ಅದ್ಭುತ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಈ ನಕ್ಷತ್ರದಲ್ಲಿ ಜನಿಸಿದವರು ! ಜೀವನ ಪೂರ್ತಿ ರಾಜರ ರೀತಿ ಬದುಕುವರು

Anuradha Nakshatra Characteristics: ಅನುರಾಧಳನ್ನು ಸಂಕೇತಿಸುವ ಕಮಲದ ಹೂವು ತುಂಬಾ ಸುಂದರ ಮತ್ತು ಮೃದುವಾಗಿರುತ್ತದೆ. ಅನುರಾಧಾ ನಕ್ಷತ್ರದ ದೇವತೆಯನ್ನು ಹನ್ನೆರಡು ಆದಿತ್ಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ.

Written by - Ranjitha R K | Last Updated : Jun 9, 2023, 04:56 PM IST
  • 17 ನೇ ನಕ್ಷತ್ರದ ಹೆಸರು ಅನುರಾಧಾ ನಕ್ಷತ
  • ಅನುರಾಧ ಎಂದರೆ ರಾಧೆಯನ್ನು ಅನುಸರಿಸುವವಳು.
  • ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಅನುರಾಧಾ ನಕ್ಷತ್ರವನ್ನು ಹೊಂದಿರುತ್ತಾರೆ.
ಅದ್ಭುತ ನಾಯಕತ್ವದ ಗುಣವನ್ನು ಹೊಂದಿರುತ್ತಾರೆ ಈ ನಕ್ಷತ್ರದಲ್ಲಿ  ಜನಿಸಿದವರು ! ಜೀವನ ಪೂರ್ತಿ ರಾಜರ ರೀತಿ ಬದುಕುವರು title=

Anuradha Nakshatra Characteristics : 17 ನೇ ನಕ್ಷತ್ರದ ಹೆಸರು ಅನುರಾಧಾ ನಕ್ಷತ್ರ. ಅನುರಾಧ ಎಂದರೆ ರಾಧೆಯನ್ನು ಅನುಸರಿಸುವವಳು. ವಿಶಾಖ ನಕ್ಷತ್ರವನ್ನು ರಾಧಾ ಎಂದು ಪರಿಗಣಿಸಿದರೆ, ಅದನ್ನು ಅರ್ಥಮಾಡಿಕೊಳ್ಳುವುದು ಸುಲಭವಾಗುತ್ತದೆ. ಏಕೆಂದರೆ ರಾಧೆಯ ವಿಶಾಖ ರೂಪದ ನಂತರ ಬರುವ ನಕ್ಷತ್ರವನ್ನು ಅನುರಾಧ ಎಂದು ಕರೆಯಲಾಗುತ್ತದೆ. ಪೂರ್ವ ಫಲ್ಗುಣಿ ಮತ್ತು ಉತ್ತರ ಫಲ್ಗುಣಿ ನಕ್ಷತ್ರಗಳ ಜೋಡಿಯಾಗಿರುವಂತೆ, ವಿಶಾಖ ಮತ್ತು ಅನುರಾಧಾವನ್ನು ನಕ್ಷತ್ರಗಳ ಜೋಡಿ ಎಂದು ಕರೆಯಲಾಗುತ್ತದೆ. 

ಅನುರಾಧಳನ್ನು ಸಂಕೇತಿಸುವ ಕಮಲದ ಹೂವು ತುಂಬಾ ಸುಂದರ ಮತ್ತು ಮೃದುವಾಗಿರುತ್ತದೆ. ಅನುರಾಧಾ ನಕ್ಷತ್ರದ ದೇವತೆಯನ್ನು ಹನ್ನೆರಡು ಆದಿತ್ಯರಲ್ಲಿ ಒಬ್ಬರು ಎಂದು ಪರಿಗಣಿಸಲಾಗಿದೆ. ಅನುರಾಧಾ ನಕ್ಷತ್ರದ ಅಧಿದೇವತೆ ಸ್ನೇಹ, ವಿಶ್ವಾಸ ಮತ್ತು ಸೌಮ್ಯತೆಯನ್ನು ನೀಡುವವನು ಎನ್ನಲಾಗಿದೆ. ವೃಶ್ಚಿಕ ರಾಶಿಯಲ್ಲಿ ಜನಿಸಿದವರು ಅನುರಾಧಾ ನಕ್ಷತ್ರವನ್ನು ಹೊಂದಿರುತ್ತಾರೆ. 

