The Kerala Story: ಕಳೆದ ವರ್ಷ ತೆರೆಕಂಡ ‘ದಿ ಕೇರಳ ಸ್ಟೋರಿ’ ಸಿನಿಮಾ ದೇಶಾದ್ಯಂತ ಅತಿ ಹೆಚ್ಚು ಸಂಚಲನ ಮೂಡಿಸಿತ್ತು. ಈ ಚಿತ್ರವು ಕೇರಳ ರಾಜ್ಯದಲ್ಲಿ ನಡೆದ ನೈಜ ಘಟನೆಗಳನ್ನು ಆಧರಿಸಿದೆ.
The Kerala Story On OTT: ಬಹಳ ಸಮಯದಿಂದ ಕಾಯುತ್ತಿದ್ದ ದಿ ಕೇರಳ ಸ್ಟೋರಿ ಕೊನೆಗೂ ಒಟಿಟಿಗೆ ಲಗ್ಗೆಯಿಟ್ಟಿದೆ. ಅದಾ ಶರ್ಮಾ ಅಭಿನಯದ ಚಿತ್ರ 'ದಿ ಕೇರಳ ಸ್ಟೋರಿ' OTT ಬಿಡುಗಡೆ ದಿನಾಂಕ ಬಹಿರಂಗವಾಗಿದೆ.
Hostel Hudugaru Bekagiddare OTT : ಪರಂವಾ ಪಿಕ್ಚರ್ಸ್ ಅಡಿಯಲ್ಲಿ ಜುಲೈ 21 ರಂದು ರಿಲೀಸ್ ಆದ ಸಿನಿಮಾ ಈಗಾಗಲೇ 50 ದಿನಗಳನ್ನು ಪೂರೈಸಿದ್ದು, ಈಗ ಓಟಿಟಿಗೆ ಎಂಟ್ರಿ ಕೊಡಲು ಸಿದ್ಧವಾಗಿದೆ. ನಿತಿನ್ ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ ಬಿಡುಗಡೆಯಾದ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ಇದೇ ಶುಕ್ರವಾರ ಅಂದರೆ ಸೆಪ್ಟೆಂಬರ್ 15 ರಂದು ಜೀ5 ಓಟಿಟಿ ಪ್ಲಾಟ್ಫಾರ್ಮ್ನಲ್ಲಿ ರಿಲೀಸ್ ಆಗಲಿದೆ.
ಪವನ್ ಒಡೆಯರ್ ನಿರ್ದೇಶನದ ಇಶಾನ್ ಹಾಗೂ ಆಶಿಕಾ ರಂಗನಾಥ್ ನಟನೆಯ ‘ರೇಮೊ’ ಸಿನಿಮಾ ಒಟಿಟಿ ಎಂಟ್ರಿಗೆ ಡೇಟ್ ಫಿಕ್ಸ್ ಆಗಿದೆ. ಬಿಗ್ ಬಜೆಟ್, ಅದ್ದೂರಿ ಮೇಕಿಂಗ್, ಇಶಾನ್ ಸ್ಟೈಲಿಶ್ ಅವತಾರ ಹೀಗೆ ಸಾಕಷ್ಟು ಕಾರಣಗಳಿಂದ ‘ರೇಮೊ’ ನಿರೀಕ್ಷೆ ಹುಟ್ಟಿಸಿತ್ತು. ನವೆಂಬರ್ 25ರಂದು ರಾಜ್ಯಾದ್ಯಂತ ಅದ್ದೂರಿಯಾಗಿ ತೆರೆಕಂಡು ಉತ್ತಮ ವಿಮರ್ಶೆ ಪಡೆದುಕೊಂಡ ಸಿನಿಮಾ ಇದೀಗ ZEE5 ಮೂಲಕ ಒಟಿಟಿ ಪ್ರೇಕ್ಷಕರ ಮನ ಗೆಲ್ಲಲು ಸಜ್ಜಾಗಿದೆ.
ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅಭಿನಯದ 125ನೇ ಸಿನಿಮಾ ʼವೇದʼ ಚಿತ್ರಮಂದಿರದಲ್ಲಿ ಅಬ್ಬರಿಸಿ ಇತಿಹಾಸ ಸೃಷ್ಟಿಸಿರುವ ವಿಚಾರ ಎಲ್ಲರಿಗೂ ಗೊತ್ತೇ ಇದೆ. ಥಿಯೇಟರ್ಗಳಲ್ಲಿ ಸೂಪರ್ ಸಕ್ಸಸ್ ಕಂಡ ಶಿವಣ್ಣನ ಸಿನಿಮಾ ಫೆಬ್ರವರಿ 10ರಂದು ZEE5ನಲ್ಲಿ ಬಿಡುಗಡೆಗೊಂಡು ಇಲ್ಲಿಯೂ ಹೊಸ ದಾಖಲೆ ಬರೆದಿದೆ. ಬಿಡುಗಡೆಯಾದ ಕೆಲವೇ ದಿನದಲ್ಲಿ 125 ಮಿಲಿಯನ್ ಸ್ಟ್ರೀಮಿಂಗ್ ಮಿನಿಟ್ಸ್ ಕಂಡು ರೆಕಾರ್ಡ್ ಕ್ರಿಯೇಟ್ ಮಾಡಿದೆ. ಇದೇ ಖುಷಿಯಲ್ಲಿ ZEE5 ಸಂತೋಷ್ ಚಿತ್ರಮಂದಿರದಲ್ಲಿ ಸಂಭ್ರಮ ಆಚರಿಸಿದೆ.
ಇಂದಿನ ಕಾಲದಲ್ಲಿ ಲೈಂಗಿಕ ಶಿಕ್ಷಣವು ತುಂಬಾ ಅಗತ್ಯವಾಗಿದೆ. ಈ ವಿಷಯದ ಬಗ್ಗೆ ಜನರು ಮುಕ್ತವಾಗಿ ಮಾತನಾಡಲು ಹಿಂದೇಟು ಹಾಕುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ ಬಾಲಿವುಡ್ ಎಂದಿನಂತೆ ಮುಂದೆ ಬಂದಿದೆ. ವಾಸ್ತವವಾಗಿ, ಲೈಂಗಿಕ ಶಿಕ್ಷಣಕ್ಕೆ ಸಂಬಂಧಿಸಿದ ಕೆಲವು ವಿಷಯಗಳನ್ನು ಅಕ್ಷಯ್ ಕುಮಾರ್ ಅವರು ʼಓ ಮೈ ಗಾಡ್ 2ʼ ಚಿತ್ರದಲ್ಲಿ ತೋರಿಸಿದ್ದರು. ಈಗ ಇದೇ ವಿಷಯಗಳನ್ನು ಮುಂದಿಟ್ಟುಕೊಂಡು ರಕುಲ್ ಪ್ರೀತ್ ಸಿಂಗ್ ಕೂಡ ಲೈಂಗಿಕ ಶಿಕ್ಷಣದ ಪಾಠ ಹೇಳಲು ಬರುತ್ತಿದ್ದಾರೆ.
ಥಿಯೇಟರ್ಗಳಲ್ಲಿ ಬ್ಲಾಕ್ಬಸ್ಟರ್ ಸಿನಿಮಾ ಆಗಿ ಹೊರಹೊಮ್ಮಿದ ನಿರ್ದೇಶಕ ಚಂದೂ ಮೊಂಡೇಟಿ ಅವರ ಮಿಸ್ಟರಿ ಸಾಹಸ ಚಿತ್ರ, ʼಕಾರ್ತಿಕೇಯ 2ʼ, ಒಟಿಟಿಯಲ್ಲೂ ತನ್ನ ಯಶಸ್ಸಿನ ಓಟವನ್ನು ಮುಂದುವರೆಸಿದ್ದು, ಕೇವಲ 48 ಗಂಟೆಗಳ ಅವಧಿಯಲ್ಲಿ 100 ಕೋಟಿ ವೀಕ್ಷಣಾ ನಿಮಿಷಗಳಿಗೆ ಪಡೆದಿದೆ.
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ʼವಿಕ್ರಾಂತ್ ರೋಣʼ ಓಟಿಟಿಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದೀಗ ಭಾರತ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಅನಿಲ್ ಕುಂಬ್ಳೆ ಚಿತ್ರವನ್ನು ವಿಕ್ಷೀಸಿದ್ದು, ಕಿಚ್ಚನ ಆಕ್ಟಿಂಗ್ಗೆ ಫುಲ್ ಮಾರ್ಕ್ಸ್ ನೀಡಿದ್ದಾರೆ.
'ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಂದ್ರೆ ಸುಮ್ಮನೇನಾ..? ನೋ ವೇ ಚಾನ್ಸೇ ಇಲ್ಲ.' ಹೀಗೆ ಕಿಚ್ಚ ಸುದೀಪ್ ಅಭಿಮಾನಿಗಳು ಕಾಲರ್ ಮೇಲೆತ್ತಿ ಹೆಮ್ಮೆ ವ್ಯಕ್ತಪಡಿಸುತ್ತಿದ್ದಾರೆ. ಯಾಕಂದ್ರೆ ಸುದೀಪ್ ಅವರ ಬಹುನಿರೀಕ್ಷಿತ 'ವಿಕ್ರಾಂತ್ ರೋಣ' ಅಧಿಕೃತವಾಗಿ ₹200 ಕೋಟಿ ಕ್ಲಬ್ಗೆ ಸೇರ್ಪಡೆಯಾಗಿದೆ. ಈ ಕುರಿತು ಜಗತ್ತಿನ ಅತಿದೊಡ್ಡ ಓಟಿಟಿ ಪ್ಲಾಟ್ಫಾರಂ 'ZEE5' ಸಂಸ್ಥೆ ಅಧಿಕೃತ ಘೋಷಣೆ ಮೊಳಗಿಸಿದೆ.
Plan with 13 OTT Subscriptions: ಇಂದು ನಾವು ನಿಮಗೆ ಅದ್ಭುತ ಪ್ಲಾನ್ ವೊಂದರ ಕುರಿತು ಮಾಹಿತಿಯನ್ನು ನೀಡುತ್ತಿದ್ದು, ಈ ಪ್ಲಾನ್ ಅಡಿ ನಿಮಗೆ ಒಂದಲ್ಲ, ಎರಡಲ್ಲ ಬರೋಬ್ಬರಿ 13 ಓಟಿಟಿ ವೇದಿಕೆಗಳ ಚಂದದಾರಿಕೆ ಸಿಗುತ್ತಿದೆ. ಈ ವೇದಿಕೆಗಳಲ್ಲಿ Amazon Prime Video, Disney+Hotstar ಹಾಗೂ Zee5 ನಂತಹ ದೊಡ್ಡ ದೊಡ್ಡ ವೇದಿಕೆಗಳು ಕೂಡ ಶಾಮೀಲಾಗಿವೆ. ಈ ಯೋಜನೆಯ ಕುರಿತು ಹೆಚ್ಚಿನ ಮಾಹಿತಿಯನ್ನು ಪಡೆದುಕೊಳ್ಳೋಣ ಬನ್ನಿ,
ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ದಿ ಕಾಶ್ಮೀರ ಫೈಲ್ಸ್ ZEE5 ಸ್ಟ್ರೀಮಿಂಗ್ ಪ್ಲಾಟ್ಫಾರ್ಮ್ನಲ್ಲಿ ಲಭ್ಯವಿದೆ. ಮಾರ್ಚ್ ತಿಂಗಳಲ್ಲಿ ದೇಶಾದ್ಯಂತ ಬಿಡುಗಡೆಯಾದ ಈ ಚಿತ್ರವು ಕೋವಿಡ್-19 ಸಾಂಕ್ರಾಮಿಕ ರೋಗದ ನಂತರದಲ್ಲಿ 300 ಕೋಟಿ ರೂಪಾಯಿಗಳನ್ನು ದಾಟಿದ ಮೊದಲ ಚಲನಚಿತ್ರವಾಗಿದೆ. ವಿವೇಕ್ ಅಗ್ನಿಹೋತ್ರಿ ಅವರ ದಿ ಕಾಶ್ಮೀರ್ ಫೈಲ್ಸ್ ಬಿಡುಗಡೆಯಾದಾಗಿನಿಂದಲೂ ಒಂದಲ್ಲ ಒಂದು ಕಾರಣಕ್ಕಾಗಿ ಸುದ್ದಿಯಲ್ಲಿದೆ.
ಎಸ್.ಎಸ್.ರಾಜಮೌಳಿ ನಿರ್ದೇಶನದ, ಜೂನಿಯರ್ ಎನ್ ಟಿಆರ್ ಹಾಗೂ ರಾಮ್ ಚರಣ್ ನಟನೆಯ ತ್ರಿಬಲ್ ಆರ್ ಸಿನಿಮಾ ಬಾಕ್ಸಾಫೀಸ್ ಕೊಳ್ಳೆ ಹೊಡೆದು, ಈಗ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಇದೇ ತಿಂಗಳ 20ರಂದು ತಾರಕ್ ಹುಟ್ಟುಹಬ್ಬದಂದು ಒಟಿಟಿಗೆ ಲಗ್ಗೆ ಇಟ್ಟ ತ್ರಿಬಲ್ ಆರ್ ಸಿನಿಮಾ ಹೊಸದೊಂದು ರೆಕಾರ್ಡ್ ಬರೆದಿದೆ.
