ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ!

ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ಗಳು 2 ತ್ರಿಶತಕ ಬಾರಿಸಿದ್ದಾರೆ. ಈ ನಾಲ್ವರು ಬಲಿಷ್ಠ ಆಟಗಾರರಲ್ಲಿ ಒಬ್ಬ ಭಾರತೀಯನೂ ಸೇರಿದ್ದಾರೆ. ಈ ಅಪಾಯಕಾರಿ ಆರಂಭಿಕ ಆಟಗಾರ ತನ್ನ ಬಿರುಸಿನ ಬ್ಯಾಟಿಂಗ್‌ನಿಂದಾಗಿ ವಿಶ್ವದಾದ್ಯಂತ ಹೆಸರುವಾಸಿಯಾಗಿದ್ದಾರೆ.

Written by - Puttaraj K Alur | Last Updated : Mar 3, 2022, 09:27 PM IST
  • ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು 2 ತ್ರಿಶತಕ ಗಳಿಸಿದ್ದಾರೆ
  • ವಿಶ್ವದ ನಾಲ್ವರು ಬಲಿಷ್ಠ ಆಟಗಾರರ ಪೈಕಿ ಒಬ್ಬ ಭಾರತೀಯನೂ ಇದ್ದಾನೆ
  • ಈ ಭಾರತೀಯ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದರೆ ಬೌಂಡರಿ-ಸಿಕ್ಸರ್‌ಗಳ ಸುಳಿಮಳೆಯೇ ಆಗುತ್ತಿತ್ತು
ಕ್ರಿಕೆಟ್ ಇತಿಹಾಸದಲ್ಲಿ ಕೇವಲ 4 ಬ್ಯಾಟ್ಸ್‌ಮನ್‌ಗಳು ಮಾತ್ರ ಈ ಸಾಧನೆ ಮಾಡಿದ್ದಾರೆ! title=
ಕೇವಲ 4 ಬ್ಯಾಟ್ಸ್‌ಮನ್‌ಗಳು 2 ತ್ರಿಶತಕ ಗಳಿಸಿದ್ದಾರೆ

ನವದೆಹಲಿ: ಟೆಸ್ಟ್ ಕ್ರಿಕೆಟ್(Test Cricket) ಆಡಲು ಯಾವಾಗಲೂ ತಾಳ್ಮೆ ಮುಖ್ಯ. ಇಲ್ಲಿ ಕ್ಲಾಸಿಕ್ ಬ್ಯಾಟಿಂಗ್ ಅಗತ್ಯವಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಯಾವುದೇ ಬ್ಯಾಟ್ಸ್‌ಮನ್ ಸಂಯಮದಿಂದ ಆಡಿದರೆ ಮಾತ್ರ ಸಕ್ಸಸ್ ಆಗುತ್ತಾನೆ. 5 ದಿನಗಳ ಕ್ರಿಕೆಟ್‌ ಆಟದಲ್ಲಿ ಮಿಂಚುವುದು, ಅತ್ಯುತ್ತಮ ಪ್ರದರ್ಶನ ನೀಡುವುದು, ತನ್ನತನವನ್ನು ಕಾಪಾಡಿಕೊಳ್ಳುವುದು ದೊಡ್ಡ ಸವಾಲು ಆಗಿರುತ್ತದೆ.

ಇಂಗ್ಲೆಂಡ್ ಅನ್ನು ಟೆಸ್ಟ್ ಕ್ರಿಕೆಟ್‌ನ ಪಿತಾಮಹ ಎಂದು ಪರಿಗಣಿಸಲಾಗಿದೆ. ಟೆಸ್ಟ್ ಕ್ರಿಕೆಟ್ ಇತಿಹಾಸ(Test Cricket History)ದಲ್ಲಿ ಕೇವಲ ನಾಲ್ವರು ಬ್ಯಾಟ್ಸ್‌ಮನ್‌ಗಳು 2 ಬಾರಿ ಟ್ರಿಪಲ್ ಶತಕಗಳನ್ನು ಗಳಿಸಿದ ಸಾಧನೆ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಒಬ್ಬ ಬಲಿಷ್ಠ ಭಾರತೀಯನೂ ಸೇರಿದ್ದಾನೆ. ಈ ಭಾರತೀಯ ಬ್ಯಾಟ್ಸ್‌ಮನ್‌ನ ಹೆಸರು ಕೆಳಿದರೆ ಸಾಕು ಎಲ್ಲಾ ಬೌಲರ್‌ಗಳು ಭಯಪಡುತ್ತಾರೆ. ಈ ಭಾರತೀಯ ಬ್ಯಾಟ್ಸ್‌ಮನ್ ಕ್ರೀಸ್‌ಗೆ ಬಂದರೆ ಬೌಂಡರಿ ಮತ್ತು ಸಿಕ್ಸರ್‌ಗಳ ಸುಳಿಮಳೆಯೇ ಆಗುತ್ತದೆ. ಅಪರೂಪದ ಸಾಧನೆ ಮಾಡಿರುವ ಆ ನಾಲ್ವರು ದಿಗ್ಗಜರು ಯಾರೆಂದು ತಿಳಿಯಿರಿ.   

ಇದನ್ನೂ ಓದಿ: Rohit Sharma : ರೋಹಿತ್ ನಾಯಕತ್ವಕ್ಕೆ ಅಚ್ಚರಿಗೊಂಡ ಇಡೀ ಕ್ರಿಕೆಟ್ ಜಗತ್ತು!

