WATCH video: ಶತಕದ ಟೆಸ್ಟ್ ಗೂ ಮುನ್ನ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ

ಭಾರತದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಈಗ ಶತಕದ ಟೆಸ್ಟ್ ಪಂದ್ಯವನ್ನು ಆಡಿರುವ ಕೆಲವೇ ಆಟಗಾರರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.ಆ ಮೂಲಕ ವಿರಾಟ್ ಕೊಹ್ಲಿ ದಾಖಲೆಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆಯಾಗಲಿದೆ.

Written by - Zee Kannada News Desk | Last Updated : Mar 3, 2022, 03:36 PM IST
  • ಭಾರತದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಈಗ ಶತಕದ ಟೆಸ್ಟ್ ಪಂದ್ಯವನ್ನು ಆಡಿರುವ ಕೆಲವೇ ಆಟಗಾರರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ.
  • ಆ ಮೂಲಕ ವಿರಾಟ್ ಕೊಹ್ಲಿ ದಾಖಲೆಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆಯಾಗಲಿದೆ.
WATCH video: ಶತಕದ ಟೆಸ್ಟ್ ಗೂ ಮುನ್ನ ವಿರಾಟ್ ಕೊಹ್ಲಿಯಿಂದ ಮಹತ್ವದ ಹೇಳಿಕೆ title=
Photo Courtesy: Twitter

ನವದೆಹಲಿ: ಭಾರತದ ಖ್ಯಾತ ಆಟಗಾರ ವಿರಾಟ್ ಕೊಹ್ಲಿ ಈಗ ಶತಕದ ಟೆಸ್ಟ್ ಪಂದ್ಯವನ್ನು ಆಡಿರುವ ಕೆಲವೇ ಆಟಗಾರರ ಸಾಲಿಗೆ ಸೇರ್ಪಡೆಯಾಗಲಿದ್ದಾರೆ. ಆ ಮೂಲಕ ವಿರಾಟ್ ಕೊಹ್ಲಿ ದಾಖಲೆಗೆ ಇನ್ನೊಂದು ಹೊಸ ದಾಖಲೆ ಸೇರ್ಪಡೆಯಾಗಲಿದೆ.

ಈಗ ತಮ್ಮ ನೂರನೇ ಟೆಸ್ಟ್ ಪಂದ್ಯಕ್ಕೂ ಮುನ್ನ ತಮ್ಮ ಕ್ರಿಕೆಟ್ ಪ್ರಯಾಣದ ಕುರಿತಾಗಿ ವಿರಾಟ್ ಕೊಹ್ಲಿ ವಿಸ್ತೃತವಾಗಿ ಮಾತನಾಡಿರುವ ವಿಡಿಯೋವನ್ನು ಬಿಸಿಸಿಐ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮಗಳ ಖಾತೆಯಲ್ಲಿ ಹಂಚಿಕೊಂಡಿದೆ.

"ನಾನು 100 ಟೆಸ್ಟ್ ಪಂದ್ಯಗಳನ್ನು ಆಡುತ್ತೇನೆ ಎಂದು ನಾನು ಎಂದಿಗೂ ಯೋಚಿಸಲಿಲ್ಲ. ಇದೊಂದು ಸುದೀರ್ಘ ಪ್ರಯಾಣವಾಗಿದೆ. ಅದನ್ನು ತಲುಪಲು ಸಾಧ್ಯವಾಗಿದ್ದಕ್ಕಾಗಿ ಕೃತಜ್ಞನಾಗಿದ್ದೇನೆ. ದೇವರು ಕರುಣಾಮಯಿಯಾಗಿದ್ದಾನೆ, ನನ್ನ ಫಿಟ್‌ನೆಸ್‌ಗಾಗಿ ನಾನು ನಿಜವಾಗಿಯೂ ಶ್ರಮಿಸಿದ್ದೇನೆ, ಇದು ನನಗೆ ಮತ್ತು ನನ್ನ ಕುಟುಂಬಕ್ಕೆ, ನನ್ನ ತರಬೇತುದಾರರಿಗೆ ಮಹತ್ವದ ಕ್ಷಣವಾಗಿದೆ, ಇದರಿಂದ ಅವರು ನಿಜಕ್ಕೂ ತುಂಬಾ ಸಂತೋಷದ ಜೊತೆಗೆ ಹೆಮ್ಮೆಪಡುತ್ತಾರೆ, ಒಟ್ಟಾರೆಯಾಗಿ ಇದು ತುಂಬಾ ವಿಶೇಷವಾದ ಕ್ಷಣವಾಗಿದೆ"ಎಂದು ಕೊಹ್ಲಿ (Virat Kohli) ವೀಡಿಯೊದಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ : Ind Vs SL : ಕೊಹ್ಲಿ ತಂಡದಿಂದ ಹೊರಗಿಟ್ಟ ಆಟಗಾರನಿಗೆ ಅವಕಾಶ ನೀಡಿದ ರೋಹಿತ್ ಶರ್ಮಾ!

