Apple MacBook Pro 2021 Launch:ಸ್ಟೈಲಿಶ್ ವಿನ್ಯಾಸ ಹೊಂದಿರುವ MacBook Pro ಬಿಡುಗಡೆ, ಇಲ್ಲಿದೆ ವೈಶಿಷ್ಟ್ಯ - ಬೆಲೆ ಕುರಿತಾದ ವಿವರ

MacBook Pro 2021 -  Apple ತನ್ನ MacBook Pro 2021 ಅನ್ನು ಬಿಡುಗಡೆ ಮಾಡಿದೆ. 14 ಇಂಚಿನ ಮ್ಯಾಕ್‌ಬುಕ್ ಪ್ರೊ 2021 ಎಂ 1 ಚಿಪ್‌ನಿಂದ ಚಾಲಿತವಾಗಿದೆ, 16 ಇಂಚಿನ ಆವೃತ್ತಿಯು ಎಂ 1 ಪ್ರೊ/ಎಂ 1 ಮ್ಯಾಕ್ಸ್ ಚಿಪ್‌ನಿಂದ ಚಾಲಿತವಾಗಿದೆ. ಮ್ಯಾಕ್‌ಬುಕ್ ಪ್ರೊ 2021 ರ ಭಾರತದಲ್ಲಿನ ಬೆಲೆ ಮತ್ತು ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

Written by - Nitin Tabib | Last Updated : Oct 19, 2021, 10:51 AM IST
  • ಆಪಲ್ MacBook Pro 2021 ಬಿಡುಗಡೆ.
  • 14 ಇಂಚಿನ MacBook Pro 2021 ಎಂ 1 ಚಿಪ್‌ನಿಂದ ಚಾಲಿತವಾಗಿದೆ.
  • 16 ಇಂಚಿನ ಆವೃತ್ತಿಯು M1 Pro / M1 ಮ್ಯಾಕ್ಸ್ ಚಿಪ್ ಅನ್ನು ಹೊಂದಿದೆ.
Apple MacBook Pro 2021 Launch:ಸ್ಟೈಲಿಶ್ ವಿನ್ಯಾಸ ಹೊಂದಿರುವ MacBook Pro ಬಿಡುಗಡೆ, ಇಲ್ಲಿದೆ ವೈಶಿಷ್ಟ್ಯ -  ಬೆಲೆ ಕುರಿತಾದ ವಿವರ  title=
Apple MacBook Pro 2021 Launch (File Photo)

ನವದೆಹಲಿ:  MacBook Pro 2021 - 14 ಇಂಚು ಮತ್ತು 16 ಇಂಚಿನ MacBook Pro 2021ರ ಬಿಡುಗಡೆಯನ್ನು ಘೋಷಿಸಲು ಆಪಲ್ ನಿನ್ನೆ ಒಂದು ಕಾರ್ಯಕ್ರಮವನ್ನು ಆಯೋಜಿಸಿತ್ತು. ಕಳೆದ ವರ್ಷ ಬಿಡುಗಡೆಯಾದ  13 ಇಂಚಿನ ಮ್ಯಾಕ್‌ಬುಕ್ ಪ್ರೊ ಆಪಲ್‌ನ ಎಂ 1 ಚಿಪ್‌ನಿಂದ ಚಾಲಿತವಾಗಿದೆ, ಹೊಸದಾಗಿ ಅನಾವರಣಗೊಂಡ 14 ಇಂಚಿನ ಮ್ಯಾಕ್‌ಬುಕ್ ಪ್ರೊ 2021 ಎಂ 1 ಚಿಪ್‌ನಿಂದ ಚಾಲಿತವಾಗಿದೆ, 16 ಇಂಚಿನ ಆವೃತ್ತಿಯು ಎಂ 1 ಪ್ರೊ/ಎಂ 1 ಮ್ಯಾಕ್ಸ್ ಚಿಪ್‌ನಿಂದ ಚಾಲಿತವಾಗಿದೆ. MacBook Pro 2021 ರ ಭಾರತೀಯ ಮಾರುಕಟ್ಟೆ ಬೆಲೆ ಹಾಗೂ ವೈಶಿಷ್ಟ್ಯಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

