Yalahanka : ಚುನಾವಣೆ ಸಮೀಪಿಸುತ್ತಿದ್ದಂತೆ ಪ್ರಚಾರ ಹೆಚ್ಚಾಗುತ್ತಿವೆ. ಪಂಚರತ್ನಯಾತ್ರೆ ಎಲ್ಲೆಡೆ ಅಬ್ಬರಿಸುತ್ತಿದೆ. ನೆನ್ನೆ ಯಲಹಂಕದಲ್ಲಿ ಹೆಚ್ ಡಿ ಕುಮಾರಸ್ವಾಮಿ ಅವರ ಪಂಚರತ್ನಯಾತ್ರೆ ಭರ್ಜರಿಯಾಗಿ ಯಶ್ವಿಯಾಯಿತು. ಅಭಿಮಾನಿಗಳು ಹಾಗೂ ಕಾರ್ಯಕರ್ತರು ಕುಮಾರಸ್ವಾಮಿಯವರನ್ನು ಹಾಲಿನ ಫ್ಯಾಕೆಟ್ ಹಾಗೂ ನಿಂಬೆ ಹಣ್ಣಿನ ಹಾರದೊಂದಿಗೆ ಸ್ವಾಗತಿಸಿದರು.
ದೊಡ್ಡ ಗೌಡರ ಮನೆಯಲ್ಲಿ ಮುಗಿಯದ ಸಿಂʻಹಾಸನʼ ಕಾದಾಟ. ಹೆಜ್ಜೆ ಹೆಜ್ಜೆಗೂ ಗೊಂದಲ.. ಹೆಚ್ಚಾಯ್ತು ಹಾಸನ ಟಿಕೆಟ್ ತಿಕ್ಕಾಟ. HDK ವಿರೋಧದ ನಡುವೆಯೂ ಹಾಸನದಲ್ಲಿ ಭವಾನಿ ಆ್ಯಕ್ಟೀವ್..!. ತೆರೆಮರೆಯಲ್ಲಿ ದಾಳ ಉರುಳಿಸುತ್ತಿದ್ದಾರಾ ಹೆಚ್.ಡಿ.ರೇವಣ್ಣ?. ಹಾಸನಕ್ಕೆ ಭವಾನಿಯೇ ಅಭ್ಯರ್ಥಿ ಎಂದು ರೇವಣ್ಣ ಫ್ಯಾಮಿಲಿ ಪ್ರಚಾರ. ಹೋದಲ್ಲೆಲ್ಲಾ ಭವಾನಿಯೇ ಅಭ್ಯರ್ಥಿ ಎಂದು ಬೆಂಬಲಿಗರ ಘೋಷಣೆ. ಪತ್ನಿ ಜೊತೆ ತಮ್ಮ ನೇತೃತ್ವದಲ್ಲಿ ಪ್ರಚಾರ ಶುರು ಮಾಡಿರುವ ರೇವಣ್ಣ.
ಮಾಜಿ ಸಿಎಂ ಅನ್ನೋದು ಮರೆತುಬಿಟ್ರಾ ಹೆಚ್.ಡಿ.ಕುಮಾರಸ್ವಾಮಿ? ಮಾಜಿ ಸ್ಪೀಕರ್ ರಮೇಶ್ ಕುಮಾರ್ಗೆ ಅವಾಚ್ಯ ಶಬ್ಧಗಳಿಂದ ನಿಂದನೆ. ಕೋಲಾರದಲ್ಲಿ ಹೆಚ್ಡಿಕೆ ನಿಂದಿಸಿರುವ ವಿಡಿಯೋ ಭಾರೀ ವೈರಲ್. ಬಳಿಕ ಅವಾಚ್ಯ ಶಬ್ದ ಬಳಕೆ ಮಾಡಿದ್ದಕ್ಕೆ ಕ್ಷಮೆ ಕೇಳಿದ ಕುಮಾರಸ್ವಾಮಿ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕ್ಷೇತ್ರ ಹುಡುಕಾಟ ನಡೆಸುತ್ತಿರುವ ಬಗ್ಗೆ, ಅವರು ಕೋಲಾರಕ್ಕೆ ಹೋಗಿರುವ ಬಗ್ಗೆ ನಾನು ಲಘುವಾಗಿ ಮಾತನಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಹೇಳಿದರು.
