Vastu Shastra: ಸಂಪತ್ತಿನ ದೇವತೆ ಲಕ್ಷ್ಮಿಗೆ ಕೋಪ ತರುವಂತಹ ಈ ತಪ್ಪುಗಳನ್ನು ರಾತ್ರಿ ವೇಳೆ ಮರೆತೂ ಮಾಡಬೇಡಿ

Vastu Shastra: ಭಾರತೀಯ ಸಂಸ್ಕೃತಿಯಲ್ಲಿ, ರಾತ್ರಿಯ ವೇಳೆ ಅನೇಕ ಕೆಲಸಗಳನ್ನು ನಿಷೇಧಿಸಲಾಗಿದೆ, ಇದರಿಂದಾಗಿ ನೀವು ಆರೋಗ್ಯ ಮತ್ತು ಆರ್ಥಿಕವಾಗಿ ಬಡವರಾಗಬಹುದು. ರಾತ್ರಿಯಲ್ಲಿ ನಾವು ಎಂದಿಗೂ ಮಾಡಬಾರದ ಆ ಕೆಲಸಗಳು ಯಾವುವು ಎಂದು ತಿಳಿಯೋಣ...

Written by - Yashaswini V | Last Updated : Jun 21, 2022, 02:23 PM IST
  • ಸನಾತನ ಧರ್ಮ ಗ್ರಂಥಗಳ ಪ್ರಕಾರ ಅಡುಗೆ ಮನೆಯನ್ನು ತಾಯಿ ಅನ್ನಪೂರ್ಣೆಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ.
  • ಅಂತಹ ಪರಿಸ್ಥಿತಿಯಲ್ಲಿ, ರಾತ್ರಿಯಿಡೀ ಅಡುಗೆಮನೆಯಲ್ಲಿ ಎಂಜಿಲು ಪಾತ್ರೆಗಳನ್ನು ಹಾಗೆ ಇಟ್ಟು ಮಲಗುವುದು ತಾಯಿ ಅನ್ನಪೂರ್ಣೆಗೆ ಮಾಡಲಾಗುವ ಅವಮಾನವೆಂದು ಪರಿಗಣಿಸಲಾಗುತ್ತದೆ.
  • ಈ ರೀತಿ ಮಾಡುವುದರಿಂದ ಲಕ್ಷ್ಮಿ ಮಾತೆ ನಿಮ್ಮ ಬಗ್ಗೆ ಅಸಮಾಧಾನ ಹೊಂದಬಹುದು.
Vastu Shastra: ಸಂಪತ್ತಿನ ದೇವತೆ ಲಕ್ಷ್ಮಿಗೆ ಕೋಪ ತರುವಂತಹ ಈ ತಪ್ಪುಗಳನ್ನು ರಾತ್ರಿ ವೇಳೆ ಮರೆತೂ ಮಾಡಬೇಡಿ  title=
Vastu Shastra

ವಾಸ್ತು ಶಾಸ್ತ್ರ: ಸಾಮಾನ್ಯವಾಗಿ ಮುಸ್ಸಂಜೆ ಬಳಿಕ ಕೆಲವು ಕೆಲಸಗಳನ್ನು ಮಾಡದಂತೆ ಮನೆಯ ಹಿರಿಯರು ಹೇಳಿರುವುದನ್ನು ನೀವು ಕೇಳಿರಬಹುದು. ಭಾರತೀಯ ಸಂಸ್ಕೃತಿಯಲ್ಲಿ ಇಂತಹ ಅನೇಕ ಕೆಲಸಗಳಿವೆ, ಅವುಗಳನ್ನು ರಾತ್ರಿಯಲ್ಲಿ ಮಾಡುವುದನ್ನು ನಿಷೇಧಿಸಲಾಗಿದೆ. ಪುರಾಣಗಳ ಪ್ರಕಾರ, ನೀವು ರಾತ್ರಿಯಲ್ಲಿ ಇಂತಹ ಕೆಲಸವನ್ನು ಮಾಡಿದರೆ, ಲಕ್ಷ್ಮಿ ದೇವಿಯು ಕೋಪಗೊಳ್ಳುತ್ತಾಳೆ ಮತ್ತು ನಿಮ್ಮ ಮನೆಯ ಸಂತೋಷ ಮತ್ತು ಸಮೃದ್ಧಿಗೆ ತೊಡಕು ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ, ರಾತ್ರಿ ವೇಳೆ ಇಂತಹ ತಪ್ಪುಗಳನ್ನು ಮಾಡುವುದನ್ನು ತಪ್ಪಿಸಬೇಕು. ರಾತ್ರಿ ಹೊತ್ತಿನಲ್ಲಿ ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಯಿರಿ...

