UPI Payment Without Internet: ಇದು ಇಂಟರ್ನೆಟ್ ಯುಗ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲಾ ಕೆಲಸಗಳನ್ನು ಇಂಟರ್ನೆಟ್ ಮೂಲಕ ಮಾಡಲಾಗುತ್ತದೆ. ಹಿಂದೆಲ್ಲಾ ಹಣಕಾಸಿನ ವಹಿವಾಟಿಗೆ ಬ್ಯಾಂಕ್ಗೆ ಹೋಗಬೇಕಾದ ಅಗತ್ಯವಿತ್ತು. ಆದರೆ, ಇದೀಗ ಗ್ರಾಹಕರು ತಾವು ಕುಳಿತಿರುವಲ್ಲಿಯೇ ಆನ್ಲೈನ್ನಲ್ಲಿ ತಮ್ಮ ಬ್ಯಾಂಕಿಂಗ್ ಗೆ ಸಂಬಂಧಿಸಿದ ಹಲವು ಕೆಲಸಗಳನ್ನು ಕ್ಷಣಾರ್ಧದಲ್ಲಿ ಪೂರ್ಣಗೊಳಿಸಬಹುದು.
ಪಿಂಚಣಿ ನಿಧಿ ನಿಯಂತ್ರಕ PFRDA ಯಿಂದ NPS ಮತ್ತು ಅಟಲ್ ಪಿಂಚಣಿ ಯೋಜನೆ ಎರಡರಲ್ಲೂ ಬದಲಾವಣೆಗಳನ್ನು ಮಾಡಲಾಗಿದೆ. ಹೊಸ ಬದಲಾವಣೆಯ ನಂತರ, ಈಗ ಯೋಜನೆಗೆ ಸಂಬಂಧಿಸಿದ ಚಂದಾದಾರರು ಯುಪಿಐ ಮೂಲಕ ಕೊಡುಗೆಯನ್ನು ಪಾವತಿಸಲು ಸಾಧ್ಯವಾಗುತ್ತದೆ.
ಆರ್ಬಿಐ ಮಂಗಳವಾರ ಅಂದರೆ ಅಕ್ಟೋಬರ್ 4 ರಂದು ಹೊರಡಿಸಿರುವ ಸುತ್ತೋಲೆಯಲ್ಲಿ, 'ಆ್ಯಪ್ನಲ್ಲಿ ಕ್ರೆಡಿಟ್ ಕಾರ್ಡ್ ಅನ್ನು ಲಿಂಕ್ ಮಾಡುವ, ಯುಪಿಐ ಪಿನ್ ರಚಿಸುವ ಪ್ರಕ್ರಿಯೆ ಮತ್ತು ಎಲ್ಲಾ ರೀತಿಯ ವಹಿವಾಟುಗಳಿಗೆ ಕ್ರೆಡಿಟ್ ಕಾರ್ಡ್ ಅನ್ನು ಸಕ್ಷಮಗೊಳಿಸಲು ಗ್ರಾಹಕರ ಒಪ್ಪಿಗೆಯ ಅಗತ್ಯವಿದೆ ಎಂದು ಹೇಳಿದೆ.
ಹಣ ವರ್ಗಾವಣೆ ಮಾಡುವಾಗ ಬೇರೆ ಯಾವುದೋ ಖಾತೆಗೆ ಹಣ ವರ್ಗವಾದಾಗ ಗಲಿಬಿಲಿಯಾಗುತ್ತದೆ. ಇನ್ನು ನಮಗೆ ಗೊತ್ತಿಲ್ಲದವರ ಖಾತೆಗೆ ಹಣ ವರ್ಗಾವಣೆ ಯಾಗಿದ್ದರೆ ಆ ಹಣವನ್ನು ಮರಳಿ ಪಡೆಯುವುದು ಹೇಗೆ ಎನ್ನುವ ಚಿಂತೆ ಕಾಡುತ್ತದೆ.
UPI Payment Limit : ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಎಲ್ಲಾ ಬ್ಯಾಂಕ್ಗಳಿಗೆ ತಮ್ಮ ಅನುಕೂಲಕ್ಕೆ ಅನುಗುಣವಾಗಿ UPI ಪಾವತಿಯ ಮಿತಿಯನ್ನು ಹೊಂದಿಸಲು ಅನುಮತಿ ನೀಡಿದೆ. ವಿವಿಧ ಬ್ಯಾಂಕ್ಗಳಿಗೆ ಈ ಮಿತಿ ವಿಭಿನ್ನವಾಗಿರಬಹುದು.
