IPL 2022 ಹರಾಜಿನಲ್ಲಿ ಈ 3 ಆಟಗಾರರನ್ನು ಕೈಬಿಟ್ಟಿದಕ್ಕೆ 'ಮುಂಬೈ'ಗೆ ಈ ಕೆಟ್ಟ ಪರಿಸ್ಥಿತಿ!

ಈ ತಂಡವನ್ನು ಚಾಂಪಿಯನ್ ಮಾಡಿದ ಕೆಲವು ಆಟಗಾರರನ್ನು ಮೆಗಾ ಹರಾಜಿನಲ್ಲಿ ಮುಂಬೈ ತನ್ನ ತಂಡದಿಂದ ಮೂವರು ಆಟಗಾರರನ್ನು ಕೈಬಿಟ್ಟಿತು. ಹೀಗಾಗಿ ಮುಂಬೈ ತಂಡ ಸೀಸನ್ 15 ರಿಂದ ಹೊರಗುಳಿಯಲು ಮೊದಲ ಕಾರಣ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಈ ಮೂರು ಆಟಗಾರರು ಯಾರು? ಹರಾಜಿನಲ್ಲಿ ಕೈಬಿಡಲು ಕಾರಣವೇನು ಇಲ್ಲಿದೆ  ನೋಡಿ.. 

Written by - Channabasava A Kashinakunti | Last Updated : Apr 24, 2022, 02:17 PM IST
  • ಐಪಿಎಲ್ 2022 ರ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ (MI) ಗೆ ತುಂಬಾ ಕೆಟ್ಟ ಪರಸ್ಥಿತಿ
  • ಐಪಿಎಲ್ ಸೀಸನ್ 15 ರಿಂದ ಹೊರಗುಳಿದ ಮುಂಬೈ ಇಂಡಿಯನ್ಸ್]
  • ಮುಂಬೈ ತಂಡ ಹೊರಗುಳಿಯಲು ಮೊದಲ ಕಾರಣ ಇಲ್ಲಿದೆ ನೋಡಿ
IPL 2022 ಹರಾಜಿನಲ್ಲಿ ಈ 3 ಆಟಗಾರರನ್ನು ಕೈಬಿಟ್ಟಿದಕ್ಕೆ 'ಮುಂಬೈ'ಗೆ ಈ ಕೆಟ್ಟ ಪರಿಸ್ಥಿತಿ! title=

Mumbai Indians : ಐಪಿಎಲ್ 2022 ರ ಸೀಸನ್ ನಲ್ಲಿ ಮುಂಬೈ ಇಂಡಿಯನ್ಸ್ (MI) ಗೆ ತುಂಬಾ ಕೆಟ್ಟ ಪರಸ್ಥಿತಿ ಎದುರಿಸುತ್ತಿದೆ. ಐದು ಬಾರಿಯ ಚಾಂಪಿಯನ್ ತಂಡವು ತನ್ನ ಸತತ 7 ಪಂದ್ಯಗಳ ಸೋಲಿನ ಕಾರಣದಿಂದ ಐಪಿಎಲ್ ಸೀಸನ್ 15 ರಿಂದ ಹೊರಗುಳಿದಿದೆ. ಮುಂಬೈನ ಈ ವೈಫಲ್ಯದ ಹಿಂದಿನ ದೊಡ್ಡ ಕಾರಣವೆಂದರೆ ಮೆಗಾ ಹರಾಜಿನಲ್ಲಿ ಸರಿಯಾದ ಆಟಗಾರರನ್ನು ಆಯ್ಕೆ ಮಾಡದಿರುವುದು. ಈ ತಂಡವನ್ನು ಚಾಂಪಿಯನ್ ಮಾಡಿದ ಕೆಲವು ಆಟಗಾರರನ್ನು ಮೆಗಾ ಹರಾಜಿನಲ್ಲಿ ಮುಂಬೈ ತನ್ನ ತಂಡದಿಂದ ಮೂವರು ಆಟಗಾರರನ್ನು ಕೈಬಿಟ್ಟಿತು. ಹೀಗಾಗಿ ಮುಂಬೈ ತಂಡ ಸೀಸನ್ 15 ರಿಂದ ಹೊರಗುಳಿಯಲು ಮೊದಲ ಕಾರಣ ಎಂದು ಹೇಳಲಾಗುತ್ತಿದೆ. ಹಾಗಿದ್ರೆ ಈ ಮೂರು ಆಟಗಾರರು ಯಾರು? ಹರಾಜಿನಲ್ಲಿ ಕೈಬಿಡಲು ಕಾರಣವೇನು ಇಲ್ಲಿದೆ  ನೋಡಿ.. 

