ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತದೆಯೇ?; ಹಾಗಾದರೆ ಹೀಗೆ ಮಾಡಿ

ನಿಮ್ಮ ಸ್ಮಾರ್ಟ್‌ಫೋನ್ ಕೂಡ ಈಗ ಹ್ಯಾಂಗ್ ಆಗುತ್ತಿದ್ದರೆ ಅಥವಾ ಅದರ ವೇಗವು ನಿಧಾನವಾಗಿದ್ದರೆ ನಾವು ನಿಮಗಾಗಿ ಕೆಲವು ಸುಲಭ ಸಲಹೆಗಳನ್ನು ಇಲ್ಲಿ ನೀಡಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ವೇಗವನ್ನು ತ್ವರಿತವಾಗಿ ಹೆಚ್ಚಿಸಬಹುದು.

Written by - Zee Kannada News Desk | Last Updated : Dec 27, 2021, 07:49 PM IST
  • ಬಳಕೆ ಹೆಚ್ಚಾದಂತೆಯೇ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ
  • ಹೆಚ್ಚು ಹೆಚ್ಚು ಸ್ಮಾರ್ಟ್‌ಫೋನ್ ಬಳಿಸಿದರೆ ಅದರ ವೇಗ ನಿಧಾನವಾಗಿ ಕುಗ್ಗುತ್ತದೆ
  • ಸರಳ ಸಲಹೆಗಳನ್ನು ಪಾಲಿಸುವ ಮೂಲಕ ನಿಮ್ಮ ಸ್ಮಾರ್ಟ್‌ಫೋನ್ ವೇಗವನ್ನು ಹೆಚ್ಚಿಸಿಕೊಳ್ಳಿರಿ
ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗುತ್ತದೆಯೇ?; ಹಾಗಾದರೆ ಹೀಗೆ ಮಾಡಿ  title=
ಫೋನ್ ಹ್ಯಾಂಗ್ ಆಗಲು ಕಾರಣವೇನು..?

ನವದೆಹಲಿ: ಇಂದಿನ ಕಾಲದಲ್ಲಿ ನಮ್ಮೆಲ್ಲರ ಬಹುತೇಕ ಕೆಲಸಗಳು ಸ್ಮಾರ್ಟ್‌ಫೋನ್‌(Android Smartphones)ನಲ್ಲಿಯೇ ಆಗುತ್ತವೆ. ಇಂದು ಕೈಯಲ್ಲಿ ಸ್ಮಾರ್ಟ್‌ಫೋನ್ ಇಲ್ಲದ ವ್ಯಕ್ತಿಯನ್ನು ಹುಡುಕುವುದು ಕಷ್ಟ. ಸ್ಮಾರ್ಟ್‌ಫೋನ್ ಬಳಸುವಾಗ ನಾವು ವಿಡಿಯೋ, ಫೋಟೋ ಸೇರಿದಂತೆ ಅನೇಕವುಗಳನ್ನು ಡೌನ್‌ಲೋಡ್ ಮಾಡುತ್ತೇವೆ. ಫೋನ್ ಸ್ಟೋರೇಜ್ ಫುಲ್ ಆಗುತ್ತಿದ್ದಂತೆಯೇ ಅದು ಹ್ಯಾಂಗ್ ಆಗಲು ಶುರುವಾಗುತ್ತದೆ. ಹೆಚ್ಚು ಹೆಚ್ಚು ಬಳಸಿದಾಗಲೂ ಕೂಡ ನಿಮ್ಮ ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಿ ನಿಮಗೆ ದೊಡ್ಡ ತಲೆನೋವು ತರುತ್ತದೆ. ನಿಮ್ಮ ಸ್ಮಾರ್ಟ್‌ಫೋನ್ ಕೂಡ ಪದೇ ಪದೇ ಹ್ಯಾಂಗ್(Smartphone Hang) ಆಗುತ್ತಿದ್ದರೆ ಈ ಸರಳ ಸಲಹೆಗಳನ್ನು ಪಾಲಿಸಿ. ಇದರಿಂದ ನಿಮ್ಮ ಸ್ಮಾರ್ಟ್‌ಫೋನ್‌ನ ವೇಗ ಸೂಪರ್ ಫಾಸ್ಟ್ ಆಗಲಿದೆ.

