ಈ ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ ! ತೆರೆಯುವುದು ಅದೃಷ್ಟದ ಬಾಗಿಲು

 ಇದೀಗ ಜುಲೈ 1 ಕ್ಕೆ ಮಂಗಳ ಮತ್ತೆ ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಜುಲೈ 1 ರವರೆಗಿನ ಸಮಯವು ಯಾವ ರಾಶಿಯವರಿಗೆ   ವಿಶೇಷವಾಗಿ ಫಲಪ್ರದವಾಗಿದೆ ನೋಡೋಣ. 

Written by - Ranjitha R K | Last Updated : Jun 10, 2023, 01:18 PM IST
  • ಎಲ್ಲಾ ರಾಶಿಯವರ ಜೀವನದ ಮೇಲೆ ಮಂಗಳನ ಭಿನ್ನ ಪರಿಣಾಮ
  • ಮಂಗಳ ಶುಭ ಸ್ಥಾನದಲ್ಲಿದ್ದರೆ, ಜೀವನದಲ್ಲಿ ಎಲ್ಲವೂ ಮಂಗಳಮಯ
  • ಜುಲೈ 1 ರವರೆಗಿನ ಸಮಯವು ರಾಶಿಯವರಿಗೆ ಶುಭ
ಈ ರಾಶಿಯವರ ಜೀವನದಲ್ಲಿ ಹರಿಯುವುದು ಹಣದ ಹೊಳೆ ! ತೆರೆಯುವುದು ಅದೃಷ್ಟದ ಬಾಗಿಲು title=

ಬೆಂಗಳೂರು : ಜ್ಯೋತಿಷ್ಯದ ಪ್ರಕಾರ, ಎಲ್ಲಾ ರಾಶಿಯವರ ಜೀವನದ ಮೇಲೆ ಮಂಗಳನು ವಿಭಿನ್ನ ಪರಿಣಾಮವನ್ನು ಬೀರುತ್ತಾನೆ.  ಮಂಗಳನನ್ನು ಧೈರ್ಯ, ಶೌರ್ಯ, ಭೂಮಿ-ಸಂಪತ್ತು ಮತ್ತು ಮದುವೆ ಇತ್ಯಾದಿಗಳಿಗೆ ಕಾರಣವಾಗುವ ಗ್ರಹವೆಂದು ಪರಿಗಣಿಸಲಾಗಿದೆ. ವ್ಯಕ್ತಿಯ ಜಾತಕದಲ್ಲಿ ಮಂಗಳ ಗ್ರಹ ಶುಭ ಸ್ಥಾನದಲ್ಲಿದ್ದರೆ,  ಜೀವನದಲ್ಲಿ ಎಲ್ಲವೂ ಮಂಗಳಮಯವಾಗಿರುತ್ತದೆ. ಮಂಗಳನು ಅಶುಭ ಸ್ಥಾನದಲ್ಲಿದ್ದರೆ ಜೀವನವನ್ನು ಕಷ್ಟ ಆವರಿಸಿ ಬಿಡುತ್ತದೆ. ಮೇ 10 ರಂದು ಮಂಗಳ ಗ್ರಹವು ಕರ್ಕ ರಾಶಿಯನ್ನು ಪ್ರವೇಶಿಸಿದೆ. ಇದೀಗ ಜುಲೈ 1 ಕ್ಕೆ ಮಂಗಳ ಮತ್ತೆ ಕರ್ಕ ರಾಶಿಯನ್ನು ತೊರೆದು ಸಿಂಹ ರಾಶಿಯನ್ನು ಪ್ರವೇಶಿಸಲಿದೆ. ಜುಲೈ 1 ರವರೆಗಿನ ಸಮಯವು ಯಾವ ರಾಶಿಯವರಿಗೆ   ವಿಶೇಷವಾಗಿ ಫಲಪ್ರದವಾಗಿದೆ ನೋಡೋಣ. 

ಮೇಷ ರಾಶಿ :
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮೇ 10 ರಂದು ಮಂಗಳ ಗ್ರಹವು ಕರ್ಕಾಟಕ ರಾಶಿಯನ್ನು ಪ್ರವೇಶಿಸಿತ್ತು. ಈ ಸಮಯದಲ್ಲಿ, ಕೆಲವು ರಾಶಿಯವರ ಜೀವನದ ಒಳ್ಳೆಯ ದಿನಗಳು ಆರಂಭವಾಗಿತ್ತು. ಈ ರಾಶಿಗಳಲ್ಲಿ ಮೇಷ ರಾಶಿಯವರೂ ಸೇರಿದ್ದಾರೆ. ಮಂಗಳ ಸಂಚಾರವು ಈ ಸಂಚಾರವು ಮೇಷ ರಾಶಿಯವರಿಗೆ ಪ್ರಯೋಜನಕಾರಿಯಾಗಿದೆ. ಈ ಸಮಯದಲ್ಲಿ ನೀವು ಮಾಡುವ ಕೆಲಸಕ್ಕೆ ಮನ್ನಣೆ, ಪ್ರಶಂಸೆ ಎಲ್ಲವೂ ಸಿಗುತ್ತದೆ.  ಕುಟುಂಬದಲ್ಲಿ ಸಂತೋಷ ಮನೆ ಮಾಡುತ್ತದೆ. ಯಾವುದೇ ದೊಡ್ಡ ಕೆಲಸ ಮಾಡುವ ಮೊದಲು ಕುಟುಂಬದವರ ಸಲಹೆಯನ್ನು ತಪ್ಪದೆ ಪಡೆಯಿರಿ. 

