ಉಚಿತ Amazon Prime ಸದಸ್ಯತ್ವ ಪಡೆದುಕೊಳ್ಳಬೇಕೇ? ಹೀಗೆ ಮಾಡಿ

Free Amazon Prime Membership :Amazon Prime ಮತ್ತು Netflix, Hotstar ಅತ್ಯಂತ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಾಗಿವೆ. ನೀವು ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.    

Written by - Ranjitha R K | Last Updated : Jul 21, 2023, 03:19 PM IST
  • ಉಚಿತ ಚಂದಾದಾರಿಕೆಯನ್ನು ಹೇಗೆ ಪಡೆಯುವುದು ?
  • ಇತ್ತೀಚಿನ ದಿನಗಳಲ್ಲಿ ವೆಬ್ ಸೀರಿಸ್ ನೋಡುವ ಟ್ರೆಂಡ್ ಹೆಚ್ಚಾಗಿದೆ.
  • ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.
ಉಚಿತ Amazon Prime ಸದಸ್ಯತ್ವ ಪಡೆದುಕೊಳ್ಳಬೇಕೇ? ಹೀಗೆ ಮಾಡಿ  title=

Free Amazon Prime Membership : ಇತ್ತೀಚಿನ ದಿನಗಳಲ್ಲಿ ವೆಬ್ ಸೀರಿಸ್ ನೋಡುವ ಟ್ರೆಂಡ್ ಹೆಚ್ಚಾಗಿದೆ. ಅನೇಕ ಚಲನಚಿತ್ರಗಳು OTTನಲ್ಲಿ ಲೈವ್ ಆಗಿ ಬಿಡುಗಡೆಯಾಗುತ್ತವೆ. ಅವುಗಳಲ್ಲಿ Amazon Prime ಮತ್ತು Netflix, Hotstar ಅತ್ಯಂತ ಜನಪ್ರಿಯ OTT ಪ್ಲಾಟ್‌ಫಾರ್ಮ್‌ಗಳಾಗಿವೆ. ಆದರೆ, ಎಲ್ಲರೂ ಈ ಮೂರು ಒಟಿ ಪ್ಲಾಟ್‌ಫಾರ್ಮ್‌ಗೆ ಚಂದಾದಾರಿಕೆಯನ್ನು ಪಡೆಯಲು ಸಾಧ್ಯವಿಲ್ಲ. ಆದರೆ ನೀವು ಅಮೆಜಾನ್ ಪ್ರೈಮ್ ಸದಸ್ಯತ್ವ ಉಚಿತ ಚಂದಾದಾರಿಕೆಯನ್ನು ಪಡೆಯಬಹುದು.  

ಉಚಿತ ಚಂದಾದಾರಿಕೆಯನ್ನು ಹೇಗೆ ಪಡೆಯುವುದು ? : 
* ಮೊದಲು Amazon ಖಾತೆಗೆ ಲಾಗಿನ್ ಮಾಡಿ ಅಥವಾ ಹೊಸ ಖಾತೆಯನ್ನು ರಚಿಸಿ.
* ಇದರ ನಂತರ, Start your 30-day trial ಕ್ಲಿಕ್ ಮಾಡಿ.
* ಇದಾದ ನಂತರ ಪೇಮೆಂಟ್ ಮೆಥಡ್ ಆಯ್ಕೆ ಬರುತ್ತದೆ. ಇದರಲ್ಲಿ ನೀವು ನಿಮ್ಮ ಕ್ರೆಡಿಟ್ / ಡೆಬಿಟ್ / ಎಟಿಎಂ ಕಾರ್ಡ್‌ನಿಂದ ಪಾವತಿಯನ್ನು ಆಯ್ಕೆ ಮಾಡಬಹುದು.
* ಇದರ ನಂತರ  30 ದಿನಗಳ ಪ್ರಾಯೋಗಿಕ ಸದಸ್ಯತ್ವವನ್ನು ಪಡೆಯುತ್ತೀರಿ.
* ಈ ಯೋಜನೆಯಲ್ಲಿ, 30 ದಿನಗಳಲ್ಲಿ ನಿಮ್ಮ ಖಾತೆಯಿಂದ 1499 ರೂ. ಕಡಿತಗೊಳಿಸಲಾಗುತ್ತದೆ.
* ನೀವು ಈ ಯೋಜನೆಯನ್ನು ಮುಂದುವರಿಸಲು ಬಯಸದಿದ್ದರೆ, ನೀವು ಅದನ್ನು 30 ದಿನಗಳ ಮುಂಚಿತವಾಗಿ ರದ್ದುಗೊಳಿಸಬಹುದು.

