Tata Tiago EVಗಿಂತ 2 ಲಕ್ಷ ಅಗ್ಗದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ !

MG Comet EV Price: MG ಮೋಟಾರ್ ಇಂಡಿಯಾ ಕಾಮೆಟ್ EVಯ ಎಲ್ಲಾ ರೂಪಾಂತರಗಳ ಬೆಲೆಗಳನ್ನು ಘೋಷಿಸಿದೆ.  ಇದರ ಟಾಪ್-ಸ್ಪೆಕ್ ರೂಪಾಂತರವು ಟಾಟಾ ಟಿಯಾಗೊ EVಯ ಟಾಪ್-ಎಂಡ್ ರೂಪಾಂತರಕ್ಕಿಂತ 2 ಲಕ್ಷ ದಷ್ಟು ಅಗ್ಗವಾಗಿದೆ.

Written by - Ranjitha R K | Last Updated : May 5, 2023, 04:13 PM IST
  • MG ಮೋಟಾರ್ ಇಂಡಿಯಾ ಕಾಮೆಟ್ EV ಬೆಲೆ ಘೋಷಣೆ
  • MG ಕಾಮೆಟ್ EV ಬೆಲೆಗಳು 7.98 ಲಕ್ಷದಿಂದ 9.98 ಲಕ್ಷದವರೆಗೆ ಇದೆ.
  • ಟಾಟಾ ಟಿಯಾಗೊ EV ಯೊಂದಿಗೆ ಸ್ಪರ್ಧಿಸಲಿದೆ.
Tata Tiago EVಗಿಂತ 2 ಲಕ್ಷ ಅಗ್ಗದ ಎಲೆಕ್ಟ್ರಿಕ್ ವಾಹನ ಮಾರುಕಟ್ಟೆಗೆ !   title=

MG Comet EV Price : MG ಮೋಟಾರ್ ಇಂಡಿಯಾ ಕಾಮೆಟ್ EVಯ ಎಲ್ಲಾ ರೂಪಾಂತರಗಳ ಬೆಲೆಗಳನ್ನು ಘೋಷಿಸಿದೆ. ಹೊಸ MG ಕಾಮೆಟ್ EV ಬೆಲೆಗಳು 7.98 ಲಕ್ಷದಿಂದ 9.98 ಲಕ್ಷದವರೆಗೆ ಇದೆ.  ಈ ಬೆಲೆಯನ್ನು ಗಮನಿಸಿದರೆ ಇದು ಭಾರತದಲ್ಲಿ ಅಗ್ಗದ ವಿದ್ಯುತ್ ಕಾರ್ ಆಗಿದೆ. ಇದರ ಟಾಪ್-ಸ್ಪೆಕ್ ರೂಪಾಂತರವು ಟಾಟಾ ಟಿಯಾಗೊ EVಯ ಟಾಪ್-ಎಂಡ್ ರೂಪಾಂತರಕ್ಕಿಂತ 2 ಲಕ್ಷ ದಷ್ಟು ಅಗ್ಗವಾಗಿದೆ. ಇದು ಮಾರುಕಟ್ಟೆಯಲ್ಲಿ ಟಾಟಾ ಟಿಯಾಗೊ EV ಯೊಂದಿಗೆ ಸ್ಪರ್ಧಿಸಲಿದೆ. 

MG ಕಾಮೆಟ್ EV ಯ ಎಲ್ಲಾ ರೂಪಾಂತರಗಳ ಬೆಲೆಗಳು :
ಎಂಜಿ ಕಾಮೆಟ್ ಇವಿ ಪೇಸ್:  7.98 ಲಕ್ಷ 
ಎಂಜಿ ಕಾಮೆಟ್ ಇವಿ ಪ್ಲೇ:  9.28 ಲಕ್ಷ 
ಎಂಜಿ ಕಾಮೆಟ್ ಇವಿ ಪ್ಲಶ್:  9.98 ಲಕ್ಷ 

ಇದನ್ನೂ ಓದಿ : 5 ಗಂಟೆಯಲ್ಲಿ 1 ಲಕ್ಷ ಮಂದಿ ಮುಗಿಬಿದ್ದು ಖರೀದಿಸಿದ ಈ ಮೊಬೈಲ್ ಬೆಲೆ ಜಸ್ಟ್ 10,999! ಐಫೋನ್ ಮಾದರಿ ಇದೆ ಇದರ ಫೀಚರ್!

