5 ಬಾರಿ IPL ಕಪ್‌ ಗೆದ್ದ ಮುಂಬೈ ಇಂಡಿಯನ್ಸ್‌ ಸತತ ಸೋಲಿಗೆ ಕಾರಣವೇನು..?

ಕಳೆದ 14 ಸೀಸನ್‌ಗಳಿಂದ ಉತ್ತಮ ಲಯದಲ್ಲಿದ್ದ ತಂಡ 15ನೇ ಆವೃತ್ತಿಯಲ್ಲಿ ಹೀಗೆ ಮಕಾಡೆ ಮಲಗಲು ಕಾರಣವೇನು ಅಂತ ಹುಡುಕಿದ್ರೆ, ಸಿಗೋದು ಆತಂರಿಕ ಕಲಹ. ಹೌದು, ತಂಡದ ಡ್ರೆಸ್ಸಿಂಗ್‌ ರೂಂನಲ್ಲಿ ಕೆಲ ಆಟಗಾರರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿದ್ದು, ಸಾಂಘಿಕ ಪ್ರದರ್ಶನದ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ ಎನ್ನಲಾಗಿದೆ. ಇನ್ನು ರೋಹಿತ್‌, ಪೋಲಾರ್ಡ್‌ ಮೇಲೆ ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚಿದ ಒತ್ತಡ ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ. 

Edited by - Bhavishya Shetty | Last Updated : May 10, 2022, 04:54 PM IST
  • ಐಪಿಎಲ್‌ನಲ್ಲಿ ಕಳಪೆ ಫಾರ್ಮ್‌ನಲ್ಲಿರುವ ಮುಂಬೈ ಇಂಡಿಯನ್ಸ್‌
  • ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ
  • ಸತತ ಸೋಲು ಅನುಭವಿಸಲು ಕಾರಣ ಏನು ಗೊತ್ತಾ?
5 ಬಾರಿ IPL ಕಪ್‌ ಗೆದ್ದ ಮುಂಬೈ ಇಂಡಿಯನ್ಸ್‌ ಸತತ ಸೋಲಿಗೆ ಕಾರಣವೇನು..? title=
Indian Premier League

2022ರ IPLನಲ್ಲಿ ಮುಂಬೈ ಇಂಡಿಯನ್ಸ್‌ ತಂಡದ ಸೋಲು ಸಾಕಷ್ಟು ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ. ತಂಡದ ಯಾವೊಬ್ಬ ಆಟಗಾರ ತಂಡದ ಗೆಲುವಿಗೆ ತನ್ನ ಕೊಡುಗೆ ನೀಡುತ್ತಿಲ್ಲ. ಇಂತಹ ಬಲಾಢ್ಯ ತಂಡ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಅಲಂಕರಿಸಿದೆ. 

ಮುಂಬೈ ಇಂಡಿಯನ್ಸ್‌ 5 ಬಾರಿ IPL ಕಪ್‌ ಗೆದ್ದ ಬಲಾಢ್ಯ ತಂಡ. ಈ ತಂಡ ಮೈದಾನಕ್ಕೆ ಇಳಿದರೆ ಸಾಕು ಎದುರಾಳಿಯಲ್ಲಿ ನಡುಕ ಹುಟ್ಟುತ್ತಿತ್ತು. ಆರಂಭಿಕ ಆಟಗಾರರಿಂದ ಹಿಡಿದು 11ನೇ ಸ್ಥಾನದ ಆಟಗಾರ ಕೂಡ ತಂಡಕ್ಕೆ ತನ್ನದೇ ಆದ ಕೊಡುಗೆ ನೀಡಬಲ್ಲ ಆಟಗಾರರಿದ್ರು. ಆದ್ರೆ ಈ ಸಲ ಗಲ್ಲಿ ಕ್ರಿಕೆಟ್‌ ತಂಡಕ್ಕಿಂತಲೂ ಕಳಪೆ ಪ್ರದರ್ಶನ ನೀಡಿ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ ಮುಂಬೈ ಇಂಡಿಯನ್ಸ್‌ ತಂಡ.

ಇದನ್ನು ಓದಿ: LSG vs GT: ಬಲಿಷ್ಠ ಗುಜರಾತ್‌ಗೆ ಲಕ್ನೋ ಸವಾಲು: ಇಲ್ಲಿದೆ ಇಂದಿನ ಸಂಭಾವ್ಯ ಆಟಗಾರರ ಪಟ್ಟಿ

