ಅರ್ಜೆಂಟ್ ಪೇಮೆಂಟ್ ಮಾಡುವಾಗ್ಲೇನೆ ಖಾತೆಯಲ್ಲಿ ಬ್ಯಾಲೆನ್ಸ್ ಇರೋದಿಲ್ಲ. ಅವರಿವರ ಅತ್ರ ಕೇಳೋಣ ಅಂದ್ರೆ ಮುಜುಗರ ಆಗುತ್ತೆ. ಆದ್ರೆ ಇನ್ಮುಂದೆ, ನೀವ್ ಯಾರ್ ಬಳಿ ಹಣಕ್ಕಾಗಿ ಕೈ ಚಾಚೋ ಪರಿಸ್ಥಿತಿ ಇರಲ್ಲ ಹೇಗೆ ಅಂತ ಯೋಚನೆ ಮಾಡ್ತಿದ್ದೀರಾ.. ಮೊದಲು ಈ ಸ್ಟೋರಿ ನೋಡಿ ನಂತ್ರ ಈ ಡಿಟೇಲ್ಸ್ ಅಪ್ಲೈ ಮಾಡ್ಕೊಳಿ
UPI ಪೇಮೆಂಟ್ ಗೆ ಸಂಬಂಧಿಸಿದಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊಸ ಆದೇಶ ಹೊರಡಿಸಿದೆ. 'ಶೂನ್ಯ ಬ್ಯಾಲೆನ್ಸ್' ಹೊಂದಿದ್ದರೂ ಪಾವತಿ ಪೂರ್ಣಗೊಳಿಸುವ ಸೇವೆಯನ್ನು ಒದಗಿಸುವಂತೆ ಆರ್ಬಿಐ ಎಲ್ಲಾ ಬ್ಯಾಂಕ್ಗಳಿಗೆ ನಿರ್ದೇಶಿಸಿದೆ.
ಇನ್ಮುಂದೆ, ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದೆಯೇ ATMನಲ್ಲಿ ಹಣ ವಿತ್ಡ್ರಾ ಮಾಡಬಹುದು. ಇಥದ್ದೊಂದು ಅವಕಾಶ ಕಲ್ಪಿಸುವ ಭಾರತದ ಪ್ರಥಮ ʻಯುಪಿಐ ಎಟಿಎಂʼಈಗ ಚಾಲ್ತಿಗೆ ಬಂದಿದೆ. ಅಷ್ಟಕ್ಕೂ ಏನಿದು ʻಯುಪಿಐ ಎಟಿಎಂʼ? ಇದರ ಬಳಕೆ ಹೇಗಿರುತ್ತೆ? ಹೇಳ್ತೀವಿ, ಈ ಸ್ಟೋರಿ ನೋಡಿ.
UPI ATM: ರಾಷ್ಟ್ರ ರಾಜಧಾನಿಯಲ್ಲಿ ದೇಶದ ಮೊತ್ತ ಮೊದಲ ಯುಪಿಐ-ಎಟಿಎಂ ತೆರೆಯಲಾಗಿದೆ. ಇದರ ಪ್ರಮುಖ ಪ್ರಯೋಜನವೆಂದರೆ ನೀವು ಡೆಬಿಟ್, ಕ್ರೆಡಿಟ್ ಕಾರ್ಡ್ ಇಲ್ಲದಿದ್ದರೂ ಸಹ ಇದರಲ್ಲಿ ಹಣ ವಿತ್ ಡ್ರಾ ಮಾಡಬಹುದು.
ಕೀಪ್ಯಾಡ್ ಫೋನ್ ಬಳಕೆದಾರರಿಗೆ ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಸಿಹಿ ಸುದ್ದಿಯೊಂದನ್ನು ನೀಡಿದ್ದಾರೆ. ಶೀಘ್ರವೇ ಕೀ ಪ್ಯಾಡ್ ಫೋನ್ ಗಳಲ್ಲಿಯೂ ಯುಪಿಐ ಸೇವೆಗಳನ್ನು ಲಭ್ಯವಾಗುವಂತೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ. ಇದು ಬಳಕೆಗೆ ಬರೋದು ಯಾವಾಗಲಿಂದ ಅಂತೆಲ್ಲ ಹೇಳ್ತಿವಿ ಈ ಸ್ಟೋರಿ ನೋಡಿ...
