ಟಿ20 ವಿಶ್ವಕಪ್’ನಲ್ಲಿ ಭಾರತೀಯರದ್ದೇ ಪ್ರಾಬಲ್ಯ: ಕೊಹ್ಲಿ, ಧೋನಿ, ಯುವಿ ಹೆಸರಲ್ಲಿವೆ ಈ ಅದ್ಭುತ ದಾಖಲೆಗಳು! ಮುರಿಯೋದಂತೂ ಕಷ್ಟವೇ!

T20 World Cup 2024: ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಟ್ರೋಫಿಗಾಗಿ ಸೆಣಸಾಡಲಿದೆ. 2013ರಿಂದ ಯಾವುದೇ ಐಸಿಸಿ ಟೂರ್ನಿಯನ್ನು ಗೆಲ್ಲಲು ಟೀಂ ಇಂಡಿಯಾಕ್ಕೆ ಸಾಧ್ಯವಾಗಿಲ್ಲ. ಅಂದಹಾಗೆ ನಾವಿಂದು ಭಾರತೀಯ ಆಟಗಾರರ ಕೆಲವೊಂದು ಅದ್ಭುತ ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

Written by - Bhavishya Shetty | Last Updated : May 7, 2024, 06:48 PM IST
    • T20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಲಿವೆ
    • ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದೆ
    • 2013ರಿಂದ ಯಾವುದೇ ಐಸಿಸಿ ಟೂರ್ನಿಯನ್ನು ಗೆಲ್ಲಲು ಟೀಂ ಇಂಡಿಯಾಕ್ಕೆ ಸಾಧ್ಯವಾಗಿಲ್ಲ
ಟಿ20 ವಿಶ್ವಕಪ್’ನಲ್ಲಿ ಭಾರತೀಯರದ್ದೇ ಪ್ರಾಬಲ್ಯ: ಕೊಹ್ಲಿ, ಧೋನಿ, ಯುವಿ ಹೆಸರಲ್ಲಿವೆ ಈ ಅದ್ಭುತ ದಾಖಲೆಗಳು! ಮುರಿಯೋದಂತೂ ಕಷ್ಟವೇ! title=
team india record in t20 world cup

T20 World Cup 2024: T20 ವಿಶ್ವಕಪ್ ಅನ್ನು ವೆಸ್ಟ್ ಇಂಡೀಸ್ ಮತ್ತು ಅಮೆರಿಕ ಜಂಟಿಯಾಗಿ ಆಯೋಜಿಸಲಿವೆ. ಪಂದ್ಯಾವಳಿ ಜೂನ್ 2 ರಿಂದ 29 ರವರೆಗೆ ನಡೆಯಲಿದ್ದು, ಇದರಲ್ಲಿ 20 ತಂಡಗಳು ಭಾಗವಹಿಸಲಿವೆ. ಇನ್ನು 2007ರ ನಂತರ ಮತ್ತೊಮ್ಮೆ ಪ್ರಶಸ್ತಿ ಗೆಲ್ಲುವ ಉದ್ದೇಶದಿಂದ ಭಾರತ ಕಣಕ್ಕಿಳಿಯಲಿದೆ.

ರೋಹಿತ್ ಶರ್ಮಾ ನಾಯಕತ್ವದಲ್ಲಿ 15 ಸದಸ್ಯರ ತಂಡವನ್ನು ಆಯ್ಕೆ ಮಾಡಲಾಗಿದ್ದು, ಇದೀಗ ಟ್ರೋಫಿಗಾಗಿ ಸೆಣಸಾಡಲಿದೆ. 2013ರಿಂದ ಯಾವುದೇ ಐಸಿಸಿ ಟೂರ್ನಿಯನ್ನು ಗೆಲ್ಲಲು ಟೀಂ ಇಂಡಿಯಾಕ್ಕೆ ಸಾಧ್ಯವಾಗಿಲ್ಲ. ಅಂದಹಾಗೆ ನಾವಿಂದು ಭಾರತೀಯ ಆಟಗಾರರ ಕೆಲವೊಂದು ಅದ್ಭುತ ದಾಖಲೆಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ.