MacBook Pro 2021 Variants - 14 ಇಂಚಿನ MacBook Pro 2021ರ ಭಾರತೀಯ ಮಾರುಕಟ್ಟೆಯಲ್ಲಿನ ಬೆಲೆ
14 ಇಂಚಿನ Apple ಮ್ಯಾಕ್‌ಬುಕ್ ಪ್ರೊ 2021 ಎರಡು ಕಾನ್ಫಿಗರೆಷೆನ್ ನಲ್ಲಿ ಬರುತ್ತದೆ. M1 ಪ್ರೊ ಚಾಲಿತ ನೋಟ್ಬುಕ್ 8-ಕೋರ್ CPU, 14-ಕೋರ್ GPU, 16GB ಯುನಿಫೈಡ್ ಮೆಮೊರಿ, 512GB SSD ಸ್ಟೋರೇಜ್ ಮತ್ತು 67W USB-C ಪವರ್ ಅಡಾಪ್ಟರ್ ಹೊಂದಿದೆ. ಈ ಮಾದರಿಯನ್ನು ಆಪಲ್ ಇಂಡಿಯಾ ವೆಬ್‌ಸೈಟ್‌ನಲ್ಲಿ ರೂ. 194,900 ರ ಆರಂಭಿಕ ಬೆಲೆಯೊಂದಿಗೆ ಪಟ್ಟಿ ಮಾಡಲಾಗಿದೆ.

MacBook Pro 2021 Specifications - 14-ಇಂಚಿನ ಮಾದರಿಯು 10-ಕೋರ್ CPU, 16-ಕೋರ್ GPU, 16 GB ಯುನಿಫೈಡ್ ಮೆಮೊರಿ, 1 TB SSD ಸಂಗ್ರಹ ಮತ್ತು 96W USB-C ಪವರ್ ಅಡಾಪ್ಟರ್ ನ ಪ್ಯಾಕ್ ಹೊಂದಿದೆ. ಇದರ ಬೆಲೆ ರೂ 239,900 ರಿಂದ ಆರಂಭವಾಗುತ್ತದೆ. ಎರಡೂ ಮಾದರಿಗಳು 14-ಇಂಚಿನ ಲಿಕ್ವಿಡ್ ರೆಟಿನಾ XDR ಡಿಸ್‌ಪ್ಲೇ, 16-ಕೋರ್ ನ್ಯೂರಲ್ ಇಂಜಿನ್, ಮೂರು ಥಂಡರ್‌ಬೋಲ್ಟ್ 4 ಪೋರ್ಟ್‌ಗಳು, HDMI ಪೋರ್ಟ್, SDXC ಕಾರ್ಡ್ ಸ್ಲಾಟ್, ಮ್ಯಾಗ್‌ಸೇಫ್ 3 ಪೋರ್ಟ್, ಟಚ್ ಐಡಿ ಮತ್ತು ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್‌ನೊಂದಿಗೆ ಮ್ಯಾಜಿಕ್ ಕೀಬೋರ್ಡ್‌ನಂತಹ ಸಾಮಾನ್ಯ ಸೌಕರ್ಯಗಳನ್ನು ನೀಡುತ್ತವೆ. ಎರಡೂ ರೂಪಾಂತರಗಳು ಸ್ಪೇಸ್ ಗ್ರೇ ಮತ್ತು ಸಿಲ್ವರ್ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ ಲಭ್ಯವಿರಲಿವೆ.