Offers on OTT Subscriptions in India: ದೇಶದ ಎರಡು ಪ್ರಮುಖ ಮತ್ತು ಜನಪ್ರಿಯ ಓಟಿಟಿ ವೇದಿಕೆಗಳ ಚಂದಾದಾರಿಕೆಯ ಯೋಜನೆಗಳ ಕುರಿತು ಮಾಹಿತಿಯನ್ನು ನೀಡುತ್ತಿದ್ದೇವೆ. ಏಕೆಂದರೆ ಪ್ರಸ್ತುತ ನೀವು ಈ ವೇದಿಕೆಗಳ ಚಂದಾದಾರಿಕೆಯನ್ನು ಅತ್ಯಂತ ಅಗ್ಗದ ದರದಲ್ಲಿ ಖರೀದಿಸಬಹುದು.
ಒಟಿಟಿ ಪ್ಲಾಟ್ಫಾರ್ಮ್ ರೇಸ್ನಲ್ಲಿ ಜೀ5 ಕೂಡ ಮುಂದಿದೆ.ಸ್ಟಾರ್ ಹೀರೋಗಳ ಬ್ಲಾಕ್ ಬಸ್ಟರ್ ಸಿನಿಮಾಗಳ ಜೊತೆಗೆ ಸದಾಭಿರುಚಿ ಸಿನಿಮಾಗಳನ್ನು ಪ್ರೇಕ್ಷಕರಿಗೆ ಉಣಬಡಿಸ್ತಿರುವ ಜೀ5 ಒಟಿಟಿ ಈಗ ವೀಕೆಂಡ್ ನಲ್ಲಿ ಪ್ರೇಕ್ಷಕರಿಗೆ ಭರ್ಜರಿ ಧಮಾಕ ನೀಡಿದೆ.ಭಾರತದ ಸೆನ್ಸೇಷನಲ್ ಸೃಷ್ಟಿಸಿದ್ದ ಕಾಶ್ಮೀರಿ ಫೈಲ್ಸ್, ಕನ್ನಡದ ಸೂಪರ್ ಹಿಟ್ ಸಿನಿಮಾಗಳಾದ ಮುಗಿಲ್ ಪೇಟೆ ಹಾಗೂ ತಲೆದಂಡ ಸಿನಿಮಾಗಳು ಇದೇ ಮೇ 13ಕ್ಕೆ ಜೀ5 ಒಟಿಟಿಗೆ ಲಗ್ಗೆ ಇಡ್ತಿವೆ.
ಇದನ್ನೂ ಓದಿ: ಜೂನ್ 24 ರಂದು ಬೆಳ್ಳಿತೆರೆಗೆ ಬರಲಿದ್ದಾನೆ 'ತ್ರಿವಿಕ್ರಮ'
The Kashmir Files: 2022 ರ ಪ್ರಸಿದ್ಧ ಚಲನಚಿತ್ರ 'ದಿ ಕಾಶ್ಮೀರ್ ಫೈಲ್ಸ್' ಶೀಘ್ರದಲ್ಲೇ OTT ನಲ್ಲಿ ಬಿಡುಗಡೆಯಾಗಲಿದೆ. ಈ ಚಿತ್ರ ಬಿಡುಗಡೆಯಾದಾಗಿನಿಂದ, ಅಭಿಮಾನಿಗಳು ಅದರ OTT ಬಿಡುಗಡೆಗಾಗಿ ಕಾಯುತ್ತಿದ್ದರು.
ಜೋಗಿ ಪ್ರೇಮ್ ನಿರ್ದೇಶನದ ಏಕ್ ಲವ್ ಯಾ ಸಿನಿಮಾ ಜೀ5 ಒಟಿಟಿಯಲ್ಲಿ ಧೂಳ್ ಎಬ್ಬಿಸ್ತಿದೆ. ಮ್ಯೂಸಿಕಲ್ ಹಿಟ್ ಮೂವಿ ಏಕ್ ಲವ್ ಯಾಗೆ ಒಟಿಟಿಯಲ್ಲಿ ಭರ್ಜರಿ ರೆಸ್ಪಾನ್ಸ್ ಸಿಕ್ತಿದೆ.ಏಪ್ರಿಲ್ 8ರಂದು ಜೀ5ಗೆ ಲಗ್ಗೆ ಇಟ್ಟ ಈ ಸಿನಿಮಾ ಜಸ್ಟ್ ಏಳು ದಿನದಲ್ಲಿ 5 ಮಿಲಿಯನ್ಸ್ ಸ್ಟ್ರೀಮಿಂಗ್ ಕಂಡು ದಾಖಲೆ ಬರೆದಿದೆ.
By accepting cookies, you agree to the storing of cookies on your device to enhance site navigation, analyze site usage, and assist in our marketing efforts.