Apple iPhone 13: ಅತ್ಯಂತ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ 13 ಖರೀದಿಸಿ!

ಪ್ರಸ್ತುತ ಕ್ರೋಮಾದಲ್ಲಿ Apple iPhone 13ನ ಮೂಲ ಬೆಲೆ 61,990 ರೂ. ಇದೆ. 7,910 ರೂ.ಗಳ ತ್ವರಿತ ರಿಯಾಯಿತಿ ಜೊತೆಗೆ HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ.10ರಷ್ಟು ಹೆಚ್ಚುವರಿ ರಿಯಾಯಿತಿ ಲಭ್ಯವಿದೆ.

Written by - Puttaraj K Alur | Last Updated : Sep 27, 2022, 05:22 PM IST
  • ಅತ್ಯಂತ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ 13 ಖರೀದಿಸಲು ಸುವರ್ಣಾವಕಾಶ
  • ಕ್ರೋಮಾದಲ್ಲಿ ತ್ವರಿತ ರಿಯಾಯತಿ ಜೊತೆಗೆ ಕ್ರೆಡಿಟ್ ಕಾರ್ಡ್ ಆಫರ್ ಪಡೆಯಿರಿ
  • 69,900 ರೂ. ಮೂಲ ಬೆಲೆಯ ಐಫೋನ್ 13 ಇದೀಗ 51,990 ರೂ.ಗೆ ಲಭ್ಯ
Apple iPhone 13: ಅತ್ಯಂತ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ 13 ಖರೀದಿಸಿ! title=
ಕಡಿಮೆ ಬೆಲೆಗೆ ಐಫೋನ್ 13 ಖರೀದಿಸಿ

ನವದೆಹಲಿ: ನೀವು ಐಫೋನ್ ಖರೀದಿಸಲು ಯೋಜಿಸುತ್ತಿದ್ದರೆ ನಾವು ನಿಮಗಾಗಿ ಒಳ್ಳೆಯ ಸುದ್ದಿಯನ್ನು ತಂದಿದ್ದೇವೆ. ಜನಪ್ರಿಯ ಚಿಲ್ಲರೆ ಆನ್‍ಲೈನ್ ಶಾಪಿಂಗ್ ಸೈಟ್‍ ಕ್ರೋಮಾದಲ್ಲಿ ದೀಪಾವಳಿ ಹಬ್ಬದ ಮಾರಾಟ ನಡೆಯುತ್ತಿದೆ. ಇಲ್ಲಿ ನೀವು ಅತ್ಯಂತ ಕಡಿಮೆ ಬೆಲೆಗೆ ಆ್ಯಪಲ್ ಐಫೋನ್ 13 ಖರೀದಿಸಿ ಮನೆಗೆ ಕೊಂಡೊಯ್ಯಬಹುದು.

ಹೌದು, ಕ್ರೋಮಾದಲ್ಲಿ ಆ್ಯಪಲ್ ಐಫೋನ್ 13 ಖರೀದಿ ಮೇಲೆ ಬರ್ಜರಿ ಡಿಸ್ಕೌಂಟ್ ಸಿಗುತ್ತಿದೆ. 69,900 ರೂ. ಮೂಲ ಬೆಲೆಯ ಐಫೋನ್ 13 ಇದೀಗ ನಿಮಗೆ 51,990 ರೂ.ಗೆ ಲಭ್ಯವಿದೆ. ಈ ಫೋನ್‍ ಮೇಲೆ ಎಕ್ಸ್‌ಚೇಂಜ್ ಆಫರ್ ಸಹ ಇದೆ. ಫ್ಲಿಪ್‌ಕಾರ್ಟ್‌ ಬಿಗ್ ಬಿಲಿಯನ್ ಡೇ ಸೇಲ್‍ನಲ್ಲಿ ಐಫೋನ್ 13 ಖರೀದಿಸಲು ಸಾಧ್ಯವಾಗದವರೂ ಕ್ರೋಮಾದಲ್ಲಿ ಖರೀದಿಸಬಹುದು.

ಇದನ್ನೂ ಓದಿ: ನೋಕಿಯಾದ 12,499 ರೂ. ಬೆಲೆಯ ಸ್ಮಾರ್ಟ್‌ಫೋನ್ ಅನ್ನು ಕೇವಲ 849 ರೂ.ಗಳಿಗೆ ಖರೀದಿಸಿ

