ರಾಜಸ್ತಾನಕ್ಕೆ ವರವಾದ ಮಳೆರಾಯ,ಡೆಲ್ಲಿ ವಿರುದ್ದ 10 ರನ್ ಗಳ ರೋಚಕ ಜಯ

     

Last Updated : Apr 12, 2018, 12:36 PM IST
ರಾಜಸ್ತಾನಕ್ಕೆ ವರವಾದ ಮಳೆರಾಯ,ಡೆಲ್ಲಿ ವಿರುದ್ದ 10 ರನ್ ಗಳ ರೋಚಕ ಜಯ  title=

ಜೈಪುರ: ಇಲ್ಲಿನ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಡೆಲ್ಲಿ ಡೆರ್ ಡೆವಿಲ್ಸ್ ತಂಡವು ರಾಜಸ್ತಾನ್ ರಾಯಲ್ಸ್ ನ್ನು  17.5 ಓವರ್ ಗಳಲ್ಲಿ  ಐದು ವಿಕೆಟ್ ನಷ್ಟಕ್ಕೆ 153 ರನ್ ಗಳಿಗೆ ಕಟ್ಟಿಹಾಕಿತು. 

ರಾಜಸ್ತಾನ್ ರಾಯಲ್ಸ್ ತಂಡದ ಪರ ಅಜಿಂಕ್ಯಾ ರಹಾನೆ(45) ಸಂಜು ಸ್ಯಾಮ್ಸನ್(37) ಜೋಸ್ ಬಟ್ಲರ್ (29) ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದರು.

ಮಳೆಯ ಕಾರಣದಿಂದಾಗಿ  ಡಕ್ ವರ್ತ್ ಲೂಯಿಸ್ ನಿಯಮದ ಪ್ರಕಾರ ಡೆಲ್ಲಿ ತಂಡಕ್ಕೆ  6 ಓವರ್ ಗಳಲ್ಲಿ 71 ರನ್ ಗಳ ಗುರಿಯನ್ನು ನಿಗದಿ ಪಡಿಸಿಸಲಾಯಿತು.ಇದನ್ನು ಬೆನ್ನತ್ತಿದ ಡೆಲ್ಲಿ ತಂಡವು 6 ಓವರ್ ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 60 ರನ್ ಗಳಿಸಲಷ್ಟೇ ಶಕ್ತವಾಯಿತು.ಆ ಮೂಲಕ ರಾಜಸ್ತಾನ್ 10 ರನ್ ಗಳ ರೋಚಕ ಗೆಲುವು ಸಾಧಿಸಿತು.

Trending News