ಇದನ್ನೂ ಓದಿ-Facebook: ಫೇಸ್‌ಬುಕ್ ನಿಮ್ಮ ಮೇಲೆ ಬೇಹುಗಾರಿಕೆ ಮಾಡುತ್ತಿದೆಯೇ? ಈ ರೀತಿ ಪತ್ತೆ ಹಚ್ಚಿ

16-Inch MacBook Pro 2021 Price In India
ಭಾರತದಲ್ಲಿ 16 ಇಂಚಿನ MacBook Pro 2021ನ ಒಟ್ಟು ಮೂರು ರೂಪಾಂತರಗಳಿವೆ. ಎಂ 1 ಪ್ರೊ ಚಾಲಿತ ಮೂಲ ಮಾದರಿಯು 10-ಕೋರ್CPU, 16-ಕೋರ್ GPU, 16 ಜಿಬಿ ಯುನಿಫೈಡ್ ಮೆಮೊರಿ ಮತ್ತು 512 GB SSD ಸಂಗ್ರಹದೊಂದಿಗೆ ಬರುತ್ತದೆ. ಇನ್ನೊಂದು ರೂಪಾಂತರವು ವಿಶೇಷತೆಗಳನ್ನು ಹೊಂದಿದೆ, ಆದರೆ ಇದು 1 GB SSD ಸಂಗ್ರಹಣೆಯೊಂದಿಗೆ ಬರುತ್ತದೆ. ಎರಡೂ ಮಾದರಿಗಳು ಕ್ರಮವಾಗಿ ರೂ 239,900 ಮತ್ತು ರೂ 259,900 ರಿಂದ ಆರಂಭವಾಗುತ್ತವೆ.

ಇದನ್ನೂ ಓದಿ-Ulefone: ಫುಲ್ ಚಾರ್ಜ್ನಲ್ಲಿ 4 ದಿನ ಬಳಸಬಹುದಾದ, ನೀರಿನಲ್ಲೂ ಹಾಳಾಗದ ಜಬರ್ದಸ್ತ್ ಸ್ಮಾರ್ಟ್ಫೋನ್

ಅತ್ಯುನ್ನತ ಮಾದರಿಯು M1 ಮ್ಯಾಕ್ಸ್ ಚಿಪ್‌ನಿಂದ ಚಾಲಿತವಾಗಿದೆ. ಇದು 10-ಕೋರ್ CPU, 32-ಕೋರ್ GPU, 32 GB ಮೆಮೊರಿ ಮತ್ತು 1 TB ಸ್ಟೋರೇಜ್ ನಂತಹ ವೈಶಿಷ್ಟ್ಯಗಳು ಹೊಂದಿದೆ. ಇದರ ಬೆಲೆ ರೂ 329,900 ರಿಂದ ಆರಂಭವಾಗುತ್ತದೆ. ಎಲ್ಲಾ ಮೂರು ಮಾದರಿಗಳು 16.2 ಇಂಚಿನ ಲಿಕ್ವಿಡ್ ರೆಟಿನಾ XDR ಡಿಸ್ಪ್ಲೇ, 16-ಕೋರ್ ನ್ಯೂರಲ್ ಇಂಜಿನ್, ಮೂರು ಥಂಡರ್‌ಬೋಲ್ಟ್ 4 ಪೋರ್ಟ್‌ಗಳು, ಎಚ್‌ಡಿಎಂಐ ಪೋರ್ಟ್, ಎಸ್‌ಡಿಎಕ್ಸ್‌ಸಿ ಕಾರ್ಡ್ ಸ್ಲಾಟ್, ಮ್ಯಾಗ್‌ಸೇಫ್ 3 ಪೋರ್ಟ್, ಟಚ್ ಐಡಿಯೊಂದಿಗೆ ಮ್ಯಾಜಿಕ್ ಕೀಬೋರ್ಡ್, ಫೋರ್ಸ್ ಟಚ್ ಟ್ರ್ಯಾಕ್‌ಪ್ಯಾಡ್ ಮತ್ತು 140W USB-C ಮೂಲಕ ಪ್ರಸ್ತುತ ಪಡಿಸಲಾಗಿದೆ. 

ಇದನ್ನೂ ಓದಿ-Nokia XR20 Launch: ಮಿಲಿಟರಿ ಗ್ರೇಡ್ ಕ್ವಾಲಿಟಿಯ ನೋಕಿಯಾ XR20 ಬಿಡುಗಡೆ, ನೀರಲ್ಲೂ ಹಾಳಾಗಲ್ಲ, ಬಿದ್ದರೂ ಒಡೆಯಲ್ವಂತೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News