ಮಾಜಿ ಮುಖ್ಯಮಂತ್ರಿ ಹೆಚ್. ಡಿ. ಕುಮಾರಸ್ವಾಮಿ ಅವರಿಗೆ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಟ್ವಿಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಹೆಚ್. ಡಿ. ಕುಮಾರಸ್ವಾಮಿ, ಸಣ್ಣ ಪ್ರಮಾಣದ ಜ್ವರ, ಮೈಕೈ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ನಾನು ಇಂದು ಕೋವಿಡ್ ಪರೀಕ್ಷೆ ಮಾಡಿಸಿಕೊಂಡಿದ್ದು, ಫಲಿತಾಂಶ ಪಾಸಿಟಿವ್ ಎಂದು ಬಂದಿರುವುದಾಗಿ ಮಾಹಿತಿ ನೀಡಿದ್ದಾರೆ.
"ಆಪರೇಷನ್ ಕಮಲವೆಂಬ ಅನೈತಿಕ ಕೂಸಿನ ಬೇನಾಮಿ ಅಪ್ಪ, ಆ ಪಾಪಕ್ಕೆ ಪ್ರತಿಯಾಗಿ ಪಡೆದ ಫಲದ ಬಗ್ಗೆ ಪಲಾಯನವೇಕೆ ಸುಳ್ಳುರಾಮಯ್ಯ? ಕಳ್ಳಮಾಲು ಹ್ಯೂಬ್ಲೆಟ್ ವಾಚಿನ ಬಗ್ಗೆ ವಾಕರಿಕೆ ಬರುವಷ್ಟು ಹೇಸಿಗೆ ಕಥೆಗಳೇ ಇವೆ. ಇವೆರಡೂ ಪ್ರಶ್ನೆಗಳಿಗೂ ಉತ್ತರಿಸುತ್ತಿಲ್ಲ, ಯಾಕಯ್ಯಾ?" ಎಂದು ಟ್ವೀಟಾಪ್ರಹಾರ ಮಾಡಿದ್ದಾರೆ.
ನಾನು ಈ ಬಾರಿ ಸದನದಲ್ಲಿ ಕಳೆದ ಹತ್ತು ವರ್ಷಗಳ ಅವಧಿಯಲ್ಲಿ ನಡೆದ ಭ್ರಷ್ಟಾಚಾರಗಳ, ಹಗರಣಗಳ ಬಗ್ಗೆ ಸದನದಲ್ಲಿ ದಾಖಲೆಗಳನ್ನು ಇಡಲು ತಯಾರಿ ಮಾಡಿಕೊಂಡಿದ್ದೆ. ಆದರೆ ಸದನವು ಸರಿಯಾಗಿ ನಡೆಯಲೇ ಇಲ್ಲ, ಎಂದು ಹೇಳಿದರು.
'ಕರ್ನಾಟಕದ ವಿಚಾರದಲ್ಲಿ ಹೇಳತೀರದ ತಾರತಮ್ಯ ಮಾಡುತ್ತಿರುವ ಕೇಂದ್ರ ಸರ್ಕಾರ ಒಂದು ವಿಷಯ ಸ್ಪಷ್ಟವಾಗಿ ಅರಿಯಬೇಕು. ಇದು ಒಕ್ಕೂಟ ವ್ಯವಸ್ಥೆ. ಒಕ್ಕೂಟ ಸರ್ಕಾರ ನಡೆಸುತ್ತಿರುವವರು ಎಲ್ಲ ರಾಜ್ಯಗಳಿಗೂ ಸಮಾನ ಆದ್ಯತೆ ನೀಡಬೇಕು. ಅನಿವಾರ್ಯದಲ್ಲಿರುವವರ ಅಗತ್ಯಗಳನ್ನು ಮೊದಲು ಪೂರೈಸಬೇಕು. ಅದನ್ನು ಬಿಟ್ಟು ತಾತ್ಸಾರ ಮಾಡಿದರೆ ಜನ ದಂಗೆ ಎದ್ದಾರು'- ಎಚ್ಡಿ ಕುಮಾರಸ್ವಾಮಿ
ಕೆನಡಾ ಪ್ರಧಾನಿ ಕಳವಳದ ನಡುವೆಯೇ ಈಗ ಅಮೆರಿಕ, ಬ್ರಿಟನ್ ಸಂಸದರೂ ಕಳವಳ ವ್ಯಕ್ತಪಡಿಸಿದ್ದಾರೆ. ಭಾರತದಲ್ಲಿ ಏನೋ ಸಮಸ್ಯೆ ಸೃಷ್ಟಿಯಾಗಿದೆ ಎಂಬರ್ಥವನ್ನು ರೈತರ ಈ ಹೋರಾಟ ಹೊಮ್ಮಿಸುತ್ತಿದೆ- ಎಚ್.ಡಿ. ಕುಮಾರಸ್ವಾಮಿ
ಹಿಂದೆ ಏರಿಕೆ ವಿರುದ್ಧ ಸರಣಿ ಟ್ವೀಟ್ ಮಾಡಿರುವ ಕುಮಾರಸ್ವಾಮಿ, 'ಹಿಂದಿ ರಾಷ್ಟ್ರಭಾಷೆಯಲ್ಲ. ರಾಷ್ಟ್ರಭಾಷೆ ಎಂಬ ಕಲ್ಪನೆ ಸಂವಿಧಾನದಲ್ಲಿಲ್ಲ. ಆದರೂ ಹಿಂದಿಯನ್ನು ರಾಷ್ಟ್ರಭಾಷೆ ಎಂದು ಬಿಂಬಿಸುವ, ಅದರಲ್ಲಿ ರಾಜಕೀಯ ಮಾಡುವ ಪ್ರಯತ್ನ ಹಿಂದಿನಿಂದಲೂ ನಡೆದೇ ಬಂದಿದೆ.
