Virat Kohli: ಕೊಹ್ಲಿ ಧರಿಸಿದ ಈ ವಾಚ್‌ ಬೆಲೆ ಎಷ್ಟು ಗೊತ್ತಾ..? ತಿಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!

Virat Kohli Watch Price: ಇತ್ತೀಚೆಗೆ ವಿರಾಟ್ ಮತ್ತು ಅನುಷ್ಕಾ ತಮ್ಮ 6 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.. ಆ ಸಂದರ್ಭದಲ್ಲಿ ವಿರಾಟ್‌ ಧರಿಸಿದ ವಾಚ್‌ ಅಭಿಮಾನಿಗಳ ಗಮನ ಸೆಳೆದಿದೆ.. ಇದೀಗ ಆ ವಾಚ್‌ ಬೆಲೆಯ ಬಗ್ಗೆ ಭಾರೀ ಚರ್ಚೆ ಶುರುವಾಗಿದೆ..   

Written by - Savita M B | Last Updated : Jan 8, 2024, 11:45 AM IST
  • ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಕ್ರೇಜ್ ಗಳಿಸಿದ ಸೆಲೆಬ್ರಿಟಿ ಜೋಡಿ.
  • ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ವಿರುಷ್ಕಾ' ಎಂದೇ ಕರೆಯುತ್ತಾರೆ.
  • ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ತಮ್ಮ 6 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು.
Virat Kohli: ಕೊಹ್ಲಿ ಧರಿಸಿದ ಈ ವಾಚ್‌ ಬೆಲೆ ಎಷ್ಟು ಗೊತ್ತಾ..? ತಿಳಿದ್ರೆ ಶಾಕ್‌ ಆಗೋದು ಗ್ಯಾರಂಟಿ!  title=

Virat Kohli-Anushka: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಭಾರತದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ಕ್ರೇಜ್ ಗಳಿಸಿದ ಸೆಲೆಬ್ರಿಟಿ ಜೋಡಿ. ಈ ಜೋಡಿಯನ್ನು ಅಭಿಮಾನಿಗಳು ಪ್ರೀತಿಯಿಂದ 'ವಿರುಷ್ಕಾ' ಎಂದೇ ಕರೆಯುತ್ತಾರೆ. ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಸೂಪರ್‌ಸ್ಟಾರ್ ಆಗಿದ್ದಾರೆ ಮತ್ತು ಅತ್ಯಂತ ಸ್ಟೈಲಿಶ್ ಭಾರತೀಯ ದಂಪತಿಗಳಾಗಿ ಗುರುತಿಸಿಕೊಂಡಿದ್ದಾರೆ. 

ವಿರಾಟ್ ಮತ್ತು ಅನುಷ್ಕಾ ಇತ್ತೀಚೆಗೆ ತಮ್ಮ 6 ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಂಡರು. ಆಚರಣೆಯ ನಂತರ, ವಿರಾಟ್ ಇನ್ಸ್ಟಾಗ್ರಾಮ್ನಲ್ಲಿ ಅನುಷ್ಕಾ ಜೊತೆಗಿನ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಅನುಷ್ಕಾ ವಿರಾಟ್‌ನನ್ನು ಹಿಂದಿನಿಂದ ತಬ್ಬಿಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮಂದಿ ಲೈಕ್ ಮಾಡಿದ್ದಾರೆ. ವಿರಾಟ್ ಮತ್ತು ಅನುಷ್ಕಾ ಅವರ ಲುಕ್ ಮತ್ತು ಡ್ರೆಸ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿದ್ದವು..

ಇದನ್ನೂ ಓದಿ-T20 ವಿಶ್ವಕಪ್ ನಲ್ಲಿ ಈ ಆಟಗಾರನಿಗೆ ಸಿಗಲಿ ಟೀಂ ಇಂಡಿಯಾ ಕ್ಯಾಪ್ಟನ್ ಪಟ್ಟ : ಗಂಗೂಲಿಯ ಆಯ್ಕೆ ಇವರೇ !

ಪಾರ್ಟಿಯಲ್ಲಿ ವಿರಾಟ್ ಕೊಹ್ಲಿ ಕಡು ಬೂದು ಬಣ್ಣದ ಡೆನಿಮ್ ಮತ್ತು ಕಪ್ಪು ಶರ್ಟ್ ಧರಿಸಿದ್ದರು. ಇದೆಲ್ಲಕ್ಕಿಂತ ಹೆಚ್ಚಾಗಿ ನೆಟ್ಟಿಗರನ್ನು ಸೆಳೆದಿದ್ದು.. ವಿರಾಟ್‌ ವಾಚ್‌.. ಸದ್ಯ ಇದೇ ಸೋಷಿಯಲ್ ಮೀಡಿಯಾದಲ್ಲಿ ಅತಿ ಹೆಚ್ಚು ಚರ್ಚಿತ ವಿಷಯ.. 

ವಿರಾಟ್ ಕೊಹ್ಲಿಗೆ ಐಷಾರಾಮಿ ವಾಚ್ ಎಂದರೆ ತುಂಬಾ ಇಷ್ಟ. ಅವರು ಅದ್ಭುತ ವಾಚ್‌ಗಳ ಕಲೆಕ್ಷನ್‌ಗಳನ್ನು ಹೊಂದಿದ್ದಾರೆ.. ಕೊಹ್ಲಿ ಬಳಿ ಎಲ್ಲಕ್ಕಿಂತ ಹೆಚ್ಚು ದುಬಾರಿ ರೈನ್ಬೋ ಎವೆರೋಸ್ ಗೋಲ್ಡ್ ರೋಲೆಕ್ಸ್ ಡೇಟೋನಾ ಹೆಸರಿನ 36 ಬ್ಯಾಗೆಟ್-ಕಟ್ ವಜ್ರಗಳಿಂದ ಹೊದಿಸಲಾದ ವಾಚ್‌ ಇದ್ದು.. ಈ ಟೈಮ್‌ಪೀಸ್ ಬೆಲೆ 4.6 ಕೋಟಿ ರೂ. ವಿರಾಟ್ ವಾಚ್ ಸಂಗ್ರಹಗಳಲ್ಲಿ ಪ್ಲಾಟಿನಂ ರೋಲೆಕ್ಸ್ ಡೇಟೋನಾ ಜೊತೆಗೆ ಐಸ್-ಬ್ಲೂ ಡಯಲ್, ಬ್ರೌನ್ ಸೆರಾಮಿಕ್ ಬೆಜೆಲ್ ಸೇರಿವೆ. 

ಇದನ್ನೂ ಓದಿ-India Women vs Australia Women: ಟೀಮ್ ಇಂಡಿಯಾ ವಿರುದ್ಧ ಆಸೀಸ್ ಗೆ ಆರು ವಿಕೆಟ್ ಗಳ ಭರ್ಜರಿ ಜಯ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News