Asia Cup 2024: ವನಿತಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಡೇಟ್ ಫಿಕ್ಸ್! ಜು.28ರಂದು ಫೈನಲ್

Women's Asia Cup 2024 Date: ಜುಲೈ 19 ರಿಂದ ಏಷ್ಯಾ ಕಪ್ ಆರಂಭವಾಗಲಿದ್ದು, ಜುಲೈ 28 ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯಲಿದೆ. ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ 8 ತಂಡಗಳು ಸೇರ್ಪಡೆಯಾಗಲಿವೆ.

Written by - Bhavishya Shetty | Last Updated : Mar 26, 2024, 08:24 PM IST
    • ಮಹಿಳಾ ಏಷ್ಯಾ ಕಪ್ ವೇಳಾಪಟ್ಟಿ ಬಿಡುಗಡೆ
    • ಜುಲೈ 19 ರಿಂದ ಏಷ್ಯಾ ಕಪ್ ಆರಂಭ-ಜುಲೈ 28 ರಂದು ಫೈನಲ್ ಪಂದ್ಯ
    • ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ 8 ತಂಡಗಳು ಸೇರ್ಪಡೆ
Asia Cup 2024: ವನಿತಾ ಏಷ್ಯಾಕಪ್ ವೇಳಾಪಟ್ಟಿ ಪ್ರಕಟ: ಭಾರತ vs ಪಾಕಿಸ್ತಾನ ಪಂದ್ಯಕ್ಕೆ ಡೇಟ್ ಫಿಕ್ಸ್! ಜು.28ರಂದು ಫೈನಲ್ title=
Women's Asia Cup 2024 Schedule

Women's Asia Cup 2024 Date: ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ಇಂದು ಮಹಿಳಾ ಏಷ್ಯಾ ಕಪ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಂದ್ಯಾವಳಿಯು ಸೆಪ್ಟೆಂಬರ್-ಅಕ್ಟೋಬರ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌’ಗೆ ಕೆಲವು ತಿಂಗಳುಗಳ ಮೊದಲು ಅಂದರೆ ಜುಲೈನಲ್ಲಿ ನಡೆಯಲಿದೆ.

ಜುಲೈ 19 ರಿಂದ ಏಷ್ಯಾ ಕಪ್ ಆರಂಭವಾಗಲಿದ್ದು, ಜುಲೈ 28 ರಂದು ಫೈನಲ್ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಶ್ರೀಲಂಕಾದ ಡಂಬುಲ್ಲಾದಲ್ಲಿ ನಡೆಯಲಿದೆ. ಟೂರ್ನಿಯ ಇತಿಹಾಸದಲ್ಲಿ ಮೊದಲ ಬಾರಿಗೆ 8 ತಂಡಗಳು ಸೇರ್ಪಡೆಯಾಗಲಿವೆ.

ಇದನ್ನೂ ಓದಿ: “ನಾನು ಐಶ್ವರ್ಯಾಗೆ ತಾಳಿ ಕಟ್ಟಿದ್ದು ಇದೇ ಕಾರಣಕ್ಕೆ.. ವಿನಃ ಇನ್ನೇನು ಅಲ್ಲ”- ವಿಚ್ಛೇದನ ವದಂತಿ ಮಧ್ಯೆ ಅಭಿಷೇಕ್ ಬಚ್ಚನ್ ಸೆನ್ಸೇಷನಲ್ ಕಮೆಂಟ್

ಹಾಲಿ ಚಾಂಪಿಯನ್ ಭಾರತವು ಪಾಕಿಸ್ತಾನ, ನೇಪಾಳ ಮತ್ತು ಯುಎಇ ಜೊತೆಗೆ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಮಲೇಷ್ಯಾ, ಶ್ರೀಲಂಕಾ ಮತ್ತು ಥಾಯ್ಲೆಂಡ್ ತಂಡಗಳಿವೆ. 2022 ರಲ್ಲಿ ಕೇವಲ 7 ತಂಡಗಳು ಭಾಗವಹಿಸಿದ್ದವು. ಭಾರತ ಈ ಟೂರ್ನಿಯಲ್ಲಿ ಗರಿಷ್ಠ 7 ಬಾರಿ ಪ್ರಶಸ್ತಿ ಗೆದ್ದಿದೆ.

