Arjun Tendulkar: ಮೊದಲು ಮೂಗಿನೊಳಗೆ ಬೆರಳಿಟ್ಟ… ಆಮೇಲೆ ಬಾಯಿಗೆ ಹಾಕಿದ! ಅರ್ಜುನ್ ತೆಂಡೂಲ್ಕರ್ ಅಸಹ್ಯ ವಿಡಿಯೋ ವೈರಲ್

Arjun Tendulkar Nasty Video Viral: ಅರ್ಜುನ್ ತೆಂಡೂಲ್ಕರ್ ಅವರು ಮೊದಲು ಮೂಗಿಗೆ ಬೆರಳು ಹಾಕಿ, ಆಮೇಲೆ ಬಾಯಿಯೊಳಗೆ ಇಟ್ಟುಕೊಳ್ಳುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ

Written by - Bhavishya Shetty | Last Updated : Apr 29, 2023, 02:11 PM IST
    • ಅರ್ಜುನ್ ತೆಂಡೂಲ್ಕರ್ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ
    • ಮೊದಲು ಮೂಗಿಗೆ ಬೆರಳು ಹಾಕಿ, ಆಮೇಲೆ ಬಾಯಿಯೊಳಗೆ ಇಟ್ಟುಕೊಳ್ಳುವ ವಿಡಿಯೋ
    • ಮೊದಲು ಮೂಗಿಗೆ ಬೆರಳು ಹಾಕಿ, ಆಮೇಲೆ ಬಾಯಿಯೊಳಗೆ ಇಟ್ಟುಕೊಳ್ಳುವ ವಿಡಿಯೋ
Arjun Tendulkar: ಮೊದಲು ಮೂಗಿನೊಳಗೆ ಬೆರಳಿಟ್ಟ… ಆಮೇಲೆ ಬಾಯಿಗೆ ಹಾಕಿದ! ಅರ್ಜುನ್ ತೆಂಡೂಲ್ಕರ್ ಅಸಹ್ಯ ವಿಡಿಯೋ ವೈರಲ್ title=
Arjun Tendulkar

Arjun Tendulkar Nasty Video Viral: ಕ್ರಿಕೆಟ್ ಲೆಜೆಂಡ್ ಸಚಿನ್ ತೆಂಡೂಲ್ಕರ್ ಅವರ ಮಗ ಅರ್ಜುನ್ ತೆಂಡೂಲ್ಕರ್ ಅವರು IPL 2023 ರಲ್ಲಿ ಮುಂಬೈ ಇಂಡಿಯನ್ಸ್‌ಪರ ತಮ್ಮ ಚೊಚ್ಚಲ ಪ್ರವೇಶವನ್ನು ಮಾಡಿ, ಆಟವಾಡುತ್ತಿದ್ದಾರೆ. ಇತ್ತೀಚೆಗೆಯಷ್ಟೇ ಅವರು ಮಾಡಿದ್ದ ಬೌಲಿಂಗ್ ಮತ್ತು ಬಾರಿಸಿದ ಸಿಕ್ಸ್ ಭಾರೀ ಸದ್ದು ಮಾಡಿತ್ತು. ಆದರೆ ಇದೀಗ ಅವರ ವಿಡಿಯೋ ಒಂದು ವೈರಲ್ ಆಗಿದ್ದು, ನೋಡುಗರಿಗೆ ಕೊಂಚ ಅಸಹ್ಯ ಮೂಡಿಸಿದೆ.

ಇದನ್ನೂ ಓದಿ: IPL ಮಧ್ಯೆಯೇ ಈ ಆಟಗಾರನಿಗೆ ಗಂಭೀರ ಗಾಯ! ಟೂರ್ನಿಯಿಂದಲೇ ಹೊರಬೀಳುವ ಸಾಧ್ಯತೆ

ಅರ್ಜುನ್ ತೆಂಡೂಲ್ಕರ್ ಅವರು ಮೊದಲು ಮೂಗಿಗೆ ಬೆರಳು ಹಾಕಿ, ಆಮೇಲೆ ಬಾಯಿಯೊಳಗೆ ಇಟ್ಟುಕೊಳ್ಳುವ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಅಹಮದಾಬಾದ್‌ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಮುಂಬೈ ಇಂಡಿಯನ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದ ವೇಳೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.