ಸ್ಮಾರ್ಟ್‌ಫೋನ್ ಹ್ಯಾಂಗ್ ಆಗಲು ಕಾರಣ

ನಿಮ್ಮ ಸ್ಮಾರ್ಟ್‌ಫೋನ್(Smartphone) ಕೆಲವು ದಿನಗಳ ಬಳಿಕ ಏಕೆ ಹ್ಯಾಂಗ್ ಆಗಲು ಪ್ರಾರಂಭಿಸುತ್ತದೆ ಅಥವಾ ಅದರ ವೇಗ ಏಕೆ ಕಡಿಮೆಯಾಗುತ್ತದೆ ಎಂಬುದರ ಬಗ್ಗೆ ನಿಮಗೆ ಆಶ್ಚರ್ಯವಾಗುತ್ತದೆ ಅಲ್ಲವೇ..? ಇದರ ಹಿಂದಿನ ಕಾರಣಗಳು ಯಾವುವು ಎಂದು ನಾವು ನಿಮಗೆ ತಿಳಿಸುತ್ತೇವೆ. ನಾವು ಪ್ರತಿದಿನ ಸ್ಮಾರ್ಟ್‌ಫೋನ್‌ಗಳನ್ನು ಹೆಚ್ಚುಹೊತ್ತು ಬಳಸುತ್ತೇವೆ. ಈ ಪೈಕಿ ನಾವು ಹೆಚ್ಚಾಗಿ ಸರ್ಚ್ ಇಂಜಿನ್‌ಗಳನ್ನು ಬಳಸುತ್ತೇವೆ.

ಇದನ್ನೂ ಓದಿ: NASA Hiring Prists: NASAದಲ್ಲಿ ಅರ್ಚಕರ ಭರ್ತಿ, Secret Plan ಹಂಚಿಕೊಂಡ ಬಾಹ್ಯಾಕಾಶ ಸಂಸ್ಥೆ

ನಮ್ಮ ಪ್ರತಿಯೊಂದು ಸಣ್ಣ ಮತ್ತು ದೊಡ್ಡ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲು ನಾವು Android ಸ್ಮಾರ್ಟ್‌ಫೋನ್‌ಗಳಲ್ಲಿ Google Chrome ಮತ್ತು Mozilla Firefox ಗಳಂತಹ ಬ್ರೌಸರ್‌ಗಳನ್ನು ಬಳಸುತ್ತೇವೆ. ಈ ಪ್ಲಾಟ್‌ಫಾರ್ಮ್‌ಗಳು ಬಳಕೆದಾರರಿಗೆ ಹುಡುಕಾಟ ಸುಲಭಗೊಳಿಸಲು ಡೇಟಾವನ್ನು ಉಳಿಸುತ್ತದೆ. ಇವುಗಳನ್ನು Cookies and Cacheನಂತಹ ಫೋನ್‌ನಲ್ಲಿ ಸಂಗ್ರಹಿಸಲಾಗುತ್ತದೆ ಮತ್ತು ಇದರಿಂದಾಗಿ ಫೋನ್ ನಿಧಾನವಾಗುತ್ತದೆ.

Google Chromeನಿಂದ Cookies and Cache ಅಳಿಸುವುದು ಹೇಗೆ?

