ಅನುಷ್ಕಾಗೂ ಮುನ್ನ ಕೊಹ್ಲಿ ಹಲವು ಹೀರೋಯಿನ್‌ಗಳ ಜೊತೆ ಡೇಟ್ ಮಾಡಿದ್ರು.. ಲಿಸ್ಟ್ ನಲ್ಲಿ ಈ ಸೌತ್‌ಬ್ಯೂಟಿ!

Virat Kohli: ವಿರಾಟ್‌ ಕೊಹ್ಲಿ ಹಾಗೂ ಅನುಷ್ಕಾ ಮದುವೆಯಾಗುವ ಮುನ್ನ ಹಲವು ಸ್ಟಾರ್‌ ಹಿರೋಯಿನ್‌ಗಳ ಜೊತೆಯಲ್ಲಿ ಡೇಟ್‌ ಮಾಡಿದ್ದರು.. ಆ ಲಿಸ್ಟ್‌ನಲ್ಲಿ ಈ ಸೌತ್‌ ನಟಿಯೂ ಇದ್ದಾರೆ..  

Written by - Savita M B | Last Updated : Nov 26, 2023, 02:35 PM IST
  • ವಿರಾಟ್ ಬಗ್ಗೆ ಸಾಕಷ್ಟು ಡೇಟಿಂಗ್ ವದಂತಿಗಳು ಹಬ್ಬಿದ್ದವು.
  • ವಿರಾಟ್ ಕೊಹ್ಲಿ.. ಕ್ರಿಕೆಟ್ ಜಗತ್ತಿನಲ್ಲಿ ಈ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ.
  • ಮದುವೆಗೂ ಮುನ್ನ ಹಲವು ನಾಯಕಿಯರ ಜೊತೆ ಡೇಟ್ ಮಾಡಿದ್ದಾರೆ
ಅನುಷ್ಕಾಗೂ ಮುನ್ನ ಕೊಹ್ಲಿ ಹಲವು ಹೀರೋಯಿನ್‌ಗಳ ಜೊತೆ ಡೇಟ್ ಮಾಡಿದ್ರು.. ಲಿಸ್ಟ್ ನಲ್ಲಿ ಈ ಸೌತ್‌ಬ್ಯೂಟಿ! title=

Virat Girlfriends: ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ 2018 ರಲ್ಲಿ ವಿವಾಹವಾದರು ಎನ್ನುವುದು ಎಲ್ಲರಿಗೂ ತಿದಿಳಿಸರುವ ವಿಷಯ... ಆದರೆ ಅದಕ್ಕೂ ಮುನ್ನ ವಿರಾಟ್ ಬಗ್ಗೆ ಸಾಕಷ್ಟು ಡೇಟಿಂಗ್ ವದಂತಿಗಳು ಹಬ್ಬಿದ್ದವು. 

ವಿರಾಟ್ ಕೊಹ್ಲಿ.. ಕ್ರಿಕೆಟ್ ಜಗತ್ತಿನಲ್ಲಿ ಈ ಹೆಸರಿಗೆ ವಿಶೇಷ ಪರಿಚಯ ಅಗತ್ಯವಿಲ್ಲ. ವಿರಾಟ್ ತಮ್ಮ ಬ್ಯಾಟಿಂಗ್ ಮೂಲಕ ಹಲವು ದಾಖಲೆಗಳನ್ನು ಮುರಿದು ಲಕ್ಷಾಂತರ ಅಭಿಮಾನಿಗಳನ್ನು ಗೆದ್ದಿದ್ದಾರೆ. ಅದೇ ಕೊಹ್ಲಿ ಮದುವೆಗೂ ಮುನ್ನ ಹಲವು ನಾಯಕಿಯರ ಜೊತೆ ಡೇಟ್ ಮಾಡಿದ್ದಾರೆ ಎಂಬ ಸುದ್ದಿ ಸದ್ದು ಮಾಡಿದೆ. ಆ ನಾಯಕಿಯರು ಯಾರೆಂದು ಈಗ ನೋಡೋಣ.

ಇದನ್ನೂ ಓದಿ-“ದೇವರಂತೆ ಬಂದ್ರಿ ಸಾರ್…”- ಕಾರು ಅಪಘಾತದಲ್ಲಿ ಗಾಯಗೊಂಡು ಒದ್ದಾಡುತ್ತಿದ್ದ ವ್ಯಕ್ತಿಗೆ ಮರುಜೀವ ಕೊಟ್ಟ ಮೊಹಮ್ಮದ್ ಶಮಿ!