ಇದನ್ನೂ ಓದಿ : ಈ ರಾಶಿಯವರಿಗೆ ಉದ್ಯೋಗ ವ್ಯವಹಾರದಲ್ಲಿ ಪ್ರಗತಿ ! ಇಂದು ಮಾಡುವ ಕೆಲಸದಲ್ಲಿ ಕೈ ಹಿಡಿಯುವುದು ಅದೃಷ್ಟ

ಕಟಕ ರಾಶಿ : 
ಕರ್ಕಾಟಕ ರಾಶಿಯಲ್ಲಿ ಮಂಗಳನ ಸಂಚಾರವು ಕರ್ಕಾಟಕ ರಾಶಿಯವರಿಗೆ ಉತ್ತಮ ಲಾಭವನ್ನು ನೀಡುತ್ತದೆ. ಬಹುಕಾಲದಿಂದ ನಿಂತು ಹೋಗಿದ್ದ ಕೆಲಸ ಕಾರ್ಯಗಳು ಪೂರ್ಣಗೊಳ್ಳಲಿವೆ. ಕೆಲಸದ ಸ್ಥಳದಲ್ಲಿ ಲಾಭವಾಗುವ ಸಾಧ್ಯತೆ ಇದೆ. ಯಾವುದೇ ನಿರ್ಧಾರ ತೆಗೆದುಕೊಳ್ಳುವ ಮೊದಲು ಎಚ್ಚರಿಕೆಯಿಂದ ಯೋಚಿಸಿ. ಈ ಸಮಯದಲ್ಲಿ ಕಠಿಣ ಪರಿಶ್ರಮದ ಸಂಪೂರ್ಣ ಫಲಿತಾಂಶ ಪಡೆಯುವುದು ಸಾಧ್ಯವಾಗುತ್ತದೆ. ಆದಾಯದಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.

ಕನ್ಯಾರಾಶಿ  : 
ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಕನ್ಯಾ ರಾಶಿಯವರಿಗೆ ಮಂಗಳ ಗ್ರಹದ ಸಂಕ್ರಮಣವು ಮಂಗಳಕರ ಮತ್ತು ಫಲಪ್ರದವಾಗಿದೆ. ಈ ಸಮಯದಲ್ಲಿ ವ್ಯಕ್ತಿಯ ಆರ್ಥಿಕ ಸ್ಥಿತಿ ಸುಧಾರಿಸಬಹುದು. ಆದರೆ ಆರೋಗ್ಯದ ಬಗ್ಗೆಯೂ ಜಾಗರೂಕರಾಗಿರಬೇಕು. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳ ಸಹಕಾರ ದೊರೆಯಲಿದೆ. ಈ ಸಮಯದಲ್ಲಿ ಮಾತಿನ ಮೇಲೆ ಹಿಡಿತವಿರಲಿ. 

ಇದನ್ನೂ ಓದಿ : ಅದ್ಭುತ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದವರು ! ಜೀವನ ಪೂರ್ತಿ ರಾಜರ ರೀತಿ ಬದುಕುವರು

ತುಲಾ ರಾಶಿ : 
ಜುಲೈ 1 ರವರೆಗಿನ ಸಮಯವು ಈ ರಾಶಿಯವರಿಗೆ ಅದ್ಭುತವಾಗಿರಲಿದೆ.  ಈ ಸಮಯದಲ್ಲಿ ಸಾಕಷ್ಟು ಲಾಭವಾಗುವುದು. ಈ ಸಮಯವು ಶಿಕ್ಷಣ ಕ್ಷೇತ್ರಕ್ಕೆ ಸಂಬಂಧಿಸಿದ ಜನರಿಗೆ ಉತ್ತಮವಾಗಿದೆ ಎಂದು ಹೇಳಲಾಗುತ್ತದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ, ಈ ಸಮಯದಲ್ಲಿ ಮಾಡಿದ ಹೂಡಿಕೆಯು ಭವಿಷ್ಯದಲ್ಲಿ ದೊಡ್ಡ ಮಟ್ಟದ ಲಾಭವನ್ನು ನೀಡುತ್ತದೆ. 

ಮೀನ ರಾಶಿ : 
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮಂಗಳನ ಸಂಚಾರವು ಮೀನ ರಾಶಿಯವರ ಜೀವನದಲ್ಲಿ ಒಳ್ಳೆಯ ದಿನಗಳ ಹಾದಿಯನ್ನು ತೆರೆಯುತ್ತದೆ. ಈ ಸಮಯದಲ್ಲಿ ವ್ಯಕ್ತಿಯ ಆದಾಯವು ಹೆಚ್ಚಾಗಬಹುದು. ಈ ಸಮಯವು ಉದ್ಯೋಗ ಮತ್ತು ವ್ಯವಹಾರಕ್ಕೆ ಸಹ ಅನುಕೂಲಕರವಾಗಿದೆ. ಪ್ರತಿಯೊಂದು ಕೆಲಸದಲ್ಲಿ ಯಶಸ್ಸನ್ನು ಪಡೆಯುತ್ತೀರಿ. ಧೈರ್ಯ ಹೆಚ್ಚಾಗಲಿದೆ. 

ಇದನ್ನೂ ಓದಿ :  ಶನಿ- ಚಂದ್ರ ಸಂಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸೌಭಾಗ್ಯ! ಸೋಲು ಬಳಿಯೂ ಸುಳಿಯದು!

 ( ಸೂಚನೆ : ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News