ಇದೇ ವೇಳೆ ವಿರಾಟ್ ಕೊಹ್ಲಿ ತಾವು ಬೆಳೆದು ಬಂದ ಬಗೆ ಬಗ್ಗೆ ಮಾತನಾಡುತ್ತಾ ತಾವು ಹೇಗೆ ಅಧಿಕ ರನ್ ಗಳಿಸುವ ಕನಸಿನೊಂದಿಗೆ ಬೆಳೆದದ್ದು ಹೇಗೆ ಎನ್ನುವ ಸಂಗತಿಯನ್ನು ಅವರು ಹಂಚಿಕೊಂಡರು."ನಾನು ವೈಯಕ್ತಿಕವಾಗಿ ಸಣ್ಣ ರನ್ ಗಳಿಸಬೇಕು ಎಂದು ಯೋಚಿಸಿ ಬೆಳೆದಿಲ್ಲ, ನನಗೆ ಮೊದಲಿನಿಂದಲೂ ಬೃಹತ್ ರನ್ ಗಳಿಸುವ ಆಲೋಚನೆ ಇತ್ತು, ನಾನು ಪ್ರಥಮ ದರ್ಜೆ ಕ್ರಿಕೆಟ್‌ಗೆ ಪ್ರವೇಶಿಸುವ ಮೊದಲು 7 ಅಥವಾ 8 ದ್ವಿಶತಕಗಳನ್ನು ಗಳಿಸಿದೆ, ಹಾಗಾಗಿ ನನ್ನ ಆಲೋಚನೆಯು ದೀರ್ಘಾವಧಿ ಬ್ಯಾಟಿಂಗ್ ಮಾಡುವುದಾಗಿತ್ತು, ಹೀಗೆ ನಾನು ದೀರ್ಘಕಾಲದವರೆಗೆ ಬ್ಯಾಟಿಂಗ್ ಮಾಡುವುದರ ಮೂಲಕ ನಾನು ಆಟವನ್ನು ಆನಂದಿಸುತ್ತಿದ್ದೆ, ನನ್ನ ತಂಡಕ್ಕಾಗಿ (Team India) ಪಂದ್ಯಗಳನ್ನು ಗೆಲ್ಲಲು ಪ್ರಯತ್ನಿಸುವುದಾಗಲಿ ಅಥವಾ ಮೊದಲ ಇನ್ನಿಂಗ್ಸ್ ಮುನ್ನಡೆ ಪಡೆಯಲು ಪ್ರಯತ್ನಿಸುವುದಾಗಲಿ, ಇದೆಲ್ಲವೂ ಕೂಡ ನಾನು ಅನುಸರಿಸುತ್ತಿದ್ದ ಸ್ವರೂಪವಾಗಿದೆ,"ಎಂದು ಕೊಹ್ಲಿ ಸ್ಮರಿಸಿದರು.

ಇದನ್ನೂ ಓದಿ : ಕೊಹ್ಲಿ 100ನೇ ಟೆಸ್ಟ್ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೇಳಿದ್ದೇನು ಗೊತ್ತೇ?

"ಇವು ನಿಮ್ಮ ನಿಜವಾದ ಪಾತ್ರವನ್ನು ಬಹಿರಂಗಪಡಿಸುವ ಸಂಗತಿಗಳಾಗಿವೆ, ಹಾಗಾಗಿ ಟೆಸ್ಟ್ ಕ್ರಿಕೆಟ್ ನಲ್ಲಿ ಜೀವಂತವಾಗಿರುವುದು ಅಗತ್ಯವೆಂದು ನಾನು ಭಾವಿಸಿದೆ, ಏಕೆಂದರೆ ಇದು ನನ್ನ ಪ್ರಕಾರ ನಿಜವಾದ ಕ್ರಿಕೆಟ್ ಆಗಿದೆ" ಎಂದು ಕೊಹ್ಲಿ ಹೇಳಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

 

Trending News