2023ರಲ್ಲಿ ಬಿಡುಗಡೆಯಾದ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳು ಇವು ! ವೈಶಿಷ್ಟ್ಯದಲ್ಲಿಯೂ ಟಾಪ್! ಬೆಲೆಯೂ ಅಗ್ಗ !

Best 5G Smartphone 2023:ನಾವು 20,000 ರೂಪಾಯಿಗಿಂತ ಕಡಿಮೆ ಬೆಲೆಯ 5G ಸ್ಮಾರ್ಟ್‌ಫೋನ್‌ಗಳನ್ನು ನೋಡುವುದಾದರೆ, ಕೆಲವೇ ಕೆಲವು ಫೋನ್ ಗಳು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿವೆ. ಇಲ್ಲಿ ನಾವು 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5ಜಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. 

Written by - Ranjitha R K | Last Updated : Dec 23, 2023, 11:26 AM IST
  • ಇನ್ನು ಕೆಲವೇ ದಿನಗಳಲ್ಲಿ 2023ನೇ ವರ್ಷ ಮುಗಿಯಲಿದೆ.
  • ಹಲವು ಕಂಪನಿಗಳು ಅನೇಕ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.
  • 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5ಜಿ ಸ್ಮಾರ್ಟ್‌ಫೋನ್‌
2023ರಲ್ಲಿ ಬಿಡುಗಡೆಯಾದ ಅತ್ಯುತ್ತಮ 5G ಸ್ಮಾರ್ಟ್‌ಫೋನ್‌ಗಳು ಇವು !  ವೈಶಿಷ್ಟ್ಯದಲ್ಲಿಯೂ ಟಾಪ್! ಬೆಲೆಯೂ ಅಗ್ಗ !  title=

Best 5G Smartphone 2023: ಇನ್ನು ಕೆಲವೇ ದಿನಗಳಲ್ಲಿ 2023ನೇ ವರ್ಷ ಮುಗಿಯಲಿದೆ. ಈ ವರ್ಷ, Oppo, Vivo, Oneplus ಸೇರಿದಂತೆ ಹಲವು ಕಂಪನಿಗಳು ಅನೇಕ 5G ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಈ ಎಲ್ಲಾ ಫೋನ್ ಗಳು ಇತ್ತೀಚಿನ ವೈಶಿಷ್ಟ್ಯಗಳೊಂದಿಗೆ ಅಳವಡಿಸಲ್ಪಟ್ಟಿವೆ. ಆದರೆ ನಾವು 20,000 ರೂಪಾಯಿಗಿಂತ ಕಡಿಮೆ ಬೆಲೆಯ 5G ಸ್ಮಾರ್ಟ್‌ಫೋನ್‌ಗಳನ್ನು ನೋಡುವುದಾದರೆ ಕೆಲವೇ ಕೆಲವು ಫೋನ್ ಗಳು ಅದ್ಭುತ ವೈಶಿಷ್ಟ್ಯಗಳನ್ನು ಹೊಂದಿವೆ. ಇಲ್ಲಿ ನಾವು 20 ಸಾವಿರಕ್ಕಿಂತ ಕಡಿಮೆ ಬೆಲೆಗೆ ಖರೀದಿಸಬಹುದಾದ 5ಜಿ ಸ್ಮಾರ್ಟ್‌ಫೋನ್‌ಗಳ ಬಗ್ಗೆ ಮಾಹಿತಿ ನೀಡುತ್ತಿದ್ದೇವೆ. 

