ಮುಂಬೈ: ಹಿರಿಯ ಸಂತೂರ್ ವಾದಕ ಮತ್ತು ಸಂಗೀತ ಸಂಯೋಜಕ ಪಂಡಿತ್ ಶಿವ ಕುಮಾರ್ ಶರ್ಮಾ ಅವರು ಹೃದಯಾಘಾತದಿಂದ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಭಾರತದ ಅತ್ಯಂತ ಪ್ರಸಿದ್ಧ ಶಾಸ್ತ್ರೀಯ ಸಂಗೀತಗಾರರಲ್ಲಿ ಒಬ್ಬರಾದ ಶರ್ಮಾ ಅವರು ಮುಂದಿನ ವಾರ ಭೋಪಾಲ್‌ನಲ್ಲಿ ಕಾರ್ಯಕ್ರಮ ನೀಡಲಿದ್ದರು.
ಇದನ್ನು ಓದಿ: ಒಂದು ದೇಶ-ಹಲವಾರು ರುಚಿಕರ ಖಾದ್ಯ: ಭಾರತದ ಪ್ರಮುಖ ಆಹಾರ ಪದ್ಧತಿ ಬಗ್ಗೆ ಇಲ್ಲಿದೆ ಮಾಹಿತಿ
ಇವರು ಮೂತ್ರಪಿಂಡದ ಕಾಯಿಲೆಯಿಂದ ಬಳಲುತ್ತಿದ್ದರು ಎಂದು ತಿಳಿದುಬಂದಿದೆ. "ಈ ಮೊದಲು ಅವರು ಚೆನ್ನಾಗಿದ್ದರು. ಮುಂದಿನ ವಾರ ಭೋಪಾಲ್‌ನಲ್ಲಿ ಪ್ರದರ್ಶನ ನೀಡಬೇಕಿತ್ತು. ಆದರೆ ಇಂದು ಬೆಳಿಗ್ಗೆ 9 ಗಂಟೆಗೆ ತೀವ್ರ ಹೃದಯಾಘಾತವಾಗಿದೆ" ಎಂದು ಕುಟುಂಬದ ಮೂಲವು ಮಾಹಿತಿ ನೀಡಿದೆ.
ಪದ್ಮವಿಭೂಷಣ ಪುರಸ್ಕೃತರಾದ ಶರ್ಮಾ ಅವರು 1938 ರಲ್ಲಿ ಜಮ್ಮುವಿನಲ್ಲಿ ಜನಿಸಿದರು. ಜಮ್ಮು ಮತ್ತು ಕಾಶ್ಮೀರದ ಜಾನಪದ ವಾದ್ಯವಾದ ಸಂತೂರ್‌ನಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ನುಡಿಸಿದ ಮೊದಲ ಸಂಗೀತಗಾರ ಎಂಬ ಖ್ಯಾತಿಗೆ ಒಳಪಟ್ಟಿದ್ದಾರೆ.
ಇದನ್ನು ಓದಿ: ನಿಮ್ಮ ಫೆವರೆಟ್ ಶೋಗಳನ್ನು ಡಿಸ್ನಿ+ಹಾಟ್‌ಸ್ಟಾರ್‌ನಲ್ಲಿ ಉಚಿತವಾಗಿ ವೀಕ್ಷಿಸಿ!
ಪ್ರಧಾನಿ ಸಂತಾಪ:
ಪ್ರಧಾನಿ ನರೇಂದ್ರ ಮೋದಿಯವರು ಪಂಡಿತ್ ಶಿವ ಕುಮಾರ್ ಶರ್ಮಾ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. "ಪಂಡಿತ್ ಶಿವಕುಮಾರ್ ಶರ್ಮಾರವರ ನಿಧನದಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಅವರು ಜಾಗತಿಕ ಮಟ್ಟದಲ್ಲಿ ಸಂತೂರ್ ವಾದಕವನ್ನು ಜನಪ್ರಿಯಗೊಳಿಸಿದ್ದರು. ಅವರ ಸಂಗೀತ ಮುಂದಿನ ಪೀಳಿಗೆಯನ್ನು ಆಕರ್ಷಿಸುತ್ತಲೇ ಇರುತ್ತದೆ. ಅವರೊಂದಿಗಿನ ನನ್ನ ಸಂವಹನವನ್ನು ನಾನು ಪ್ರೀತಿಯಿಂದ ನೆನಪಿಸಿಕೊಳ್ಳುತ್ತೇನೆ. ಓಂ ಶಾಂತಿ" ಎಂದು ಹೇಳಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.