ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಕೈಗೊಂಡಿದ್ದ ಚಂದ್ರಯಾನ 2 ಕೊನೆ ಕ್ಷಣದಲ್ಲಿ ಸಂಪರ್ಕ ಕಡಿದುಕೊಂಡಿದೆ. ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೊರಡಿಸಿದ ಹೇಳಿಕೆಯಲ್ಲಿ ಚಂದ್ರಯಾನ -2 ಚಂದ್ರನ ಮೇಲ್ಮೈಯಿಂದ 2.1 ಕಿ.ಮೀ ದೂರದಲ್ಲಿ ಸಂಪರ್ಕವನ್ನು ಕಳೆದುಕೊಂಡಿದೆ.
ಚಂದ್ರಯಾನ್ -2ನ ವಿಕ್ರಮ್ ಲ್ಯಾಂಡರ್ ಶನಿವಾರ ಮುಂಜಾನೆ 1.30 ರಿಂದ 2.30ರ ವೇಳೆಗೆ ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಪಾದಾರ್ಪಣೆ ಮಾಡಲಿದ್ದು, ಬಾಹ್ಯಾಕಾಶ ನೌಕೆಯು ಚಂದ್ರನ ಮೇಲೆ ಸುರಕ್ಷಿತ ಮತ್ತು ಯಶಸ್ವಿಯಾಗಿ ಇಳಿಯುವ ಬಗ್ಗೆ ವಿಶ್ವಾಸವಿದೆ ಎಂದು ಶಿವನ್ ಅವರು ಸುದ್ದಿಸಂಸ್ಥೆ ಎಎನ್ಐಗೆ ಹೇಳಿದ್ದಾರೆ.
ಈ ಮಹತ್ವದ ಕಾರ್ಯಾಚರಣೆ ಮಧ್ಯಾಹ್ನ 12.45 ರಿಂದ 13. 45 ರವರೆಗೆ (ಐಎಸ್ಟಿ) ಪ್ರಾರಂಭವಾಗಲಿದೆ. ಇದನ್ನು ಅನುಸರಿಸಿ, ಚಂದ್ರನ ದಕ್ಷಿಣ ಧ್ರುವ ಪ್ರದೇಶದಲ್ಲಿ ಇಳಿಯಲು ತಯಾರಿ ಮಾಡಲು ವಿಕ್ರಮ್ ಲ್ಯಾಂಡರ್ನ ಎರಡು ಡಿಯೊರ್ಬಿಟ್ ಕುಶಲತೆ ಇರುತ್ತದೆ.
ಬಾಹ್ಯಾಕಾಶ ಜಗತ್ತಿನಲ್ಲಿ, ಚಂದ್ರಯಾನ -2 ಎಂಬ ಬಾಹ್ಯಾಕಾಶ ನೌಕೆ ಮಂಗಳವಾರ ಬೆಳಿಗ್ಗೆ ಚಂದ್ರನ ಕಕ್ಷೆಗೆ ಯಶಸ್ವಿಯಾಗಿ ಪ್ರವೇಶಿಸುವುದರ ಜೊತೆಗೆ ಭಾರತ ಮತ್ತೊಂದು ಮೈಲಿಗಲ್ಲು ಸಾಧಿಸಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಚಂದ್ರಯಾನ್ -2 ಮಂಗಳವಾರ ಬೆಳಿಗ್ಗೆ 9 ಗಂಟೆ 2 ನಿಮಿಷಕ್ಕೆ ಸರಿಯಾಗಿ ಭೂಮಿಯ ಕಕ್ಷೆಯಿಂದ ಚಂದ್ರನ ಕಕ್ಷೆಗೆ ಇಳಿದಿದೆ ಎಂದು ಇಸ್ರೋ ವಿಜ್ಞಾನಿಗಳು ತಿಳಿಸಿದ್ದಾರೆ.
ಇಂದು ಇಸ್ರೋ ಸಂಸ್ಥಾಪಕ, ವಿಜ್ಞಾನ ಸಾಧನೆಯ 'ವಿಕ್ರಮ' ಡಾ.ವಿಕ್ರಮ್ ಸಾರಾಭಾಯ್ ಅವರ 100ನೇ ವರ್ಷದ ಹುಟ್ಟುಹಬ್ಬ. ಈ ಸುಸಂದರ್ಭದಲ್ಲಿ ಗೂಗಲ್ ವಿಶೇಷ ಡೂಡಲ್ ಅರ್ಪಿಸುವ ಮೂಲಕ ಶುಭಾಶಯ ಕೋರಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಚಂದ್ರಯಾನ -2 ವಿಕ್ರಮ್ ಲ್ಯಾಂಡರ್ ಸೆರೆಹಿಡಿದ ಭೂಮಿಯ ಮೊದಲ ಚಿತ್ರಗಳನ್ನು ಭಾನುವಾರದಂದು ಟ್ವಿಟರ್ನಲ್ಲಿ ಫೋಟೋಗಳನ್ನು ಬಿಡುಗಡೆ ಮಾಡಿದೆ.
ಭಾರತದ ಬಹುನಿರೀಕ್ಷಿತ ಯೋಜನೆಯಾದ ಚಂದ್ರಯಾನ-2, ಇಂದು ಸರಿ ಸುಮಾರು ಮಧ್ಯಾಹ್ನ 2.43 ಗಂಟೆಗೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆಯಾಗಿದೆ. ಆ ಮೂಲಕ ಈ ಸಾಧನೆ ಮಾಡಿದ ನಾಲ್ಕನೇ ದೇಶ ಎನ್ನುವ ಖ್ಯಾತಿಯನ್ನು ಪಡೆದಿದೆ. ಚಂದ್ರಯಾನ ತನ್ನ ಗುರಿಯನ್ನು ಸಾಧಿಸಲು 54 ದಿನಗಳನ್ನು ತೆಗೆದುಕೊಳ್ಳಲಿದೆ ಎನ್ನಲಾಗಿದೆ.
2008ರಲ್ಲಿ ಪ್ರಾರಂಭವಾದ ಇಸ್ರೋದ ಚಂದ್ರಯಾನ್-1 ರ ಅನುಸರಣೆಯಾದ ಚಂದ್ರಯಾನ್-2 ಚಂದ್ರನ ಮೂಲ ಮತ್ತು ವಿಕಾಸವನ್ನು ಅರ್ಥಮಾಡಿಕೊಳ್ಳುವ ಬಗ್ಗೆ ವಿವರವಾದ ಅಧ್ಯಯನವನ್ನು ಕೈಗೊಳ್ಳುವ ಗುರಿ ಹೊಂದಿದೆ.
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಭೂಮಿಯ ಮೇಲೆ ನಿಗಾ ಇಡುವ ರೇಡಾರ್ ಇಮೇಜಿಂಗ್ ಪರಿವೀಕ್ಷಕ ಉಪಗ್ರಹ RISAT-2B ಅನ್ನು ಇಂದು ಮುಂಜಾನೆ ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ಉಡಾವಣೆ ಮಾಡಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.