Team Indiaದ ಭವಿಷ್ಯದ ‘ಜಹೀರ್ ಖಾನ್’ 29 ವರ್ಷದ ಈ ಬೌಲರ್! ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಕಿಲಾಡಿ ಈತ

IND vs WI 4th T20, Mukesh Kumar: ಇನಿಂಗ್ಸ್‌’ನ 16ನೇ ಓವರ್‌’ಗೆ ಹಾರ್ದಿಕ್ ಪಾಂಡ್ಯ ಚೆಂಡನ್ನು ಪೇಸರ್ ಮುಖೇಶ್ ಕುಮಾರ್‌ಗೆ ನೀಡಿದರು. ಮುಖೇಶ್ ಈ ಓವರ್‌’ನಲ್ಲಿ ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಬೌಲ್ಡ್ ಮಾಡಿದರು.

Written by - Bhavishya Shetty | Last Updated : Aug 13, 2023, 08:38 AM IST
    • ಫ್ಲೋರಿಡಾದ ಲಾಡರ್‌ಹಿಲ್‌’ನಲ್ಲಿ ಸರಣಿಯ ನಾಲ್ಕನೇ ಟಿ 20 ಪಂದ್ಯವನ್ನು ಆಡಿ ಗೆದ್ದಿದೆ
    • ಈತನ ಆಟದ ವೈಖರಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ
    • ಕೆಲವರು ಈತನನ್ನು ಟೀಂ ಇಂಡಿಯಾದ ಮುಂದಿನ ಜಹೀರ್ ಖಾನ್ ಎಂದು ಹೇಳುತ್ತಿದ್ದಾರೆ
Team Indiaದ ಭವಿಷ್ಯದ ‘ಜಹೀರ್ ಖಾನ್’ 29 ವರ್ಷದ ಈ ಬೌಲರ್! ಪದಾರ್ಪಣೆ ಪಂದ್ಯದಲ್ಲೇ ಅಬ್ಬರಿಸಿದ ಕಿಲಾಡಿ ಈತ title=
Mukesh Kumar

IND vs WI 4th T20, Mukesh Kumar: ಭಾರತ ಕ್ರಿಕೆಟ್ ತಂಡವು ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ಫ್ಲೋರಿಡಾದ ಲಾಡರ್‌ಹಿಲ್‌’ನಲ್ಲಿ ಸರಣಿಯ ನಾಲ್ಕನೇ ಟಿ 20 ಪಂದ್ಯವನ್ನು ಆಡಿ ಗೆದ್ದಿದೆ. ಈ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ನಾಯಕ ರೋವ್ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದ್ದಾರೆ. ಈ ಮಧ್ಯೆ ಓರ್ವ ಬೌಲರ್, ತನ್ನ ಬೌಲಿಂಗ್‌ ನಿಂದ ಎಲ್ಲರನ್ನೂ ಆಕರ್ಷಿಸಿದ್ದು, ಈತನ ಆಟದ ವೈಖರಿಗೆ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಪ್ರಶಂಸೆ ವ್ಯಕ್ತವಾಗುತ್ತಿದೆ. ಕೆಲವರು ಈತನನ್ನು ಟೀಂ ಇಂಡಿಯಾದ ಮುಂದಿನ ಜಹೀರ್ ಖಾನ್ ಎಂದು ಹೇಳುತ್ತಿದ್ದಾರೆ.

ಇದನ್ನೂ ಓದಿ: 100 ವರ್ಷಗಳ ಬಳಿಕ ಈ ರಾಶಿಗೆ ಕುಬೇರ ಯೋಗ ತಂದ ಶನಿದೇವ: ದುಡ್ಡಿನ ಮಳೆ, ವರ್ಷಪೂರ್ತಿ ಅದೃಷ್ಟ-ಯಶಸ್ಸು

ಫ್ಲೋರಿಡಾದ (ಯುಎಸ್‌ಎ) ಲಾಡರ್‌’ಹಿಲ್‌’ನಲ್ಲಿ ನಡೆಯುತ್ತಿರುವ ಸರಣಿಯ ನಾಲ್ಕನೇ ಟಿ20 ಪಂದ್ಯದಲ್ಲಿ ವಿಂಡೀಸ್ ತಂಡದ ನಾಯಕ ರೋವ್‌ಮನ್ ಪೊವೆಲ್ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ವೆಸ್ಟ್ ಇಂಡೀಸ್ 20 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 178 ರನ್ ಗಳಿಸಿತು. ಶಿಮ್ರಾನ್ ಹೆಟ್ಮೆಯರ್ 39 ಎಸೆತಗಳಲ್ಲಿ 3 ಬೌಂಡರಿ ಮತ್ತು 4 ಸಿಕ್ಸರ್‌ಗಳ ನೆರವಿನಿಂದ 61 ರನ್ ಗಳಿಸಿದರು. ಇವರಲ್ಲದೆ ಶಾಯ್ ಹೋಪ್ 29 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ 45 ರನ್ ಸೇರಿಸಿದರು. ಭಾರತದ ಪರ ಅರ್ಷದೀಪ್ ಸಿಂಗ್ ಗರಿಷ್ಠ 3 ವಿಕೆಟ್ ಪಡೆದರೆ, ಕುಲ್ದೀಪ್ ಯಾದವ್ 2 ವಿಕೆಟ್ ಪಡೆದರು.