2012 ರಲ್ಲಿ, ವಿರಾಟ್ ಕೊಹ್ಲಿ ಮಿಲ್ಕಿ ಬ್ಯೂಟಿ ತಮನ್ನಾ ಅವರೊಂದಿಗೆ ನಟಿಸಿದ್ದರು. ಇದಾದ ನಂತರ ಕೆಲ ವರ್ಷಗಳ ಕಾಲ ಇಬ್ಬರ ನಡುವೆ ಪ್ರೇಮಾಂಕುರವಾಗಿ... ಕೊಹ್ಲಿ ಮತ್ತು ತಮನ್ನಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವರದಿಗಳಿದ್ದವು... ಆದರೆ ಕೆಲವು ವರ್ಷಗಳ ನಂತರ ಈ ಸಂಬಂಧ ಮುರಿದುಬಿತ್ತು. ಆದರೆ ವಿರಾಟ್‌ ಮತ್ತು ತಮನ್ನಾ ಸ್ನೇಹ ಇಂದಿಗೂ ಹಾಗೆ ಇದೆ.. 

ಇಜಾಬೆಲ್ಲೆ: "ಮಿಸ್ಟರ್ ಮಜ್ನೂ", "ವರ್ಲ್ಡ್ ಫೇಮಸ್ ಲವರ್" ಸಿನಿಮಾಗಳಲ್ಲಿ ನಟಿಸಿರುವ ಇಜಾಬೆಲ್ಲೆ, 2013 ರಲ್ಲಿ ವಿರಾಟ್ ಕೊಹ್ಲಿ ಜೊತೆ ರೊಮ್ಯಾನ್ಸ್ ಮಾಡಿದ್ದರು. ಸಿಂಗಾಪುರದಲ್ಲಿ ಒಟ್ಟಿಗೆ ಸುತ್ತಾಡುತ್ತಿದ್ದ ಕೊಹ್ಲಿ ಮತ್ತು ಇಜಾಬೆಲ್ಲೆ ಮಾಧ್ಯಮದವರ ಕೈಗೆ ಸಿಕ್ಕಿಬಿದ್ದಿದ್ದರು.. ಆದರೆ ಕೆಲವು ವರ್ಷಗಳ ನಂತರ ಇವರಿಬ್ಬರು ಬೇರ್ಪಟ್ಟರು..

ಇದನ್ನೂ ಓದಿ-ಟೋಪಿ ಧರಿಸಿ ತಾಯಿಯೊಂದಿಗೆ ನಿಂತಿರುವ ಈ ಬಾಲಕ ಭಾರತದ ಖ್ಯಾತ ಕ್ರಿಕೆಟಿಗ-ಸ್ಟಾರ್ ನಟನ ಅಳಿಯ! 99 ಕೋಟಿ ಒಡೆಯ ಈತ ಯಾರೆಂದು ಗೊತ್ತಾಯ್ತ?

ಸಂಜನಾ ಗಲ್ರಾನಿ: ಕೆಲ ವರ್ಷಗಳ ಹಿಂದೆ ಡ್ರಗ್ಸ್ ಮಾಫಿಯಾದಲ್ಲಿ ಬಂಧನಕ್ಕೊಳಗಾಗಿದ್ದ ಕನ್ನಡದ ನಟಿ ಸಂಜನಾ ಗಲ್ರಾನಿ ಜತೆಯೂ ಕೊಹ್ಲಿ ಲವ್ ಸ್ಟೋರಿ ಹೊಂದಿದ್ದರು.

ಸಾರಾ ಜೇನ್ ಡಯಾಸ್: ವಿರಾಟ್ ಕೊಹ್ಲಿ ಭಾರತೀಯ ರೂಪದರ್ಶಿ ಮತ್ತು ಬಾಲಿವುಡ್ ನಟಿ ಸಾರಾ ಜೇನ್ ಅವರೊಂದಿಗೆ ಡೇಟಿಂಗ್ ಮಾಡಿದರು. ಜುಲೈ 2011 ರಲ್ಲಿ, ವೆಸ್ಟ್ ಇಂಡೀಸ್ ಪ್ರವಾಸದಲ್ಲಿದ್ದ ವಿರಾಟ್ ಕೊಹ್ಲಿ, ತನ್ನ ಗೆಳತಿ ಸಾರಾ ಜೇನ್ ಜೊತೆ ಸುತ್ತಾಡುತ್ತಿರುವಾಗ ಮಾಧ್ಯಮಗಳಿಗೆ ಸಿಕ್ಕಿಬಿದ್ದಿದ್ದರು.... ಆದರೆ ಕೆಲವು ವರ್ಷಗಳ ನಂತರ ಕೊಹ್ಲಿ ಸಾರಾ ಜೊತೆಗಿನ ಸಂಬಂಧವನ್ನು ಕೊನೆಗೊಳಿಸಿದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News