UPI Offiline Payment: ಡಿಜಿಟಲ್ ಪಾವತಿಯಲ್ಲಿ ಹೊಸ ತಂತ್ರಜ್ಞಾನದ ಪ್ರಯೋಜನವನ್ನು ಬಳಕೆದಾರರಿಗೆ ಒದಗಿಸಲು ಕೇಂದ್ರೀಯ ಬ್ಯಾಂಕ್ ಈ ಮಹತ್ವದ ನಿರ್ಧಾರ ಕೈಗೊಂಡಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹೇಳಿದ್ದಾರೆ. UPI ನಲ್ಲಿ ಗ್ರಾಹಕರು AI ನೊಂದಿಗೆ ಸಂವಾದಾತ್ಮಕ ಪಾವತಿಗಳನ್ನು ಮಾಡಲು ಇನ್ಮುಂದೆ ಸಾಧ್ಯವಾಗಲಿದೆ ಎಂದು ಅವರು ಹೇಳಿದ್ದಾರೆ. ಅಂದರೆ, AI ಯೊಂದಿಗಿನ ಸಂಭಾಷಣೆ ಮೂಲಕ, ಅದರಲ್ಲಿ ಪಾವತಿಯನ್ನು ಮಾಡಬಹುದು ಎಂದರ್ಥ (Business News In Kannada).
Nokia 110 4G, Nokia 110 2G Phones: ಎಚ್ಎಮ್ಡಿ ಗ್ಲೋಬಲ್ ಮಾಲೀಕತ್ವದ ನೋಕಿಯಾ ಭಾರತದಲ್ಲಿ Nokia 110 4G, Nokia 110 2G ಎಂಬ ಎರಡು ಹೊಸ ಫೀಚರ್ ಫೋನ್ಗಳನ್ನು ಬಿಡುಗಡೆ ಮಾಡಿದೆ. ಈ ಎರಡೂ ಹ್ಯಾಂಡ್ಸೆಟ್ಗಳು ಅಂತರ್ಗತ ಯೂಪಿಐ ಪಾವತಿ ಅಪ್ಲಿಕೇಶನ್ ಅನ್ನು ಹೊಂದಿವೆ ಮತ್ತು ನೀರಿನ ಪ್ರತಿರೋಧದೊಂದಿಗೆ ಬರುತ್ತವೆ ಎಂದು ಕಂಪನಿ ಹೇಳಿಕೊಂಡಿದೆ.
UPI payment system : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಬಾಂಬೆ ಯುಪಿಐ ಪಾವತಿಗೆ ಸಂಬಂಧಿಸಿದಂತೆ ಅಧ್ಯಯನ ನಡೆಸಿದೆ. ಭಾರತೀಯ ರಾಷ್ಟ್ರೀಯ ಪಾವತಿಗಳ ನಿಗಮದ ನಿರ್ಧಾರದ ಪರಿಣಾಮವನ್ನು ವಿಶ್ಲೇಷಿಸಿದ ಅಧ್ಯಯನವು, ವ್ಯಾಪಾರಿಗಳು ಸ್ವೀಕರಿಸಿದ ಪಾವತಿಗಳಿಗೆ ಯಾವುದೇ ಶುಲ್ಕವನ್ನು ವಿಧಿಸಬಾರದು ಎಂದು ಹೇಳಿದೆ.
Digital Payments Awareness : ಫೆಬ್ರವರಿ 2022 ರಲ್ಲಿ ದಾಖಲಾದ 5.36 ಲಕ್ಷ ಕೋಟಿಗಿಂತ ಇದೀಗ ನಡೆದಿರುವ ವಹಿವಾಟು 17 ಶೇಕಡಾದಷ್ಟು ಹೆಚ್ಚಾಗಿದೆ. ಕಳೆದ ಮೂರು ತಿಂಗಳಿನಿಂದ ಮಾಸಿಕ ಡಿಜಿಟಲ್ ಪಾವತಿ ವಹಿವಾಟು ಪ್ರತಿ ಬಾರಿ 1,000 ಕೋಟಿ ರೂಪಾಯಿಗಳ ಗಡಿ ದಾಟುತ್ತಿದೆ ಎಂದು ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಹೇಳಿದ್ದಾರೆ.
