ಇಂಡಿಯಾ ಓಪನ್: ಫೈನಲ್ ನಲ್ಲಿ ಅಮೆರಿಕಾದ ಝಾಂಗ್ ರನ್ನು ಎದುರಿಸಲಿರುವ ಸಿಂಧು

    

Manjunath Naragund Manjunath Naragund | Updated: Feb 4, 2018 , 03:08 PM IST
ಇಂಡಿಯಾ ಓಪನ್:  ಫೈನಲ್ ನಲ್ಲಿ ಅಮೆರಿಕಾದ ಝಾಂಗ್ ರನ್ನು ಎದುರಿಸಲಿರುವ ಸಿಂಧು
ಸಂಗ್ರಹ ಚಿತ್ರ

ನವದೆಹಲಿ: ರಿಯೊ ಒಲಿಂಪಿಕ್ಸ್ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ಭಾನುವಾರ ಇಲ್ಲಿನ ಸಿರಿ ಫೋರ್ಟ್ ಸ್ಪೋರ್ಟ್ಸ್ ಸಂಕೀರ್ಣದಲ್ಲಿ  ನಡೆಯುವ ಬಾಡ್ಮಿಂಟನ್  ಫೈನಲ್ ಪಂಧ್ಯದಲ್ಲಿ ಅಮೆರಿಕಾದ ಜಾಂಗ್ ಬೀವನ್ನನ್ನು ಎದುರಿಸಲಿದ್ದಾರೆ.  

ಸಿಂಧು ಅವರು 48 ನಿಮಿಷಗಳ ಕಾಲ ನಡೆದ ಥೈಲ್ಯಾಂಡ್ನ ಮೂರನೆ ಶ್ರೇಯಾಂಕಿತ ರಾಚ್ಚಾನೋಕ್ ಇಂತಹಾನ್ ವಿರುದ್ಧ 21-13, 21-15 ಅಂತರದಿಂದ ಸೆಮಿಫೈನಲ್ ನಲ್ಲಿ  ಜಯಸಾಧಿಸಿ ಫೈನಲ್ ಗೆ ತಲುಪಿದ್ದರು.

ಸಿಂಧು ಅವರ ಫೈನಲ್ ಪಂದ್ಯದ ಎದುರಾಳಿ ಅಮೆರಿಕಾದ ಝಾಂಗ್ ರವರು ಹಾಂಗ್ಕಾಂಗ್ ನ ಚೆಯುಂಗ್ ನೈಗನ್ ಯಿ ಅವರನ್ನು 14-21, 21-12, 21-19 ಅಂತರದಲ್ಲಿ ಸೋಲಿಸಿ ಫೈನಲ್ ತಲುಪಿದ್ದಾರೆ. ಜಾಂಗ್ ವಿಶ್ವದ ನಂಬರ್ 11ನೇ ಸ್ಥಾನದಲ್ಲಿ ಇದ್ದು ಅವರು ಐದನೇ ಬಾರಿಗೆ ಪಿ.ವಿ.ಸಿಂಧುರನ್ನು ಎದುರಿಸಲಿದ್ದಾರೆ.