Karthika Masa: ಈ ವಸ್ತುವನ್ನು ಪರ್ಸ್‌ನಲ್ಲಿ ಇರಿಸಿದರೆ ನೀವು ಶ್ರೀಮಂತರಾಗುತ್ತೀರಿ!

ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಜ್ಯೋತಿಷ್ಯದಲ್ಲಿ ಅನೇಕ ಪರಿಹಾರಗಳನ್ನು ನೀಡಲಾಗಿದೆ. ಕಾರ್ತಿಕ ಮಾಸದ ಶುಕ್ರವಾರ ಬಹಳ ವಿಶೇಷವಾಗಿದೆ. ಈ ದಿನ ಮಾಡುವ ಒಂದು ಕೆಲಸದಿಂದ ನಿಮ್ಮ ಜೀವನವೇ ಬದಲಾಗುತ್ತದೆ.

Written by - Puttaraj K Alur | Last Updated : Oct 14, 2022, 12:10 PM IST
  • ಪ್ರತಿಯೊಬ್ಬ ವ್ಯಕ್ತಿಯು ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ತನ್ನ ಮೇಲಿರಲಿ ಎಂದು ಬಯಸುತ್ತಾನೆ
  • ಕಾರ್ತಿಕ ಮಾಸದಲ್ಲಿ ಹಣಕ್ಕೆ ಸಂಬಂಧಿಸಿದ ಪರಿಹಾರದ ಬಗ್ಗೆ ಜ್ಯೋತಿಷ್ಯಶಾಸ್ತ್ರದಲ್ಲಿ ತಿಳಿಸಲಾಗಿದೆ
  • ನಿಮ್ಮ ಪರ್ಸ್‍ನಲ್ಲಿ ಚಿನ್ನ & ಬೆಳ್ಳಿ ನಾಣ್ಯಗಳನ್ನು ಇಟ್ಟುಕೊಂಡರೆ ಹಣದ ಸಮಸ್ಯೆ ಕಾಡುವುದಿಲ್ಲ
Karthika Masa: ಈ ವಸ್ತುವನ್ನು ಪರ್ಸ್‌ನಲ್ಲಿ ಇರಿಸಿದರೆ ನೀವು ಶ್ರೀಮಂತರಾಗುತ್ತೀರಿ!  title=
ಪರ್ಸ್‍ನಲ್ಲಿ ಯಾವ ವಸ್ತು ಇಟ್ಟುಕೊಳ್ಳಬೇಕು?

ನವದೆಹಲಿ: ಪ್ರತಿಯೊಬ್ಬ ವ್ಯಕ್ತಿಯು ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ತನ್ನ ಮೇಲಿರಲಿ ಎಂದು ಬಯಸುತ್ತಾನೆ. ಇದಕ್ಕಾಗಿ ಹಗಲಿರುಳು ಶ್ರಮಿಸುತ್ತಾನೆ. ಈ ಎಲ್ಲದರ ಹೊರತಾಗಿ ಅನೇಕ ಬಾರಿ ಬಯಸಿದ ಫಲಿತಾಂಶ ಪಡೆಯಲು ಸಾಧ್ಯವಾಗುವುದಿಲ್ಲ. ಈ ರೀತಿ ನಿಮ್ಮ ಜೀವನದಲ್ಲಿಯೂ ಆಗುತ್ತಿದ್ದರೆ ಜ್ಯೋತಿಷ್ಯದಲ್ಲಿ ಇದಕ್ಕೆ ಅನೇಕ ಪರಿಹಾರ ತಿಳಿಸಲಾಗಿದೆ. ಕಾರ್ತಿಕ ಮಾಸವು ಲಕ್ಷ್ಮಿದೇವಿಯ ವಿಶೇಷ ಮಾಸವಾಗಿದೆ. ಈ ಮಾಸದಲ್ಲಿ ಮಾಡುವ ಪ್ರತಿಯೊಂದು ಕೆಲಸಕ್ಕೂ ನಿಮಗೆ ಶುಭ ಫಲಿತಾಂಶ ದೊರೆಯುತ್ತದೆ.   

ಕಾರ್ತಿಕ ಮಾಸ ಮತ್ತು ಶುಕ್ರವಾರದ ದಿನ ಬಹಳ ವಿಶೇಷವಾಗಿದೆ. ಲಕ್ಷ್ಮಿದೇವಿಯನ್ನು ಮೆಚ್ಚಿಸಲು ಮತ್ತು ಆಶೀರ್ವಾದ ಪಡೆಯಲು ಇಂದು ಬಹಳ ವಿಶೇಷವಾದ ದಿನವೆಂದು ಹೇಳಲಾಗಿದೆ. ಈ ಶುಭ ದಿನಂದು ಕೆಲವು ಪರಿಹಾರಗಳನ್ನು ಮಾಡಿದರೆ ತಾಯಿ ಲಕ್ಷ್ಮಿದೇವಿ ಶೀಘ್ರದಲ್ಲೇ ಪ್ರಸನ್ನಳಾಗುತ್ತಾಳೆ. ಈ ಪರಿಹಾರವನ್ನು ನೀವು ದಿನವಿಡೀ ಯಾವಾಗ ಬೇಕಾದರೂ ಮಾಡಬಹುದಾಗಿದೆ.  

