ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಶನಿ ಜಯಂತಿಯಂದು ಹೀಗಿರಲಿ ನಿಮ್ಮ ವ್ರತಾಚರಣೆ

Shani Jayanti: ಶನಿ ದೇವನನ್ನು ಮೆಚ್ಚಿಸಲು ಶನಿ ಜಯಂತಿ ಬಹಳ ಶ್ರೇಷ್ಟವಾದ ದಿನ. ಈ ದಿನ ನಿಯಮಾನುಸಾರ ಶನಿ ವ್ರತಾಚರಣೆಯನ್ನು ಆಚರಿಸಿದರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ. ಮಾತ್ರವಲ್ಲ, ಬ್ಯಾಂಕ್ ಬ್ಯಾಲೆನ್ಸ್ ಕೂಡ ಹೆಚ್ಚಾಗುತ್ತದೆ ಎಂಬ ನಂಬಿಕೆ ಇದೆ. 

Written by - Yashaswini V | Last Updated : Apr 17, 2023, 05:47 PM IST
  • ದಕ್ಷಿಣ ಭಾರತದಲ್ಲಿ ವೈಶಾಖ ಅಮಾವಾಸ್ಯೆಯಾಂಡು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.
  • ಈ ಬಾರಿ 20 ಏಪ್ರಿಲ್ 2023ರಂದು ದಕ್ಷಿಣ ಭಾರತದಲ್ಲಿ ಶನಿ ಜಯಂತಿಯನ್ನು ಆಚರಿಸಲಾಗುವುದು.
  • ಅದೇ ಉತ್ತರ ಭಾರತದಲ್ಲಿ ಜ್ಯೇಷ್ಠ ಅಮಾವಾಸ್ಯೆಯ (19 ಮೇ 2023) ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ.
ಬ್ಯಾಂಕ್ ಬ್ಯಾಲೆನ್ಸ್ ಹೆಚ್ಚಿಸಲು ಶನಿ ಜಯಂತಿಯಂದು ಹೀಗಿರಲಿ ನಿಮ್ಮ ವ್ರತಾಚರಣೆ  title=
Shani Jayanti

Shani Jayanti Remedies: ಶನಿ ದೇವನು ನಮ್ಮ ಕರ್ಮಗಳಿಗೆ ತಕ್ಕ ಪ್ರತಿಫಲವನ್ನು ನೀಡುವ ನ್ಯಾಯದ ದೇವರು. ಶನಿ ಮಹಾತ್ಮ ಕೇವಲ ನಾವು ಮಾಡಿದ ಕರ್ಮಗಳಿಗೆ ಶಿಕ್ಷೆ ನೀಡುವುದು ಮಾತ್ರವಲ್ಲ, ನಮ್ಮ ಒಳ್ಳೆಯ ಕೆಲಸಗಳಿಗೆ ಶುಭ ಫಲಗಳನ್ನು ಕೂಡ ನೀಡುತ್ತಾರೆ. ಇಂತಹ ಶನಿ ಮಹಾತ್ಮನನ್ನು ಮೆಚ್ಚಿಸಲು ಶನಿ ಜಯಂತಿ ತುಂಬಾ ಪ್ರಾಶಸ್ತ್ಯವಾದ ದಿನ ಎಂದು ಹೇಳಲಾಗುತ್ತದೆ. 

ಹಿಂದೂ ಕ್ಯಾಲೆಂಡರ್ ಪ್ರಕಾರ, ದಕ್ಷಿಣ ಭಾರತದಲ್ಲಿ ವೈಶಾಖ ಅಮಾವಾಸ್ಯೆಯಾಂಡು ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. ಈ ಬಾರಿ 20 ಏಪ್ರಿಲ್ 2023ರಂದು ದಕ್ಷಿಣ ಭಾರತದಲ್ಲಿ ಶನಿ ಜಯಂತಿಯನ್ನು ಆಚರಿಸಲಾಗುವುದು. ಅದೇ ಉತ್ತರ ಭಾರತದಲ್ಲಿ ಜ್ಯೇಷ್ಠ ಅಮಾವಾಸ್ಯೆಯ (19 ಮೇ 2023) ದಿನ ಶನಿ ಜಯಂತಿಯನ್ನು ಆಚರಿಸಲಾಗುತ್ತದೆ. 

