MG Elecrtic Car:ಎಂಜಿ ಎಲೆಕ್ಟ್ರಿಕ್ ಕಾರ್ ಅನ್ನು ಈ ವರ್ಷ ಭಾರತದಲ್ಲಿ ಬಿಡುಗಡೆಗೆ ಎಲ್ಲಾ ಸಿದ್ಧತೆಗಳು ಪೂರ್ಣಗೊಂಡಿವೆ. ಕಂಪನಿಯು ಈ ಎಲೆಕ್ಟ್ರಿಕ್ ಕಾರಿನ ಹೆಸರನ್ನು ಕೂಡ ಈಗಾಗಲೇ ಘೋಷಿಸಿದೆ. ಇದಕ್ಕೆ ಎಂಜಿ ಕಾಮೆಟ್ ಎಂದು ಹೆಸರಿಡಲಾಗಿದೆ.
Tata Tiago EV Price Hike:ಕಂಪನಿಯು ಈಗ ಈ ಕಾರಿನ ಬೆಲೆಯನ್ನು 20000 ರೂಪಾಯಿಗಳಷ್ಟು ಹೆಚ್ಚಿಸಿದೆ. ಈ ಬೆಲೆ ಏರಿಕೆ ನಂತರ ಟಾಟಾ ಟಿಯಾಗೊ EV ಯ ಹೊಸ ಆರಂಭಿಕ ಬೆಲೆ 8.69 ಲಕ್ಷ ರೂ.ಯಾಗಿದೆ.
Tata Tiago EV : ಟಾಟಾ ಮೋಟಾರ್ಸ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವಲ್ಲಿ ಮುಂಚೂಣಿಯಲ್ಲಿದೆ. ಕಂಪನಿಯ ಟಾಟಾ ನೆಕ್ಸಾನ್ ಇವಿ ಹೆಚ್ಚು ಮಾರಾಟವಾಗುತ್ತಿದೆ. ಟಾಟಾ ಮೋಟಾರ್ಸ್ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರ್ ಟಾಟಾ ಟಿಯಾಗೊ EV ಅನ್ನು ಅಕ್ಟೋಬರ್ 2022 ರಲ್ಲಿ ಬಿಡುಗಡೆ ಮಾಡಿತು.
Sea Salt Battery In EVs:ಲಿಥಿಯಂ ಬ್ಯಾಟರಿಗಳಿಗೆ ಹೋಲಿಸಿದರೆ ಈ ಬ್ಯಾಟರಿ ಅಗ್ಗವಾಗಿದೆ. ಮಾತ್ರವಲ್ಲ ನಾಲ್ಕು ಪಟ್ಟು ಹೆಚ್ಚು ಎನರ್ಜಿ ಸ್ಟೋರ್ ಮಾಡುತ್ತದೆ. ಇದನ್ನು " ಸೀ ಸಾಲ್ಟ್ ಬ್ಯಾಟರಿ " ಅಥವಾ "ಸೋಡಿಯಂ-ಸಲ್ಫರ್ ಬ್ಯಾಟರಿ" ಎಂದು ಕರೆಯಲಾಗುತ್ತದೆ.
Affordable Electric Cars In 2023: ತೈಲ ಬೆಲೆಗಳ ಏರಿಕೆಯಿಂದಾಗಿ ಬೇಸತ್ತಿರುವ ಜನರು ಇತ್ತೀಚಿನ ದಿನಗಳಲ್ಲಿ ಎಲೆಕ್ಟ್ರಿಕ್ ವಾಹನಗಳತ್ತ ಒಲವು ತೋರುತ್ತಿದ್ದಾರೆ. ಈ ವರ್ಷ 2022 ರಲ್ಲಿ ಅನೇಕ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಆಗಿ ಜನರ ಮನಸೂರೆಗೊಂಡಿದ್ದವು. ಇದೀಗ ಮುಂದಿನ ವರ್ಷ 2023ರಲ್ಲೂ ಅನೇಕ ಹೊಸ ಮಾದರಿಯ ಎಲೆಕ್ಟ್ರಿಕ್ ಕಾರುಗಳು ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿವೆ. ವಿಶೇಷತೆ ಎಂದರೆ ಇವುಗಳ ಬೆಲೆಗಳು ಕೂಡ ಜನರನ್ನು ಆಕರ್ಷಿಸುತ್ತವೆ.