ಇದನ್ನೂ ಓದಿ: Vitamin Deficiency: ತೀವ್ರ ಹಲ್ಲು ನೋವು, ಬಾಯಿಯ ದುರ್ವಾಸನೆಗೆ ಈ ಮೂರು ಜೀವಸತ್ವಗಳ ಕೊರತೆಯೇ ಕಾರಣ!

ಶುಕ್ರವಾರ ಈ ಪರಿಹಾರ ಮಾಡಿ

ಜ್ಯೋತಿಷ್ಯದಲ್ಲಿ ಇಂತಹ ಕೆಲವು ವಿಷಯಗಳ ಬಗ್ಗೆ ಹೇಳಲಾಗಿದೆ. ಇದನ್ನು ಮಾಡುವುದರಿಂದ ಹಣಕ್ಕೆ ಸಂಬಂಧಿಸಿದ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ವಿಶೇಷವಾಗಿ ಪರ್ಸ್‍ಗೆ ಸಂಬಂಧಿಸಿದ ಒಂದು ಕೆಲಸ ಮಾಡುವುದರಿಂದ ನಿಮಗೆ ತುಂಬಾ ಪ್ರಯೋಜನವಿದೆ. ಜ್ಯೋತಿಷ್ಯಶಾಸ್ತ್ರದ ಪ್ರಕಾರ ನೀವು ಅಪಾರ ಸಂಪತ್ತನ್ನು ಪಡೆಯಬಯಸಿದರೆ ನಿಮ್ಮ ಪರ್ಸ್‌ನಲ್ಲಿ ಈ ಒಂದು ವಸ್ತುವನ್ನು ಇಟ್ಟುಕೊಳ್ಳಬೇಕು. ಇದರಿಂದ ನಿಮಗೆ ಜೀವನದಲ್ಲಿ ಯಾವುದೇ ರೀತಿಯ ಆರ್ಥಿಕ ಸಮಸ್ಯೆ ಕಾಡುವುದಿಲ್ಲ.   

ಪರ್ಸ್‍ನಲ್ಲಿ ಯಾವ ವಸ್ತು ಇಟ್ಟುಕೊಳ್ಳಬೇಕು?

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ದಿನ ನಿಮ್ಮ ಪರ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿಯ ನಾಣ್ಯವನ್ನು ಇಟ್ಟುಕೊಳ್ಳಿ. ಪರ್ಸ್‌ನಲ್ಲಿ ಚಿನ್ನ-ಬೆಳ್ಳಿ ನಾಣ್ಯ ಇಡುವ ಮೊದಲು ಅದನ್ನು ಲಕ್ಷ್ಮಿದೇವಿಯ ಪಾದಗಳಿಗೆ ಅರ್ಪಿಸಬೇಕು. ಇದಲ್ಲದೆ ತಾಯಿ ಲಕ್ಷ್ಮಿದೇವಿಯ ಆಶೀರ್ವಾದ ಯಾವಾಗಲೂ ನಮ್ಮ ಮೇಲಿರಲಿ ಪ್ರಾರ್ಥಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಪರ್ಸ್ ಖಾಲಿಯಾಗುವುದಿಲ್ಲ ಅಥವಾ ಜೀವನದಲ್ಲಿ ನಿಮಗೆ ಹಣದ ಸಮಸ್ಯೆ ಬರುವುದಿಲ್ಲ.

ಇದನ್ನೂ ಓದಿ: ಇನ್ನೆರಡು ದಿನಗಳಲ್ಲಿ ಈ ಐದು ರಾಶಿಯವರ ಜೀವನದ ದಿಕ್ಕನ್ನೇ ಬದಲಿಸಲಿದ್ದಾನೆ ಮಂಗಳ

ಪರ್ಸ್‌ನಲ್ಲಿ ಚಿನ್ನ ಮತ್ತು ಬೆಳ್ಳಿ ನಾಣ್ಯ ಇಡುವ ಮೊದಲು ಲಕ್ಷ್ಮಿದೇವಿ ಭಕ್ತಿಯಿಂದ ಪೂಜಿಸಬೇಕು. ಈ ದಿನ ಬಡವರಿಗೆ ಕೈಲಾದಷ್ಟು ಸಹಾಯ ಮಾಡಬೇಕು. ಅವರಿಗೆ ಆಹಾರ ನೀಡಿ ಉಪಚರಿಸಿದರೆ ಲಕ್ಷ್ಮಿದೇವಿಯ ಕೃಪೆ ದೊರೆಯುತ್ತದೆ. ಈ ದಿನ ದಾನ ಮಾಡುವುದರಿಂದ ದೇವರ ಅನುಗ್ರಹ ಸಿಗುತ್ತದೆ ಎಂದು ಹೇಳಲಾಗುತ್ತದೆ. ಆದುದರಿಂದ ತಾಯಿ ಲಕ್ಷ್ಮಿಯ ಕೃಪೆಗಾಗಿ ಕಾಲಕಾಲಕ್ಕೆ ನೀವು ದಾನಧರ್ಮಗಳನ್ನು ಮಾಡುತ್ತಾ ಇರಬೇಕು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News