ಪ್ರಸ್ತುತ ಆನ್ಲೈನ್ ವಹಿವಾಟು ಹೆಚ್ಚಾಗಿದೆ. ಯುಪಿಐನಲ್ಲಿ ಆನ್ಲೈನ್ ಮೂಲಕ ವಹಿವಾಟು ಮಾಡುವುದು ತುಂಬಾ ಸುಲಭವಾಗಿದೆ. ಆದರೆ, ಕೆಲವೊಮ್ಮೆ ನಾವು ತರಾತುರಿಯಲ್ಲಿ ತಪ್ಪಾದ ಖಾತೆಗೆ ಹಣವನ್ನು ಹಾಕಿ, ನಂತರ ಏನಪ್ಪಾ ಮಾಡೋದು ಎಂದು ಚಿಂತಿಸುತ್ತೇವೆ. ಆದರೆ, ಈ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳುವ ಬದಲಿಗೆ ಹಣವನ್ನು ಮರಳಿ ಪಡೆಯುವುದು ಹೇಗೆ ಎಂದು ತಿಳಿಯಲು ಇಲ್ಲಿದೆ ಸುಲಭ ಮಾರ್ಗ.
ಭಾರತದ ಯೂನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಮತ್ತು ಸಿಂಗಾಪುರದ 'ಪೇ ನೌ' ಸಿಸ್ಟಮ್ ನಡುವೆ ಸಂಪರ್ಕ ಸೌಲಭ್ಯವನ್ನು ಪರಿಚಯಿಸಿದ್ದು, ಉಭಯ ದೇಶಗಳ ನಡುವಿನ ಸಂಬಂಧಗಳಿಗೆ ಹೊಸ ಮೈಲಿಗಲ್ಲು ಎಂದು ಇಂದು ಪ್ರಧಾನಿ ಮೋದಿ ಹೇಳಿದ್ದಾರೆ.
UPI Transaction Limit: ಇದಲ್ಲದೇ ಯುಪಿಐ ಮೂಲಕ ಒಂದೇ ಬಾರಿಗೆ ಎಷ್ಟು ಹಣವನ್ನು ಕಳುಹಿಸಬಹುದು ಅಥವಾ ಸ್ವೀಕರಿಸಬಹುದು ಎಂಬುವುದಕ್ಕೂ ವಿವಿಧ ಬ್ಯಾಂಕ್ಗಳು ಇದಕ್ಕೆ ವಿಭಿನ್ನ ಮಿತಿಗಳನ್ನು ಹಾಕತ್ತವೆ. ಆದರೆ, ಈ ಅಪ್ಲಿಕೇಶನ್ಗಳ ಮೂಲಕ ನೀವು ಹಣ ಕಳುಹಿಸುವಾಗ ಹೆಚ್ಚುವರಿ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ.
GST Rate: ರುಪೇ ಡೆಬಿಟ್ ಕಾರ್ಡ್ ಹಾಗೂ ಕಡಿಮೆ ಮೌಲ್ಯದ ಭೀಮ್-ಯುಪಿಐ ವ್ಯವಹಾರಗಳಿಗೆ ಉತ್ತೇಜನ ನೀಡಲು ಪ್ರೋತ್ಸಾಹಕ ಯೋಜನೆಯ ಅಡಿ ಸರ್ಕಾರ ಬ್ಯಾಂಕುಗಳಿಗೆ ರುಪೇ ಡೆಬಿಟ್ ಕಾರ್ಡ್ ವ್ಯವಹಾರ ಶುಲ್ಕ ಹಾಗೂ 2000 ರೂ.ಗಳವರೆಗಿನ ಕಡಿಮೆ ಮೌಲ್ಯದ ಭೀಮ್-ಯುಪಿಐ ವಹಿವಾಟುಗಳಿಗೆ ಪ್ರತಿಶತ ರೂಪದಲ್ಲಿ ಉತ್ತೇಜನ ಮೊತ್ತವನ್ನು ನೀಡುತ್ತದೆ.
