ಮನೆಯಲ್ಲಿ ಈ 5 ಗಿಡಗಳನ್ನು ನೆಟ್ಟರೆ ಹಣದ ಕೊರತೆ ಎದುರಾಗುವುದೇ ಇಲ್ಲ .! ಆದರೆ ಈ ತಪ್ಪು ಆಗದಿರಲಿ

ಈ ಸಸ್ಯಗಳು ಮನೆಯಲ್ಲಿ ಹಣದ  ಹರಿವನ್ನು ಹೆಚ್ಚಿಸುತ್ತವೆ. ಈ ಕಾರಣದಿಂದಲೇ ಇವುಗಳನ್ನು  ಅದೃಷ್ಟದ ಸಸ್ಯಗಳು ಎಂದು ಕರೆಯಲಾಗುತ್ತದೆ. 

ಬೆಂಗಳೂರು : Lucky Plants for House: ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಕೆಲವು ಗಿಡಗಳನ್ನು ನೆಡುವುದು ತುಂಬಾ ಶುಭ ಎಂದು ಹೇಳಲಾಗುತ್ತದೆ. ಈ ಸಸ್ಯಗಳು ಮನೆಯಲ್ಲಿ ಸಕಾರಾತ್ಮಕತೆಯನ್ನು ತರುವುದಲ್ಲದೆ, ಅಪಾರ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ. ಈ ಸಸ್ಯಗಳು ಮನೆಯಲ್ಲಿ ಹಣದ  ಹರಿವನ್ನು ಹೆಚ್ಚಿಸುತ್ತವೆ. ಈ ಕಾರಣದಿಂದಲೇ ಇವುಗಳನ್ನು  ಅದೃಷ್ಟದ ಸಸ್ಯಗಳು ಎಂದು ಕರೆಯಲಾಗುತ್ತದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

1 /5

ಬಿದಿರಿನ ಗಿಡ :  ವಾಸ್ತು ಶಾಸ್ತ್ರದಲ್ಲಿ ಮನೆಯಲ್ಲಿ ಅಥವಾ ಮನೆಯ ಮುಂದೆ ಬಿದಿರಿನ ಗಿಡವನ್ನು ಇಡುವುದು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ಮನೆಯ ಮುಂದೆ ಬಿದಿರಿನ ಗಿಡವನ್ನು ನೆಡುವುಡು ಸಾಧ್ಯವಾಗದೇ ಹೋದರೆ,  ಮನೆಯೊಳಗೆ ಈಶಾನ್ಯ ಅಥವಾ ಉತ್ತರ ದಿಕ್ಕಿನಲ್ಲಿ ಬಿದಿರಿನ ಗಿಡವನ್ನು ಇಡಿ. 

2 /5

ದಾಳಿಂಬೆ ಗಿಡ : ದಾಳಿಂಬೆ ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿರುವ ಹಣ್ಣು ಮಾತ್ರವಲ್ಲ. ಆರ್ಥಿಕ ಸ್ಥಿತಿಯ ಮೇಲೆ ಕೂಡಾ ಈ ಗಿಡ ಪರಿಣಾಮ ಬೀರುತ್ತದೆ.  ಮನೆಯಲ್ಲಿ ದಾಳಿಂಬೆ ಗಿಡ ನೆಟ್ಟರೆ ಸಾಲದಿಂದ ಮುಕ್ತಿ ಸಿಗುತ್ತದೆ. ಆದಾಯ ಹೆಚ್ಚಾಗುತ್ತದೆ ಮತ್ತು ಆರ್ಥಿಕ ಸ್ಥಿತಿಯು ಬಲಗೊಳ್ಳುತ್ತದೆ. ಆದರೆ ಮನೆಯ ನೈಋತ್ಯ ದಿಕ್ಕಿನಲ್ಲಿ ದಾಳಿಂಬೆ ಗಿಡವನ್ನು ನೆಡಬೇಡಿ.

3 /5

ಗರಿಕೆ ಇಲ್ಲದೆ ಗಣೇಶನ ಪೂಜೆ ಅಪೂರ್ಣವಾಗಿತ್ತದೆ. ಮನೆಯ ಮುಂದೆ ಗರಿಕೆ ಇಡುವುದು ತುಂಬಾ ಮಂಗಳಕರ. ಇದು ಮನೆಯಲ್ಲಿ ಸುಖ-ಸಮೃದ್ಧಿ, ಶಾಂತಿಯನ್ನು ತರುವಲ್ಲಿ ಸಹಾಯ ಮಾಡುತ್ತದೆ. ಅಲ್ಲದೆ ಮಕ್ಕಳಿಲ್ಲದವರಿಗೆ ಸಂತಾನ ಭಾಗ್ಯ ಕರುಣಿಸುತ್ತದೆ ಎಂದು ಹೇಳಲಾಗುತ್ತದೆ.   

4 /5

ಬಿಲ್ವ ಪತ್ರೆ  :  ಈಶ್ವರ ಬಿಲ್ವ ಪತ್ರೆಯ ಸಸ್ಯದಲ್ಲಿ ನೆಲೆಸಿದ್ದಾನೆ ಎಂದು ಹೇಳಲಾಗುತ್ತದೆ.  ಈ ಸಸ್ಯ ಮನೆಯಲ್ಲಿದ್ದರೆ ವಾಸ್ತು ದೋಷಗಳನ್ನು ನಿವಾರಿಸುತ್ತದೆ ಎಂದು ಹೇಳಲಾಗುತ್ತದೆ. 

5 /5

ಮನಿ ಪ್ಲಾಂಟ್  : ಮನಿ ಪ್ಲಾಂಟ್ ಹೆಚ್ಚಿನ ಮನೆಗಳಲ್ಲಿ ಇರುತ್ತದೆ. ಆದರೆ ಅದನ್ನು ಸರಿಯಾದ ಸ್ಥಳದಲ್ಲಿ ಸರಿಯಾದ ರೀತಿಯಲ್ಲಿ ನೆಡುವುದು ಮುಖ್ಯ. ಮನಿ ಪ್ಲಾಂಟ್‌ನ ಬಳ್ಳಿಗಳು ಕೆಳಮುಖವಾಗಿ ನೇತಾಡಬಾರದು.  ಅದರ ಬಳ್ಳಿ ಯಾವಾಗಲೂ ಮೇಲಕ್ಕೆ ಏರುವಂತೆ ಇರಬೇಕು.  ( ಸೂಚನೆ : ಇಲ್ಲಿ ನೀಡಲಾದ ನವು ಲೇಖನವು ಸಾಮಾನ್ಯ ನಂಬಿಕೆ ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)