Nokia XR20 Launched In India - Nokia XR 20 ಅನ್ನು ಭಾರತದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಫೋನ್ ಮಿಲಿಟರಿ ದರ್ಜೆಯ ನಿರ್ಮಾಣ ಗುಣಮಟ್ಟವನ್ನು ಹೊಂದಿದೆ. ಕಂಪನಿಯು ಈ ಫೋನ್ 55 ಡಿಗ್ರಿಗಳವರೆಗೆ ಬಿಸಿಯಲ್ಲೂ ಕೆಲಸ ಮಾಡಬಲ್ಲದು ಎಂದು ಕಂಪನಿ ಹೇಳಿಕೊಂಡಿದೆ. ಇದರ ಹೊರತಾಗಿ, ಫೋನ್ 1.5 ಮೀಟರ್ ಎತ್ತರದಿಂದ ಬಿದ್ದರೂ ಅದು ಒಡೆಯುವುದಿಲ್ಲ ಮತ್ತು ಅದು ಒಂದು ಗಂಟೆ ನೀರಿನ ಅಡಿಯಲ್ಲಿ ಉಳಿಯಬಹುದು. 6 GB RAM ಮತ್ತು 128 GB ಇಂಟರ್ನಲ್ ಸ್ಟೋರೇಜ್ ಹೊಂದಿರುವ ಈ ಫೋನಿನ ಬೆಲೆ 46,999 ರೂ. (Nokia XR 20 Price) ಗ್ರಾನೈಟ್ ಮತ್ತು ಅಲ್ಟ್ರಾ ಬ್ಲೂ ಕಲರ್ ಆಯ್ಕೆಗಳಲ್ಲಿ ಬರುವ ಈ ಫೋನಿನ ಮಾರಾಟ ಅಕ್ಟೋಬರ್ 30 ರಿಂದ ಆರಂಭವಾಗಲಿದೆ.
ಲಾಂಚ್ ಆಫರ್ ಅಡಿಯಲ್ಲಿ, ಕಂಪನಿಯು ಈ ಫೋನ್ ಖರೀದಿಯ ಮೇಲೆ ರೂ. 3,599 ಮೌಲ್ಯದ ನೋಕಿಯಾ ಪವರ್ ಇಯರ್‌ಬಡ್ಸ್ ಲೈಟ್ ಅನ್ನು ಉಚಿತವಾಗಿ ನೀಡುತ್ತದೆ. ಈ ಫೋನನ್ನು ಮುಂಚಿತವಾಗಿ ಬುಕ್ ಮಾಡುವ ಬಳಕೆದಾರರು ಒಂದು ವರ್ಷದ ಸ್ಕ್ರೀನ್ ಪ್ರೊಟೆಕ್ಷನ್ ಪ್ಲಾನ್ ಅನ್ನು ಉಚಿತವಾಗಿ ಪಡೆಯಲಿದ್ದಾರೆ ಎಂದು ಕಂಪನಿ ಘೋಷಿಸಿದೆ.
Nokia XR 20 ವೈಶಿಷ್ಟ್ಯಗಳು (Nokia XR 20 Features)
ಫೋನ್‌ನಲ್ಲಿ, ಕಂಪನಿಯು 6.67-ಇಂಚಿನ ಪೂರ್ಣ ಎಚ್‌ಡಿ + ಡಿಸ್‌ಪ್ಲೇಯನ್ನು 1080x2400 ಪಿಕ್ಸೆಲ್ ರೆಸಲ್ಯೂಶನ್‌ನೊಂದಿಗೆ ನೀಡುತ್ತಿದೆ. ಗೊರಿಲ್ಲಾ ಗ್ಲಾಸ್ ವಿಕ್ಟಸ್ ಪ್ರೊಟೆಕ್ಷನ್‌ನೊಂದಿಗೆ ಬರುವ ಈ ಡಿಸ್‌ಪ್ಲೇಯ ಆಸ್ಪೆಕ್ಟ ರೆಶ್ಯೋ 20: 9 ಆಗಿದೆ. ಫೋನ್ 6 GB RAM ಮತ್ತು 128 GB ಆಂತರಿಕ ಸಂಗ್ರಹಣೆಯನ್ನು ಹೊಂದಿದೆ. ಪ್ರೊಸೆಸರ್ ಆಗಿ, ನೀವು ಈ ಫೋನ್‌ನಲ್ಲಿ ಸ್ನಾಪ್‌ಡ್ರಾಗನ್ 480 ಚಿಪ್‌ಸೆಟ್ ಪಡೆಯುವಿರಿ.
ಇದನ್ನೂ ಓದಿ-Knowledge News:ರೂಪಾಯಿ ನೋಟಿನ ಈ ವೈಶಿಷ್ಟ್ಯ ನಿಮಗೂ ಗೊತ್ತಿರಲಿಕ್ಕಿಲ್ಲ, ಏಕೆಂದರೆ ಈ ಸಂಗತಿ ತುಂಬಾ ಸಿಕ್ರೆಟ್
ಫೋಟೋಗ್ರಫಿಗಾಗಿ ಎಲ್‌ಇಡಿ ಫ್ಲ್ಯಾಶ್‌ನೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಫೋನ್‌ನಲ್ಲಿ ನೀಡಲಾಗಿದೆ. ಇದು 13 ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್ ಆಂಗಲ್ ಶೂಟರ್ ಹೊಂದಿದ್ದು 48 ಮೆಗಾಪಿಕ್ಸೆಲ್ ಪ್ರಾಥಮಿಕ ಸೆನ್ಸರ್ ಹೊಂದಿದೆ. ಫೋನಿನಲ್ಲಿ ಕಂಡುಬರುವ ಕ್ಯಾಮರಾ ಆಪ್ಟಿಕ್ಸ್ Zeissನದ್ದಾಗಿದೆ. ಫೋನ್‌ನ ಕ್ಯಾಮೆರಾದಲ್ಲಿ ನೀವು ಆಕ್ಷನ್ ಕ್ಯಾಮ್ ಮೋಡ್ ಅನ್ನು ಸಹ ಪಡೆಯುವಿರಿ. ಇದು ಸಾಕಷ್ಟು ಸ್ಥಿರ ತುಣುಕನ್ನು ಸೆರೆಹಿಡಿಯಲು ಸಹಕರಿಸಲಿದೆ.
ಇದನ್ನೂ ಓದಿ-WhatsApp New Feature: ಒಂದು ಮೋಜಿನ ಫೀಚರ್ ಬಿಡುಗಡೆ ಮಾಡಲು ವಾಟ್ಸಾಪ್ ಸಿದ್ಧತೆ
Nokia XR20 Specifications - ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸಾರ್ ಹೊಂದಿರುವ ಈ ಫೋನ್ ನಲ್ಲಿ 4,630mAh ಬ್ಯಾಟರಿ ನೀಡಲಾಗಿದೆ. ಈ ಬ್ಯಾಟರಿ 18W ವೈಯರ್ಡ್ ಹಾಗೂ 15W ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಸಂಪರ್ಕಕ್ಕಾಗಿ, ಫೋನಿನಲ್ಲಿ ನಿಮಗೆ 5G, 4G LTE, Wi-Fi 6, ಬ್ಲೂಟೂತ್ 5.1, GPS / A-GPS, NavIC, NFC, USB Type-C ಮತ್ತು 3.5mm ಹೆಡ್‌ಫೋನ್ ಜ್ಯಾಕ್‌ನಂತಹ ವೈಶಿಷ್ಟ್ಯಗಳನ್ನು ನೀಡಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