ಇದನ್ನೂ ಓದಿ: ಮಳೆಗಾಲದಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ಕ್ರಮ ಕೈಗೊಳ್ಳಿ: ತುಷಾರ್ ಗಿರಿನಾಥ್

ಟಿ20 ವಿಶ್ವಕಪ್ ಇತಿಹಾಸದಲ್ಲಿ ಮೂರನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡುವಾಗ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. ಕೊಹ್ಲಿ 2012 ರಿಂದ 2022 ರವರೆಗೆ 24 ಪಂದ್ಯಗಳ 24 ಇನ್ನಿಂಗ್ಸ್‌ಗಳಲ್ಲಿ 1132 ರನ್ ಗಳಿಸಿದ್ದಾರೆ. ಈ ಅವಧಿಯಲ್ಲಿ ಅವರ ಸರಾಸರಿ 87.07 ಆಗಿದೆ.

ಇದುವರೆಗಿನ ಟಿ20 ವಿಶ್ವಕಪ್‌ನಲ್ಲಿ ಅತಿ ಹೆಚ್ಚು ಫಿಫ್ಟಿ ಪ್ಲಸ್ (50 ಅಥವಾ ಅದಕ್ಕಿಂತ ಹೆಚ್ಚು ರನ್) ಗಳಿಸಿದ ದಾಖಲೆಯನ್ನು ಕೊಹ್ಲಿ ಹೊಂದಿದ್ದಾರೆ. ಈ ದಾಖಲೆಯನ್ನು 14 ಬಾರಿ ಮಾಡಿದ್ದಾರೆ. ಅಂದಹಾಗೆ ಇಬ್ಬರು ಆಟಗಾರರು ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌’ನ ಮಾಜಿ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್ ಮತ್ತು ಭಾರತದ ನಾಯಕ ರೋಹಿತ್ ಶರ್ಮಾ ತಲಾ 9 ಬಾರಿ ಐವತ್ತು ಪ್ಲಸ್ ಗಳಿಸಿದ್ದಾರೆ.

ಟಿ20 ವಿಶ್ವಕಪ್‌’ನ ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ದಾಖಲೆ ವಿರಾಟ್ ಕೊಹ್ಲಿ ಹೆಸರಿನಲ್ಲಿದೆ. 2014ರಲ್ಲಿ 319 ರನ್ ಗಳಿಸಿದ್ದರು. ಈ ದಾಖಲೆ ಇನ್ನೂ ಹಾಗೇ ಇದೆ. ಶ್ರೀಲಂಕಾದ ತಿಲಕರತ್ನೆ ದಿಲ್ಶನ್ ಎರಡನೇ ಸ್ಥಾನದಲ್ಲಿದ್ದು, 2009ರಲ್ಲಿ 317 ರನ್ ಗಳಿಸಿದ್ದರು. 2021 ರಲ್ಲಿ, ಬಾಬರ್ ಅಜಮ್ 300 ರನ್ ಗಡಿ ದಾಟಿದ್ದರು, ಆದರೆ ಕೊಹ್ಲಿಯ ದಾಖಲೆಯನ್ನು ಮುರಿಯಲು ಸಾಧ್ಯವಾಗಲಿಲ್ಲ.

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ವೇಗದ ಅರ್ಧಶತಕ ಬಾರಿಸಿದ ದಾಖಲೆ ಭಾರತದ ಮಾಜಿ ಬ್ಯಾಟ್ಸ್‌ಮನ್ ಯುವರಾಜ್ ಸಿಂಗ್ ಹೆಸರಿನಲ್ಲಿದೆ. ಟೂರ್ನಿಯ ಮೊದಲ ಆವೃತ್ತಿಯಲ್ಲೇ ಯುವರಾಜ್ ಈ ದಾಖಲೆ ಮಾಡಿದ್ದರು. 2007 ರಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದರು.

ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ವಿಕೆಟ್ ಕೀಪಿಂಗ್‌’ನಲ್ಲಿ ದಾಖಲೆಯನ್ನು ಹೊಂದಿದ್ದು ಅದನ್ನು ಮುರಿಯುವುದು ಕಷ್ಟ. ಟಿ20 ವಿಶ್ವಕಪ್ ಇತಿಹಾಸದಲ್ಲಿ ವಿಕೆಟ್ ಕೀಪರ್ ಆಗಿ ಅತಿ ಹೆಚ್ಚು ವಿಕೆಟ್ ಪಡೆದ ಆಟಗಾರ ಧೋನಿ. 2007 ರಿಂದ 2016 ರವರೆಗೆ 32 ಇನ್ನಿಂಗ್ಸ್‌’ಗಳಲ್ಲಿ 32 ವಿಕೆಟ್ ಕೀಪಿಂಗ್ ಮಾಡಿ ಔಟ್ ಮಾಡಿದ್ದಾರೆ. ಅದರಲ್ಲಿ 21 ಕ್ಯಾಚ್‌ ಮತ್ತು 11 ಸ್ಟಂಪಿಂಗ್‌ ಸೇರಿವೆ.

ಮಹೇಂದ್ರ ಸಿಂಗ್ ಧೋನಿ ಅವರ ಹೆಸರಿನಲ್ಲಿ ಮತ್ತೊಂದು ಅದ್ಭುತ ದಾಖಲೆ ಇದೆ, ಅದು ಕೂಡ ಬ್ರೇಕ್ ಮಾಡೋದು ಕಷ್ಟ. ನಾಯಕನಾಗಿ ಟಿ20 ವಿಶ್ವಕಪ್‌’ನಲ್ಲಿ ಅತಿ ಹೆಚ್ಚು ಪಂದ್ಯಗಳನ್ನು ಆಡಿದ ಆಟಗಾರ. 2007ರಿಂದ 2016ರವರೆಗೆ 33 ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ್ದರು. ಈ ಅವಧಿಯಲ್ಲಿ 20 ಪಂದ್ಯಗಳನ್ನು ಗೆದ್ದು 11 ಸೋಲು ಕಂಡಿದೆ. ಒಂದು ಪಂದ್ಯ ಟೈ ಆಗಿದ್ದು, ಫಲಿತಾಂಶ ಬಂದಿಲ್ಲ. ಈ ವಿಚಾರದಲ್ಲಿ ವೆಸ್ಟ್ ಇಂಡೀಸ್ ಮಾಜಿ ನಾಯಕ ಡ್ಯಾರೆನ್ ಸಾಮಿ ಎರಡನೇ ಸ್ಥಾನದಲ್ಲಿದ್ದಾರೆ. ಟಿ20 ವಿಶ್ವಕಪ್‌ನ 18 ಪಂದ್ಯಗಳಲ್ಲಿ ನಾಯಕತ್ವ ವಹಿಸಿದ್ದಾರೆ.

ಇದನ್ನೂ ಓದಿ: ಖ್ಯಾತ ನಟ ಸಾಯಿಧರಮ್ ತೇಜ್ ಮೇಲೆ ಹಲ್ಲೆ.! ತೀವ್ರ ಗಾಯ 

ಟಿ20 ವಿಶ್ವಕಪ್ ಇತಿಹಾಸದಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಆಟಗಾರ ವಿರಾಟ್ ಕೊಹ್ಲಿ. 7 ಬಾರಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ. ಕ್ರಿಸ್ ಗೇಲ್, ಮಹೇಲಾ ಜಯವರ್ಧನೆ ಮತ್ತು ಕುಮಾರ ಸಂಗಕ್ಕಾರ ಎರಡನೇ ಸ್ಥಾನದಲ್ಲಿದ್ದಾರೆ. ಮೂವರೂ 6 ಬಾರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದು, ಎಬಿ ಡಿವಿಲಿಯರ್ಸ್, ಶಾಹಿದ್ ಅಫ್ರಿದಿ ಮತ್ತು ತಿಲಕರತ್ನೆ ದಿಲ್ಶಾನ್ ತಲಾ 4 ಬಾರಿ ಈ ಪ್ರಶಸ್ತಿಯನ್ನು ಪಡೆದಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News