ರಾತ್ರಿ ಹೊತ್ತಲ್ಲಿ ಪಾತ್ರೆ ತೊಳೆಯದೇ ಇಡುವುದು:
ಸಾಮಾನ್ಯವಾಗಿ ನಮ್ಮಲ್ಲಿ ಹಲವರು ರಾತ್ರಿ ಊಟವಾದ ನಂತರ ಪಾತ್ರೆಗಳನ್ನು ಹಾಗೆ ಇಟ್ಟು ಮಲಗುತ್ತಾರೆ. ಸನಾತನ ಧರ್ಮ ಗ್ರಂಥಗಳ ಪ್ರಕಾರ ಅಡುಗೆ ಮನೆಯನ್ನು ತಾಯಿ ಅನ್ನಪೂರ್ಣೆಯ ವಾಸಸ್ಥಾನವೆಂದು ಪರಿಗಣಿಸಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ರಾತ್ರಿಯಿಡೀ ಅಡುಗೆಮನೆಯಲ್ಲಿ ಎಂಜಿಲು ಪಾತ್ರೆಗಳನ್ನು ಹಾಗೆ ಇಟ್ಟು ಮಲಗುವುದು ತಾಯಿ ಅನ್ನಪೂರ್ಣೆಗೆ ಮಾಡಲಾಗುವ ಅವಮಾನವೆಂದು ಪರಿಗಣಿಸಲಾಗುತ್ತದೆ. ಈ ರೀತಿ ಮಾಡುವುದರಿಂದ ಲಕ್ಷ್ಮಿ ಮಾತೆ ನಿಮ್ಮ ಬಗ್ಗೆ ಅಸಮಾಧಾನ ಹೊಂದಬಹುದು. ಅಂತಹ ಕುಟುಂಬವು ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ ಎಂದು ಹೇಳಲಾಗುತ್ತದೆ. ಹಾಗಾಗಿ ರಾತ್ರಿ ವೇಳೆ ಪಾತ್ರೆಗಳನ್ನು ಶುಚಿಗೊಳಿಸದೆ ಎಂದಿಗೂ ಇಡಬೇಡಿ.

ಇದನ್ನೂ ಓದಿ- Astrology Tips: ವೃತ್ತಿ ಜೀವನದಲ್ಲಿ ಯಶಸ್ಸಿಗಾಗಿ ಗ್ರಹಗಳನ್ನು ಈ ರೀತಿ ಬಲಪಡಿಸಿ

ಭಾರತೀಯ ಧಾರ್ಮಿಕ ಗ್ರಂಥಗಳ ಪ್ರಕಾರ, ಅಡುಗೆಮನೆಯು ರಾತ್ರಿಯಲ್ಲಿ ಕೊಳಕು ಇರಬಾರದು. ಮಲಗುವ ಮುನ್ನ ಎಲ್ಲಾ ಪಾತ್ರೆಗಳನ್ನು ತೊಳೆದ ನಂತರ ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಬೇಕು. ನೀವು ಇದನ್ನು ಮಾಡದಿದ್ದರೆ, ನಕಾರಾತ್ಮಕ ಶಕ್ತಿಯು ಅಡುಗೆಮನೆಯಲ್ಲಿ ಹರಡುತ್ತದೆ. ಇದರಿಂದ ನಿಮ್ಮ ಆರೋಗ್ಯದ ಮೇಲೂ ನಕಾರಾತ್ಮಕ ಪ್ರಭಾವ ಬೀರಬಹುದು.

ಸೂರ್ಯಾಸ್ತದ ನಂತರ  ಕಸ ಗುಡಿಸಬೇಡಿ:
ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಒಳ್ಳೆಯದು. ಆದರೆ, ಅಪ್ಪಿತಪ್ಪಿಯೂ ಸಹ ಸೂರ್ಯಾಸ್ತದ ನಂತರ ಕಸ ಗುಡಿಸಬೇಡಿ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸೂರ್ಯಾಸ್ತದ ನಂತರ ಮನೆಯ ಕಸ ಗುಡಿಸುವುದು ಒಳ್ಳೆಯದಲ್ಲ. ಇದು ದೇವತೆಗಳ ಸಮಯ. ಈ ಸಮಯದಲ್ಲಿ ಕಸ ಗುಡಿಸುವುದು ಅವರ ವಿಶ್ರಾಂತಿಗೆ ಭಂಗ ತರುತ್ತದೆ. ಇದರಿಂದಾಗಿ ಅವರು ನಿಮ್ಮ ಮೇಲೆ ಕೋಪಗೊಳ್ಳಬಹುದು ಎಂದು ಹೇಳಲಾಗುತ್ತದೆ.

ಇದನ್ನೂ ಓದಿ- ಶ್ರಾವಣದಲ್ಲಿ ಈ ಮೂರು ರಾಶಿಯವರ ಮೇಲೆ ಆಗಲಿದೆ ಹಣದ ಸುರಿ ಮಳೆ, ಇರಲಿದೆ ಶಿವನ ವಿಶೇಷ ಕೃಪೆ

ಕತ್ತಲಾದ ನಂತರ ಉಗುರುಗಳನ್ನು ಕತ್ತರಿಸಬೇಡಿ:
ದೇಹವನ್ನು ಸ್ವಚ್ಛಗೊಳಿಸಲು, ಕಾಲಕಾಲಕ್ಕೆ ಕೈ ಮತ್ತು ಕಾಲುಗಳ ಉಗುರುಗಳನ್ನು ಕತ್ತರಿಸುವುದು ಅವಶ್ಯಕ, ಆದರೆ ರಾತ್ರಿಯಲ್ಲಿ ಇದನ್ನು ಮಾಡಬಾರದು. ಇದಕ್ಕೆ ಕಾರಣ ರಾತ್ರಿಯಲ್ಲಿ ಉಗುರು ಕತ್ತರಿಸುವಾಗ ಅದರ ತುಂಡು ನಿಮ್ಮ ಕಣ್ಣಿಗೆ ಬೀಳಬಹುದು ಅಥವಾ ಅಲ್ಲಿ ಇಲ್ಲಿ ಹರಡಬಹುದು. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ZEE ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News