Tata Tiago EV Waiting Period: ಇದುವರೆಗೆ ಈ ಹ್ಯಾಚ್ಬ್ಯಾಕ್ ಎಲೆಕ್ಟ್ರಿಕ್ ಕಾರಿಗಾಗಿ ಕಂಪನಿ ಸುಮಾರು 20 ಸಾವಿರ ಬುಕ್ಕಿಂಗ್ ಪಡೆದುಕೊಂಡಿದ್ದು, ಜನರ್ವರಿ 2023ರಿಂದ ಈ ಕಾರಿನ ವಿತರಣೆ ಆರಂಬವಾಗಲಿದೆ. ಪ್ರಸ್ತುತ ಈ ಕಾರಿನ ವೇಟಿಂಗ್ ಪಿರಿಯಡ್ 4 ತಿಂಗಳದ್ದಾಗಿದೆ. ಕೆಲ ಆಯ್ದ ನಗರಗಳಲ್ಲಿ ಈ ಅವಧಿ 2 ತಿಂಗಳದ್ದಾಗಿದೆ.
ಇದು ದೇಶದಲ್ಲಿಯೇ ಅಗ್ಗದ ಎಲೆಕ್ಟ್ರಿಕ್ ಕಾರಾಗಿದ್ದು, ಎರಡು ಬ್ಯಾಟರಿ ಪ್ಯಾಕ್ಗಳನ್ನು ಹೊಂದಿದೆ. ಅಷ್ಟೇ ಅಲ್ಲದೆ, ಒಂದು ಬಾರಿ ಚಾರ್ಜ್ ಮಾಡಿದರೆ 315 ಕಿಮೀ ಓಡುವ ಸಾಮಾರ್ಥ್ಯ ಈ ಕಾರಿಗಿದೆ. ಈ ಕಾರಿನ ಮೌಲ್ಯ 8.49 ಲಕ್ಷ ರೂ.ಗಳಿಂದ 11.79 ಲಕ್ಷ ರೂಪಾಯಿ.
Tata Tiago EV: ಅಕ್ಟೋಬರ್ನಲ್ಲಿ ಟಿಯಾಗೋ ಇವಿಗಾಗಿ ಬುಕಿಂಗ್ ಪ್ರಾರಂಭವಾಗಲಿದೆ ಎಂದು ಟಾಟಾ ಮೋಟಾರ್ಸ್ ಈ ಮೊದಲೇ ತಿಳಿಸಿತ್ತು. ಅದರಂತೆ ಅಗ್ಗದ ಎಲೆಕ್ಟ್ರಿಕ್ ಕಾರ್ ಎಂದೇ ಹೆಸರುವಾಸಿ ಆಗಿರುವ ಟಾಟಾ ಟಿಯಾಗೊ ಇವಿ ಬುಕಿಂಗ್ ಅಕ್ಟೋಬರ್ 10, 2022 ರಿಂದ ಅಂದರೆ ಇಂದಿನಿಂದ ಪ್ರಾರಂಭವಾಗಲಿದೆ. ನೀವೂ ಈ ಕಾರನ್ನು ಕೊಳ್ಳಲು ಬಯಸಿದರೆ ಕೇವಲ 21,000 ರೂ.ಗೆ ಹೊಸ ಟಾಟಾ ಟಿಯಾಗೊ ಇವಿ ಅನ್ನು ಬುಕ್ ಮಾಡಬಹುದಾಗಿದೆ.
