ಏಷ್ಯಾಕಪ್ 2018: ಅಮೋಘ ಜಯ ಗಳಿಸಿದ ಭಾರತ, ದುಬೈನಲ್ಲಿ ಪಾಕ್ ಧೂಳೀಪಟ

ನಿನ್ನೆ ದುಬೈನಲ್ಲಿ ನಡೆದ ಪಂದ್ಯದಲ್ಲಿ  ಭಾರತ ತಂಡವು 8 ವಿಕೆಟ್ಗಳಿಂದ ಪಾಕಿಸ್ತಾನವನ್ನು ಮಣಿಸಿದೆ. ಈಗ ಭಾರತ ಸೆಪ್ಟೆಂಬರ್ 23 ರಂದು ಪಾಕಿಸ್ತಾನದೊಂದಿಗೆ ಸೂಪರ್ -4 ನಲ್ಲಿ ಸ್ಪರ್ಧಿಸಬೇಕಾಗಿದೆ.

Last Updated : Sep 20, 2018, 09:46 AM IST
ಏಷ್ಯಾಕಪ್ 2018: ಅಮೋಘ ಜಯ ಗಳಿಸಿದ ಭಾರತ, ದುಬೈನಲ್ಲಿ ಪಾಕ್ ಧೂಳೀಪಟ title=
Image Courtesy: Twitter/@ICC

ದುಬೈ: ನಿನ್ನೆ ದುಬೈನಲ್ಲಿ ನಡೆದ ಏಷ್ಯಾಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅದ್ಭುತ ಪ್ರದರ್ಶನ ನೀಡುವ ಮೂಲಕ ಭಾರತ ಏಷ್ಯಾಕಪ್ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ಭಾರತವು ತನ್ನ ಎದುರಾಳಿ ಪಾಕಿಸ್ತಾನವನ್ನು 8 ವಿಕೆಟ್ಗಳಿಂದ ಧೂಳೀಪಟಗೊಳಿಸಿ ಅಮೋಘ ಜಯ ಗಳಿಸಿದೆ. ಪಾಕ್ ನೀಡಿದ್ದ 163 ರನ್ ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಂ ಇಂಡುಯಾ ದಿಟ್ಟ ಪ್ರದರ್ಶನವನ್ನೇ ನೀಡಿತು. 

ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್​​ನ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡು ಭರ್ಜರಿ ಬ್ಯಾಟಿಂಗ್ ಮಾಡುವ ಕನಸಿನಲ್ಲಿದ್ದ ಪಾಕಿಸ್ತಾನಕ್ಕೆ ಆರಂಭದಲ್ಲೇ ಭುವನೇಶ್ವರ್ ಕುಮಾರ್ ಶಾಕ್ ನೀಡಿದರು. ಓಪನರ್ಗಳಿಬ್ಬರು ಭುವಿ ಬೌಲಿಂಗ್​​ನಲ್ಲಿ ಪೆವಿಲಿಯನ್ ಸೇರಿಕೊಂಡರು. ಪಾಕಿಸ್ತಾನ 43.1 ಓವರ್​​ಗಳಲ್ಲಿ ಕೇವಲ 162ರನ್​​ಗೆ ಆಲೌಟ್ ಆಯಿತು. 

ಪಾಕ್ ನೀಡಿದ್ದ 163 ರನ್ ಗಳ ಸುಲಭ ಗುರಿಯನ್ನು ಬೆನ್ನತ್ತಿದ ಟೀಂ ಇಂಡುಯಾ ದಿಟ್ಟ ಪ್ರದರ್ಶನವನ್ನೇ ನೀಡಿತು. ಪ್ರಾರಂಭಿಕವಾಗಿ ಬಂದ ನಾಯಕ ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಉತ್ತರ ರನ್ ಕಲೆಹಾಕುವಲ್ಲಿ ಯಶಸ್ವಿಯಾದರು. ರೋಹಿತ್ ಶರ್ಮಾ  36 ಎಸೆತಗಳಲ್ಲಿ 52 ರನ್ ಗಳಿಸಿದರೆ ಧವನ್ ಆರು ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ 46 ರನ್ ಗಳಿಸಿದರು. ಮೊದಲ ವಿಕೆಟ್ ಪತನಕ್ಕೆ ಮುನ್ನ 13.1 ಓವರ್‌ಗಳಲ್ಲಿ 86 ರನ್ ಜತೆಯಾಟ ನೀಡಿದರು.

ನಂತರದಲ್ಲಿ ಗೆಲುವಿನ ಜವಾಬ್ದಾರಿ ಹೊತ್ತು ಅಂಬಟಿ ರಾಯುಡು ಹಾಗೂ ದಿನೇಶ್ ಕಾರ್ತಿಕ್ ತಲಾ ಅಜೇಯ 31 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದಿಟ್ಟರು. ಅಂತಿಮವಾಗಿ ಭಾರತ ತಂಡ 29 ಓವರ್‌ಗಳಲ್ಲೇ ಎರಡು ವಿಕೆಟ್ ನಷ್ಟಕ್ಕೆ 164ರನ್ ಗಳಿಸಿ ಗೆಲುವಿನ ನಗೆ ಬೀರಿದೆ.

ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿಯನ್ನು ಭುವನೇಶ್ವರ್ಗೆ ನೀಡಲಾಯಿತು (ಫೋಟೋ: ಐಎಎನ್ಎಸ್)

ಸಪ್ಟೆಂಬರ್ 23 ರಂದು ಮತ್ತೆ ಮುಖಾಮುಖಿ:
ಭಾರತ ಮತ್ತು ಪಾಕಿಸ್ತಾನ ತಂಡಗಳು ಈಗ ಸೆಪ್ಟೆಂಬರ್ 23 ರಂದು ಮತ್ತೆ ಮುಖಾಮುಖಿಯಾಗಲಿವೆ. ಇದು ಸೂಪರ್-ರೌಂಡ್ ಪಂದ್ಯದಲ್ಲಿ ಇರುತ್ತದೆ. ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನವು ಸೂಪರ್ -4 ತಲುಪಿದೆ. ಸೂಪರ್ -4 ಸುತ್ತಿನಲ್ಲಿ ಉತ್ತಮ ಪ್ರದರ್ಶನ ನೀಡುವ ಎರಡು ತಂಡಗಳು ಅಂತಿಮ ಹಂತಕ್ಕೆ ಸ್ಥಾನ ಗಳಿಸುತ್ತದೆ. ಅಂತಿಮ ಪಂದ್ಯ ಸೆಪ್ಟೆಂಬರ್ 28 ರಂದು ನಡೆಯಲಿದೆ.

Trending News