ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ವಿನೇಶ್ ಫೋಗತ್, ಬಜರಂಗ್ ಪುನಿಯಾ ಹೆಸರು ಶಿಫಾರಸ್ಸು

ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ವಿನೇಶ್ ಫೋಗತ್ ಮತ್ತು ಬಜರಂಗ್ ಪುನಿಯಾ ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.

Last Updated : Apr 29, 2019, 01:58 PM IST
ರಾಜೀವ್ ಗಾಂಧಿ ಖೇಲ್ ರತ್ನಕ್ಕೆ ವಿನೇಶ್ ಫೋಗತ್, ಬಜರಂಗ್ ಪುನಿಯಾ ಹೆಸರು ಶಿಫಾರಸ್ಸು title=

ನವದೆಹಲಿ: ಕುಸ್ತಿ ಫೆಡರೇಶನ್ ಆಫ್ ಇಂಡಿಯಾ ವಿನೇಶ್ ಫೋಗತ್ ಮತ್ತು ಬಜರಂಗ್ ಪುನಿಯಾ ಅವರನ್ನು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿಗಾಗಿ ಶಿಫಾರಸು ಮಾಡಿದೆ.

2014 ರ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ (48 ಕೆ.ಜಿ ವಿಭಾಗ) ಮತ್ತು 2018 ಗೋಲ್ಡ್ ಕೋಸ್ಟ್ (50 ಕೆ.ಜಿ ವಿಭಾಗ) ವಿನೇಶ್ ಪೋಗತ್ ಎರಡು ಚಿನ್ನದ ಪದಕಗಳನ್ನು ಗೆದ್ದಿದ್ದರು. 2014 ರ ಇಂಚಿಯೋನ್  ನ 48 ಕೆಜಿ ವಿಭಾಗದಲ್ಲಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.ಮತ್ತು 2018 ರ ಜಕಾರ್ತಾದಲ್ಲಿ ನಡೆದ ಏಷ್ಯನ್ ಕ್ರೀಡಾಕೂಟದಲ್ಲಿ 50 ಕೆಜಿ ವಿಭಾಗದಲ್ಲಿ ಕಂಚಿನ ಪದಕವನ್ನು ತಮ್ಮದಾಗಿಸಿಕೊಂಡಿದ್ದರು.2016 ರಲ್ಲಿ ಅವರಿಗೆ ಅರ್ಜುನ ಪ್ರಶಸ್ತಿ ಪುರಸ್ಕಾರವನ್ನು ನೀಡಲಾಯಿತು.

2018 ರಲ್ಲಿ ಬಜರಂಗ್ ಪುನಿಯಾ ಜಕಾರ್ತಾದಲ್ಲಿನ ಏಷ್ಯನ್ ಕ್ರೀಡಾಕೂಟದಲ್ಲಿ ಮತ್ತು ಗೋಲ್ಡ್ ಕೋಸ್ಟ್ನಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 65 ಕೆಜಿ ವಿಭಾಗದಲ್ಲಿ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ. ವಿಶ್ವ ಮಟ್ಟದಲ್ಲಿ ಭಾರತಕ್ಕೆ ಪ್ರಥಮ ಬಾರಿಗೆ ಕುಸ್ತಿಯಲ್ಲಿ ಮೊದಲನೇ ಸ್ಥಾನವನ್ನು ಪಡೆದರು. ಅವರಿಗೆ  2015 ರಲ್ಲಿ ಅರ್ಜುನ ಪ್ರಶಸ್ತಿ ದೊರೆತಿದೆ.

ಇದೇ ವೇಳೆ ಅರ್ಜುನ ಪ್ರಶಸ್ತಿಗಾಗಿ ರಾಹುಲ್ ಅವರೆ, ಹರ್ಪ್ರೀತ್ ಸಿಂಗ್, ದಿವಾ ಕಾಕ್ರನ್ ಮತ್ತು ಪೂಜಾ ಧಂದಾರನ್ನೂ ಶಿಫಾರಸು ಮಾಡಿದೆ.ವೀರೇಂದ್ರ ಕುಮಾರ್, ಸುಜೀತ್ ಮಾನ್, ನರೇಂದ್ರ ಕುಮಾರ್ ಮತ್ತು ವಿಕ್ರಮ್ ಕುಮಾರ್ ಅವರನ್ನು ದ್ರೋಣಾಚಾರ್ಯ ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ. ಭೀಮ್ ಸಿಂಗ್ ಮತ್ತು ಜೈ ಪ್ರಕಾಶ್ ಅವರು ಧ್ಯಾನ್ ಚಂದ್  ಪ್ರಶಸ್ತಿಗೆ ಶಿಫಾರಸು ಮಾಡಲಾಗಿದೆ.
 

Trending News