ಅಕ್ಟೋಬರ್ 10 ರ ಬಳಿಕ Tiago EV ಬುಕ್ಕಿಂಗ್ ಆರಂಭವಾಗಲಿದೆ. ಈ ವಿಶೇಷ ಕಾರು ಸುಧಾರಿತ ತಂತ್ರಜ್ಞಾನದ ಕ್ರೂಸ್ ನಿಯಂತ್ರಣವನ್ನು ಹೊಂದಿದೆ. ಇನ್ನು ಈ ಕಾರಿಗೆ ಮತ್ತು ನಿಮ್ಮ ಫೋನ್ ಗೆ ಲಿಂಕ್ ಮಾಡಿಕೊಂಡು ಅನೇಕ ವಿಷಯಗಳನ್ನು ನೋಡಬಹುದಾದ ವೈಶಿಷ್ಟ್ಯವನ್ನು ಹೊಂದಿದೆ.
Tata Tiago EV booking date:Tiago EV ಎರಡು ಬ್ಯಾಟರಿ ಪ್ಯಾಕ್ಗಳೊಂದಿಗೆ ಬರುತ್ತದೆ. ಚಿಕ್ಕ ಬ್ಯಾಟರಿ ಪ್ಯಾಕ್ 250KM ಮತ್ತು ದೊಡ್ಡ ಬ್ಯಾಟರಿ ಪ್ಯಾಕ್ 315KM ವ್ಯಾಪ್ತಿಯನ್ನು ನೀಡುತ್ತದೆ.
Tiago EV Vs Tigor EV: ಟಾಟಾ ಟಿಯಾಗೋ ಇವಿಯ ಉನ್ನತ ರೂಪಾಂತರವು ಟಾಟಾ ಟಿಗೊರ್ ಇವಿಯ ಮೂಲ ರೂಪಾಂತರಕ್ಕಿಂತ ಅಗ್ಗವಾಗಿದೆ. ಇವೆರಡರ ನಡುವೆ 70 ಸಾವಿರ ರೂಪಾಯಿ ವ್ಯತ್ಯಾಸವಿದೆ. ಅದೇ ಸಮಯದಲ್ಲಿ, ಟಾಟಾ ಟಿಗೊರ್ ಇವಿಯ ಮೂಲ ರೂಪಾಂತರ ಮತ್ತು ಟಾಟಾ ಟಿಯಾಗೊ ಇವಿಯ ಮೂಲ ರೂಪಾಂತರದ ನಡುವೆ 4 ಲಕ್ಷ ರೂಪಾಯಿಗಳ ವ್ಯತ್ಯಾಸವಿದೆ.
Tata Tiago EV: ಟಾಟಾ ಮೋಟಾರ್ಸ್ ತನ್ನ ಅಗ್ಗದ ಎಲೆಕ್ಟ್ರಿಕ್ ಕಾರು ಟಾಟಾ ಟಿಯಾಗೊವನ್ನು ಬಿಡುಗಡೆ ಮಾಡಿದೆ. ಟಾಟಾ ಟಿಯಾಗೊದ ಈ ಹೊಸ ಎಲೆಕ್ಟ್ರಿಕ್ ಆವೃತ್ತಿಯಲ್ಲಿ, ಕಂಪನಿಯು ಹಲವು ಉತ್ತಮ ವೈಶಿಷ್ಟ್ಯಗಳನ್ನು ನೀಡಿದೆ.
ಗ್ಲೋಬಲ್ ಎನ್ಸಿಎಪಿ ಕ್ರ್ಯಾಶ್ ಟೆಸ್ಟ್ನಲ್ಲಿ ಟಿಗೊರ್ ಇವಿ 4-ಸ್ಟಾರ್ ಸೇಫ್ಟಿ ರೇಟಿಂಗ್ ಪಡೆದುಕೊಂಡಿದೆ. ಟಿಯಾಗೊ ಇವಿ ಕೂಡಾ ಇದೆ ರೀತಿಯ ಸುರಕ್ಷತಾ ವೈಶಿಷ್ಟ್ಯಗಳನ್ನು ಹೊಂದಿರಬಹುದು ಎನ್ನಲಾಗಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.