ಚಂದ್ರನ ರಾಶಿಯಲ್ಲಿ ಮಂಗಳನ ಸಂಚಾರ: ಬೆಳಗಲಿದೆ ಈ ರಾಶಿಯವರ ಅದೃಷ್ಟ

Mars Transit: ಜ್ಯೋತಿಷ್ಯ ಶಾಸ್ತ್ರದಲ್ಲಿ ಧೈರ್ಯ, ಶೌರ್ಯದ ಅಂಶ ಎಂದು ಪರಿಗಣಿಸಲ್ಪಟ್ಟಿರುವ ಮಂಗಳ ಗ್ರಹವು ಮೇ 10ರಂದು ರಾಶಿ ಪರಿವರ್ತನೆ ಮಾಡಲಿದೆ. ಈ ವೇಳೆ ಮಂಗಳನು ಕೆಲವರು ರಾಶಿಯವರ ಜೀವನದಲ್ಲಿ ಅದೃಷ್ಟವನ್ನು ಬೆಳಗಳಿದ್ದಾನೆ ಎಂದು ಹೇಳಲಾಗುತ್ತಿದೆ. ಆ ರಾಶಿಗಳು ಯಾವುವು ಎಂದು ತಿಳಿಯೋಣ... 

Written by - Yashaswini V | Last Updated : Apr 21, 2023, 08:35 AM IST
  • ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 10 ಮೇ 2023ರ ಮಧ್ಯಾಹ್ನ 2.13ರ ಸುಮಾರಿಗೆ ಮಂಗಳ ರಾಶಿ ಪರಿವರ್ತನೆ ಸಂಭವಿಸಲಿದೆ.
  • ಮೇ 10 ರಿಂದ ಜುಲೈ 01ರವೆರೆಗೂ ಮೇಷ ರಾಶಿಯಲ್ಲಿಯೇ ಸಂಚರಿಸಲಿರುವ ಮಂಗಳನು ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ.
  • ಈ ಸಮಯದಲ್ಲಿ ಮಂಗಳನು ಯಾವ ರಾಶಿಯವರ ಜೀವನವನ್ನು ಹೊಳೆಯುವಂತೆ ಮಾಡಲಿದ್ದಾನೆ ತಿಳಿಯಿರಿ.
ಚಂದ್ರನ ರಾಶಿಯಲ್ಲಿ ಮಂಗಳನ ಸಂಚಾರ: ಬೆಳಗಲಿದೆ ಈ ರಾಶಿಯವರ ಅದೃಷ್ಟ  title=

Mangal Rashi Parivartane: ವೈದಿಕ ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಗ್ರಹಗಳ ಕಮಾಂಡರ್-ಇನ್-ಚೀಫ್ ಎಂದು ಪರಿಗಣಿಸಲ್ಪಡುವ ಮಂಗಳ ಗ್ರಹ ಶೀಘ್ರದಲ್ಲೇ ರಾಶಿ ಪರಿವರ್ತನೆ ಮಾಡಲಿದ್ದಾರೆ. ಧೈರ್ಯ, ಶೌರ್ಯಗಳ ಅಂಶವಾದ ಮಂಗಳನು 10 ಮೇ 2023ರಂದು ಮಿಥುನ ರಾಶಿಯನ್ನು ತೊರೆದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿದ್ದಾನೆ. 

ಜ್ಯೋತಿಷ್ಯ ಲೆಕ್ಕಾಚಾರಗಳ ಪ್ರಕಾರ, 10 ಮೇ 2023ರ ಮಧ್ಯಾಹ್ನ 2.13ರ ಸುಮಾರಿಗೆ ಮಂಗಳ ರಾಶಿ ಪರಿವರ್ತನೆ ಸಂಭವಿಸಲಿದೆ. ಮೇ 10 ರಿಂದ ಜುಲೈ 01ರವೆರೆಗೂ ಮೇಷ ರಾಶಿಯಲ್ಲಿಯೇ ಸಂಚರಿಸಲಿರುವ ಮಂಗಳನು ಈ ಸಮಯದಲ್ಲಿ ಕೆಲವು ರಾಶಿಯವರ ಜೀವನದಲ್ಲಿ ಅದೃಷ್ಟದ ಬಾಗಿಲುಗಳನ್ನು ತೆರೆಯಲಿದ್ದಾನೆ ಎಂದು ಹೇಳಲಾಗುತ್ತಿದೆ. ಈ ಸಮಯದಲ್ಲಿ ಮಂಗಳನು ಯಾವ ರಾಶಿಯವರ ಜೀವನವನ್ನು ಹೊಳೆಯುವಂತೆ ಮಾಡಲಿದ್ದಾನೆ ತಿಳಿಯಿರಿ. 

