49ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್: ‘ಗಾಡ್ ಆಫ್ ಕ್ರಿಕೆಟ್’ಗೆ ಶುಭಾಶಯಗಳ ಮಹಾಪೂರ

ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 49ನೇ ಜನ್ಮದಿನಕ್ಕೆ ಕಾಲಿರಿಸಿದ್ದಾರೆ. ವಿಶ್ವಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ಅವರ ಹುಟ್ಟುಹಬ್ಬಕ್ಕೆ ಕೋಟ್ಯಂತರ ಅಭಿಮಾನಿಗಳು ಶುಭ ಕೋರಿದ್ದಾರೆ.

Written by - Puttaraj K Alur | Last Updated : Apr 24, 2022, 07:56 AM IST
  • ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ 49ನೇ ವಸಂತಕ್ಕೆ ಕಾಲಿರಿಸಿದ್ದಾರೆ
  • ವಿಶ್ವಕ್ರಿಕೆಟ್ ಕಂಡ ಸಾರ್ವಕಾಲಿಕ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ಹಲವು ದಾಖಲೆ ನಿರ್ಮಿಸಿದ್ದಾರೆ
  • ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಸಚಿನ್ ಗೆ ಶುಭಾಶಯಗಳ ಮಾಹಾಪೂರವೇ ಹರಿದುಬಂದಿದೆ
49ನೇ ವಸಂತಕ್ಕೆ ಕಾಲಿಟ್ಟ ಸಚಿನ್ ತೆಂಡೂಲ್ಕರ್: ‘ಗಾಡ್ ಆಫ್ ಕ್ರಿಕೆಟ್’ಗೆ ಶುಭಾಶಯಗಳ ಮಹಾಪೂರ  title=
ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಹುಟ್ಟುಹಬ್ಬ

ಮುಂಬೈ: ಭಾರತ ರತ್ನ ಗೌರವ ಪಡೆದ ಏಕೈಕ ಕ್ರೀಡಾಪಟು ಸಚಿನ್ ತೆಂಡೂಲ್ಕರ್ ಭಾನುವಾರ 49ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಮಾಸ್ಟರ್ ಬ್ಲಾಸ್ಟರ್ ಖ್ಯಾತಿಯ ಸಚಿನ್ ಅವರಿಗೆ  ಗಾಡ್ ಆಫ್ ಕ್ರಿಕೆಟ್, ಕ್ರಿಕೆಟ್ ದಂತಕಥೆ, ವಾಮನಮೂರ್ತಿ, ಕ್ರಿಕೆಟ್ ಸವ್ಯಸಾಚಿ, ದಾಖಲೆಗಳ ಸರದಾರ ಇನ್ನು ಹಲವಾರು ಬಿರುದುಗಳಿವೆ. ಭಾರತದಲ್ಲಿ ಕ್ರಿಕೆಟ್ ಒಂದು ಧರ್ಮವಾದರೆ, ಸಚಿನ್ ಅದಕ್ಕೆ ದೇವರು ಅನ್ನೋ ಮಾತಿದೆ.  

ತಮ್ಮ 24 ವರ್ಷಗಳ ಕ್ರಿಕೆಟ್ ವೃತ್ತಿಜೀವನದಲ್ಲಿ ಸಚಿನ್ ಅವರು ಹಲವಾರು ಅವಿಸ್ಮರಣೀಯ ಸನ್ನಿವೇಷಗಳಿಗೆ ಸಾಕ್ಷಿಯಾಗಿದ್ದಾರೆ. ಜೊತಗೆ ಅಪರೂಪದ ದಾಖಲೆಗಳನ್ನು ತಮ್ಮ ಹೆಸರಿನಲ್ಲಿ ಬರೆಸಿಕೊಂಡಿದ್ದಾರೆ. ಸಚಿನ್ ತೆಂಡುಲ್ಕರ್ ಹುಟ್ಟುಹಬ್ಬಕ್ಕೆ ಮುಂಬೈ ಇಂಡಿಯನ್ಸ್ ವಿನೂತನವಾಗಿ ಶುಭಕೋರಿದೆ. ಭಾರತೀಯ ಕ್ರಿಕೆಟಿಗರು, ವಿಶ್ವದ ಕ್ರಿಕೆಟ್ ದಿಗ್ಗಜರು, ಕ್ರೀಡಾ ವಿಶ್ಲೇಷಕರು ಬಹುಮುಖ್ಯವಾಗಿ ಕೋಟ್ಯಂತರ ಅಭಿಮಾನಿಗಳು ಸಚಿನ್ ಹುಟ್ಟುಹಬ್ಬಕ್ಕೆ ಶುಭ ಕೋರಿದ್ದಾರೆ.