ರಾಜ್ಯ ಬಿಜೆಪಿ ಸರ್ಕಾರ ಒಂದು ವರ್ಷ ಪೂರೈಸಿದ ಹಿನ್ನಲೆಯಲ್ಲಿ 'ಸವಾಲುಗಳ ವರ್ಷ; ಪರಿಹಾರದ ಸ್ಪರ್ಶ' ಎಂಬ ಹೆಸರಿನಲ್ಲಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ಹಿಡಿದು ಎಲ್ಲಾ ಸಚಿವರು ಪತ್ರಿಕಾಗೋಷ್ಠಿ ನಡೆಸಿ ಸರ್ಕಾರದ ಸಾಧನೆಯನ್ನು ಹೇಳುತ್ತಿದ್ದಾರೆ.
ಮಂಡ್ಯದಲ್ಲಿ ಸಪೋಟವನ್ನು ರಸ್ತೆಗೆ ಸುರಿದ, ಚಿಕ್ಕಬಳ್ಳಾಪುರದಲ್ಲಿ ದ್ರಾಕ್ಷಿಯನ್ನು ತಿಪ್ಪೆಗೆ ಹಾಕಿದ, ಶಿವಮೊಗ್ಗದಲ್ಲಿ ಹೈನುಗಾರರಿಂದ ಹಾಲು ನಿಲ್ಲಿಸಿದ, ಕೋಲಾರದಲ್ಲಿ ಟೊಮೆಟೊ ನಾಶ ಮಾಡಿದ ಘಟನೆಗಳು ರೈತರು ಎದುರಿಸುತ್ತಿರುವ ದುಸ್ಥಿತಿಯನ್ನು ವಿವರಿಸುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಇದು ವಿಕೋಪಗೊಳ್ಳುವ ಆತಂಕ ನನ್ನನ್ನು ಕಾಡುತ್ತಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆತಂಕ ವ್ಯಕ್ತಪಡಿಸಿದ್ದಾರೆ.
ನನ್ನದು ಡ್ರಾಮಾ ಕಣ್ಣೀರಲ್ಲ. ಕಣ್ಣೀರು ಹಾಕುವುದು ನಮ್ಮ ಕುಟುಂಬದ ಪೇಟೆಂಟ್ ಎಂದು ಕರೆದರೂ ಪರವಾಗಿಲ್ಲ. ನಿಮ್ಮಂತೆ ನಾನು ಹಲ್ಲು ಬಿಟ್ಟುಕೊಂಡು ನಿಂತಿಲ್ಲ- ಕೇಂದ್ರ ಸಚಿವ ಡಿ.ವಿ. ಸದಾನಂದ ಗೌಡರ ಟೀಕೆಗೆ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು
ಕೆಆರ್ಎಸ್ನಲ್ಲಿ ಡಿಸ್ನಿಲ್ಯಾಂಡ್ ಮಾದರಿ ಪಾರ್ಕ್ ನಿರ್ಮಾಣ ಮಾಡಲಾಗುತ್ತದೆ. ಈ ವಿಚಾರದಲ್ಲಿ ಯಾವುದೇ ರಾಜಿ ಪ್ರಶ್ನೆಯೇ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.