ಇದನ್ನೂ ಓದಿ- Lucky Zodiac Sign: ಮಾತೆ ಲಕ್ಷ್ಮಿಗೆ ತುಂಬಾ ಪ್ರಿಯವಂತೆ ಈ ರಾಶಿಯವರು

ಮಂಗಳನ ರಾಶಿ ಪರಿವರ್ತನೆಯಿಂದ ಈ ರಾಶಿಯವರ ಅದೃಷ್ಟವೇ ಬದಲಾಗಲಿದೆ: 
ಕನ್ಯಾ ರಾಶಿ: 

ಮಿಥುನ ರಾಶಿಯನ್ನು ತೊರೆದು ಕರ್ಕಾಟಕ ರಾಶಿಯನ್ನು ಪ್ರವೇಶಿಸಲಿರುವ ಮಂಗಳನು ಕನ್ಯಾ ರಾಶಿಯವರ ಮನೋಕಾಮನೆಗಳನ್ನು ಈಡೇರಿಸಲಿದ್ದಾನೆ. ಈ ಸಮಯದಲ್ಲಿ ನಿಮ್ಮ ದೀರ್ಘ ಸಮಯದಿಂದ ಕುಂಠಿತಗೊಂಡಿರುವ ಕೆಲಸಗಳು ವೇಗವನ್ನು ಪಡೆಯಲಿವೆ. ವ್ಯಾಪಾರಸ್ಥರಿಗೂ ಬಂಪರ್ ಲಾಭ ದೊರೆಯುವ ಉತ್ತಮ ಸಮಯ ಇದಾಗಿರಲಿದೆ. 

ಕುಂಭ ರಾಶಿ: 
ಮಂಗಳನ ರಾಶಿ ಪರಿವರ್ತನೆಯಿಂದಾಗಿ ಈ ರಾಶಿಯವರಿಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಇದರಿಂದಾಗಿ ನೀವು ಕೈ ಹಾಕಿದ ಕೆಲಸದಲ್ಲೆಲ್ಲಾ ಪ್ರಗತಿ ಕಾಣುವಿರಿ. ಶತ್ರುಗಳ ವಿರುದ್ಧ ಜಯ ಸಾಧಿಸುವುದರ ಜೊತೆಗೆ ಉದ್ಯೋಗ ಕ್ಷೇತ್ರದಲ್ಲಿ ಉನ್ನತ ಹುದ್ದೆಯನ್ನು ಅಲಂಕರಿಸುವ ಯೋಗವೂ ಇದೆ. 

ಇದನ್ನೂ ಓದಿ- Akshaya Tritiya: ಅಕ್ಷಯ ತೃತೀಯದಲ್ಲಿ ನಿಮ್ಮ ರಾಶಿಗನುಗುಣವಾಗಿ ಈ ವಸ್ತುಗಳನ್ನು ಖರೀದಿಸಿ

ಮೀನ ರಾಶಿ: 
ಮಂಗಳ ಸಂಚಾರವು ಮೀನ ರಾಶಿಯವರ ಜೀವನವನ್ನು ಬೆಳಗಿಸಲಿದೆ. ಅದೃಷ್ಟದ ಬೆಂಬಲದಿಂದಾಗಿ ನೀವು ಇಷ್ಟು ದಿನ ನೆನೆಗುದಿಗೆ ಬಿದ್ದಿದ್ದ ಕೆಲಸಗಳು ಈಗ ಪೂರ್ಣಗೊಳ್ಳಲಿವೆ. ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ತೆರಳಲು ಯೋಚಿಸುತ್ತಿರುವವರಿಗೂ ಅತ್ಯುತ್ತಮ ಸಮಯ ಇದಾಗಿದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News