1. Vivo T2 5G : 
Vivoನ ಈ 5G ಸ್ಮಾರ್ಟ್‌ಫೋನ್ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 90Hz ರಿಫ್ರೆಶ್ ರೇಟ್ ನೊಂದಿಗೆ ಬರುತ್ತದೆ. ಉತ್ತಮ ಫೋಟೋಗಳನ್ನು ಕ್ಲಿಕ್ಕಿಸಲು 64MP OIS ಆಂಟಿಶೇಕ್ ಕ್ಯಾಮೆರಾವನ್ನು ಹೊಂದಿದೆ. ಫೋನ್ ಸ್ನಾಪ್‌ಡ್ರಾಗನ್ 695 5G ಚಿಪ್‌ಸೆಟ್ ಅನ್ನು ಹೊಂದಿದೆ. ಇದು 4500mAh ಬ್ಯಾಟರಿಯನ್ನು ಹೊಂದಿದ್ದು, 16,999 ರೂ.ಗಳಲ್ಲಿ ಲಭ್ಯವಿದೆ.

ಇದನ್ನೂ ಓದಿ : ನಿಮ್ಮ ಫೋನ್ ನಲ್ಲಿ ಈ ಆಪ್ ಗಳಿದ್ದರೆ ಲೀಕ್ ಆಗುತ್ತದೆ ಎಲ್ಲಾ ಪರ್ಸನಲ್ ಫೋಟೋಗಳು !

2. OnePlus Nord CE 3 Lite 5G : 
ಈ ಫೋನ್ Qualcomm Snapdragon 695 ಪ್ರೊಸೆಸರ್ ಅನ್ನು ಹೊಂದಿದೆ. ಇದು ಫೋನ್‌ನ ಕಾರ್ಯಕ್ಷಮತೆಯನ್ನು ಅದ್ಭುತಗೊಳಿಸುತ್ತದೆ. 5000 mAh ಬ್ಯಾಟರಿಯನ್ನು ಹೊಂದಿದ್ದು ಇದು 67W ಸೂಪರ್‌ವೋಕ್ ಅನ್ನು ಬೆಂಬಲಿಸುತ್ತದೆ. ಫೋನ್ 108 MP, 2 MP ಮತ್ತು 2 MP ಕ್ಯಾಮೆರಾಗಳನ್ನು ಹೊಂದಿದೆ. ಫೋನ್ ಸೆಲ್ಫಿಗಾಗಿ 16 MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರ ಬೆಲೆ 19,998 ರೂ. 

3. iQOO Z7 5G : 
ಈ ಫೋನ್‌ನ ಬೆಲೆ 18,999 ರೂ. ಇದು Android 13 ಆಧಾರಿತ Funtouch OS 13 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 64 ಎಂಪಿ ಮತ್ತು 2 ಎಂಪಿ ಕ್ಯಾಮೆರಾ ಸೆಟಪ್ ಹೊಂದಿದೆ. ಅಲ್ಲದೆ,  ಈ ಫೋನ್ 16MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ. ಫೋನ್ ನಲ್ಲಿ  4500mAh ಬ್ಯಾಟರಿ ಇದ್ದು, ಇದು 44W ಫ್ಲಾಶ್ ಚಾರ್ಜ್ ಅನ್ನು ಸಪೋರ್ಟ್ ಮಾಡುತ್ತದೆ. 

ಇದನ್ನೂ ಓದಿ : ಭಾರತದಲ್ಲಿ ಕೃತಕ ಬುದ್ಧಿಮತ್ತೆ ವೈಶಿಷ್ಟ್ಯ ಹೊಂದಿರುವ ಮೂರು ಲ್ಯಾಪ್ ಟಾಪ್ ಬಿಡುಗಡೆ ಮಾಡಿದ ಎಂಎಸ್ಐ!

4. Poco X5 Pro : 
Poco ನ ಈ ಫೋನ್ Snapdragon 778G ಚಿಪ್‌ಸೆಟ್ ಪ್ರೊಸೆಸರ್ ಅನ್ನು ಹೊಂದಿದೆ. ಇದು 6.67 ಇಂಚಿನ Xfinity AMOLED ಡಿಸ್ಪ್ಲೇ ಹೊಂದಿದೆ. ಫೋನ್ 108MP, 8MP ಮತ್ತು 2MP ಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾ ಇದೆ. ಫೋನ್ 5000mAh ಬ್ಯಾಟರಿಯೊಂದಿಗೆ ಬರುತ್ತದೆ. ಇದು 67W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News