ಜುಲೈ 19 ರಂದು ಯುಎಇ ವಿರುದ್ಧದ ಪಂದ್ಯದೊಂದಿಗೆ ಭಾರತ ತಮ್ಮ ಅಭಿಯಾನವನ್ನು ಪ್ರಾರಂಭಿಸಲಿದೆ. ಆ ಬಳಿಕ 21ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಪಂದ್ಯ ನಡೆಯಲಿದೆ. ಜುಲೈ 23 ರಂದು ನೇಪಾಳ ವಿರುದ್ಧ ಭಾರತ ಗುಂಪಿನಲ್ಲಿ ಮೂರನೇ ಮತ್ತು ಕೊನೆಯ ಪಂದ್ಯವನ್ನು ಆಡಲಿದೆ.

 ಸೆಮಿಫೈನಲ್ ಮತ್ತು ಫೈನಲ್‌ ಯಾವಾಗ?

ಎರಡೂ ಗುಂಪಿನ ಟಾಪ್-2 ತಂಡಗಳು ಸೆಮಿಫೈನಲ್ ತಲುಪಲಿವೆ. ಕೊನೆಯ 4 ಸುತ್ತಿನ ಎರಡೂ ಪಂದ್ಯಗಳು ಜುಲೈ 26 ರಂದು ನಡೆಯಲಿದೆ. ಆ ಬಳಿಕ ಜುಲೈ 28ರಂದು ಟೂರ್ನಿಯ ಫೈನಲ್ ಪಂದ್ಯ ನಡೆಯಲಿದೆ.

ಪಂದ್ಯಾವಳಿಯ ವೇಳಾಪಟ್ಟಿ

ದಿನಾಂಕ ಪಂದ್ಯ
ಜುಲೈ19 ಭಾರತ vs ಯುಎಇ
ಜುಲೈ19 ಪಾಕಿಸ್ತಾನ vs ನೇಪಾಳ
ಜುಲೈ 20 ಮಲೇಷ್ಯಾ vs ಥೈಲ್ಯಾಂಡ್
ಜುಲೈ 20 ಶ್ರೀಲಂಕಾ vs ಬಾಂಗ್ಲಾದೇಶ
ಜುಲೈ 21 ನೇಪಾಳ vs ಯುಎಇ
ಜುಲೈ 21 ಭಾರತ vs ಪಾಕಿಸ್ತಾನ
ಜುಲೈ 22 ಶ್ರೀಲಂಕಾ vs ಮಲೇಷ್ಯಾ
ಜುಲೈ 22 ಬಾಂಗ್ಲಾದೇಶ vs ಥೈಲ್ಯಾಂಡ್
ಜುಲೈ 23 ಪಾಕಿಸ್ತಾನ vs ಯುಎಇ
ಜುಲೈ 23 ಭಾರತ vs ನೇಪಾಳ
ಜುಲೈ 24 ಬಾಂಗ್ಲಾದೇಶ vs ಮಲೇಷ್ಯಾ
ಜುಲೈ 24 ಶ್ರೀಲಂಕಾ vs ಥೈಲ್ಯಾಂಡ್
ಜುಲೈ 26 ಸೆಮಿಫೈನಲ್ ಪಂದ್ಯಗಳು
ಜುಲೈ 28 ಫೈನಲ್

ಇದನ್ನೂ ಓದಿ:ಟೀಂ ಇಂಡಿಯಾದ ಬ್ಯಾಟ್ಸ್’ಮನ್ ಶುಭ್ಮನ್ ಗಿಲ್ ಅಕ್ಕ ಪ್ರಖ್ಯಾತ ತಾರೆ! ಅಂದದಲ್ಲಿ ಪಡ್ಡೆಹೈಕ್ಳ ‘ದಿಲ್’ ಗೆದ್ದ ಈ ಸುಂದರಿ ಯಾರು ಗೊತ್ತೇ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News