ಮುಂಬೈ ತಂಡಕ್ಕೆ ರೋಹಿತ್‌ ಶರ್ಮಾ ಬಿಗ್‌ ಬ್ಯಾಟ್ಸ್‌ಮನ್‌ ನಾಯಕ. ಟಿ-20ಯಲ್ಲಿ ಬೆಂಕಿ ಬ್ಯಾಟ್ಸ್‌ಮನ್‌ ಎನಿಸಿಕೊಂಡಿರುವ ಪೋಲಾರ್ಡ್‌ ಕೂಡ ಇದೇ ತಂಡದಲ್ಲಿದ್ದಾರೆ. ವಿಶ್ವದ ನಂ.1 ಬೌಲರ್‌ ಎನಿಸಿಕೊಂಡಿರುವ ಬೂಮ್ರಾ ಕೂಡ ಇರೋದು ಇದೇ ತಂಡದಲ್ಲಿ. ಭಾರತ ತಂಡದ ಯುವ ಪ್ರತಿಭೆಗಳು ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಉತ್ತಮ ತಂಡವಾಗಿದ್ರೂ ಕೂಡ ಗೆಲುವು ಮಾತ್ರ ಮರೆಯಾಗಿದೆ. ಇದು ಮುಂಬೈ ಅಭಿಮಾನಿಗಳಿಗೆ ನಿರಾಸೆ ತರಿಸಿದೆ. ಸೋಲಿನ ಮೇಲೆ ಸೋಲು ತಂಡದ ಆಟಗಾರರ ಆತ್ಮವಿಶ್ವಾಸ ಕಡಿಮೆ ಮಾಡಿದೆ. ಪ್ರತಿಯೊಬ್ಬ ಆಟಗಾರರು ಕೂಡ ಪಂದ್ಯವನ್ನ ಗೆಲ್ಲಿಸುವ ಪ್ರದರ್ಶನ ಮಾಡುವಲ್ಲಿ ವಿಫಲರಾಗಿದ್ದಾರೆ.

ಹಾಗಿದ್ರೆ ಸೋಲಿಗೆ ಕಾರಣವೇನು..? ಕಳೆದ 14 ಸೀಸನ್‌ಗಳಿಂದ ಉತ್ತಮ ಲಯದಲ್ಲಿದ್ದ ತಂಡ 15ನೇ ಆವೃತ್ತಿಯಲ್ಲಿ ಹೀಗೆ ಮಕಾಡೆ ಮಲಗಲು ಕಾರಣವೇನು ಅಂತ ಹುಡುಕಿದ್ರೆ, ಸಿಗೋದು ಆತಂರಿಕ ಕಲಹ. ಹೌದು, ತಂಡದ ಡ್ರೆಸ್ಸಿಂಗ್‌ ರೂಂನಲ್ಲಿ ಕೆಲ ಆಟಗಾರರ ನಡುವೆ ಭಿನ್ನಾಭಿಪ್ರಾಯಗಳು ಹುಟ್ಟಿದ್ದು, ಸಾಂಘಿಕ ಪ್ರದರ್ಶನದ ಮೇಲೆ ಹೆಚ್ಚು ಪರಿಣಾಮ ಬಿದ್ದಿದೆ ಎನ್ನಲಾಗಿದೆ. ಇನ್ನು ರೋಹಿತ್‌, ಪೋಲಾರ್ಡ್‌ ಮೇಲೆ ಬ್ಯಾಟಿಂಗ್‌ ವಿಭಾಗದಲ್ಲಿ ಹೆಚ್ಚಿದ ಒತ್ತಡ ಕೂಡ ತಂಡದ ಹಿನ್ನಡೆಗೆ ಕಾರಣವಾಗಿದೆ. ಆದ್ರೆ ಈ ಇಬ್ಬರು ಆಟಗಾರರು ಈ ಬಾರಿಯ IPLನಲ್ಲಿ ನಿರೀಕ್ಷಿತ ಆಟ ಪ್ರದರ್ಶನ ಮಾಡುವಲ್ಲಿ ವಿಫಲರಾಗಿದ್ದಾರೆ. ಜೊತೆಗೆ ಬೌಲಿಂಗ್‌ನಲ್ಲಿ ಲಯ ಕಂಡುಕೊಳ್ಳದ ಬೂಮ್ರಾ ಕೂಡ ವಿಕೆಟ್‌ ಪಡೆಯಲು ಸಾಧ್ಯವಾಗಲಿಲ್ಲ ಹಾಗೂ ಹೆಚ್ಚಿನ ರನ್‌ ಕೂಡ ಬಿಟ್ಟುಕೊಟ್ಟಿದ್ದು ತಂಡಕ್ಕೆ ಸಾಕಷ್ಟು ಪರಿಣಾಮ ಬೀರಿತು.

ವಿದೇಶಿ ಆಟಗಾರರ ಆಯ್ಕೆಯಲ್ಲಿ ತಪ್ಪಿದ ಲಯ: 
ಈ ಬಾರಿ ಮುಂಬೈ ತಂಡಕ್ಕೆ ಆಯ್ಕೆ ಆಗಿದ್ದ ಯಾವೊಬ್ಬ ವಿದೇಶಿ ಆಟಗಾರ ಕೂಡ ಬಿಗ್‌ ಸ್ಕೋರ್‌ ಮಾಡಿಲ್ಲ. ಜೊತೆಗೆ ಬೌಲರ್‌ಗಳು ಕೂಡ ಮಿಂಚಿಲ್ಲ. ಇದು ತಂಡಕ್ಕೆ ಹೊಡೆತ ನೀಡಿದೆ. ಅದರಲ್ಲೂ ಪೋಲಾರ್ಡ್‌ರಂತಹ ಬಲಾಡ್ಯ ಆಟಗಾರ ಒಂದು ಪಂದ್ಯದಲ್ಲೂ ಕೂಡ ನಿರೀಕ್ಷಿತ ಪ್ರದರ್ಶನ ನೀಡದೆ ಇರೋದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಉಳಿದ ವಿದೇಶಿ ಆಟಗಾರರು ಒಂದು ಪಂದ್ಯದಲ್ಲಿ ಚನ್ನಾಗಿ ಆಡಿದ್ರೆ, ಮುಂದಿನ 3 ಪಂದ್ಯಗಳಲ್ಲಿ ವಿಫಲರಾಗಿದ್ದಾರೆ. ಇದು ಕೂಡ ತಂಡದ ಸೋಲಿಗೆ ಕಾರಣವಾಗಿದೆ.