ಪ್ರಸ್ತುತ ಕ್ರೋಮಾದಲ್ಲಿ Apple iPhone 13 ಬೆಲೆ 61,990 ರೂ. ಇದೆ. ಇದರ ಮೇಲೆ ಶೇ.11ರಷ್ಟು ಅಂದರೆ 7,910 ರೂ.ಗಳ ತ್ವರಿತ ರಿಯಾಯಿತಿ ನಿಮಗೆ ಸಿಗುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಕ್ರೋಮಾವು HDFC ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳ ಮೇಲೆ ಶೇ.10ರಷ್ಟು ತ್ವರಿತ ರಿಯಾಯಿತಿ ನೀಡುತ್ತಿದೆ. ಆಗ ಈ ಪೋನಿನ ಬೆಲೆ 51,990 ರೂ. ಆಗುತ್ತದೆ. ಇದಲ್ಲದೆ ಕ್ರೋಮಾದಲ್ಲಿ ಆ್ಯಪಲ್ ವಾಚ್ SEಯನ್ನು 19,990 ರೂ.ಗೆ ನೀಡುತ್ತಿದೆ. ಈ ವಾಚ್‌ನ ಮೂಲ ಬೆಲೆ ಭಾರತದಲ್ಲಿ 25,990 ರೂ. ಇದೆ.

Apple iPhone 13 ಕೆಂಪು, ಸ್ಟಾರ್‌ಲೈಟ್, ಮಿಡ್‍ನೈಟ್, ನೀಲಿ, ಗುಲಾಬಿ ಮತ್ತು ಹಸಿರು ಬಣ್ಣಗಳಲ್ಲಿ ಲಭ್ಯವಿದೆ. ಇದು 128GB, 256GB ಮತ್ತು 512GB ಸ್ಟೋರೇಜ್ ಆಯ್ಕೆಗಳಲ್ಲಿ ಬರುತ್ತದೆ. iPhone 13 6.1-ಇಂಚಿನ ರೆಟಿನಾ XDR OLED ಡಿಸ್ಪ್ಲೇಯೊಂದಿಗೆ ಬರುತ್ತದೆ. ಇದು 1170 x 2532 ರೆಸಲ್ಯೂಶನ್ ಮತ್ತು 460 PPI ಪಿಕ್ಸೆಲ್ ಸಾಂದ್ರತೆ(Pixel Density)ಯನ್ನು ಹೊಂದಿದೆ. ಇದು 1200 nits ಗರಿಷ್ಠ ಹೊಳಪನ್ನು ಹೊಂದಿದೆ ಮತ್ತು ಟ್ರೂ ಟೋನ್ ಬೆಂಬಲಿಸುತ್ತದೆ.

ಇದನ್ನೂ ಓದಿ: Fake Smartphone ಹಾವಳಿಗೆ ಬ್ರೇಕ್ ಹಾಕಲು ಸರ್ಕಾರದಿಂದ ಬಂತು ಖಡಕ್ ರೂಲ್ಸ್!

Apple iPhone 12MP ಮುಖ್ಯ ಲೆನ್ಸ್ ಮತ್ತು 12MP ಅಲ್ಟ್ರಾ-ವೈಡ್ ಲೆನ್ಸ್‌ನೊಂದಿಗೆ ಹಿಂಭಾಗದಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 12MP ಮುಂಭಾಗದ ಕ್ಯಾಮೆರಾ ಇದೆ. ಹಿಂಬದಿಯ ಕ್ಯಾಮರಾದಲ್ಲಿ ನೀವು 60fpsನಲ್ಲಿ 4K ವಿಡಿಯೋಗಳನ್ನು ಶೂಟ್ ಮಾಡಬಹುದು. ಇದು ಸ್ಟಿರಿಯೊ ಸ್ಪೀಕರ್‌ನೊಂದಿಗೆ ಬರುತ್ತದೆ. ಹುಡ್ ಅಡಿಯಲ್ಲಿ ಶಕ್ತಿಯುತ A15 ಬಯೋನಿಕ್ ಚಿಪ್ ಸಹ ಹೊಂದಿದೆ. ಅಲ್ಲದೆ ಇದು ಬ್ಯಾಟರಿ ಬಾಳಿಕೆ ಹೆಚ್ಚಿಸಲು ಸುಧಾರಿತ ವಿದ್ಯುತ್ ದಕ್ಷತೆ(Power Efficiency)ಯೊಂದಿಗೆ ಬರುತ್ತದೆ.

ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆನ್‌ಲೈನ್ ಮಾರಾಟದ ಸಮಯದಲ್ಲಿ ಬೆಲೆಗಳು ಏರಿಳಿತಗೊಳ್ಳುತ್ತವೆ. ಇದನ್ನು ಖರೀದಿದಾರರು ಗಮನಿಸಬೇಕು. ಕೆಲವು ಫೋನುಗಳು ಶೀಘ್ರವೇ out of stock ಆಗಬಹುದು. ಹೀಗಾಗಿ ಕೂಡಲೇ ನೀವು ಕ್ರೋಮಾ ಸೈಟ್‍ಗೆ ಭೇಟಿ ನೀಡಿ ನಿಮ್ಮಿಷ್ಟದ ಐಫೋನ್ ಖರೀದಿಸುವುದು ಸೂಕ್ತ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News