ಇನಿಂಗ್ಸ್‌’ನ 16ನೇ ಓವರ್‌’ಗೆ ಹಾರ್ದಿಕ್ ಪಾಂಡ್ಯ ಚೆಂಡನ್ನು ಪೇಸರ್ ಮುಖೇಶ್ ಕುಮಾರ್‌ಗೆ ನೀಡಿದರು. ಮುಖೇಶ್ ಈ ಓವರ್‌’ನಲ್ಲಿ ವೆಸ್ಟ್ ಇಂಡೀಸ್ ಸ್ಟಾರ್ ಆಲ್ ರೌಂಡರ್ ಜೇಸನ್ ಹೋಲ್ಡರ್ ಅವರನ್ನು ಬೌಲ್ಡ್ ಮಾಡಿದರು. ಮುಖೇಶ್ ಅವರ ಓವರ್‌’ನ ಮೂರನೇ ಎಸೆತದಲ್ಲಿ ಹೋಲ್ಡರ್ ಶಾಟ್ ಆಡಲು ಪ್ರಯತ್ನಿಸಿದರು, ಆದರೆ ಅದನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗದೆ ಬೌಲ್ಡ್ ಆದರು. 4 ಎಸೆತಗಳಲ್ಲಿ 3 ರನ್ ಗಳಿಸಿ ಪೆವಿಲಿಯನ್ ಗೆ ಮರಳಿದರು. ಈ ಬೌಲಿಂಗ್ ಸ್ಟೈಲ್’ಗೆ ಫಿದಾ ಆದ ಫ್ಯಾನ್ಸ್, ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಪ್ರಶಂಸಿಸಲಾಗುತ್ತಿದೆ.

ಭಾರತ ಪರ 200 ಏಕದಿನ, 92 ಟೆಸ್ಟ್ ಹಾಗೂ 17 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿರುವ ಜಹೀರ್ ಖಾನ್ ಎಡಗೈ ಮಧ್ಯಮ ವೇಗಿಯಾಗಿದ್ದರೂ, ಮುಖೇಶ್ ಬಲಗೈ ವೇಗದ ಬೌಲರ್. ಈ ಪಂದ್ಯದಲ್ಲಿ ಮುಖೇಶ್ 3 ಓವರ್ ಬೌಲ್ ಮಾಡಿ 25 ರನ್ ನೀಡಿ 1 ವಿಕೆಟ್ ಪಡೆದರು.

ಇದನ್ನೂ ಓದಿ: IND vs WI: 4ನೇ ಟಿ20ಯಲ್ಲಿ ಭಾರತಕ್ಕೆ ಗೆಲುವು: Team India ವಿಜಯಕ್ಕೆ ಈ ಮೂವರೇ ಪ್ರಮುಖ ಕಾರಣ!

ವಿಂಡೀಸ್ ಸರಣಿಯಿಂದ ಪಾದಾರ್ಪಣೆ:

29 ವರ್ಷದ ಮುಖೇಶ್ ಕುಮಾರ್ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಟೆಸ್ಟ್ ನಂತರ ODI ಮತ್ತು ನಂತರ T20 ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದಾರೆ. ತಮ್ಮ ಅಂತರಾಷ್ಟ್ರೀಯ ವೃತ್ತಿಜೀವನದ 8 ನೇ ಪಂದ್ಯವನ್ನು ಆಡುತ್ತಿದ್ದಾರೆ. ಈ ಹಿಂದೆ ಟೆಸ್ಟ್ ಪಂದ್ಯವೊಂದರಲ್ಲಿ 2 ವಿಕೆಟ್ ಹಾಗೂ 3 ಏಕದಿನ ಪಂದ್ಯಗಳಲ್ಲಿ 4 ವಿಕೆಟ್ ಪಡೆದಿದ್ದಾರೆ. ಈ ಪಂದ್ಯಕ್ಕೂ ಮುನ್ನ ಅವರು 3 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಕೇವಲ 2 ವಿಕೆಟ್‌’ಗಳನ್ನು ಪಡೆದಿದ್ದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News