ಇದನ್ನೂ ಓದಿ : ವಾಟ್ಸಪ್‌ನಲ್ಲಿ ಈಗ ಇಷ್ಟು ಜನರೊಂದಿಗೆ ಒಟ್ಟಿಗೆ ವಿಡಿಯೋ ಕಾಲ್ ಮಾಡಬಹುದು

ಇದಲ್ಲದೆ, ಅನೇಕ ಮೊಬೈಲ್ ಫೋನ್ ಕಂಪನಿಗಳು ತಮ್ಮ ಗ್ರಾಹಕರಿಗೆ ರೀಚಾರ್ಜ್ ಯೋಜನೆಯಲ್ಲಿ ಅನೇಕ OTT ಗಳ ಉಚಿತ ಚಂದಾದಾರಿಕೆಯನ್ನು ನೀಡುತ್ತವೆ. 

ಜಿಯೋ ಪ್ಲಾನ್ : 
 ಜಿಯೋದ  699 ರೂಪಾಯಿ ಪ್ಲಾನ್ ನಲ್ಲಿ  ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ವಿಡಿಯೋ ಪಡೆಯಬಹುದು. ಇದರಲ್ಲಿ ಅನಿಯಮಿತ ಕರೆ, ಒಟ್ಟು 100 GB ಡೇಟಾ ಮತ್ತು 100 SMS ಪ್ರಯೋಜನಗಳನ್ನು ಪಡೆಯಬಹುದು. 

ಇದನ್ನೂ ಓದಿ : Instagram Down: 24 ಗಂಟೆಗಳಲ್ಲಿ ಮೆಟಾಗೆ ಡಬಲ್ ಶಾಕ್, ವಾಟ್ಸ್ ಆಪ್ ಬಳಿಕ ಇದೀಗ ಇನ್ಸ್ಟಾಗ್ರಾಮ್ ಡೌನ್!

ಜಿಯೋ ಪೋಸ್ಟ್‌ಪೇಯ್ಡ್  599 ರೂ. ಯೋಜನೆ :
ಈ ಯೋಜನೆಯು 100 ಜಿಬಿ ಡೇಟಾವನ್ನು ನೀಡುತ್ತದೆ. ಅನಿಯಮಿತ ಕರೆ ಜೊತೆಗೆ, ಈ ಯೋಜನೆಯೊಂದಿಗೆ ಉಚಿತ Netflix ಮತ್ತು Amazon Prime ಚಂದಾದಾರಿಕೆ ಕೂಡಾ ಸಿಗುತ್ತದೆ. 

ಏರ್‌ಟೆಲ್  499 ರೂ. ಪೋಸ್ಟ್‌ಪೇಯ್ಡ್ ಪ್ಲಾನ್ : 
ಚಂದಾದಾರರಿಗೆ ಒಟ್ಟು 75GB ಡೇಟಾ, ದಿನಕ್ಕೆ 100 SMS ಮತ್ತು ಎಲ್ಲಾ ನೆಟ್‌ವರ್ಕ್‌ಗಳಿಗೆ ಅನಿಯಮಿತ ಧ್ವನಿ ಕರೆಯನ್ನು ನೀಡುತ್ತದೆ. ಈ ಯೋಜನೆಯಲ್ಲಿ  6 ತಿಂಗಳವರೆಗೆ ಉಚಿತ Amazon Prime ಸದಸ್ಯತ್ವವನ್ನು ಪಡೆಯುತ್ತಾರೆ.

ಇದನ್ನೂ ಓದಿ : ಇನ್ನ್ಮುಂದೆ ಲೈಂಗಿಕ ಕ್ರಿಯೆಗೆ ಪುರುಷ-ಮಹಿಳೆಯರೇ ಬೇಡ, ಅದಕ್ಕೂ ಬಂತು ರೋಬೋಟ್!

ಏರ್‌ಟೆಲ್ 1199 ಪೋಸ್ಟ್‌ಪೇಯ್ಡ್ ಪ್ಲಾನ್ : 
ಈ ಯೋಜನೆಯಲ್ಲಿ, ಅನಿಯಮಿತ ಕರೆ ಮತ್ತು ದಿನಕ್ಕೆ 100 ಎಸ್‌ಎಂಎಸ್‌ಗಳನ್ನು ಪಡೆಯಬಹುದು. ಇದರೊಂದಿಗೆ ನೆಟ್‌ಫ್ಲಿಕ್ಸ್, ಅಮೆಜಾನ್ ಪ್ರೈಮ್ ಮತ್ತು ಡಿಸ್ನಿ + ಹಾಟ್‌ಸ್ಟಾರ್ ಚಂದಾದಾರಿಕೆಯನ್ನು ಉಚಿತವಾಗಿ ನೀಡಲಾಗುವುದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News