 

ವಿಡಿಯೋದಲ್ಲಿರುವ ದೃಶ್ಯವನ್ನು ಕಂಡು ಅಭಿಮಾನಿಗಳು ದಿಗ್ಭ್ರಮೆಗೊಂಡಿದ್ದಾರೆ.  ಇನ್ನು ವಿಡಿಯೋಗೆ ಸಾಕಷ್ಟು ಕಮೆಂಟ್ ಗಳು ಬಂದಿವೆ.

ಬಾನೆತ್ತರ ಸಿಕ್ಸ್ ಬಾರಿಸಿದ ಅರ್ಜುನ್:

ಭಾರತದ ಶ್ರೇಷ್ಠ ಬ್ಯಾಟ್ಸ್‌ಮನ್ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಗುಜರಾತ್ ಟೈಟಾನ್ಸ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ಅಪಾಯಕಾರಿ ವೇಗದ ಬೌಲರ್ ಮೋಹಿತ್ ಶರ್ಮಾ ಅವರ ಒಂದು ಎಸೆತದಲ್ಲಿ ಆಕಾಶದ ಎತ್ತರಕ್ಕೆ ಸಿಕ್ಸರ್ ಬಾರಿಸಿದ್ದಾರೆ. ಅರ್ಜುನ್ ತೆಂಡೂಲ್ಕರ್ ತಮ್ಮ ಐಪಿಎಲ್ ವೃತ್ತಿಜೀವನದಲ್ಲಿ ಮೊದಲ ಬಾರಿಗೆ ಬ್ಯಾಟಿಂಗ್ ಮಾಡುವ ಅವಕಾಶವನ್ನು ಪಡೆದಿದ್ದು ಅದೇ ಪಂದ್ಯದಲ್ಲಿ. ಆ ಅವಕಾಶವನ್ನು ಸದುಪಯೋಗಪಡಿಸಿಕೊಂಡ ಅವರು ಪ್ರಚಂಡ ಸಿಕ್ಸರ್ ಬಾರಿಸಿದ್ದರು. ಇದಕ್ಕೆ ಸಂಬಂಧಿಸಿದ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಸಖತ್ ವೈರಲ್ ಆಗುತ್ತಿದೆ.

ಇದನ್ನೂ ಓದಿ: 18 ಕೋಟಿಗೆ ಖರೀದಿಸಿದ IPL ಸ್ಟಾರ್ ಆಟಗಾರನ ಗೆಳತಿಯ ಬಿಕಿನಿ ಹಾಟ್ ಫೋಟೋಸ್: ಮೋಡಿ ಮಾಡುತ್ತಿದೆ ನೋಡಿ…

ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್‌’ನಲ್ಲಿ, ಮುಂಬೈ ಇಂಡಿಯನ್ಸ್ ಆಲ್‌’ರೌಂಡರ್ ಅರ್ಜುನ್ ತೆಂಡೂಲ್ಕರ್ ಕ್ರೀಸ್‌’ನಲ್ಲಿದ್ದರು. ವೇಗದ ಬೌಲರ್ ಮೋಹಿತ್ ಶರ್ಮಾ ಬೌಲಿಂಗ್ ಮಾಡಲು ಬಂದರು. ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಕೊನೆಯ ಓವರ್‌’ನಲ್ಲಿ ಮೋಹಿತ್ ಶರ್ಮಾ ಮೊದಲ ಎಸೆತವನ್ನು ಎಸೆದ ತಕ್ಷಣ ಅರ್ಜುನ್ ತೆಂಡೂಲ್ಕರ್ ಆಕಾಶದ ಎತ್ತರಕ್ಕೆ ಸಿಕ್ಸರ್ ಬಾರಿಸಿದರು. ಅರ್ಜುನ್ ತೆಂಡೂಲ್ಕರ್ ಅವರ ಸಿಕ್ಸರ್ ನೋಡಿ ಮೋಹಿತ್ ಶರ್ಮಾ ಶಾಕ್ ಆಗಿದ್ದಾರೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಆಧ್ಯಾತ್ಮ, ಜೀವನಶೈಲಿ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News