ಇದನ್ನೂ ಓದಿ- ಇನ್ನೆರಡು ದಿನಗಳಲ್ಲಿ ವರ್ಷದ ಮೊದಲ ಸೂರ್ಯಗ್ರಹಣ: ಈ ರಾಶಿಯವರಿಗೆ ತೆರೆಯಲಿದೆ ಅದೃಷ್ಟದ ಬಾಗಿಲು

ಧಾರ್ಮಿಕ ನಂಬಿಕೆಗಳ ಪ್ರಕಾರ, ಶನಿ ಜಯಂತಿಯ ದಿನ ನಿಯಮಾನುಸಾರ ವ್ರತಾಚರಣೆಯನ್ನು ಆಚರಿಸುವುದರಿಂದ ಸಾಡೇ ಸಾತಿ ಶನಿ, ಶನಿ ಧೈಯಾ, ಶನಿ ದೋಷ, ಶನಿ ವಕ್ರ ದೃಷ್ಟಿಯಿಂದ ಪರಿಹಾರ ಪಡೆಯಬಹುದು ಎಂದು ಹೇಳಲಾಗುತ್ತದೆ. ಮಾತ್ರವಲ್ಲ, ಶತ್ರುಗಳ ವಿರುದ್ಧ ಜಯ, ಕೆಲಸ ಕಾರ್ಯಗಳಲ್ಲಿ ಎದುರಾಗಿರುವ ಸಂಕಷ್ಟಗಳಿಂದ ಪರಿಹಾರದ ಜೊತೆಗೆ ಸಾಲಬಾಧೆಗಳಿಂದಲೂ ಮುಕ್ತಿ ದೊರೆಯುತ್ತದೆ ಎಂದು ನಂಬಲಾಗಿದೆ. ಹಾಗಿದ್ದರೆ ಶನಿ ದೇವನನ್ನು ಮೆಚ್ಚಿಸಲು ಶನಿ ಜಯಂತಿಯಂದು ಯಾವ ರೀತಿ ವ್ರತಾಚರಣೆ ಆಚರಿಸಬೇಕು ಎಂದು ತಿಳಿಯೋಣ... 

ಇದನ್ನೂ ಓದಿ- ಈ ರಾಶಿಯವರಿಗೆ ತುಂಬಾ ಅಪಾಯಕಾರಿ ಶನಿಯ ಮೂರನೇ ದೃಷ್ಟಿ

ಶನಿ ಜಯಂತಿಯಂದು ಈ ರೀತಿ ವ್ರತಾಚರಣೆ ಮಾಡುವುದರಿಂದ ಸಿಗುತ್ತೆ ಹಲವು ಪ್ರಯೋಜನ: 
>> ಮುಂಜಾನೆ ಬೇಗ ಎದ್ದು ಸೂರ್ಯೋದಯಕ್ಕೂ ಮುನ್ನವೇ ಪುಣ್ಯ ನದಿಯಲ್ಲಿ ಸ್ನಾನ ಮಾಡಿ ಶುಭ್ರವಾದ ಉಡುಪನ್ನು ಧರಿಸಿ.
>> ಸ್ನಾನದ ಬಳಿಕ ಸೂರ್ಯ ಉದಯವಾಗುವ ಸಮಯಕ್ಕೆ ಸರಿಯಾಗಿ ಸೂರ್ಯ ದೇವನಿಗೆ ಅರ್ಘ್ಯವನ್ನು ಅರ್ಪಿಸಿ. 
>> ಶನಿ ಮಂದಿರಕ್ಕೆ ತೆರಳಿ ಶನಿಗೆ ಎಳ್ಳೆಣ್ಣೆ ಅಭಿಷೇಕ ಮಾಡಿ, ಹೂವಿನ ಹಾರ ಹಾಕಿ.
>> ಶನಿ ಮಹಾತ್ಮನಿಗೆ ಕಪ್ಪು ಎಳ್ಳು, ಕಪ್ಪು ಎಳ್ಳಿನ ಉಂಡೆಯನ್ನು ನೇವೇದ್ಯವಾಗಿ ಅರ್ಪಿಸಿ. 
>> ಭಕ್ತಿಯಿಂದ ಶನಿ ಚಾಲೀಸವನ್ನು ಪಠಣೆ ಮಾಡಿ. 
>> ಈ ದಿನ ಉಪವಾಸ ವ್ರತವನ್ನೂ ಆಚರಿಸಿ. ನಿಮ್ಮ ಕೈಲಾದಷ್ಟು ಬಡವರಿಗೆ ಆಹಾರ ಧಾನ್ಯಗಳನ್ನು ದಾನ ಮಾಡಿ. ಇದರಿಂದ ಶನಿ ಮಹಾತ್ಮನು ಸಂತುಷ್ಟನಾಗುತ್ತಾನೆ ಎಂಬ ನಂಬಿಕೆ ಇದೆ. 

ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಸಾಮಾಜಿಕ ಮತ್ತು ಧಾರ್ಮಿಕ ನಂಬಿಕೆಗಳನ್ನು ಆಧರಿಸಿದೆ. Zee ಮೀಡಿಯಾ ಇದನ್ನು ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News