ನೀವು ಫೋನ್ ಕವರ್‌ನಲ್ಲಿ ನೋಟ್ ಇಡ್ತೀರಾ? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ

Mobile Safety Tips: ಮೊಬೈಲ್ ಸುರಕ್ಷತೆಗೆಂದು ಮೊಬೈಲ್ ಫೋನ್‌ಗಳಿಗೆ ಕವರ್ ಹಾಕಿಸುತ್ತೇವೆ. ಈ ಕವರ್ ಮೊಬೈಲ್ ಸೇಫ್ಟಿಗಷ್ಟೇ ಅಲ್ಲ, ಕೆಲವರು ಫೋನ್ ಕವರ್ ನಮ್ಮ ಕಾರ್ಡ್ ಗಳನ್ನು ಇಟ್ಟರೆ, ಇನ್ನೂ ಕೆಲವರು ಬೇಕೆಂದಾಗ ತಕ್ಷಣ ಕೈಗೆ ಸಿಗಲೆಂದು ಸ್ವಲ್ಪ ಹಣವನ್ನು  ಕೂಡ ಈ ಮೊಬೈಲ್ ಕವರ್‌ನಲ್ಲಿ ಇಡುತ್ತಾರೆ. ಅಂತಹವರಲ್ಲಿ ನೀವು ಒಬ್ಬರಾಗಿದ್ದರೆ ಇಲ್ಲಿದೆ ಈ ಸುದ್ದಿಯನ್ನು ತಪ್ಪದೇ ಓದಿ... 

Written by - Yashaswini V | Last Updated : Aug 22, 2023, 02:58 PM IST
  • ಫೋನ್ ಗೆ ಕವರ್ ಬಳಸಿದಾದ ಅದು ಸಾಮಾನ್ಯಕ್ಕಿಂತ ಬೇಗನೆ ಹೀಟ್ ಆಗುತ್ತದೆ.
  • ಅದರಲ್ಲೂ, ಹೆಚ್ಚು ಗೇಮ್ ಆಡುವುದು, ಇಲ್ಲವೇ, ಸದಾ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರಂತು ಫೋನ್ ಬ್ಯಾಟರಿ ಬಲು ಬೇಗ ತುಂಬಾ ಹೀಟ್ ಆಗುತ್ತದೆ.
  • ಇಂತಹ ಸಂದರ್ಭದಲ್ಲಿ ತಕ್ಷಣ ಫೋನ್ ಕೂಲ್ ಮಾಡಲು ಫೋನ್ ನಲ್ಲಿ ಅಳವಡಿಸಿರುವ ಕವರ್ ಅನ್ನು ತೆಗೆಯಲು ಸಲಹೆ ನೀಡುವುದನ್ನು ನೀವು ಕೇಳಿರಬಹುದು.
ನೀವು ಫೋನ್ ಕವರ್‌ನಲ್ಲಿ ನೋಟ್ ಇಡ್ತೀರಾ? ಹಾಗಿದ್ರೆ ಈ ಸುದ್ದಿ ತಪ್ಪದೇ ಓದಿ  title=

Mobile Blast Safety Tips: ಸಾಮಾನ್ಯವಾಗಿ ಕೆಲವರು ಮೊಬೈಲ್ ಕವರ್‌ನಲ್ಲಿ ನೋಟು ಇಡುವುದನ್ನು ನೀವು ನೋಡಿರಬಹುದು. ಇಲ್ಲವೇ, ನಿಮ್ಮಲ್ಲಿಯೇ ಕೆಲವರು ನಿಮ್ಮ ಮೊಬೈಲ್ ಕವರ್‌ನಲ್ಲಿ ಕಾರ್ಡ್, ಇಲ್ಲವೇ, ಹಣ ಇಡುವ ಅಭ್ಯಾಸವನ್ನೂ ಹೊಂದಿರಬಹುದು. ಆದರೆ, ಇದು ನಿಮ್ಮ ಮೊಬೈಲ್ ಫೋನಿಗೆ ಎಷ್ಟು ಹಾನಿಕಾರಕ ಎಂದು ನೀವು ಎಂದಾದರೂ ಯೋಚಿಸಿದ್ದೀರಾ... ಫೋನ್ ಕವರ್‌ನಲ್ಲಿ ನೋಟ್‌ಗಳನ್ನು ಇಡುವುದರಿಂದ ಮೊಬೈಲ್ ಬ್ಲಾಸ್ಟ್ ಕೂಡ ಆಗಬಹುದು ಎಂದು ನಿಮಗೆ ತಿಳಿದಿದೆಯೇ? 

