ಈ ಅದ್ಭುತ ವೈಶಿಷ್ಟ್ಯಗಳು 2022ರಲ್ಲಿ WhatsAppನಲ್ಲಿ ಬರಬಹುದು..!

ವಾಟ್ಸಾಪ್‌ನ ಪ್ರತಿಸ್ಪರ್ಧಿ ಪ್ಲಾಟ್‌ಫಾರ್ಮ್‌ಗಳ ಬಳಕೆದಾರರು ಪಡೆದಿರುವ ಕೆಲವು ವೈಶಿಷ್ಟ್ಯಗಳನ್ನು ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿಯೂ ಬಿಡುಗಡೆ ಮಾಡುವ ಸಾಧ್ಯತೆ ಇದೆ.    

Written by - Zee Kannada News Desk | Last Updated : Dec 26, 2021, 11:39 AM IST
  • 2022ರ ಹೊಸ ವರ್ಷಕ್ಕೆ WhatsAppನಲ್ಲಿ ಅನೇಕ ಬದಲಾವಣೆಗಳಾಗಲಿವೆ
  • ಪ್ರತಿಸ್ಪರ್ಧಿ ಪ್ಲಾಟ್‌ಫಾರ್ಮ್‌ಗಳಲ್ಲಿರುವ ವೈಶಿಷ್ಟ್ಯಗಳನ್ನು ಪರಿಚಯಿಸಲು ಪ್ಲಾನ್
  • ಶೀಘ್ರವೇ ಅನೇಕ ವೈಶಿಷ್ಟ್ಯಗಳನ್ನು ಬಳಕೆದಾರರಿಗೆ ನೀಡಲಿರುವ WhatsApp
ಈ ಅದ್ಭುತ ವೈಶಿಷ್ಟ್ಯಗಳು 2022ರಲ್ಲಿ WhatsAppನಲ್ಲಿ ಬರಬಹುದು..! title=

ನವದೆಹಲಿ: ಪ್ರಸಿದ್ಧ ಚಾಟಿಂಗ್ ಅಪ್ಲಿಕೇಶನ್ WhatsApp ವಿಶ್ವದ ಅತ್ಯಂತ ಜನಪ್ರಿಯ ಸೋಷಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಒಂದಾಗಿದೆ. WhatsApp ತನ್ನ ಬಳಕೆದಾರರಿಗೆ ಕಾಲಕಾಲಕ್ಕೆ ಅನೇಕ ಹೊಸ ನವೀಕರಣಗಳನ್ನು ಬಿಡುಗಡೆ ಮಾಡುತ್ತಲೇ ಇರುತ್ತದೆ. ಇದರಿಂದ ಬಳಕೆದಾರರು ಹೊಸ ಹೊಸ ವೈಶಿಷ್ಟ್ಯಗಳನ್ನು ಪಡೆಯುತ್ತಾರೆ. ಈ ವರ್ಷ(2021)ವೂ WhatsAppನಲ್ಲಿ ಹಲವಾರು ಹೊಸ ವೈಶಿಷ್ಟ್ಯಗಳು ಬಂದಿವೆ. ಇದೀಗ 2022ರ ಹೊಸ ವರ್ಷಕ್ಕೆ WhatsApp ಹಲವಾರು ಹೊಸ ವೈಶಿಷ್ಟ್ಯಗಳನ್ನು ಪರಿಚಯಿಸಲು ಸಿದ್ಧವಾಗಿದೆ. ಈ ವೈಶಿಷ್ಟ್ಯಗಳು ಯಾವವು ಎಂಬುದರ ಮಾಹಿತಿ ಇಲ್ಲಿದೆ ನೋಡಿ.

ಪುನರಾವರ್ತಿತ ಅಧಿಸೂಚನೆಗಳ ವೈಶಿಷ್ಟ್ಯ(Features of Repeating Notifications)

