ಟೀಂ ಇಂಡಿಯಾಗೆ ಸಿಕ್ಕಾಯ್ತು ಮತ್ತೊಬ್ಬ ಧೋನಿ!ಮೊದಲ ಎಸೆತಕ್ಕೇ ಸಿಕ್ಸರ್! ತಾಯಿಗೆ ಕೊಟ್ಟ ಮಾತಿನಂತೆ ಅಬ್ಬರಿಸಿದ CSK ಆಟಗಾರ

IPL 2024 :  ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಾಗಲೆಲ್ಲಾ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವುದಾಗಿ ಸಮೀರ್ ತಾಯಿಗೆ ಮಾತು ಕೊಟ್ಟಿದ್ದರಂತೆ. ತಾಯಿ ರುಖ್ಸಾನಾ ಅಖ್ತರ್ ಗೆ ನೀಡಿದ ಮಾತಿನಂತೆ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿದ್ದಾರೆ.

Written by - Ranjitha R K | Last Updated : Mar 27, 2024, 04:10 PM IST
  • ಪ್ರೇಕ್ಷಕರ ಮನ ಗೆದ್ದ ಆಟಗಾರ ಸಮೀರ್ ರಿಜ್ವಿ.
  • ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಅಚ್ಚರಿ
  • ನುಡಿದಂತೆ ನಡೆದ ಆಟಗಾರ
ಟೀಂ ಇಂಡಿಯಾಗೆ ಸಿಕ್ಕಾಯ್ತು ಮತ್ತೊಬ್ಬ ಧೋನಿ!ಮೊದಲ ಎಸೆತಕ್ಕೇ ಸಿಕ್ಸರ್! ತಾಯಿಗೆ ಕೊಟ್ಟ ಮಾತಿನಂತೆ ಅಬ್ಬರಿಸಿದ CSK ಆಟಗಾರ title=

IPL 2024 : ನಿನ್ನೆ ರಾತ್ರಿ ಚೆನ್ನೈನ ಎಂ.ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 6 ಎಸೆತಗಳಲ್ಲಿ 14 ರನ್ ಗಳಿಸಿ ಪ್ರೇಕ್ಷಕರ ಮನ ಗೆದ್ದ ಆಟಗಾರ ಸಮೀರ್ ರಿಜ್ವಿ. ಇವರು ಉತ್ತರ ಪ್ರದೇಶದ ಮೀರತ್‌ನ ಲಾಲ್ ಕುರ್ತಿ ನಿವಾಸಿ. ಚೆನ್ನೈ ಸೂಪರ್ ಕಿಂಗ್ಸ್ ಪರ 19ನೇ ಓವರ್ ನಲ್ಲಿ ಬ್ಯಾಟಿಂಗ್ ಗೆ ಬಂದ ರಿಜ್ವಿ ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿ ಅಚ್ಚರಿ ಮೂಡಿಸಿದ್ದಾರೆ.RCB ವಿರುದ್ಧದ ಮೊದಲ ಪಂದ್ಯದಲ್ಲಿ  ಪ್ಲೇಯಿಂಗ್ 11 ಭಾಗವಾಗಿದ್ದರೂ ಬ್ಯಾಟಿಂಗ್ ಮಾಡುವ ಅವಕಾಶ ಸಿಕ್ಕಿರಲಿಲ್ಲ. 

ತಾಯಿಗೆ ಕೊಟ್ಟ ಮಾತು : 
ಐಪಿಎಲ್‌ನಲ್ಲಿ ಆಡಲು ಅವಕಾಶ ಸಿಕ್ಕಾಗಲೆಲ್ಲಾ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸುವುದಾಗಿ ಸಮೀರ್ ತಾಯಿಗೆ ಮಾತು ಕೊಟ್ಟಿದ್ದರಂತೆ. ತಾಯಿ ರುಖ್ಸಾನಾ ಅಖ್ತರ್ ಗೆ ನೀಡಿದ ಮಾತಿನಂತೆ ಮೊದಲ ಎಸೆತಕ್ಕೆ ಸಿಕ್ಸ್ ಬಾರಿಸಿದ್ದಾರೆ. ಗುಜರಾತ್ ಪರ ಬೌಲಿಂಗ್ ಮಾಡುತ್ತಿದ್ದ ಸ್ಪಿನ್ನರ್ ರಶೀದ್ ಖಾನ್ ಅವರ ಮೊದಲ ಎಸೆತವನ್ನು ಸಿಕ್ಸರ್ ಗೆ ಅಟ್ಟುವ ಮೂಲಕ ತಾಯಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದಾರೆ.  