ನೀವು Google Chrome ಬಳಸಿದರೆ ಅಲ್ಲಿಂದ ಈ Cookies and Cache ಅಳಿಸಲು ಮೊದಲು Google Chrome ಒಪನ್ ಮಾಡಿರಿ. ಮೇಲಿನ ಬಲಭಾಗದಲ್ಲಿ ನೀವು 3 ಚುಕ್ಕೆಗಳನ್ನು ಕಾಣುತ್ತಿರಿ. ಅದರ ಮೇಲೆ ಕ್ಲಿಕ್ ಮಾಡಿ ಮತ್ತು ನಂತರ ‘History’ ಆಯ್ಕೆಗಳಿಗೆ ಹೋಗಿ. ನೀವು History ತೆರೆದ ತಕ್ಷಣ ಮೇಲ್ಭಾಗದಲ್ಲಿ ‘Clear Browsing Data’ ಆಯ್ಕೆಯನ್ನು ಕಾಣಬಹುದು. ಅದನ್ನು ಆಯ್ಕೆ ಮಾಡಿ ಮತ್ತು ನಂತರ ‘Cookies and Site Data’ ಮತ್ತು ‘Cached Images and Files’ ಆಯ್ಕೆಮಾಡಿ. ನಂತರ ಕೆಳಗಿನ ‘Clear Data’ ಕ್ಲಿಕ್ ಮಾಡಿ. ನೀವು ಬಯಸಿದರೆ ಎಷ್ಟು ಸಮಯದವರೆಗೆ Cookies and Cacheಗಳನ್ನು ಅಳಿಸಲು ಬಯಸುತ್ತೀರಿ ಎಂಬುದನ್ನು ಸಹ ಆಯ್ಕೆ ಮಾಡಬಹುದು.  

ಇದನ್ನೂ ಓದಿ: Jio Happy New Year Offer: ಜಿಯೋ ನ್ಯೂ ಇಯರ್ ಆಫರ್, 504GB ಡೇಟಾದೊಂದಿಗೆ ಅನ್ಲಿಮಿಟೆಡ್ ಕಾಲ್ ಕೊಡುಗೆ

Mozilla Firefoxನಿಂದ Cookies and Cache ತೆಗೆದುಹಾಕುವುದು ಹೇಗೆ?

ನೀವು Mozilla Firefox ಬಳಸುತ್ತಿದ್ದರೆ ಅಲ್ಲಿಂದ Cookies and Cacheಗಳನ್ನು ತೆಗೆದುಹಾಕುವುದು ಹೇಗೆ ಎಂಬುದರ ಮಾಹಿತಿ ಇಲ್ಲಿದೆ. ಮೊದಲನೆಯದಾಗಿ ನಿಮ್ಮ Android ಸ್ಮಾರ್ಟ್‌ಫೋನ್‌ನಲ್ಲಿ Mozilla Firefox ಅಪ್ಲಿಕೇಶನ್ ತೆರೆಯಿರಿ. ನಂತರ ವಿಳಾಸ ಪಟ್ಟಿಯ ಪಕ್ಕದಲ್ಲಿರುವ ‘More’ ಬಟನ್ ಕ್ಲಿಕ್ ಮಾಡಿ. ಸೆಟ್ಟಿಂಗ್‌ಗಳಿಗೆ ಹೋಗಿ ಮತ್ತು ‘Delete browsing data’, ‘Cookies and site data’ ಮತ್ತು ‘Cached images and files’ ಆಯ್ಕೆ ಮಾಡಿ ಮತ್ತು ಅವುಗಳನ್ನು ತೆರವುಗೊಳಿಸಲು Command ನೀಡಿ. ಈ ರೀತಿ ಮಾಡುವ ಮೂಲಕ ನೀವು ನಿಮ್ಮ ಸ್ಮಾರ್ಟ್‌ಫೋನ್‌ನ ವೇಗವನ್ನು ಹೆಚ್ಚಿಸಬಹುದು ಮತ್ತು ಫೋನ್ ಹ್ಯಾಂಗ್ ಆಗುವ ಸಮಸ್ಯೆಯನ್ನು ಹೋಗಲಾಡಿಸಬಹುದು.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News