WhatsAppನ ಪ್ರತಿಸ್ಪರ್ಧಿ ಅಪ್ಲಿಕೇಶನ್ ಟೆಲಿಗ್ರಾಮ್ WhatsApp ಬಳಕೆದಾರರಿಗೆ ಇನ್ನೂ ಲಭ್ಯವಿಲ್ಲದ ಹಲವಾರು ವೈಶಿಷ್ಟ್ಯಗಳನ್ನು ಹೊಂದಿದೆ. ಬಳಕೆದಾರರು ಕೆಲವು ಚಾಟ್‌ಗಳಿಗಾಗಿ ‘ರಿಪೀಟ್ ನೋಟಿಫಿಕೇಶನ್ಸ್’ ವೈಶಿಷ್ಟ್ಯವನ್ನು ಬಳಸಬಹುದು. ಇದರಿಂದ ಆ ಚಾಟ್‌ಗಳಿಗೆ ಸಂಬಂಧಿಸಿದ ಅಧಿಸೂಚನೆಗಳನ್ನು ನಿರ್ದಿಷ್ಟ ಸಮಯದ ನಂತರ ಮತ್ತೆ ಪ್ಲೇ ಮಾಡಲಾಗುತ್ತದೆ. ಇದರಿಂದ ಬಳಕೆದಾರರ ಯಾವುದೇ ಪ್ರಮುಖ ಸಂದೇಶವು ತಪ್ಪಿಸಿಕೊಳ್ಳುವುದಿಲ್ಲ.

ಇದನ್ನೂ ಓದಿ: ಖ್ಯಾತ ಸ್ಮಾರ್ಟ್ ಫೋನ್ ಬ್ರಾಂಡ್ Xiaomi ಮಾಡಿರುವ ತಪ್ಪೇನು ಗೊತ್ತಾ?

ಬಹು ಲಿಂಕ್ ಮಾಡಲಾದ ಸಾಧನಗಳಿಗೆ ಬೆಂಬಲ(Support for Multiple Linked Devices)

WhatsAppನಲ್ಲಿ ಬಹು-ಸಾಧನದ ವೈಶಿಷ್ಟ್ಯದೊಂದಿಗೆ ನೀವು ಇನ್ನೂ 4 ಸಾಧನಗಳಿಂದ ನಿಮ್ಮ WhatsApp ಖಾತೆಯನ್ನು ಲಿಂಕ್ ಮಾಡಬಹುದು. ಆದರೆ ಇಂದಿನ ಯುಗದಲ್ಲಿ 4 ಸಾಧನಗಳು ತುಂಬಾ ಕಡಿಮೆಯಾಯಿತು. WhatsApp ತನ್ನ ವೆಬ್ ಆವೃತ್ತಿಗಾಗಿ 4 ಸಾಧನಗಳ ಮಿತಿಯನ್ನು ತೆಗೆದುಹಾಕುತ್ತದೆ ಮತ್ತು ಬಳಕೆದಾರರು ತನಗೆ ಬೇಕಾದಷ್ಟು ಸಾಧನಗಳಿಂದ WhatsApp ಅನ್ನು ಲಿಂಕ್ ಮಾಡುವ ಸೌಲಭ್ಯವನ್ನು ನೀಡುವ ಸಾಧ್ಯತೆ ಇದೆ.

WhatsApp ಪಾವತಿ ಬಟನ್ ಸ್ಥಳದಲ್ಲಿ ಬದಲಾವಣೆ

ಈ ವರ್ಷ WhatsApp ತನ್ನದೇ ಆದ UPI ಸೇವೆ ಪ್ರಾರಂಭಿಸಿದೆ ಮತ್ತು ಈ ವೈಶಿಷ್ಟ್ಯವನ್ನು ‘WhatsApp Pay’ ಎಂದು ಹೆಸರಿಸಲಾಗಿದೆ. ಈ ವೈಶಿಷ್ಟ್ಯದೊಂದಿಗೆ ಬಳಕೆದಾರರು ವಾಟ್ಸಾಪ್ ಚಾಟ್‌ಗಳ ಮೂಲಕ ಮಾತ್ರ ಸುಲಭವಾಗಿ ಹಣದ ವಹಿವಾಟು ಮಾಡಬಹುದು. ಈ ವೈಶಿಷ್ಟ್ಯವು ತುಂಬಾ ಒಳ್ಳೆಯದು, ಆದರೆ ಅದರ ಬಟನ್ ಇರುವಲ್ಲಿ ಮೊದಲು ಮೀಡಿಯಾ ಫೈಲ್‌ಗಳನ್ನು ಅಪ್‌ಲೋಡ್ ಮಾಡಲು ಬಟನ್ ಇತ್ತು. ಆ ಬಟನ್‌ಗೆ ಬದಲಾಗಿ WhatsApp Pay ಆಯ್ಕೆಯನ್ನು ಪರಿಚಯಿಸುವುದರೊಂದಿಗೆ ಬಳಕೆದಾರರು ಪೇ ಬಟನ್ ಅನ್ನು ಪದೇ ಪದೇ ಕ್ಲಿಕ್ ಮಾಡುತ್ತಾರೆ. ಇದನ್ನು ಅಟ್ಯಾಚ್ ಬಟನ್ ಎಂದು ಪರಿಗಣಿಸುತ್ತಾರೆ.

