“ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಸೋತರೆ ಡ್ಯಾನ್ಸ್ ಮಾಡ್ತೇನೆ”-ಪಾಕ್ ಆಟಗಾರನ ಶಾಕಿಂಗ್ ಹೇಳಿಕೆ ವೈರಲ್

Mohammad Amir statement on Team India: ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅಷ್ಟೇ ಅಲ್ಲದೆ, ಇಂದು ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಕಣಕ್ಕಿಳಿಯಲಿದ್ದು, ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಲಿದೆ.

Written by - Bhavishya Shetty | Last Updated : Nov 4, 2023, 08:02 AM IST
    • ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯಲ್ಲಿ ಸೆಮಿಫೈನಲ್ ತಲುಪಿದೆ
    • ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಶಾಕಿಂಗ್ ಹೇಳಿಕೆ
    • ಜಿಯೋ ನ್ಯೂಸ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಆಲ್’ರೌಂಡರ್ ಇಮಾದ್ ವಾಸಿಂ
“ಸೆಮಿಫೈನಲ್’ನಲ್ಲಿ ಟೀಂ ಇಂಡಿಯಾ ಸೋತರೆ ಡ್ಯಾನ್ಸ್ ಮಾಡ್ತೇನೆ”-ಪಾಕ್ ಆಟಗಾರನ ಶಾಕಿಂಗ್ ಹೇಳಿಕೆ ವೈರಲ್ title=
World Cup 2023

Mohammad Amir statement on Team India: ಟೀಂ ಇಂಡಿಯಾ ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಫಾರ್ಮ್ ಕಾಯ್ದುಕೊಂಡು ಸೆಮಿಫೈನಲ್ ತಲುಪಿದೆ. ಆದರೆ ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಆಟಗಾರ ಮೊಹಮ್ಮದ್ ಅಮೀರ್ ಶಾಕಿಂಗ್ ಹೇಳಿಕೆಯೊಂದನ್ನು ನೀಡಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಇತಿಹಾಸದ ಎಲ್ಲಾ ಟೂರ್ನಿ ಆಡಿದ್ರೂ ಒಂದೇ ಒಂದು ಬಾರಿಯೂ ಟ್ರೋಫಿ ಗೆದ್ದಿಲ್ಲ ಈ ಏಕೈಕ ತಂಡ: ಯಾವುದು ಗೊತ್ತಾ?

ವಿಶ್ವಕಪ್‌’ನಲ್ಲಿ ಪಾಕಿಸ್ತಾನ ಸೆಮಿಫೈನಲ್ ತಲುಪಿ ಟೀಂ ಇಂಡಿಯಾವನ್ನು ಸೋಲಿಸಿದರೆ, ಇರ್ಫಾನ್ ಪಠಾಣ್ ಡ್ಯಾನ್ಸ್ ಮಾಡಿದಂತೆ ನಾನೂ ಕೂಡ ಮಾಡುತ್ತೇನೆ. ಅಂದಹಾಗೆ ನಾನು ಪಠಾಣ್’ಗಿಂತ ಚೆನ್ನಾಗಿ ಡ್ಯಾನ್ಸ್ ಮಾಡ್ತೇನೆ” ಎಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ಇನ್ನೊಂದೆಡೆ ಜಿಯೋ ನ್ಯೂಸ್‌ ನಡೆಸಿದ ಕಾರ್ಯಕ್ರಮದಲ್ಲಿ ಮಾತನಾಡಿದ ಪಾಕ್ ತಂಡದ ಆಲ್’ರೌಂಡರ್ ಇಮಾದ್ ವಾಸಿಂ, “ 2021ರ ಟಿ20 ವಿಶ್ವಕಪ್‌’ನಲ್ಲಿ ಭಾರತವನ್ನು ಸೋಲಿಸಿದಂತೆಯೇ, ಪಾಕಿಸ್ತಾನ ಸೆಮಿಫೈನಲ್‌’ನಲ್ಲಿ ಭಾರತವನ್ನು ಸೋಲಿಸಬೇಕು, ಇದು ನನ್ನ ಆಸೆ ಎಂದು ಹೇಳಿದ್ದಾರೆ.  

ಅಂದಹಾಗೆ ವಿಶ್ವಕಪ್‌ ಟೂರ್ನಿಯಲ್ಲಿ ಪಾಕಿಸ್ತಾನ ತಂಡ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ. ಅಷ್ಟೇ ಅಲ್ಲದೆ, ಇಂದು ನ್ಯೂಜಿಲೆಂಡ್ ವಿರುದ್ಧ ಪಾಕಿಸ್ತಾನ ಕಣಕ್ಕಿಳಿಯಲಿದ್ದು, ಉಭಯ ತಂಡಗಳಿಗೂ ಈ ಪಂದ್ಯ ನಿರ್ಣಾಯಕವಾಗಲಿದೆ. ಪಾಕ್ ತಂಡ ಈಗಾಗಲೇ 7 ಪಂದ್ಯಗಳಲ್ಲಿ 4ರಲ್ಲಿ ಸೋತಿದೆ. ಆದರೆ ನ್ಯೂಜಿಲೆಂಡ್ ತಂಡ ಸತತ 3 ಪಂದ್ಯಗಳಲ್ಲಿ ಸೋಲು ಕಂಡಿದ್ದು, ಪಾಕ್ ತಂಡಕ್ಕೆ ಇನ್ನೂ ಸೆಮಿಫೈನಲ್ ಪ್ರವೇಶಿಸಲುವ ಅವಕಾಶ ಿದೆ.

ಇದನ್ನೂ ಓದಿ: ಇಂದು ಶನಿದೇವನೇ ಈ ರಾಶಿಗೆ ಅದೃಷ್ಟದೇವತೆ: ಪ್ರತೀ ಕಾರ್ಯದಲ್ಲೂ ಅಗಾಧ ಯಶಸ್ಸು-ವಿದೇಶ ಪ್ರಯಾಣ ಯೋಗ

ಇದುವರೆಗಿನ ದಾಖಲೆ ಪುಟಗಳನ್ನು ತೆರೆದು ನೋಡಿದರೆ, ಏಕದಿನ ವಿಶ್ವಕಪ್ ಇತಿಹಾಸದಲ್ಲಿ ಒಂದೇ ಒಂದು ಬಾರಿಯೂ ಪಾಕಿಸ್ತಾನ ಭಾರತವನ್ನು ಸೋಲಿಸಿಲ್ಲ ಎಂಬುದು ತಿಳಿಯುತ್ತದೆ. 8 ಬಾರಿ ಮುಖಾಮುಖಿಯಾಗಿದ್ದು ಎಲ್ಲದರಲ್ಲೂ ಟೀಂ ಇಂಡಿಯಾವೇ ವಿಜಯಶಾಲಿಯಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News