1. ಕ್ರಿಸ್ ಗೇಲ್

ಕ್ರಿಸ್ ಗೇಲ್(Chris Gayle) ಟಿ-20 ಕ್ರಿಕೆಟ್ ನಲ್ಲಿ ಸಿಕ್ಸರ್ ಕಿಂಗ್. ರೆಡ್ ಬಾಲ್ ಕ್ರಿಕೆಟ್ ನಲ್ಲೂ ತಮ್ಮ ಬ್ಯಾಟಿಂಗ್ ಸಾಮರ್ಥ್ಯ ತೋರಿದ್ದಾರೆ. ಗೇಲ್ 2005ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 317 ರನ್ ಗಳಿಸಿದ್ದರು. ಅದೇ ರೀತಿ 2010ರಲ್ಲಿ ಗೇಲ್ ಶ್ರೀಲಂಕಾ ವಿರುದ್ಧ 333 ರನ್‌ಗಳ ಇನ್ನಿಂಗ್ಸ್ ಆಡಿದ್ದರು.  

2. ಡಾನ್ ಬ್ರಾಡ್ಮನ್

ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್ ಡಾನ್ ಬ್ರಾಡ್ಮನ್(Don Bradman)ತಮ್ಮ ಕ್ರಿಕೆಟ್ ವೃತ್ತಿಜೀವನದಲ್ಲಿ 2 ಟ್ರಿಪಲ್ ಶತಕಗಳ ಸಾಧನೆ ಮಾಡಿದ್ದಾರೆ. ಬ್ರಾಡ್ಮನ್ ತಮ್ಮ ಎಡರೂ ಟ್ರಿಪಲ್ ಶತಕಗಳನ್ನು ಇಂಗ್ಲೆಂಡ್ ವಿರುದ್ಧವೇ ಭಾರಿಸಿದ್ದಾರೆ. 1934ರಲ್ಲಿ 334 ಮತ್ತು 1930ರಲ್ಲಿ 304 ರನ್ ಗಳಿಸಿ ಮಿಂಚಿದ್ದರು. ಈ ಅನುಭವಿ ಆಟಗಾರ ತಮ್ಮ ಕ್ರಿಕೆಟ್ ಜೀವನದಲ್ಲಿ ಕೇವಲ 52 ಟೆಸ್ಟ್ ಪಂದ್ಯಗಳನ್ನಷ್ಟೇ ಆಡಿದ್ದಾರೆ.

ಇದನ್ನೂ ಓದಿ: Ireland ಪ್ರವಾಸ ಕೈಗೊಳ್ಳಲಿರುವ Team India, ಇಲ್ಲಿದೆ ಶೆಡ್ಯೂಲ್

3. ಬ್ರಿಯಾನ್ ಲಾರಾ

ಬ್ರಿಯಾನ್ ಲಾರಾ(Brian Lara) ಅವರನ್ನು ವಿಶ್ವದ ಶ್ರೇಷ್ಠ ಬ್ಯಾಟ್ಸ್‌ಮನ್‌ ಎಂದು ಪರಿಗಣಿಸಲಾಗಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿಹೆಚ್ಚು ಸ್ಕೋರ್ ಮಾಡಿದ ದಾಖಲೆ ಲಾರಾ ಹೆಸರಿನಲ್ಲಿದೆ. ಅವರು 2004ರಲ್ಲಿ ಇಂಗ್ಲೆಂಡ್ ವಿರುದ್ಧ 400 ರನ್‌ಗಳ ಇನ್ನಿಂಗ್ಸ್ ಆಡಿದ್ದರು. 1994ರಲ್ಲಿಯೂ ಇಂಗ್ಲೆಂಡ್ ವಿರುದ್ಧ ಲಾರಾ 375 ರನ್ ಗಳಿಸಿದ್ದರು. ಲಾರಾ ಅವರು ಸ್ಫೋಟಕ ಇನ್ನಿಂಗ್ಸ್‌ಗೆ ಹೆಸರುವಾಸಿಯಾಗಿದ್ದಾರೆ.

4. ವೀರೇಂದ್ರ ಸೆಹ್ವಾಗ್

ವೀರೇಂದ್ರ ಸೆಹ್ವಾಗ್(Virender Sehwag) ಅವರನ್ನು ಭಾರತದ ಅಪಾಯಕಾರಿ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ. ಅತ್ಯಂತ ವೇಗವಾಗಿ ಬ್ಯಾಟಿಂಗ್ ಮಾಡುವ ಮೂಲಕ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ ಆಡುವ ವಿಧಾನವನನ್ನೇ ಬದಲಾಯಿಸಿದರು. ಸೆಹ್ವಾಗ್ ಟಿ-20 ಕ್ರಿಕೆಟ್‌ನಂತೆ ಟೆಸ್ಟ್‌ ಕ್ರಿಕೆಟ್‌ ಆಡಿದ್ದಾರೆ. 2004ರಲ್ಲಿ ಪಾಕಿಸ್ತಾನ ವಿರುದ್ಧ ಸೆಹ್ವಾಗ್ ಮೊದಲ ತ್ರಿಶತಕ ಬಾರಿಸಿದ್ದರು. ಮುಲ್ತಾನ್ ಮೈದಾನದಲ್ಲಿ ಅವರು 309 ರನ್‌ಗಳ ಇನ್ನಿಂಗ್ಸ್ ಆಡಿದ್ದರು. ಅದೇ ರೀತಿ ತಮ್ಮ 2ನೇ ಟ್ರಿಪಲ್ ಸೆಂಚುರಿಯನ್ನು 2008ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 319 ರನ್ ಗಳಿಸುವ ಮೂಲಕ ಭಾರಿಸಿದ್ದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News