ಖಾತೆಗಾಗಿ ‘Auto delete’ ಆಯ್ಕೆ

ಟೆಲಿಗ್ರಾಮ್ ಬಳಕೆದಾರರಿಗೆ ತಮ್ಮ ಖಾತೆಯಲ್ಲಿ ‘Auto delete’ ಟೈಮರ್ ಅನ್ನು ಹೊಂದಿಸಲು ಅನುಮತಿಸುವ ವೈಶಿಷ್ಟ್ಯವಿದೆ. ಇದರ ಪ್ರಕಾರ ವೇದಿಕೆಯು ಬಳಕೆದಾರರ ಖಾತೆಯನ್ನು ಅಳಿಸಲು ಸಾಧ್ಯವಾಗುತ್ತದೆ. ಉದಾಹರಣೆಗೆ ಬಳಕೆದಾರರು 6 ತಿಂಗಳ ಸಮಯದ ಮಿತಿಯನ್ನು ಹೊಂದಿಸಿದ್ದರೆ 6 ತಿಂಗಳ ನಂತರ ಖಾತೆಯನ್ನು ಸ್ವತಃ ಅಳಿಸಲಾಗುತ್ತದೆ.

ಇದನ್ನೂ ಓದಿ: Paytm ಬಳಕೆದಾರರೆ ಎಚ್ಚರ! ಬಳಕೆದಾರರಿಗೆ ಈ ರೀತಿ ಲಕ್ಷಾಂತರ ರೂಪಾಯಿಗಳ ಪಂಗನಾಮ ಹಾಕಲಾಗುತ್ತಿದೆ

ಚಾಟ್‌ಗಳಿಗೆ ಥೀಮ್ ಬೆಂಬಲ

WhatsApp ತನ್ನ ಬಳಕೆದಾರರಿಗೆ ಇಂತಹ ಹಲವು ಆಯ್ಕೆಗಳನ್ನು ಬಿಡುಗಡೆ ಮಾಡಿದ್ದರೂ, ಅವರು ತಮ್ಮ ಸ್ವಂತ ಆದ್ಯತೆಗಳಿಗೆ ಅನುಗುಣವಾಗಿ ತಮ್ಮ ಚಾಟ್ ಗಳನ್ನು ಕಸ್ಟಮೈಸ್ ಮಾಡಬಹುದು. ಆದರೆ Instagram ಮತ್ತು Telegram ನಂತಹ ಥೀಮ್ ಬೆಂಬಲವು WhatsAppನಲ್ಲಿ ಲಭ್ಯವಿಲ್ಲ ಮತ್ತು ಬಳಕೆದಾರರು ಇದನ್ನು ನಿರೀಕ್ಷಿಸಬಹುದು. ಶೀಘ್ರದಲ್ಲೇ WhatsAppನಲ್ಲಿಯೂ ಇದು ಜಾರಿಗೆ ಬರಲಿದೆ. ಪ್ರಸ್ತುತ WhatsApp ಈ ಯಾವುದೇ ವೈಶಿಷ್ಟ್ಯಗಳ ಕುರಿತು ಕಾಮೆಂಟ್ ಮಾಡಿಲ್ಲ ಅಥವಾ ಈ ವೈಶಿಷ್ಟ್ಯಗಳ ಬಗ್ಗೆ ಯಾವುದೇ ಖಚಿತ ಮಾಹಿತಿ ನೀಡಿಲ್ಲ. ವಾಟ್ಸಾಪ್‌ನ ಪ್ರತಿಸ್ಪರ್ಧಿ ಪ್ಲಾಟ್‌ಫಾರ್ಮ್‌ಗಳ ಬಳಕೆದಾರರು ಪಡೆದಿರುವ ಕೆಲವು ವೈಶಿಷ್ಟ್ಯಗಳನ್ನು ಶೀಘ್ರದಲ್ಲೇ ವಾಟ್ಸಾಪ್‌ನಲ್ಲಿಯೂ ಬಿಡುಗಡೆ ಮಾಡುವ ಸಾಧ್ಯತೆ ಇದೆ.    

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News