ಬೆರಳಿಗೆ ಬಾಲ್ ತಗುಲಿ ಗಾಯಕ್ಕೆ ತುತ್ತಾದ ಕ್ಯಾಪ್ಟನ್! 31ರ ಹರೆಯದ ಸ್ಟಾರ್ ಆಲ್’ರೌಂಡರ್’ಗೆ ನಾಯಕತ್ವ ವಹಿಸಿದ ಸಮಿತಿ

Kane Williamson Captaincy: ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು.

Written by - Bhavishya Shetty | Last Updated : Oct 18, 2023, 04:53 PM IST
    • ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಭಾಗವಹಿಸಿರಲಿಲ್ಲ.
    • ಗಾಯದ ಸಮಸ್ಯೆಯಿಂದ ಕೆಲವು ಪಂದ್ಯಗಳಿಂದ ಹೊರಬಿದ್ದಿದ್ದಾರೆ
    • ಕೇನ್ ವಿಲಿಯಮ್ಸನ್ ಬದಲಿಗೆ ಟಾಮ್ ಲ್ಯಾಥಮ್’ಗೆ ತಂಡದ ನಾಯಕತ್ವ
ಬೆರಳಿಗೆ ಬಾಲ್ ತಗುಲಿ ಗಾಯಕ್ಕೆ ತುತ್ತಾದ ಕ್ಯಾಪ್ಟನ್! 31ರ ಹರೆಯದ ಸ್ಟಾರ್ ಆಲ್’ರೌಂಡರ್’ಗೆ ನಾಯಕತ್ವ ವಹಿಸಿದ ಸಮಿತಿ title=
Kane Williamson

Kane Williamson Captaincy: ಐಸಿಸಿ ಏಕದಿನ ವಿಶ್ವಕಪ್-2023 ರಲ್ಲಿ ನ್ಯೂಜಿಲೆಂಡ್ ತಂಡದ ನಾಯಕನನ್ನು ಬದಲಾಯಿಸಲಾಗಿದೆ. ಇದಕ್ಕೆ ಕಾರಣ ಕೇನ್ ವಿಲಿಯಮ್ಸನ್ ಗಾಯದ ಸಮಸ್ಯೆಯಿಂದ ಕೆಲವು ಪಂದ್ಯಗಳಿಂದ ಹೊರಬಿದ್ದಿರುವುದು.

ಇದನ್ನೂ ಓದಿ: ಪಾಕ್ ವಿರುದ್ಧ ಭಾರತಕ್ಕೆ ಗೆಲುವು ತಂದುಕೊಟ್ಟಿದ್ದ ಈ ಬ್ಯಾಟರ್ ಬಾಂಗ್ಲಾ ಪಂದ್ಯದಿಂದ ರೂಲ್ಡೌಟ್!

ಬುಧವಾರ ಅಂದರೆ ಇಂದು ನಡೆಯುತ್ತಿರುವ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಕೇನ್ ವಿಲಿಯಮ್ಸನ್ ಭಾಗವಹಿಸಿರಲಿಲ್ಲ. ಅವರ ಜಾಗದಲ್ಲಿ ವಿಲ್ ಯಂಗ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಇನ್ನು ಟಾಮ್ ಲ್ಯಾಥಮ್ ಕೂಡ ವಿಲಿಯಮ್ಸನ್ ಬಗ್ಗೆ ಹೇಳಿಕೆ ನೀಡಿದ್ದಾರೆ.

ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಈ ವಿಶ್ವಕಪ್ ಪಂದ್ಯದಲ್ಲಿ ಟಾಸ್ ಗೆದ್ದ ಅಫ್ಘಾನಿಸ್ತಾನ ನಾಯಕ ಹಶ್ಮತುಲ್ಲಾ ಶಾಹಿದಿ ನ್ಯೂಜಿಲೆಂಡ್ ತಂಡವನ್ನು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಈ ಮಧ್ಯೆ ಕೇನ್ ವಿಲಿಯಮ್ಸನ್ ಬದಲಿಗೆ ಟಾಮ್ ಲ್ಯಾಥಮ್ ತಂಡದ ನಾಯಕತ್ವ ವಹಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಬಳಕೆ ಮಾಡುವ ಕ್ರಿಕೆಟ್ ಹೆಲ್ಮೆಟ್ ಬೆಲೆಯೆಷ್ಟು ಗೊತ್ತಾ?

ಟಾಸ್ ಸೋತ ನಂತರ ಮಾತನಾಡಿದ ಟಾಮ್ ಲ್ಯಾಥಮ್, “ಏನು ಮಾಡಬೇಕೆಂದು ಖಚಿತವಾಗಲಿಲ್ಲ. ಉತ್ತಮ ಪಿಚ್ ತೋರುತ್ತಿದೆ. ಮೊದಲು ಬ್ಯಾಟ್ ಮಾಡುವುದು ನಮಗೆ ಒಳ್ಳೆಯದು. ಕೇನ್ ವಿಲಿಯಮ್ಸನ್ ಬದಲಿಗೆ ವಿಲ್ ಯಂಗ್‌’ಗೆ ತಂಡದಲ್ಲಿ ಅವಕಾಶ ನೀಡಲಾಗಿದೆ” ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್

Trending News