ಭಾರತೀಯ ರಿಸರ್ವ್ ಬ್ಯಾಂಕ್ (RBI) ವಿವಿಧ ಮೊತ್ತದ ಬ್ಯಾಂಡ್ಗಳ ಆಧಾರದ ಮೇಲೆ ಏಕೀಕೃತ ಪಾವತಿಗಳ ಇಂಟರ್ಫೇಸ್ (UPI) ಮೂಲಕ ಮಾಡಿದ ಪಾವತಿಗಳ ಮೇಲೆ "ಶ್ರೇಣೀಕೃತ" ಶುಲ್ಕವನ್ನು ವಿಧಿಸುವ ಸಾಧ್ಯತೆಯ ಕುರಿತು ಮಧ್ಯಸ್ಥಗಾರರಿಂದ ಪ್ರತಿಕ್ರಿಯೆಯನ್ನು ಕೋರಿದೆ.
NPS Rules: ಪಿಂಚಣಿ ನಿಧಿ ನಿಯಂತ್ರಕ PFRDA ಯ ಎರಡು ಪಿಂಚಣಿ ಯೋಜನೆಗಳಲ್ಲಿ ಹೂಡಿಕೆ ಮಾಡುವವರಿಗೆ ಒಳ್ಳೆಯ ಸುದ್ದಿಯೊಂದು ಪ್ರಕಟವಾಗಿದೆ. ಎನ್ಪಿಎಸ್ ಯೋಜನೆಯು ಸಂಘಟಿತ ವಲಯದ ಉದ್ಯೋಗಿಗಳಿಗಾಗಿ ನಡೆಸಲಾಗುತ್ತದೆ.
Withdraw Money from ATM Without Debit Card: ಡಿಜಿಟಲ್ ವಹಿವಾಟುಗಳಿಗಾಗಿ UPI ಅನ್ನು ಸಾಕಷ್ಟು ಬಾರಿ ಬಳಸಿರಬಹುದು. ಆದರೆ ಈಗ UPI ಅಪ್ಲಿಕೇಶನ್ ಮೂಲಕ ATMನಿಂದ ಹಣವನ್ನು ಪಡೆಯುವುದು ಸಾಧ್ಯವಾಗುತ್ತದೆ. ಈ ಎಲ್ಲಾ ಪ್ರಕ್ರಿಯೆಯನ್ನು ಡೆಬಿಟ್ ಕಾರ್ಡ್ ಇಲ್ಲದೆಯೇ ಪೂರ್ಣಗೊಳಿಸಬಹುದು. ಡೆಬಿಟ್ ಕಾರ್ಡ್ ಇಲ್ಲದೆಯೇ ನೀವು ಹಣವನ್ನು ಹಿಂಪಡೆಯುವ ವಿಧಾನವನ್ನು ನೋಡೋಣ ..
ಪಾವತಿ ವ್ಯವಸ್ಥೆಯು ಗ್ರಾಮೀಣ ಜನರ ಜೀವನ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಡಿಜಿಟಲ್ ಪಾವತಿ ಕ್ಷೇತ್ರದಲ್ಲಿ ಪೈಪೋಟಿ ಆಗದಂತೆ ಎನ್ಸಿಪಿಐ ಹಂತ ಹಂತವಾಗಿ ವಾಟ್ಸ್ಆ್ಯಪ್ಗೆ ಅನುಮೋದನೆ ನೀಡುತ್ತಿದೆ.
ಇನ್ಮುಂದೆ ನೀವು Internet, smartphone ಇಲ್ಲದೆಯೂ ಕೂಡ ಪಾವತಿ ಮಾಡುವಂತಹ ಯುನಿಫೈಡ್ ಪೇಮೆಂಟ್ಸ್ ಇಂಟರ್ಫೇಸ್ (ಯುಪಿಐ) ಸೌಲಭ್ಯ ಆರ್ಬಿಐ ಗವರ್ನರ್ ಶಕ್ತಿಕಾಂತ ದಾಸ್ ಚಾಲನೆ ನೀಡಿದ್ದಾರೆ.ಈ UPI 123PAY--ಹೊಸ ಸೇವೆಯು 40 ಕೋಟಿಗೂ ಹೆಚ್ಚು ಫೀಚರ್ ಫೋನ್ ಬಳಕೆದಾರರಿಗೆ ಇಂಟರ್ನೆಟ್ ಸಂಪರ್ಕವಿಲ್ಲದೆ ಜನಪ್ರಿಯ ಡಿಜಿಟಲ್ ವಹಿವಾಟು ವೇದಿಕೆಯನ್ನು ಪ್ರವೇಶಿಸಲು ಅನುವು ಮಾಡಿಕೊಡುತ್ತದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.