ಹೌದು, ವಾಸ್ತವವಾಗಿ ಫೋನ್ ಗೆ ಕವರ್ ಬಳಸಿದಾದ ಅದು ಸಾಮಾನ್ಯಕ್ಕಿಂತ ಬೇಗನೆ ಹೀಟ್ ಆಗುತ್ತದೆ. ಅದರಲ್ಲೂ, ದೀರ್ಘ ಸಮಯದವರೆಗೆ ಫೋನ್ ಬಳಸುವುದರಿಂದ, ಅದರಲ್ಲಿ ಹೆಚ್ಚು ಗೇಮ್ ಆಡುವುದು, ಇಲ್ಲವೇ, ಸದಾ ವಿಡಿಯೋಗಳನ್ನು ವೀಕ್ಷಿಸುತ್ತಿದ್ದರಂತು ಫೋನ್ ಬ್ಯಾಟರಿ ಬಲು ಬೇಗ ತುಂಬಾ ಹೀಟ್ ಆಗುತ್ತದೆ. ಇಂತಹ ಸಂದರ್ಭದಲ್ಲಿ ತಕ್ಷಣ ಫೋನ್ ಕೂಲ್ ಮಾಡಲು ಫೋನ್ ನಲ್ಲಿ ಅಳವಡಿಸಿರುವ ಕವರ್ ಅನ್ನು ತೆಗೆಯಲು ಸಲಹೆ ನೀಡುವುದನ್ನು ನೀವು ಕೇಳಿರಬಹುದು. ಹೀಗಿರುವಾಗ, ಇಂತಹ ಕವರ್ ಒಳಗೆ ದಹನಕಾರಿ ವಸ್ತುಗಳನ್ನು ಇಡುವುದು ಎಷ್ಟು ಉಚಿತ ಎಂದು ಯೋಚಿಸಿ. 

ಇದನ್ನೂ ಓದಿ- ಗೂಗಲ್ ಮಹತ್ವದ ನಿರ್ಧಾರ: ಫೋನ್‌ನ ಬ್ಯಾಟರಿಗೆ ಮಾರಕವಾಗಿದ್ದ 43 ಅಪ್ಲಿಕೇಶನ್‌ಗಳ ನಿಷೇಧ

ಫೋನ್‌ನ ಕೇಸ್ ಒಳಗೆ ನೋಟು ಇಡುವುದರಿಂದ ಫೋನಿನ ಪ್ರೊಸೆಸರ್ ಬಿಸಿಯಾಗುತ್ತದೆ. ಇದರಿಂದ ನೋಟಿಗೆ ಬೆಂಕಿ ಹತ್ತುವ ಸಾಧ್ಯತೆ ಇರದ್ದು ಇದು ಫೋನ್ ಬ್ಲಾಸ್ಟ್ ಆಗಲು ಕೂಡ ಕಾರಣವಾಗಬಹುದು. 

ಇದನ್ನೂ ಓದಿ- ನಿಮ್ಮ ಫೋನಿಗೂ ಪದೇ ಪದೇ ಬರುತ್ತಿದೆಯೇ Emergency Alert!ಇದರ ಹಿಂದಿನ ಕಾರಣ ತಿಳಿದುಕೊಳ್ಳಿ

ಫೋನ್ ಬ್ಲಾಸ್ಟ್ ತಪ್ಪಿಸಲು ಇಲ್ಲಿವೆ ಸುರಕ್ಷತಾ ಕ್ರಮಗಳು: 
* ಫೋನ್‌ನಲ್ಲಿ ಬಿಗಿಯಾದ ಕವರ್ ಬಳಸಬಾರದು.
* ಕವರ್ ಬಿಗಿಯಾಗಿದ್ದರೆ ಮತ್ತು ಫೋನ್ ಹೀಟ್ ಆಗಿದ್ದರೆ ಅಂತಹ ಸಂದರ್ಭದಲ್ಲಿಯೂ ಫೋನ್ ಸ್ಫೋಟಿಸಬಹುದು. 
* ಫೋನ್ ಅನ್ನು ದೀರ್ಘ ಸಮಯದವರೆಗೆ ಚಾರ್ಜ್ ನಲ್ಲಿ ಇಡಬಾರದು. 
* ಸಾಧ್ಯವಾದಷ್ಟು ಫೋನ್ ಕವರ್ ಬಳಸಬೇಡಿ. ಒಂದೊಮ್ಮೆ ಫೋನ್ ಕಾವರ ಬಳಸಿದರೂ ಅದರೊಳಗೆ ನೋಟು, ಕಾಗದದ ರೀತಿಯ ಯಾವುದೇ ಪದಾರ್ಥವನ್ನು ಇಡಬೇಡಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News