ಗೂಗಲ್ ಪೆ, ಫೋನ್ ಪೇ, ಅಮೆಜಾನ್ ಪೇ, ಪೇಟಿಎಂ ನಂತಹ ಎಲ್ಲಾ ಕಂಪನಿಗಳು ಪ್ರತಿದಿನ ವಹಿವಾಟು ಮಾಡುವ ಮಿತಿಯನ್ನು ನಿಗದಿಪಡಿಸಿವೆ. ಇದು ದೇಶದ ಕೋಟಿಗಟ್ಟಲೆ UPI ಬಳಕೆದಾರರ ಮೇಲೆ ಪರಿಣಾಮ ಬೀರುತ್ತದೆ.
Single Block and Multiple Debits: ವಿತ್ತೀಯ ನೀತಿ ಪರಾಮರ್ಶೆ (ಎಂಪಿಸಿ) ಕುರಿತು ಮಾಹಿತಿ ನೀಡಿದ ಅವರು, ಹೊಸ ಸೌಲಭ್ಯದ ಅಡಿಯಲ್ಲಿ ನೀವು ಶೀಘ್ರದಲ್ಲೇ ನಿಮ್ಮ ಖಾತೆಯಲ್ಲಿ ಪಾವತಿಗಳನ್ನು 'ಬ್ಲಾಕ್' ಮಾಡಲು ಮತ್ತು ಹೋಟೆಲ್ ಬುಕಿಂಗ್, ಬಂಡವಾಳ ಮಾರುಕಟ್ಟೆಯಲ್ಲಿ ಷೇರುಗಳ ಖರೀದಿ ಮತ್ತು ಮಾರಾಟದಂತಹ ವಹಿವಾಟುಗಳಿಗೆ UPI ಮೂಲಕ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದ್ದಾರೆ. ಜೊತೆಗೆ ಇ-ಕಾಮರ್ಸ್ ಮತ್ತು ಹೂಡಿಕೆಗಾಗಿ ಪಾವತಿಗಳನ್ನು ಸುಲಭವಾಗಿ ಮಾಡಲಾಗುತ್ತದೆ.
UPI Payments Apps: ಇತ್ತೀಚಿನ ದಿನಗಳಲ್ಲಿ ಯುಪಿಐ ಪಾವತಿ ಅಪ್ಲಿಕೇಶನ್ಗಳಿಂದಾಗಿ ಹಣದ ವಹಿವಾಟು ಮತ್ತಷ್ಟು ಸುಲಭವಾಗಿದೆ. ಆದರೆ, GPay, PhonePe, Paytm ಸೇರಿದಂತೆ ಮತ್ತಿತರ ಯುಪಿಐ ಪಾವತಿ ಅಪ್ಲಿಕೇಶನ್ಗಳು ಶೀಘ್ರದಲ್ಲೇ ಪಾವತಿ ಮಿತಿಯನ್ನು ಹೇರಬಹುದು ಎಂದು ಹೇಳಲಾಗುತ್ತಿದೆ. ಈ ವದಂತಿ ಸತ್ಯವೇ? ಅನಿಯಮಿತ ಪಾವತಿಗಳನ್ನು ನಿಯಂತ್ರಿಸಲು ಯುಪಿಐ ಪಾವತಿ ಅಪ್ಲಿಕೇಶನ್ಗಳು ವಹಿವಾಟಿನ ಮೇಲೆ ಮಿತಿ ವಿಧಿಸಲಿವೆಯೇ? ಈ ಕುರಿತಂತೆ ವರದಿ ಏನು ಹೇಳುತ್ತದೆ ಎಂದು ತಿಳಿಯಿರಿ.
Income Tax Returns : ಕಳೆದ ಎರಡು ವರ್ಷಗಳಲ್ಲಿ, ಆದಾಯ ತೆರಿಗೆ ಇಲಾಖೆಯು ಆದಾಯ ತೆರಿಗೆ ರಿಟರ್ನ್ (ಐಟಿಆರ್ ಫೈಲಿಂಗ್) ಸಲ್ಲಿಕೆ ಪ್ರಕ್ರಿಯೆಯನ್ನು ಸರಳ ಮತ್ತು ಸುಲಭಗೊಳಿಸಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಆದಾಯ ತೆರಿಗೆ ಇಲಾಖೆಯು ಫಾರ್ಮ್ ತಿದ್ದುಪಡಿ ಮತ್ತು ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಹೊಸ ಪೋರ್ಟಲ್ ಅನ್ನು ಅಭಿವೃದ್ಧಿಪಡಿಸಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.