ಈ ಮೇಲೆ ತಿಳಿಸಿರುವ ದರಗಳು ಪರಿಚಯಾತ್ಮಕ ಬೆಲೆಗಳಾಗಿವೆ. ಮೊದಲ 5,000 ಖರೀದಿದಾರರಿಗೆ ಮಾತ್ರ ಈ ಬೆಲೆಯಲ್ಲಿ ಕಾರು ಖರೀದಿಸುವ ಅವಕಾಶ ಸಿಗುವುದು. ಮೇ 15 ರಿಂದ ಕಾರಿನ ಬುಕಿಂಗ್ ಪ್ರಾರಂಭವಾಗುತ್ತವೆ. ವಿತರಣೆ ಮೇ 22, 2023 ರಿಂದ ನಡೆಯಲಿದೆ.  MG ಕಾಮೆಟ್ 17.3 kWh ಲಿಥಿಯಂ-ಐಯಾನ್ ಬ್ಯಾಟರಿ ಪ್ಯಾಕ್ ಅನ್ನು ಹೊಂದಿದೆ. ಒಂದು ಸಲ ಫುಲ್ ಚಾರ್ಜ್ ಮಾಡಿದರೆ 230 ಕಿಮೀ ಡ್ರೈವಿಂಗ್ ರೇಂಜ್ ನೀಡಲಿದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಒಂದೇ ಎಲೆಕ್ಟ್ರಿಕ್ ಮೋಟರ್ ಅನ್ನು ಹೊಂದಿರುತ್ತದೆ. ಇದು 42bhp ಮತ್ತು 110Nm ಅನ್ನು ಜನರೆಟ್ ಮಾಡುತ್ತದೆ. ಸಾಮಾನ್ಯ AC ಚಾರ್ಜರ್ ಅನ್ನು ಬಳಸಿಕೊಂಡು ಕಾಮೆಟ್ EV ಅನ್ನು 7 ಗಂಟೆಗಳಲ್ಲಿ ಸಂಪೂರ್ಣವಾಗಿ ಚಾರ್ಜ್ ಮಾಡಬಹುದು ಎಂದು MG ಹೇಳಿಕೊಂಡಿದೆ. DC ಫಾಸ್ಟ್ ಚಾರ್ಜಿಂಗ್ ಅನ್ನು ಇದು ಸಪೋರ್ಟ್ ಮಾಡುವುದಿಲ್ಲ. 

ಇದು 10.25-ಇಂಚಿನ ಡಿಜಿಟಲ್ ಇನ್ಸ್ಟ್ರುಮೆಂಟ್ ಕ್ಲಸ್ಟರ್ ಮತ್ತು 10.25-ಇಂಚಿನ ಇನ್ಫೋಟೈನ್ಮೆಂಟ್ ಟಚ್‌ಸ್ಕ್ರೀನ್ ಡಿಸ್ಪ್ಲೇಯನ್ನು ಹೊಂದಿರುತ್ತದೆ. ಇದು  ಫ್ಲೋಟಿಂಗ್ ತ್ರ್ವಿನ್ ಡಿಸ್ಪ್ಲೇ ಆಗಿದೆ. ಇದು ಡ್ಯುಯಲ್ ಫ್ರಂಟ್ ಏರ್‌ಬ್ಯಾಗ್‌ಗಳು, EBD ಜೊತೆಗೆ ABS,  ಫ್ರಂಟ್ ಮತ್ತು ರಿಯರ್ 3 ಪಾಯಿಂಟ್ ಸೀಟ್ ಬೆಲ್ಟ್‌ಗಳು, ರಿಯರ್ ಪಾರ್ಕಿಂಗ್ ಕ್ಯಾಮೆರಾ ಮತ್ತು  ಸೆನ್ಸಾರ್, TPMS ಮತ್ತು ISOFIX ಚೈಲ್ಡ್ ಸೀಟ್‌ಗಳಂತಹ ಸುರಕ್ಷತಾ ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 

ಇದನ್ನೂ ಓದಿ :  Star Engulfs Planet: ಗುರು ಗ್ರಹದಂತಹ ದೊಡ್ಡ ಗ್ರಹವನ್ನೇ ನುಂಗಿ ಹಾಕಿದ ನಕ್ಷತ್ರ, ಭೂಮಿಯ ಗತಿ ಏನು? ವಿಡಿಯೋ ನೋಡಿ..!

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News