ಇದನ್ನೂ ಓದಿ: IPL 2022 : ಹಳ್ಳಿಯಿಂದ ಬಂದ ಈ ಆಟಗಾರ ಈಗ 'ಸಿಎಸ್‌ಕೆ ತಂಡ'ದ ಸ್ಪೋಟಕ ಬೌಲರ್! 

ಸಚಿನ್ ತೆಂಡೂಲ್ಕರ್ 1989ರಲ್ಲಿ ಪಾಕಿಸ್ತಾನ ವಿರುದ್ಧ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅಂದು ಸಚಿನ್‍ಗೆ ಕೇವಲ 16 ವರ್ಷ ಮಾತ್ರ. ಮುಂದೊಂದು ದಿನ ಆತ ಇಡೀ ಕ್ರಿಕೆಟ್ ಜಗತ್ತನ್ನೇ ಆಳುತ್ತಾನೆಂದು ಬಹುಶಃ ಯಾರೂ ಊಹಿಸಿರಲಿಕ್ಕೆ ಸಾಧ್ಯವಿಲ್ಲ. 2013ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‍ಗೆ  ಸಚಿನ್ ವಿದಾಯ ಹೇಳಿದಾಗ ಬರೋಬ್ಬರಿ 34,357 ರನ್‌ ಗಳಿಸಿದ್ದರು. ಅವರು ತಮ್ಮ ಹೆಸರಿನಲ್ಲಿ ಯಾರೂ ಅಳಿಸಲಾಗದ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.

ದಾಖಲೆಗಳ ಸರದಾರ ಸಚಿನ್ ತೆಂಡೂಲ್ಕರ್

ಏಕದಿನ ಕ್ರಿಕೆಟ್‌ನಲ್ಲಿ ದ್ವಿಶತಕ ಬಾರಿಸಿದ ಮೊದಲ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಿರುವ ಸಚಿನ್ ತೆಂಡೂಲ್ಕರ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ. ಟೆಸ್ಟ್‍ನಲ್ಲಿ 200 ಪಂದ್ಯಗಳನ್ನಾಡಿರುವ ಸಚಿನ್ 53.78ರ ಸರಾಸರಿಯಲ್ಲಿ 15,921 ರನ್ ಗಳಿಸಿದ್ದಾರೆ. ಇದರಲ್ಲಿ 51 ಶತಕ ಮತ್ತು 68 ಅರ್ಧಶತಗಳು ಸೇರಿವೆ. ಅದರಂತೆ 463 ಏಕದಿನ ಪಂದ್ಯಗಳನ್ನಾಡಿರುವ ಸಚಿನ್ 44.83ರ ಸರಾಸರಿಯಲ್ಲಿ 18,426 ರನ್ ಗಳಿಸಿದ್ದಾರೆ. ಇದರಲ್ಲಿ 49 ಶತಕ ಹಾಗೂ 96 ಅರ್ಧಶತಕಗಳು ಸೇರಿವೆ.

ಇದನ್ನೂ ಓದಿ: ನೋ ಬಾಲ್ ವಿವಾದ: ಅಂಪೈರ್ ವಿರುದ್ಧ ರಿಷಭ್ ಪಂತ್ ಅಸಮಾಧಾನ, ವಿಡಿಯೋ ವೈರಲ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News