ಇದನ್ನೂ ಓದಿ : ಶನಿ- ಚಂದ್ರ ಸಂಯೋಗದಿಂದ ಈ ರಾಶಿಯವರು ಮುಟ್ಟಿದ್ದೆಲ್ಲಾ ಚಿನ್ನವಾಗುವ ಸೌಭಾಗ್ಯ! ಸೋಲು ಬಳಿಯೂ ಸುಳಿಯದು!

ಅನುರಾಧ ನಕ್ಷತ್ರದಲ್ಲಿ ಜನಿಸಿದವರು ಸಂತೋಷ, ಉತ್ಸಾಹದಿಂದ ಕೆಲಸ ಮಾಡುತ್ತಾರೆ. ಎದುರು ನಿಂತು ಕೆಲಸ ಮಾಡುವ ಮತ್ತು ಎಂಥ ಪರಿಸ್ಥಿತಿಯೇ ಬಂದರೂ ಬಗ್ಗದೆ ಎದುರಿಸುವ  ಸಾಮರ್ಥ್ಯವನ್ನು ಹೊಂದಿರುತ್ತಾರೆ. ಅನುರಾಧಾ ನಕ್ಷತ್ರದಲ್ಲಿ ಜನಿಸಿದ ಜನರು ಹೊಸ ಮಾಹಿತಿಯನ್ನು ಸಂಗ್ರಹಿಸುವಲ್ಲಿ ಉತ್ಸಾಹ ತೋರುತ್ತಾರೆ. ಪತ್ರಿಕೋದ್ಯಮ ಕ್ಷೇತ್ರದಲ್ಲೂ ಅವರು ಉತ್ತಮ ಹಿಡಿತ ಸಾಧಿಸುತ್ತಾರೆ. 

ಅನುರಾಧ ನಕ್ಷತ್ರದಲ್ಲಿ ಜನಿಸಿದವರು ಆಶಾವಾದಿಗಳು. ಅವರೊಳಗೆ ಕೆಲಸ ಮಾಡುವ ಉತ್ಸಾಹವಿದ್ದು ಅವರದೇ ರೀತಿಯಲ್ಲಿ ತಮ್ಮ ಕೆಲಸವನ್ನು ಪೂರ್ತಿ ಮಾಡುತ್ತಾರೆ. ಸಾರ್ವಜನಿಕ ಕಲ್ಯಾಣ ಕಾರ್ಯದಲ್ಲಿ ತಮ್ಮನ್ನು ಮನಃಪೂರ್ವಕವಾಗಿ ತೊಡಗಿಸಿಕೊಳ್ಳುತ್ತಾರೆ ಮತ್ತು ತಮ್ಮ ತಂಡವನ್ನು ಅತ್ಯಂತ ಸಮರ್ಥವಾಗಿ ಮುನ್ನಡೆಸುತ್ತಾರೆ.  ಈ ಜನರು ತುಂಬಾ ಮುಕ್ತ ಸ್ವಭಾವದವರು. ಜನ ಸಂಪರ್ಕದ ಕೆಲಸವನ್ನೂ ಚೆನ್ನಾಗಿ ಮಾಡುತ್ತಾರೆ. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಗಳು ಅಥವಾ ಸರ್ಕಾರಿ ಇಲಾಖೆಗಳ ನಡುವೆ ಸೇತುವೆಯಂತೆ ಕೆಲಸ ಮಾಡಿದರೆ ಒಳ್ಳೆಯದು. 

ಇದನ್ನೂ ಓದಿ : ಇನ್ನು ಈ ರಾಶಿಯವರದ್ದು ಯಶಸ್ಸಿನ ಹಾದಿ ! ಕೈಯ್ಯಲ್ಲಿ ನಲಿದಾಡುವಳು ಲಕ್ಷ್ಮೀ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News