತಿಯ ದಿನ ಮೂರು ಶುಭ ರಾಜ ಯೋಗಗಳು ನಿರ್ಮಾಣಗೊಳ್ಳುತ್ತಿವೆ. ಈ ಯೋಗಗಳು ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಕರುಣಿಸಲಿದ್ದು, ಈ ಸಮಯದಲ್ಲಿ ಶನಿ ದೇವನು ಈ ರಾಶಿಯವರ ಜೀವನದಲ್ಲಿ ಅಪಾರ ಕೃಪಾಕಟಾಕ್ಷವನ್ನು ತೋರಲಿದ್ದಾನೆ ಎಂದು ಹೇಳಲಾಗುತ್ತಿದೆ. 

Written by - Yashaswini V | Last Updated : May 19, 2023, 09:08 AM IST
  • 19 ಮೇ 2023ರ ಶುಕ್ರವಾರ ಶನಿ ಜಯಂತಿಯಂದು ಶನಿದೇವರು ಮೂವತ್ತು ವರ್ಷಗಳ ಬಳಿಕ ಸ್ವರಾಶಿ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ ಶತ ರಾಜಯೋಗ ನಿರ್ಮಾಣವಾಗಿದೆ.
  • ಇದಲ್ಲದೆ, ಶನಿ ಜಯಂತಿಯ ದಿನ ಮಂಗಳಕರ ಶೋಭನ ಯೋಗ ನಿರ್ಮಾಣಗೊಳ್ಳಲಿದೆ.
  • ಮೇಷ ರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ.
ಶನಿ ಜಯಂತಿಯಂದು ಅದ್ಭುತ ರಾಜಯೋಗಗಳ ನಿರ್ಮಾಣ: ಇಂದಿನಿಂದ ಇವರ ಬಾಳೇ ಬಂಗಾರ  title=

Raja Yogas On Shani Jayanti Effect: ಜ್ಯೇಷ್ಠ ಅಮಾವಾಸ್ಯೆಯಾದ ಇಂದು ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಸೂರ್ಯ ಪುತ್ರ, ಛಾಯಾ ಸುತ ಶನಿ ಈ ದಿನವೇ ಜನಿಸಿದನೆಂದು ನಂಬಲಾಗಿದೆ. ಹಾಗಾಗಿಯೇ, ಜ್ಯೇಷ್ಠ ಅಮಾವಾಸ್ಯೆಯ ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನ ಮೇ 19, 2023ರ ಶುಕ್ರವಾರದಂದು ಸಂಭವಿಸುತ್ತಿರುವ ಶನಿ ಜಯಂತಿಯ ದಿನ ಗ್ರಹಗಳ ಅಪರೂಪದ ಸಂಯೋಗ ರಚನೆಯಾಗಲಿದ್ದು ಮಂಗಳಕರ ರಾಜ ಯೋಗಗಳು ನಿರ್ಮಾಣಗೊಳ್ಳಲಿವೆ. ಇದರ ಪರಿಣಾಮವಾಗಿ ಕೆಲವು ರಾಶಿಯವರು ತಮ್ಮ ದೀರ್ಘಕಾಲದ ಸಮಸ್ಯೆಗಳಿಂದ ಪರಿಹಾರ ಪಡೆಯುತ್ತಾರೆ ಎಂದು ನಂಬಲಾಗಿದೆ. 

ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, 19 ಮೇ 2023ರ ಶುಕ್ರವಾರ ಶನಿ ಜಯಂತಿಯಂದು ಶನಿದೇವರು ಮೂವತ್ತು ವರ್ಷಗಳ ಬಳಿಕ ಸ್ವರಾಶಿ ಕುಂಭ ರಾಶಿಯಲ್ಲಿ ಸಂಚರಿಸುತ್ತಿರುವುದರಿಂದ  ಶತ ರಾಜಯೋಗ ನಿರ್ಮಾಣವಾಗಿದೆ. ಇದಲ್ಲದೆ,  ಶನಿ ಜಯಂತಿಯ ದಿನ ಮಂಗಳಕರ ಶೋಭನ ಯೋಗ ನಿರ್ಮಾಣಗೊಳ್ಳಲಿದೆ. ಮೇಷರಾಶಿಯಲ್ಲಿ ಗುರು ಮತ್ತು ಚಂದ್ರರ ಸಂಯೋಗದಿಂದ ಗಜಕೇಸರಿ ರಾಜಯೋಗವು ರೂಪುಗೊಳ್ಳುತ್ತಿದೆ. ಈ ಮೂರು ಮಂಗಳಕರ ರಾಜಯೋಗಗಳು ದ್ವಾದಶ ರಾಶಿಗಳ ಮೇಲೆ ಮಹತ್ವದ ಪರಿಣಾಮವನ್ನು ಬೀರುತ್ತವೆ. ಅದರಲ್ಲೂ, ಈ ಸಮಯವನ್ನು ಕೆಲವರಿಗೆ ಸುವರ್ಣ ಸಮಯ ಎಂದು ಬಣ್ಣಿಸಲಾಗುತ್ತಿದೆ. 

ಇದನ್ನೂ ಓದಿ- Astrology: ಈ ರಾಶಿಯ ಹುಡುಗಿಯರು ತುಂಬಾ ಅದೃಷ್ಟವಂತರು

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, ಶನಿ ಜಯಂತಿಯಂದು ರೂಪುಗೊಳ್ಳಲಿರುವ ಗಜಕೇಸರಿ, ಶೋಭನ, ಶತ ರಾಜಯೋಗಗಳ ಶುಭ ಪರಿಣಾಮಗಳು ನಾಲ್ಕು ರಾಶಿಯವರ ಮೇಲೆ ಇರಲಿದ್ದು, ಈ ವೇಳೆ ಶನಿ ಮಹಾತ್ಮನು ಈ ರಾಶಿಯವರಿಗೆ ದಯೆ ತೋರುತ್ತಾನೆ ಎಂದು ನಂಬಲಾಗಿದೆ. ಆ ಅದೃಷ್ಟದ ರಾಶಿಗಳೆಂದರೆ... 

ಮೇಷ ರಾಶಿ: 
ಶನಿ ಜಯಂತಿಯ ಈ ದಿನ ಮೇಷ ರಾಶಿಯಲ್ಲಿ ದೇವಗುರು ಬೃಹಸ್ಪತಿ ಹಾಗೂ ಚಂದ್ರರ ಸಂಯೋಗದಿಂದ ಗಜಕೇಸರಿಯಂತಹ ಶುಭ ರಾಜಯೋಗ ನಿರ್ಮಾಣವಾಗುತ್ತಿದೆ. ಸ್ವ ರಾಶಿಯಲ್ಲಿ ಗಜಕೇಸರಿ ಯೋಗ ಹಾಗೂ ಇತರ ಗ್ರಹಗಳ ಸ್ಥಾನವೂ ಕೂಡ ಈ ರಾಶಿಯವರಿಗೆ ಅನುಕೂಲಕರವಾಗಿರುವುದರಿಂದ ಈ ಸಮಯದಲ್ಲಿ ಮೇಷ ರಾಶಿಯವರಿಗೆ ವ್ಯಾಪಾರ- ವ್ಯವಹಾರದಲ್ಲಿ ಬಂಪರ್ ಹಣಕಾಸಿನ ಪ್ರಯೋಜನವನ್ನು ನೀಡಲಿದೆ. ಯಾವುದೇ ಹೊಸ ಕೆಲಸವನ್ನು ಆರಂಭಿಸಲು ಯೋಚಿಸುತ್ತಿರುವವರಿಗೆ ಇದು ಅತ್ಯುತ್ತಮ ಸಮಯವಾಗಿದ್ದು ಕೈ ಹಾಕಿದ ಕೆಲಸಗಳಲ್ಲಿ ಯಶಸ್ಸು ನಿಮ್ಮದಾಗಲಿದೆ. 