1. ಕ್ವಿಂಟನ್ ಡಿ ಕಾಕ್

ಮುಂಬೈ ತನ್ನ ಮಾರಕ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರಾದ ಕ್ವಿಂಟನ್ ಡಿ ಕಾಕ್ ಅವರನ್ನು ಮೆಗಾ ಹರಾಜಿನಲ್ಲಿ ಕೈಬಿಟ್ಟಿತು. ದಕ್ಷಿಣ ಆಫ್ರಿಕಾದ ಎಡಗೈ ಬ್ಯಾಟ್ಸ್‌ಮನ್ ಡಿ ಕಾಕ್ ಕಳೆದ ವರ್ಷದವರೆಗೆ ಮುಂಬೈ ಇಂಡಿಯನ್ಸ್‌ಗಾಗಿ ರೋಹಿತ್ ಶರ್ಮಾ ಅವರೊಂದಿಗೆ ಆರಂಭಿಕರಾಗಿದ್ದರು. ಡಿ ಕಾಕ್ ಮುಂಬೈ ಪರ ಹಲವು ಪಂದ್ಯಗಳನ್ನು ಸ್ವಂತ ಬಲದಿಂದ ಗೆದ್ದಿದ್ದರು. ಆದರೆ ಈ ವರ್ಷ ಮೆಗಾ ಹರಾಜಿನಲ್ಲಿ ಮುಂಬೈ ಅವರನ್ನು ಕೈ ಬಿಟ್ಟಿತು. ಈಗ ಇಶಾನ್ ಕಿಶನ್ ಮುಂಬೈಗೆ ರೋಹಿತ್ ಜೊತೆ ತೆರೆಯುತ್ತಿದ್ದಾರೆ ಮತ್ತು ಈ ಜೋಡಿ ಸಂಪೂರ್ಣ ಫ್ಲಾಪ್ ಆಗಿದೆ. ಡಿ ಕಾಕ್ ಇದೀಗ ಕೆಎಲ್ ರಾಹುಲ್ ಅವರೊಂದಿಗೆ ಲಕ್ನೋ ಸೂಪರ್ ಜೈಂಟ್ಸ್‌ಗಾಗಿ ಆರಂಭಿಕರಾಗಿದ್ದಾರೆ.

ಇದನ್ನೂ ಓದಿ : LSG vs MI: ಇಂದು ಲಕ್ನೋ-ಮುಂಬೈ ಮುಖಾಮುಖಿ... ಇಲ್ಲಿದೆ ಪಿಚ್‌ ರಿಪೋರ್ಟ್‌

2. ರಾಹುಲ್ ಚಹಾರ್

ಈ ಪಟ್ಟಿಯಲ್ಲಿ ಎರಡನೇ ಹೆಸರು ಸ್ಟಾರ್ ಸ್ಪಿನ್ ಬೌಲರ್ ರಾಹುಲ್ ಚಹಾರ್. ಚಹಾರ್ ಯಾವಾಗಲೂ ಮುಂಬೈ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದರು. ಆದರೆ ತಂಡವು ಈ ರೀತಿ ಹರಾಜಿನಲ್ಲಿ ಮುಂಬೈ ತನ್ನನ್ನು ಬಿಟ್ಟು ಪಂಜಾಬ್ ಕಡೆಗೆ ಹೋಗಲು ಅವಕಾಶ ಮಾಡಿಕೊಟ್ಟಿತು. ಚಹರ್ ಈಗ ಪಂಜಾಬ್ ಪರ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಹಾಗೆ, ಮುಂಬೈ ತಂಡದಲ್ಲಿ ಒಬ್ಬ ಅನುಭವಿ ಮತ್ತು ಉತ್ತಮ ಸ್ಪಿನ್ ಬೌಲರ್ ಇಲ್ಲ. ತಂಡದಲ್ಲಿ ರಾಹುಲ್ ಚಹಾರ್ ಕೊರತೆಯನ್ನು ರೋಹಿತ್ ಅನುಭವಿಸಿದ್ದಾರೆ. 

3. ಟ್ರೆಂಟ್ ಬೌಲ್ಟ್

ಈ ಪಟ್ಟಿಯಲ್ಲಿ ಮೂರನೇ ಆಟಗಾರ ವೇಗದ ಬೌಲರ್ ಟ್ರೆಂಟ್ ಬೌಲ್ಟ್. ಮುಂಬೈ ಇತರೆ ಆಟಗಾರರಿಗಿಂತ ಬೋಲ್ಟ್ ಅನ್ನು ಹೆಚ್ಚಾಗಿ ಮಿಸ್ ಮಾಡಿಕೊಳ್ಳುತ್ತಿದೆ. ಜಸ್ಪ್ರೀತ್ ಬುಮ್ರಾ ಅವರಂತಹ ಅನುಭವಿ ಬೌಲರ್ ಮುಂಬೈ ಪರ ಒಂದೇ ಒಂದು ಪಂದ್ಯವನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಕಳೆದ ಸೀಸನ್ ವರೆಗೆ, ಬೋಲ್ಟ್ ಮತ್ತು ಬುಮ್ರಾ ವಿಶ್ವದ ಎಲ್ಲ ಬ್ಯಾಟ್ಸ್‌ಮನ್‌ಗಳನ್ನು ಬೆರಗುಗೊಳಿಸಿದ್ದರು. ಬೋಲ್ಟ್ ಈಗ ರಾಜಸ್ಥಾನ್ ರಾಯಲ್ಸ್ ಪರ ಭರ್ಜರಿಯಾಗಿ ಮಿಂಚುತ್ತಿದ್ದಾರೆ. ಹಾಗೆ, ಬುಮ್ರಾ ಹೊರತುಪಡಿಸಿ, ಮುಂಬೈನಲ್ಲಿ ಒಬ್ಬ ಉತ್ತಮ ವೇಗದ ಬೌಲರ್ ಇಲ್ಲ.

ಇದನ್ನೂ ಓದಿ : 49ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್: ‘ಗಾಡ್ ಆಫ್ ಕ್ರಿಕೆಟ್’ಗೆ ಶುಭಾಶಯಗಳ ಮಹಾಪೂರ

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News