ಮಕಾಡೆ ಮಲಗಿದ ಆರಂಭಿಕ ಆಟಗಾರರ ಆಟ: 
ಪ್ರತಿ ಬಾರಿ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿಯುತ್ತಿದ್ದ ರೋಹಿತ್‌ ಶರ್ಮಾ ಈ ಸಲ ರನ್‌ ಗಳಿಸಲು ತಿಣುಕಾಡಿದ್ರು. ಕೇವಲ 1 ಪಂದ್ಯದಲ್ಲಿ ಮಾತ್ರ 50 ರನ್‌ಗಳ ಜೊತೆಯಾಟ ಬಿಟ್ರೆ ಯಾವುದೇ ಪಂದ್ಯದಲ್ಲೂ ಇಶಾನ್‌ ಕಿಶನ್‌ ಹಾಗೂ ರೋಹಿತ್‌ ಶರ್ಮಾ ಬಿಗ್‌ ಸ್ಕೋರ್‌ ಜೊತೆಯಾಟ ನೀಡುವಲ್ಲಿ ವಿಫಲರಾದ್ರು. ಜೊತೆಗೆ ಈ ಬಾರಿ ರೋಹಿತ್‌ ಶರ್ಮಾ ಕ್ರಿಕೆಟ್‌ ಆಟವನ್ನೇ ಮರೆತಿರುವ ಹಾಗೆ ಆಟ ಆಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿದೆ. ಮೊದಲ ಪಂದ್ಯದಲ್ಲಿ ಅರ್ಧ ಶತಕ ಸಿಡಿಸಿ ಭರವಸೆ ಮೂಡಿಸಿದ್ದ ಇಶಾನ್‌ ಕಿಶನ್‌ ಮುಂದಿನ ಪಂದ್ಯಗಳಲ್ಲಿ ರನ್‌ ಗಳಿಸಿಲು ತಿಣುಕಾಡಿದ್ರು.

ಇದನ್ನು ಓದಿ: MS Dhoni : ಟಿ20 ಕ್ರಿಕೆಟ್‌ನಲ್ಲಿ ವಿಶಿಷ್ಟ ದ್ವಿಶತಕ ಸಾಧನೆ ಮಾಡಿದ ಎಂಎಸ್ ಧೋನಿ! 

ಸಮರ್ಪಕ ಬೌಲಿಂಗ್‌ ದಾಳಿ ನಡೆಸುವಲ್ಲಿ ವಿಫಲ: 
ತಂಡದಲ್ಲಿ ವಿಶ್ವದ ನಂ.1 ಬೌಲರ್‌ ಇದ್ರೂ ಕೂಡ ಮುಂಬೈ ಇಂಡಿಯನ್ಸ್‌ ಈ ಬಾರಿ ಬೌಲಿಂಗ್‌ ವಿಭಾಗದಲ್ಲಿ ಸಂಪೂರ್ಣ ವಿಫಲತೆ ಕಂಡಿದೆ. ಬೂಮ್ರಾ ಕೂಡ ಒಂದು ಪಂದ್ಯವನ್ನ ಹೊರತುಪಡಿಸಿದ್ರೆ ಯಾವುದೇ ಪಂದ್ಯದಲ್ಲಿ ರನ್‌ ಕಡಿವಾಣ ಹಾಕಲಿಲ್ಲ. ವಿಕೆಟ್‌ ಕೂಡ ಕಬಳಿಸಲಿಲ್ಲ. ಜೊತೆಗೆ ತಂಡದಲ್ಲಿ ಪ್ರಮುಖ ಸ್ಪಿನ್ನರ್‌ ಕೊರತೆ ಎದ್ದು ಕಾಣುತ್ತಿತ್ತು. ಎಂ.ಅಶ್ವಿನ್‌ ಕಡೆಯಿಂದ ಹೇಳಿಕೊಳ್ಳುವ ಪ್ರದರ್ಶನ ಮೂಡಿಬರಲಿಲ್ಲ. ಜೊತೆಗೆ ಪೋಲಾರ್ಡ್‌, ಸ್ಯಾಮ್ಸ್‌ ಕೂಡ ಆಟಕ್ಕುಂಟು ಲೆಕ್ಕಕಿಲ್ಲ ಎನ್ನುವ ರೀತಿ ಬೌಲಿಂಗ್‌ ಮಾಡಿದ್ದು ತಂಡಕ್ಕೆ ಹೊಡೆತ ನೀಡಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News