ಮಿಂಚಿದ ಶಿಖರ್ ಧವನ್, ಮುಂಬೈ ವಿರುದ್ಧ ಹೈದರಾಬಾದ್ ಗೆ ರೋಚಕ ಜಯ

     

Updated: Apr 13, 2018 , 02:51 PM IST
ಮಿಂಚಿದ ಶಿಖರ್ ಧವನ್, ಮುಂಬೈ ವಿರುದ್ಧ ಹೈದರಾಬಾದ್ ಗೆ ರೋಚಕ ಜಯ

ಹೈದರಾಬಾದ್: ಇಲ್ಲಿನ ರಾಜೀವ್ ಗಾಂಧೀ ಅಂತರಾಷ್ಟೀಯ ಕ್ರೀಡಾಂಗಣದಲ್ಲಿ  ಟಾಸ್ ಗೆದ್ದು ಮೊದಲು ಫೀಲ್ಡಿಂಗ್ ಆಯ್ದುಕೊಂಡ ಸನ್ ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 147 ರನ್ ಗೆ ಕಟ್ಟಿ ಹಾಕಿತು.ಇದನ್ನು ಬೆನ್ನತ್ತಿದ ಹೈದರಾಬಾದ ತಂಡವು ಶಿಖರ್ ಧವನ್(45) ಮತ್ತು ದೀಪಕ್ ಹೂಡಾ(32) ರನ್ ಗಳ ನೆರವಿನಿಂದ 9 ವಿಕೆಟ್ ಕಳೆದುಕೊಂಡು 151 ರನ್ ಗಳಿಸಿತು.

ಇದಕ್ಕೂ ಮೊದಲು ಹೈದರಾಬಾದ್ ನ ಸಂದೀಪ ಶರ್ಮಾ(2) ಸಿದ್ದಾರ್ಥ್ ಕೌಲ್ (2) ಹಾಗೂ ರಶೀದ್ ಖಾನ್ ರವರ ಪರಿಣಾಮಕಾರಿ ಬೌಲಿಂಗ್ ನಿಂದಾಗಿ ಮುಂಬೈ ಇಂಡಿಯನ್ಸ್ ತಂಡವನ್ನು ಸಾಧಾರಣ ಮೊತ್ತಕ್ಕೆ ಕಟ್ಟಿ ಹಾಕಿತು.

ಇನ್ನೊಂದೆಡೆ ಗೆಲುವಿನ ಗುರಿ ಬೆನ್ನತ್ತಿದ ಹೈದರಾಬಾದ್ ತಂಡಕ್ಕೆ ಸುಲಭವಾಗಿರಲಿಲ್ಲ,ಕಾರಣ ಒಂದು ಹಂತದಲ್ಲಿ ಮಾಯಾಂಕ್ ಮಾರ್ಕಂಡೆ 4 ಹಾಗೂ ಮುಸ್ತಫಿಜುರ್ ರಹಮಾನ್ 3 ವಿಕೆಟ್ ತೆಗೆದುಕೊಳ್ಳುವುದರ ಮೂಲಕ  ಹೈದರಾಬಾದ್ ಗೆ ಕಂಟಕವಾಗಿ ಕಾಡಿದರು. ಆದಾಗ್ಯೂ ಕೊನೆಯ ಹಂತದಲ್ಲಿ  ದೀಪಕ್ ಹೂಡಾ ಅವರ ಬ್ಯಾಟಿಂಗ್ ನೆರವಿನಿಂದ ಗೆಲುವು ಸಾಧಿಸಿತು.

By continuing to use the site, you agree to the use of cookies. You can find out more by clicking this link

Close