ಮಿಥುನ ರಾಶಿ: 
ಶನಿ ಜಯಂತಿಯಂದು ರೂಪುಗೊಳ್ಳುತ್ತಿರುವ ಮೂರು ಶುಭ ರಾಜಯೋಗಗಳು ಮಿಥುನ ರಾಶಿಯಯ್ವಾರ ಜೀವನದಲ್ಲಿ ಮಂಗಳಕರ ಫಲಗಳನ್ನೇ ನೀಡಲಿದೆ. ಅದರಲ್ಲೂ ಈ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಬಲಗೊಳ್ಳಲಿದ್ದು, ಉದ್ಯೋಗ ವ್ಯವಹಾರದಲ್ಲಿ ಅದ್ಭುತ ಲಾಭವನ್ನು ಗಳಿಸುವಿರಿ. ನಿಮ್ಮ ಪ್ರತಿ ಕೆಲಸದಲ್ಲೂ ಅದೃಷ್ಟದ ಸಂಪೂರ್ಣ ಬೆಂಬಲ ಜೊತೆಗಿರಲಿದೆ. 

ಇದನ್ನೂ ಓದಿ- Shani Mahadasha ನೀಡಲಿದೆ ಬಂಪರ್ ಲಾಭ: ಮುಂದಿನ 19 ವರ್ಷಗಳವರೆಗೆ ಇವರಿಗೆ ರಾಜ ಯೋಗ!

ಸಿಂಹ ರಾಶಿ: 
ಈ ವರ್ಷದ ಶನಿ ಜಯಂತಿಯು ಸಿಂಹ ರಾಶಿಯವರಿಗೆ ಬಂಪರ್ ಹಣಕಾಸಿನ ಲಾಭವನ್ನು ತರಲಿದೆ. ಬ್ಯಾಂಕ್ ಬಾಲನ್ಸ್ ಹೆಚ್ಚಳದಿಂದಾಗಿ ಕೌಟುಂಬಿಕ ನೆಮ್ಮದಿ ಇರಲಿದೆ. ಆದರೆ, ಭವಿಷ್ಯದ ದೃಷ್ಟಿಯಿಂದ ಸ್ವಲ್ಪ ಹಣವನ್ನು ಉಳಿತಾಯ ಮಾಡುವ ಅಭ್ಯಾಸವನ್ನು ರೂಢಿಸಿಕೊಳ್ಳಿ. 

ಕುಂಭ ರಾಶಿ: 
ಕುಂಭ ರಾಶಿಯ ಅಧಿಪತಿಯಾದ ಶನಿಯು ಮೂರು ದಶಕಗಳ ಬಳಿಕ ಶನಿ ಜಯಂತಿಯಂದು ತನ್ನ ಸ್ವ ರಾಶಿಯಲ್ಲಿಯೇ ನೆಲೆಸಿದ್ದಾನೆ. ಇದರಿಂದಾಗಿ ಶಶ ರಾಜಯೋಗ ನಿರ್ಮಾಣವಾಗುತ್ತಿದೆ. ಇದರ ಪರಿಣಾಮವಾಗಿ ಕುಂಭ ರಾಶಿಯವರು ನಿಮ್ಮ ಕಠಿಣ ಪರಿಶ್ರಮದ ಸಂಪೂರ್ಣ ಪ್ರಯೋಜನವನ್ನು ಪಡೆಯುವಿರಿ. ಯಾವುದೇ ಕೆಲಸ ಕಾರ್ಯಗಳಲ್ಲಿ ನಿರೀಕ್ಷಿತ ಯಶಸ್ಸು ನಿಮ್ಮದಾಗಲಿದೆ. ಹಣವೂ ಪ್ರಯೋಜನಕಾರಿ ಆಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News