ಇದನ್ನೂ ಓದಿ : T20 ವಿಶ್ವಕಪ್’ಗೂ ಮುನ್ನ ಹೊಸ ನಾಯಕ: ಅಂದು ನಾಯಕತ್ವ ತ್ಯಜಿಸಿ ಹೊರನಡೆದಿದ್ದ ಸ್ಟಾರ್ ಪ್ಲೇಯರ್’ಗೆ ಮತ್ತೆ ಕ್ಯಾಪ್ಟನ್ಸಿ!

ಗ್ರಾಮದಲ್ಲಿ ಪಟಾಕಿ ಸಿಡಿಸಿ ಸಂಭ್ರಮ :
ರಿಜ್ವಿ ಅವರ ಮಾವ, ಕ್ರಿಕೆಟ್ ತರಬೇತುದಾರ ಟಂಕಿವ್ ಅಖ್ತರ್ ತಮ್ಮ ಸೋದರಳಿಯನ ಬ್ಯಾಟಿಂಗ್ ಪ್ರದರ್ಶನದ ಬಗ್ಗೆ ಸಂತೋಷ ವ್ಯಕ್ತಪಡಿಸಿದ್ದಾರೆ. ಸಮೀರ್ ರಿಜ್ವಿ ಕ್ರಿಕೆಟ್ ಲೋಕದಲ್ಲಿ ದೊಡ್ಡ ಹೆಸರಾಗಿ ಹೊರ ಹೊಮ್ಮುತ್ತಾರೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಸಮೀರ್ ಬ್ಯಾಟಿಂಗ್‌ಗಾಗಿ ಕ್ರೀಸ್‌ಗೆ ಬಂದ ತಕ್ಷಣ ಅವರ ಹಳ್ಳಿಯಲ್ಲಿ ಹಬ್ಬದ ವಾತಾವರಣ. ಮೊದಲ ಎಸೆತದಲ್ಲಿ ಸಮೀರ್ ಸಿಕ್ಸರ್ ಸಿಡಿಸಿದಾಗಲಂತೂ ಹಳ್ಳಿಗರ ಸಂತಸಕ್ಕೆ ಪಾರವೇ ಇರಲಿಲ್ಲ.

ಇದನ್ನೂ ಓದಿ : ಕುಡಿಯುವ ನೀರಿಗೆ ಕೊಹ್ಲಿ ಖರ್ಚು ಮಾಡುವ ಹಣ ಬರೋಬ್ಬರಿ 8 ಲಕ್ಷ !ಅದೆಂಥಾ ನೀರು ಕುಡಿತಾರೆ ಈ ಕಿಂಗ್?

ತಮ್ಮ ವೃತ್ತಿಜೀವನದ ಮೊದಲ ಎಸೆತದ ಸಿಕ್ಸರ್ :
ಈ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟ್ಸ್ಮನ್ ಸಿಕ್ಸರ್ ಮೂಲಕವೇ ತನ್ನ  ಐಪಿಎಲ್ ಖಾತೆ ತೆರೆದಿದ್ದಾರೆ. ಐಪಿಎಲ್‌ನಲ್ಲಿ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ 8 ಕೋಟಿ 40 ಲಕ್ಷಕ್ಕೆ ಖರೀದಿಸಿದೆ. ಸಮೀರ್ ವಿವಿಧ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಪ್ರದರ್ಶನಗಳ ಮೂಲಕ ನಿರಂತರವಾಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸುತ್ತಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News